ರಷ್ಯಾದ ಟಾಟರ್ಸ್ತಾನ್‌ನಲ್ಲಿ ವಿಮಾನ ಪತನ: 16 ಜನರ ದುರ್ಮರಣ | Naanu gauri
PC: МЧС России

ರಷ್ಯಾದ L-410 ವಿಮಾನವೊಂದು ಟಾಟರ್ಸ್ತಾನ್ ಪ್ಯಾಂತ್ಯದ ಬಳಿ ಭಾನುವಾರ ಪತನಗೊಂಡಿದೆ. ಘಟನೆಯಲ್ಲಿ 16 ಜನರು ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ ಎಂದು RIA ಸುದ್ದಿ ಸಂಸ್ಥೆ ವರದಿ ಮಾಡಿದೆ. ಘಟನೆಯು ಬೆಳಗ್ಗೆ 9:11 ಕ್ಕೆ (ಮಾಸ್ಕೋ ಸಮಯ) ನಡೆದಿದೆ ಎಂದು ವರದಿ ತಿಳಿಸಿದೆ.

ವಿಮಾನದಲ್ಲಿ ಒಟ್ಟು 22 ಜನರಿದ್ದರು ಎಂದು ವರದಿಯಾಗಿದ್ದು, ಅವರಲ್ಲಿ 21 ಜನರು ಪ್ಯಾರಾಚೂಟ್ ಜಿಗಿತಗಾರರಾಗಿದ್ದರು. ಈ ಗುಂಪನ್ನು ವಿಮಾನದಲ್ಲಿ ಕರೆದೊಯ್ಯಲಾಗುತ್ತಿತ್ತು ಎಂದು ತುರ್ತು ಸಚಿವಾಲಯ ಹೇಳಿದೆ ಎಂದು TASS ಸುದ್ದಿ ಸಂಸ್ಥೆ ವರದಿ ಮಾಡಿದೆ. ವಿಮಾನದ ಅವಶೇಷಗಳಿಂದ ಏಳು ಜನರನ್ನು ಜೀವಂತವಾಗಿ ಹೊರತೆಗೆಯಲಾಗಿದೆ ಎಂದು ಅದು ತಿಳಿಸಿದೆ.

ಇದನ್ನೂ ಓದಿ: ಗಲ್ಫ್ ದೇಶಗಳ ವಿಮಾನಯಾನ ದರ ಕಡಿಮೆ ಮಾಡಿ – ಒಕ್ಕೂಟ ಸರ್ಕಾರಕ್ಕೆ ಕೇರಳ ಸಿಎಂ ಪಿಣರಾಯಿ ವಿಜಯನ್

“ಏಳು ಜನರನ್ನು ರಕ್ಷಿಸಲಾಗಿದೆ” ಎಂದು ಎಎಫ್‌ಪಿ ತನ್ನ ಟೆಲಿಗ್ರಾಮ್ ಚಾನೆಲ್‌ನಲ್ಲಿ ರಷ್ಯಾದ ತುರ್ತು ಸಚಿವಾಲಯವನ್ನು ಉಲ್ಲೇಖಿಸಿ RIA ವರದಿ ಹೇಳಿದೆ.

ವಿಮಾನವು ಲೆಟ್ ಎಲ್ -410 ಟರ್ಬೊಲೆಟ್ ಆಗಿದ್ದು, ಇದು ಅವಳಿ ಎಂಜಿನ್ ಇರುವ ಕಿರು-ಶ್ರೇಣಿಯ ಸಾರಿಗೆ ವಿಮಾನವಾಗಿದೆ. ವಿಮಾನ ಪತನಕ್ಕೆ ಅತಿಯಾದ ಹೊರೆಯೆ ಕಾರಣ ಆಗಿರಬಹುದು ಎಂದು RIA ಸುದ್ದಿ ಸಂಸ್ಥೆ ಉಲ್ಲೇಖಿಸಿದೆ.

ಕಳೆದ ತಿಂಗಳು ಹಳೆಯ ಆಂಟೊನೊವ್ ಆನ್-26 ಸಾರಿಗೆ ವಿಮಾನವು ರಷ್ಯಾದ ಪೂರ್ವ ಭಾಗದಲ್ಲಿ ಪತನಗೊಂಡು ಆರು ಜನರನ್ನು ಬಲಿ ತೆಗೆದುಕೊಂಡಿತ್ತು. ಅದಕ್ಕಿಂತ ಮುಂಚೆ ಜುಲೈನಲ್ಲಿ ಕೂಡಾ ಆಂಟೊನೊವ್ ಆನ್ -26 ಟ್ವಿನ್ ಎಂಜಿನ್ ಟರ್ಬೊಪ್ರೊಪ್‌ ವಿಮಾನದಲ್ಲಿದ್ದ ಎಲ್ಲಾ 28 ಜನರು ರಷ್ಯಾದ ಕಮ್ಚಟ್ಕಾದಲ್ಲಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದರು.

ಇದನ್ನೂ ಓದಿ: ಮುಂಬೈ ವಿಮಾನ ನಿಲ್ಧಾಣವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಅದಾನಿ ಸಮೂಹ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here