Homeಕರ್ನಾಟಕನವೆಂಬರ್ 1 ರಂದು ಖಾಸಗಿ ಸಂಸ್ಥೆಗಳಲ್ಲಿ ಧ್ವಜಾರೋಹಣ ಕಡ್ಡಾಯ: ಡಿಕೆ ಶಿವಕುಮಾರ್ ಘೋಷಣೆ

ನವೆಂಬರ್ 1 ರಂದು ಖಾಸಗಿ ಸಂಸ್ಥೆಗಳಲ್ಲಿ ಧ್ವಜಾರೋಹಣ ಕಡ್ಡಾಯ: ಡಿಕೆ ಶಿವಕುಮಾರ್ ಘೋಷಣೆ

- Advertisement -
- Advertisement -

ಐಟಿ ಕಂಪನಿಗಳು, ಕಾರ್ಖಾನೆಗಳು ಮತ್ತು ರಾಜ್ಯದ ಎಲ್ಲ ಸಂಸ್ಥೆಗಳು ನವೆಂಬರ್ 1 ರಂದು ಕನ್ನಡ ಧ್ವಜಾರೋಹಣ ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದು ಘೋಷಿಸಿದ್ದಾರೆ.

“ನವೆಂಬರ್ 1 ರಂದು ಎಲ್ಲ ಸಂಸ್ಥೆಗಳ ಮುಂದೆ ಕನ್ನಡ ಧ್ವಜಾರೋಹಣ ಮಾಡಬೇಕು. ಐಟಿ, ಕಾರ್ಖಾನೆಗಳು ಮತ್ತು ಎಲ್ಲ ಸಂಸ್ಥೆಗಳಿಗೆ ಬೆಂಗಳೂರು ಉಸ್ತುವಾರಿ ಸಚಿವನಾಗಿ ಇಂದು ನಾನು ಮನವಿ ಮಾಡುತ್ತಿದ್ದೇನೆ” ಅವರು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸ್ಥಳೀಯ ಹೆಮ್ಮೆಯನ್ನು ಬೆಳೆಸುವ ಮತ್ತು ಕರ್ನಾಟಕ ರಾಜ್ಯೋತ್ಸವವನ್ನು ವಿಶೇಷವಾಗಿ ಬೆಂಗಳೂರಿನಲ್ಲಿ ಆಚರಿಸುವ ಮಹತ್ವವನ್ನು ಶಿವಕುಮಾರ್ ಒತ್ತಿ ಹೇಳಿದರು.

ಕನ್ನಡ ಭಾಷೆಯನ್ನು ಗೌರವಿಸುವ ಮತ್ತು ಬೆಳೆಸುವ ಅಗತ್ಯವನ್ನು ಹೇಳಿದ ಅವರು, ಕಾನೂನು ಬಾಹಿರ ಕ್ರಮ ಕೈಗೊಳ್ಳದಂತೆ ಕನ್ನಡ ಪರ ಸಂಘಟನೆಗಳಿಗೆ ಎಚ್ಚರಿಕೆ ನೀಡಿದರು.

“ನವೆಂಬರ್ 1 ಅನ್ನು ಕರ್ನಾಟಕ ರಾಜ್ಯೋತ್ಸವ ಎಂದು ಆಚರಿಸಲಾಗುತ್ತದೆ, ಇದು ರಾಜ್ಯ ರಚನೆಯ ಸಂಕೇತವಾಗಿದೆ” ಎಂದರು.

ಸೈನ್‌ಬೋರ್ಡ್‌ಗಳಲ್ಲಿ  ಶೇ.60 ಕನ್ನಡ ಬಳಕೆ

ಈ ವರ್ಷದ ಫೆಬ್ರವರಿಯಲ್ಲಿ, ಕರ್ನಾಟಕ ವಿಧಾನಸಭೆಯು ರಾಜ್ಯಾದ್ಯಂತ ವ್ಯಾಪಾರ ಮತ್ತು ಸಂಸ್ಥೆಗಳ ಸೈನ್‌ಬೋರ್ಡ್‌ಗಳಲ್ಲಿ ಶೇಕಡಾ 60 ರಷ್ಟು ಕನ್ನಡ ಬಳಕೆಯನ್ನು ಕಡ್ಡಾಯಗೊಳಿಸುವ ಮಸೂದೆಯನ್ನು ಅಂಗೀಕರಿಸಿತು. ಆದೇಶ ಪಾಲಿಸದಿರುವ ಸಂಸ್ಥೆಗಳ ಪರವಾನಗಿಗಳನ್ನು ರದ್ದುಗೊಳಿಸುತ್ತದೆ ಎಂದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಚ್ಚರಿಕೆ ನೀಡಿದೆ.

