ರಾಜ್ಯದ 144 ಮೀನುಗಾರರು ಮತ್ತು 1,173 ದೋಣಿಗಳು ಪಾಕಿಸ್ತಾನದ ವಶದಲ್ಲಿದ್ದಾರೆ ಎಂದು ಗುಜರಾತ್ ಸರ್ಕಾರ ಬುಧವಾರ ಒಪ್ಪಿಕೊಂಡಿದೆ ಎಂದು ಪಿಟಿಐ ವರದಿ ಮಾಡಿದೆ. ಕಳೆದ ಎರಡು ವರ್ಷಗಳಲ್ಲಿ ಇಪ್ಪತ್ತೆರಡು ಜನರನ್ನು ಬಂಧಿಸಲಾಗಿದೆ ಎಂದು ರಾಜ್ಯ ಮೀನುಗಾರಿಕಾ ಸಚಿವ ರಾಘವ್‌ಜಿ ಪಟೇಲ್ ವಿಧಾನಸಭೆಗೆ ತಿಳಿಸಿದ್ದಾರೆ.
2023 ರಲ್ಲಿ ಒಂಬತ್ತು ಜನರನ್ನು ಮತ್ತು 2024 ರಲ್ಲಿ 13 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಚಿವ ಹೇಳಿದ್ದಾರೆ. ಅರಬ್ಬಿ ಸಮುದ್ರದಲ್ಲಿನ ಅಂತರರಾಷ್ಟ್ರೀಯ ಸಮುದ್ರ ಗಡಿಯನ್ನು ದಾಟಿ ಈ ಮೀನುಗಾರರು ತನ್ನ ಜಲಪ್ರದೇಶವನ್ನು ಪ್ರವೇಶಿಸಿದ್ದಾರೆ ಎಂದು ಪಾಕಿಸ್ತಾನ ಸಾಗರ ಭದ್ರತಾ ಸಂಸ್ಥೆ ಆರೋಪಿಸಿದೆ ಎಂದು ಪಿಟಿಐ ವರದಿ ಮಾಡಿದೆ. ರಾಜ್ಯದ 144 ಮೀನುಗಾರರು
ಕಳೆದ ಎರಡು ವರ್ಷಗಳಲ್ಲಿ, 432 ಭಾರತೀಯ ಮೀನುಗಾರರನ್ನು ಪಾಕಿಸ್ತಾನ ಬಿಡುಗಡೆ ಮಾಡಿದೆ ಎಂದು ಇದೇ ವೇಳೆ ಸಚಿವ ಹೇಳಿದ್ದಾರೆ. ಗುಜರಾತ್ ಸರ್ಕಾರವು ಮೀನುಗಾರರ ರಾಷ್ಟ್ರೀಯತೆಯ ಪುರಾವೆ ಸೇರಿದಂತೆ ಅಗತ್ಯ ದಾಖಲೆಗಳನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ನಿಯಮಿತವಾಗಿ ಸಲ್ಲಿಸುತ್ತಿದೆ ಎಂದು ಪಟೇಲ್ ವಿಧಾನಸಭೆಗೆ ತಿಳಿಸಿದ್ದಾರೆ.
ಡಿಸೆಂಬರ್ ವರೆಗೆ, ಪಾಕಿಸ್ತಾನವು ಭಾರತೀಯರಿಗೆ ಸೇರಿದ 1,173 ಮೀನುಗಾರಿಕಾ ದೋಣಿಗಳನ್ನು ವಶಪಡಿಸಿಕೊಂಡಿದೆ ಎಂದು ಅವರು ಹೇಳಿದ್ದು, ಆದರೆ ಕಳೆದ ಎರಡು ವರ್ಷಗಳಲ್ಲಿ ಯಾವುದೇ ದೋಣಿಯನ್ನು ಹಿಂತಿರುಗಿಸಲಾಗಿಲ್ಲ ಎಂದು ತಿಳಿಸಿದ್ದಾರೆ.
ಬುಧವಾರ ಗುಜರಾತ್ ವಿಧಾನಸಭೆಯಲ್ಲಿ ನಡೆದ ತೀವ್ರ ವಾಗ್ವಾದದಲ್ಲಿ, ಕಾಂಗ್ರೆಸ್ ಶಾಸಕರಾದ ಶೈಲೇಶ್ ಪರ್ಮಾರ್ ಮತ್ತು ಅಮಿತ್ ಚಾವ್ಡಾ ಅವರು ಪಾಕಿಸ್ತಾನದಲ್ಲಿ ಬಂಧಿಸಲ್ಪಟ್ಟ ಮೀನುಗಾರರು ಮತ್ತು ದೋಣಿಗಳ ಭವಿಷ್ಯದ ಬಗ್ಗೆ ಮೀನುಗಾರಿಕಾ ಸಚಿವರ ಮೇಲೆ ಒತ್ತಡ ಹೇರಿದ್ದರು.
