ರಷ್ಯಾದ L-410 ವಿಮಾನವೊಂದು ಟಾಟರ್ಸ್ತಾನ್ ಪ್ಯಾಂತ್ಯದ ಬಳಿ ಭಾನುವಾರ ಪತನಗೊಂಡಿದೆ. ಘಟನೆಯಲ್ಲಿ 16 ಜನರು ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ ಎಂದು RIA ಸುದ್ದಿ ಸಂಸ್ಥೆ ವರದಿ ಮಾಡಿದೆ. ಘಟನೆಯು ಬೆಳಗ್ಗೆ 9:11 ಕ್ಕೆ (ಮಾಸ್ಕೋ ಸಮಯ) ನಡೆದಿದೆ ಎಂದು ವರದಿ ತಿಳಿಸಿದೆ.
ವಿಮಾನದಲ್ಲಿ ಒಟ್ಟು 22 ಜನರಿದ್ದರು ಎಂದು ವರದಿಯಾಗಿದ್ದು, ಅವರಲ್ಲಿ 21 ಜನರು ಪ್ಯಾರಾಚೂಟ್ ಜಿಗಿತಗಾರರಾಗಿದ್ದರು. ಈ ಗುಂಪನ್ನು ವಿಮಾನದಲ್ಲಿ ಕರೆದೊಯ್ಯಲಾಗುತ್ತಿತ್ತು ಎಂದು ತುರ್ತು ಸಚಿವಾಲಯ ಹೇಳಿದೆ ಎಂದು TASS ಸುದ್ದಿ ಸಂಸ್ಥೆ ವರದಿ ಮಾಡಿದೆ. ವಿಮಾನದ ಅವಶೇಷಗಳಿಂದ ಏಳು ಜನರನ್ನು ಜೀವಂತವಾಗಿ ಹೊರತೆಗೆಯಲಾಗಿದೆ ಎಂದು ಅದು ತಿಳಿಸಿದೆ.
ಇದನ್ನೂ ಓದಿ: ಗಲ್ಫ್ ದೇಶಗಳ ವಿಮಾನಯಾನ ದರ ಕಡಿಮೆ ಮಾಡಿ – ಒಕ್ಕೂಟ ಸರ್ಕಾರಕ್ಕೆ ಕೇರಳ ಸಿಎಂ ಪಿಣರಾಯಿ ವಿಜಯನ್
“ಏಳು ಜನರನ್ನು ರಕ್ಷಿಸಲಾಗಿದೆ” ಎಂದು ಎಎಫ್‌ಪಿ ತನ್ನ ಟೆಲಿಗ್ರಾಮ್ ಚಾನೆಲ್‌ನಲ್ಲಿ ರಷ್ಯಾದ ತುರ್ತು ಸಚಿವಾಲಯವನ್ನು ಉಲ್ಲೇಖಿಸಿ RIA ವರದಿ ಹೇಳಿದೆ.
ವಿಮಾನವು ಲೆಟ್ ಎಲ್ -410 ಟರ್ಬೊಲೆಟ್ ಆಗಿದ್ದು, ಇದು ಅವಳಿ ಎಂಜಿನ್ ಇರುವ ಕಿರು-ಶ್ರೇಣಿಯ ಸಾರಿಗೆ ವಿಮಾನವಾಗಿದೆ. ವಿಮಾನ ಪತನಕ್ಕೆ ಅತಿಯಾದ ಹೊರೆಯೆ ಕಾರಣ ಆಗಿರಬಹುದು ಎಂದು RIA ಸುದ್ದಿ ಸಂಸ್ಥೆ ಉಲ್ಲೇಖಿಸಿದೆ.
ಕಳೆದ ತಿಂಗಳು ಹಳೆಯ ಆಂಟೊನೊವ್ ಆನ್-26 ಸಾರಿಗೆ ವಿಮಾನವು ರಷ್ಯಾದ ಪೂರ್ವ ಭಾಗದಲ್ಲಿ ಪತನಗೊಂಡು ಆರು ಜನರನ್ನು ಬಲಿ ತೆಗೆದುಕೊಂಡಿತ್ತು. ಅದಕ್ಕಿಂತ ಮುಂಚೆ ಜುಲೈನಲ್ಲಿ ಕೂಡಾ ಆಂಟೊನೊವ್ ಆನ್ -26 ಟ್ವಿನ್ ಎಂಜಿನ್ ಟರ್ಬೊಪ್ರೊಪ್ ವಿಮಾನದಲ್ಲಿದ್ದ ಎಲ್ಲಾ 28 ಜನರು ರಷ್ಯಾದ ಕಮ್ಚಟ್ಕಾದಲ್ಲಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದರು.
ಇದನ್ನೂ ಓದಿ: ಮುಂಬೈ ವಿಮಾನ ನಿಲ್ಧಾಣವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಅದಾನಿ ಸಮೂಹ