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ಮಸೂದೆ 2022ಕ್ಕೆ ತಿದ್ದುಪಡಿ ತರಲು ಉದ್ದೇಶಿಸಿರುವ 2024ರ ಬಜೆಟ್‌ ಅಧಿವೇಶನದಲ್ಲಿ ಸದನದಲ್ಲಿ ಮಂಡಿಸಲಾಗಿದೆ.

ಇದನ್ನೂ ಓದಿ; ಕೋವಿಡ್-19 ವಂಚನೆ; ಡಿಕೆಶಿ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪಸಮಿತಿ ರಚಿಸಿ ಸಿಎಂ ಆದೇಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಿಂದ ಹಿಂದಿರುಗುತ್ತಿದ್ದ ಯುದ್ಧನೌಕೆ ಮೇಲೆ ಹಠಾತ್ ದಾಳಿ : ಅಮೆರಿಕ ಪಶ್ಚಾತ್ತಾಪ ಪಡಲಿದೆ ಎಂದ ಇರಾನ್

ಭಾರತೀಯ ನೌಕಾಪಡೆಯ ಆಹ್ವಾನದ ಮೇರೆಗೆ ಸಮರಾಭ್ಯಾಸದಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ಇರಾನ್‌ನ ಅತ್ಯಾಧುನಿಕ ಯುದ್ಧನೌಕೆ ಐಆರ್‌ಐಎಸ್ ದೆನಾ ಮೇಲೆ ಅಮೆರಿಕದ ಜಲಾಂತರ್ಗಾಮಿ ದಾಳಿ ನಡೆಸಿ ಅದನ್ನು ಮುಳುಗಿಸಿದೆ. ಮಾರ್ಚ್ 4ರಂದು ಶ್ರೀಲಂಕಾದ ದಕ್ಷಿಣ ಕರಾವಳಿಯಿಂದ ಸುಮಾರು 40 ನಾಟಿಕಲ್...

ದೆಹಲಿ| ಹೋಳಿ ಹಬ್ಬ ಸಡಗರದಲ್ಲಿ ಕುಡಿದು ವಾಹನ ಚಾಲನೆ; 1,200 ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲು

ಹೋಳಿ ಹಬ್ಬದಂದು ನಗರದಾದ್ಯಂತ ನಡೆಸಿದ ವಿಶೇಷ ಪರಿಶೀಲನೆಯಲ್ಲಿ ದೆಹಲಿ ಸಂಚಾರ ಪೊಲೀಸರು 1,200 ಕ್ಕೂ ಹೆಚ್ಚು ವಾಹನ ಚಾಲಕರ ವಿರುದ್ಧ ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಪ್ರಕರಣ ದಾಖಲಿಸಿದ್ದಾರೆ. ಪಶ್ಚಿಮ ವಲಯದಿಂದ ಅತಿ ಹೆಚ್ಚು...

ತಮಿಳುನಾಡು: ಜಾತಿ ಜಗಳದಲ್ಲಿ ದಲಿತ ವ್ಯಕ್ತಿ, ಒಡಿಶಾ ವಲಸೆ ಕಾರ್ಮಿಕನ ಹತ್ಯೆ; ಹಿಂದೆಯೂ ಜಾತಿ ಹಿಂಸಾಚಾರದಲ್ಲಿ ಭಾಗಿಯಾಗಿದ್ದ ಆರೋಪಿಗಳು

ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ನಂಗುನೇರಿಯಿಂದ ಜಾತಿ ಹಿಂಸಾಚಾರದ ಭಯಾನಕ ಘಟನೆ ವರದಿಯಾಗಿದೆ, ಪೆರುಂಪತ್ತು ಗ್ರಾಮದಲ್ಲಿ ನಡೆದ ಕ್ರೂರ ದಾಳಿಯಲ್ಲಿ ಅಂಗವಿಕಲ ದಲಿತ ವ್ಯಕ್ತಿ ಮತ್ತು ಒಡಿಶಾದ ವಲಸೆ ಕಾರ್ಮಿಕ ಸಾವನ್ನಪ್ಪಿದ್ದಾರೆ.  ಆರೋಪಿಗಳಲ್ಲಿ ಇಬ್ಬರು ಕೆಲವು...