ಪಾಕಿಸ್ತಾನದ ಜೈಲಿನಲ್ಲಿ ಜೈಲಿನಲ್ಲಿದ್ದ ಗುಜರಾತ್‌ನ ಉನಾದ ಸೋಖ್ಡಾ ಗ್ರಾಮದ ಮೀನುಗಾರ ಬಾಬುಭಾಯಿ ಚುಡಾಸಮಾ ಅವರ ದುರಂತ ಸಾವು ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶವನ್ನು ಹುಟ್ಟುಹಾಕಿತ್ತು. ಅನಾರೋಗ್ಯದಿಂದಾಗಿ ಅವರು ನಿಧನ ಹೊಂದಿದ್ದಾರೆ ಎಂದು ವರದಿಗಳು ವ್ಯಾಪಕವಾಗಿ ಹರಡಿದ್ದು, ಜೊತೆಗೆ ಘಟನೆಯನ್ನು ವಿವರಿಸುವ ಪತ್ರವೂ ವೈರಲ್ ಆಗಿದೆ.
ಪತ್ರದ ಪ್ರಕಾರ, ಜನವರಿ 23, 2025 ರಂದು ಬೆಳಿಗ್ಗೆ 4:30 ಕ್ಕೆ ಚುಡಾಸಮ ತೀವ್ರ ಅಸ್ವಸ್ಥರಾದರು. ಸಹ ಕೈದಿಗಳು ಅವರನ್ನು ಜೈಲಿನ ಆಸ್ಪತ್ರೆಗೆ ಸಾಗಿಸಿದರು. ಆದರೆ ಅವರ ಸ್ಥಿತಿ ಹದಗೆಟ್ಟಂತೆ, ಅವರನ್ನು ಆಂಬ್ಯುಲೆನ್ಸ್‌ನಲ್ಲಿ ನಗರದ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಆದರೆ ಅವರು ದಾರಿಯಲ್ಲಿ ಸಾವನ್ನಪ್ಪಿದರು. ಅವರ ದೇಹವನ್ನು ಸಾಧ್ಯವಾದಷ್ಟು ಬೇಗ ಭಾರತಕ್ಕೆ ಕಳುಹಿಸಲಾಗುವುದು ಎಂದು ಪತ್ರವು ಹೇಳಿಕೊಂಡಿದೆ.
ಚುಡಾಸಮ ಶಿಕ್ಷೆಯನ್ನು ಪೂರ್ಣಗೊಳಿಸಿದ ನಂತರವೂ ನಾಲ್ಕು ವರ್ಷಗಳಿಂದ ಪಾಕಿಸ್ತಾನದ ಜೈಲಿನಲ್ಲಿ ನರಳುತ್ತಿದ್ದರು ಎಂದು ಅವರ ಕುಟುಂಬ ಸದಸ್ಯರ ಆರೋಪಿಸಿದ್ದಾರೆ.
ಅವರ ಸಾವಿನೊಂದಿಗೆ ಕಳೆದ ಎರಡು ವರ್ಷಗಳಲ್ಲಿ ಇಂತಹ ನಾಲ್ಕನೇ ದುರಂತ ಗಟನೆ ಇದಾಗಿದೆ ಎಂದು ಮಾಧ್ಯಮಗಳು ವರಿದ ಮಾಡಿದೆ. ಪಾಕಿಸ್ತಾನದ ಜೈಲಿನಲ್ಲಿ ಅನೇಕ ಮೀನುಗಾರರು ಈಗಾಗಲೇ ತಮ್ಮ ಶಿಕ್ಷೆಯನ್ನು ಅನುಭವಿಸಿದ್ದಾರೆ. ಆದರೆ ರಾಯಭಾರ ಕಚೇರಿ ಪರಿಶೀಲನೆಯಲ್ಲಿ ವಿಳಂಬ ಮಾಡುತ್ತಿರುವುದರಿಂದ ಅವರು ಜೈಲಿನಲ್ಲೆ ಕೊಳೆಯುತ್ತಿದ್ದಾರೆ ಎಂದು ಜೈಲಿನಲ್ಲಿರುವ ಮೀನುಗಾರರ ಕುಟುಂಬಗಳು ಆರೋಪಿಸಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಮನೆಗೆ ನುಗ್ಗಿ ಪೊಲೀಸ್ ದಾಳಿ ಸಂದರ್ಭ ತುಳಿದು ಒಂದು ತಿಂಗಳ ಮುಸ್ಲಿಂ ಶಿಶು ಸಾವು: ಪ್ರತಿಭಟನೆ
ಮನೆಗೆ ನುಗ್ಗಿ ಪೊಲೀಸ್ ದಾಳಿ ಸಂದರ್ಭ ತುಳಿದು ಒಂದು ತಿಂಗಳ ಮುಸ್ಲಿಂ ಶಿಶು ಸಾವು: ಪ್ರತಿಭಟನೆ