ರಾಜ್ಯಸಭಾ ಚುನಾವಣೆ: ಆರು ಜನರ ಹೆಸರು ಘೋಷಿಸಿದ ಕಾಂಗ್ರೆಸ್; ಸಿಂಘ್ವಿ-ನೇತಮ್ ಮರು ನಾಮನಿರ್ದೇಶನ

ರಾಜ್ಯಸಭೆಗೆ ಮುಂಬರುವ ದ್ವೈವಾರ್ಷಿಕ ಚುನಾವಣೆಗೆ ಕಾಂಗ್ರೆಸ್ ಪಕ್ಷ ಆರು ಅಭ್ಯರ್ಥಿಗಳನ್ನು ಘೋಷಿಸಿದೆ. ಇಬ್ಬರು ಹಾಲಿ ಸದಸ್ಯರನ್ನು ಮತ್ತೆ ನಾಮನಿರ್ದೇಶನ ಮಾಡಿದ್ದು, ವಿವಿಧ ರಾಜ್ಯಗಳಿಂದ ಹಲವಾರು ಹೊಸ ಮುಖಗಳನ್ನು ಕಣಕ್ಕಿಳಿಸಿದೆ. ರಾಜ್ಯಸಭಾ ಸದಸ್ಯರಾದ ಅಭಿಷೇಕ್ ಮನು...

ರಾಷ್ಟ್ರ ರಾಜಕಾರಣಕ್ಕೆ ನಿತೀಶ್ ಕುಮಾರ್; ರಾಜ್ಯಸಭೆ ಪ್ರವೇಶ ದೃಢಪಡಿಸಿದ ಬಿಹಾರ ಸಿಎಂ

ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿರುವ ನಿತೀಶ್ ಕುಮಾರ್, 20 ವರ್ಷಗಳಿಗೂ ಹೆಚ್ಚು ಕಾಲ ತಾವು ಹೊಂದಿದ್ದ ಹುದ್ದೆಗೆ ರಾಜೀನಾಮೆ ನೀಡಿ ರಾಜ್ಯಸಭೆಗೆ ತೆರಳುವುದಾಗಿ ದೃಢಪಡಿಸಿದ್ದಾರೆ. "ನನ್ನ ಸಂಸದೀಯ...

ರಾಜ್ಯದಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ : ಹಲವು ಅಧಿಕಾರಿಗಳ ಮನೆ, ಕಚೇರಿ ಶೋಧ

ರಾಜ್ಯಾದಾದ್ಯಂತ ವಿವಿಧ ಜಿಲ್ಲೆಗಳ ಹಲವು ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಗುರುವಾರ (ಮಾ.5) ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಶೋಧ ಕಾರ್ಯ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ. ಬೆಂಗಳೂರು, ಮೈಸೂರು, ಬಾಗಲಕೋಟೆ, ಮಂಡ್ಯ,...

ಬಾಬಾ ಬುಡನ್‌ಗಿರಿಯಲ್ಲಿ ಸಂಪ್ರದಾಯದಂತೆ ಉರೂಸ್ ನಡೆಸಲು ಅಡ್ಡಿ : ಜಿಲ್ಲಾಡಳಿತದ ದ್ವಿಮುಖ ನೀತಿ ವಿರುದ್ಧ ಪ್ರತಿಭಟನೆ

ಚಿಕ್ಕಮಗಳೂರಿನ ಬಾಬಾ ಬುಡನ್‌ಗಿರಿಯಲ್ಲಿ ಸಂಪ್ರದಾಯದಂತೆ ಉರೂಸ್ ನಡೆಸುವ ಕಾನೂನಾತ್ಮಕ ಅವಕಾಶವನ್ನು ಕಿತ್ತುಕೊಳ್ಳಲಾಗಿದೆ ಎಂದು ಆರೋಪಿಸಲಾಗಿದ್ದು, ಜಿಲ್ಲಾಡಳಿತದ ದ್ವಿಮುಖ ನೀತಿ ವಿರುದ್ದ ಗುರುವಾರ (ಮಾ.5) ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಉರೂಸ್‌ ಸಂದರ್ಭದಲ್ಲಿ ಬಾಬಾ ಬುಡನ್‌ಗಿರಿಯ...

ಟ್ರಂಪ್ ಯುದ್ಧಾಧಿಕಾರಕ್ಕೆ ಬ್ರೇಕ್ ಹಾಕುವ ಪ್ರಯತ್ನಕ್ಕೆ ಹಿನ್ನಡೆ; ಸೆನೆಟ್‌ನಲ್ಲಿ ನಿರ್ಣಯಕ್ಕೆ ಸೋಲು 

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಯುದ್ಧಾಧಿಕಾರಕ್ಕೆ ಲಗಾಮು ಹಾಕುವ ನಿರ್ಣಯಕ್ಕೆ ಅಮೆರಿಕ ಸೆನೆಟ್‌ನಲ್ಲಿ (ಸಂಸತ್ತಿನ ಮೇಲ್ಮನೆ) ಸೋಲಾಗಿದೆ. ಇದರಿಂದ ಪ್ರಸ್ತುತ ನಡೆಸುತ್ತಿರುವ ಇರಾನ್ ಮೇಲಿನ ದಾಳಿಯನ್ನು ಇನ್ನಷ್ಟು ಹೆಚ್ಚಿಸಲು ಟ್ರಂಪ್‌ಗೆ ಅನುಮತಿ ಸಿಕ್ಕಂತಾಗಿದೆ....

ಜಾತ್ಯತೀತ ತಾಣ ಬಾಬಾ ಬುಡನ್‌ ಗಿರಿಯಲ್ಲಿ ‘ವೈದಿಕ ಆಚರಣೆ’ಗೆ ವಿರೋಧ; ಕಾಂಗ್ರೆಸ್‌ ಸರ್ಕಾರದ ವಿರುದ್ದ ಪ್ರತಿಭಟನೆ

ಕೋಮುವಾದಿಗಳು ಎಷ್ಟೇ ವಿಷಯ ತಿರುಚುವ ಕೆಲಸ ಮಾಡಿದರೂ ಬಾಬಾ ಬುಡನ್ ಗಿರಿಯ ಜಾತ್ಯತೀತ ಹಿನ್ನೆಲೆಯನ್ನು ಮುಚ್ಚಿಡುವುದಕ್ಕೆ ಸಾಧ್ಯವಿಲ್ಲ. ಅಲ್ಲಿನ ಸೌಹಾರ್ಧ ಪರಂಪರೆಯನ್ನು ಬದಿಗೆ ಸರಿಸಿ, ವೈದಿಕ ಆಚರಣೆಗೆ ಅನುಮತಿ ನೀಡುವ ಮೂಲಕ ಹಿಂದುತ್ವ...

ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ಯುದ್ಧನೌಕೆ ಮೇಲೆ ಜಲಾಂತರ್ಗಾಮಿ ದಾಳಿ: ಸಮುದ್ರದಲ್ಲಿ ಶವಗಳು ಪತ್ತೆ

ಶ್ರೀಲಂಕಾದ ದಕ್ಷಿಣ ಕರಾವಳಿಯಲ್ಲಿ ಬುಧವಾರ ಜಲಾಂತರ್ಗಾಮಿ ದಾಳಿಯ ನಂತರ ಇರಾನ್ ನೌಕಾ ಯುದ್ಧನೌಕೆ ಐರಿಸ್ ದೇನಾ ಮುಳುಗಿದೆ ಎಂದು ವರದಿಯಾಗಿದೆ.  ಈ ದಾಳಿಯಲ್ಲಿ ಕನಿಷ್ಠ 101 ಜನರು ಕಾಣೆಯಾಗಿದ್ದಾರೆ ಮತ್ತು 78 ಜನರು ಗಾಯಗೊಂಡಿದ್ದಾರೆ,...