Homeಮುಖಪುಟಅವಿವೇಕಿಗಳು ಯುದ್ಧಕ್ಕಾಗಿ ಪ್ರೇರೇಪಿಸಿದರೂ ನಾವು ಅದನ್ನು ಬೆಂಬಲಿಸಬಾರದು: ಜನರಲ್ ಮನೋಜ್ ನರವಾಣೆ

ಅವಿವೇಕಿಗಳು ಯುದ್ಧಕ್ಕಾಗಿ ಪ್ರೇರೇಪಿಸಿದರೂ ನಾವು ಅದನ್ನು ಬೆಂಬಲಿಸಬಾರದು: ಜನರಲ್ ಮನೋಜ್ ನರವಾಣೆ

ಯುದ್ಧ ಎಂದರೆ ರೋಮ್ಯಾಂಟಿಕ್ ವಿಚಾರವಲ್ಲ, ಅದು ಬಾಲಿವುಡ್ ಸಿನಿಮಾವೂ ಅಲ್ಲ ಎಂದ ಸೇನೆಯ ಮಾಜಿ ಮುಖ್ಯಸ್ಥ

- Advertisement -
- Advertisement -

ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದವನ್ನು ವಿರೋಧಿಸುವವರನ್ನು ಟೀಕಿಸಿರುವ ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಮನೋಜ್ ನರವಾಣೆ, ಯುದ್ಧವು ರೋಮ್ಯಾಂಟಿಕ್ ವಿಚಾರವಲ್ಲ, ಅದು ಬಾಲಿವುಡ್ ಸಿನಿಮಾವೂ ಅಲ್ಲ ಎಂದು ಹೇಳಿದ್ದಾರೆ. ಪುಣೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜನರಲ್ ನರವಾಣೆ, ಅವಿವೇಕಿಗಳು ಯುದ್ಧಕ್ಕಾಗಿ ಪ್ರೇರೇಪಿಸಿದರೂ ನಾವು ಅದನ್ನು ಬೆಂಬಲಿಸಬಾರದು. ಒಬ್ಬ ಸೈನಿಕನಾಗಿ ಸರ್ಕಾರ ಆದೇಶಿಸಿದರೆ ಯುದ್ಧಕ್ಕೆ ಹೋಗುತ್ತೇನೆ, ಆದರೆ ರಾಜತಾಂತ್ರಿಕತೆ ನನ್ನ ಮೊದಲ ಆಯ್ಕೆಯಾಗಿದೆ ಎಂದು ಅವರು ಹೇಳಿದ್ದಾರೆ. ಅವಿವೇಕಿಗಳು ಯುದ್ಧಕ್ಕಾಗಿ 

ಆಪರೇಷನ್ ಸಿಂಧೂರ್, ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕ ಕೇಂದ್ರಗಳ ಮೇಲೆ ಭಾರತೀಯ ಸಶಸ್ತ್ರ ಪಡೆಗಳ ದಾಳಿ ಮತ್ತು ನಂತರ ನಾಲ್ಕು ದಿನಗಳ ತೀವ್ರ ಸಂಘರ್ಷ ಆರಂಭವಾದ ಈ ವಾರವು ಪ್ರಕ್ಷುಬ್ಧ ವಾರವಾಗಿದೆ ಎಂದು ನರವಾಣೆ ಹೇಳಿದ್ದಾರೆ.

“ಈ ಸಂಘರ್ಷ ಅಂತಿಮವಾಗಿ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುವ ಬಗ್ಗೆ ಘೋಷಣೆಯಲ್ಲಿ ಕೊನೆಗೊಂಡಿತು. ಇದು ಕೇವಲ ಮಿಲಿಟರಿ ಕಾರ್ಯಾಚರಣೆಗಳ ನಿಲುಗಡೆಯಾಗಿದೆ, ಕದನ ವಿರಾಮವಲ್ಲ ಎಂಬುವುದನ್ನು ನಾನು ಪುನರಾವರ್ತಿಸಲು ಬಯಸುತ್ತೇನೆ. ಮುಂಬರುವ ದಿನಗಳು ಮತ್ತು ವಾರಗಳಲ್ಲಿ ಏನಾಗುತ್ತದೆ ಎಂಬುವುದು ವೀಕ್ಷಿಸಿ” ಎಂದು ಅವರು ಹೇಳಿದ್ದಾರೆ.

ಮಿಲಿಟರಿ ಯುದ್ಧವನ್ನು ಸ್ಥಗಿತಗೊಳಿಸುವುದರ ವಿರುದ್ಧ ಹಲವಾರು ಜನರು ಪ್ರಶ್ನೆಗಳನ್ನು ಎತ್ತಿದ್ದಾರೆ ಎಂದು ಹೇಳಿದ ಅವರು, “ಅಂಕಿಅಂಶಗಳ ಬಗ್ಗೆ, ಅದರಲ್ಲೂ ವಿಶೇಷವಾಗಿ ಯುದ್ಧದ ವೆಚ್ಚವನ್ನು ಪರಿಗಣಿಸಿದರೆ, ನಷ್ಟಗಳು ತುಂಬಾ ದೊಡ್ಡದಾಗುತ್ತದೆ ಅಥವಾ ದುಸ್ತರವಾಗುತ್ತದೆ. ಅದಕ್ಕೂ ಮೊದಲು ಬುದ್ಧಿವಂತ ವ್ಯಕ್ತಿ ಯುದ್ಧ ನಿಲ್ಲುಸುವ ಕರೆಯನ್ನು ನೀಡುತ್ತಾರೆ ಎಂದು ಅರಿತುಕೊಳ್ಳಬೇಕು” ಎಂದು ಅವರು ಹೇಳಿದ್ದಾರೆ.

“ಭಯೋತ್ಪಾದಕರ ಮೂಲಸೌಕರ್ಯಗಳ ಮೇಲೆ ಮಾತ್ರವಲ್ಲದೆ ಅವರ ಪ್ರದೇಶದೊಳಗಿನ ಅವರ ವಾಯುನೆಲೆಗಳ ಮೇಲೂ ನಾವು ನಡೆಸಿದ ದಾಳಿಗಳ ಮೂಲಕ, ಈ ಹಾದಿಯಲ್ಲಿ ಮುಂದುವರಿದರೆ ಅದರ ಬೆಲೆ ತುಂಬಾ ಹೆಚ್ಚಾಗಿರುತ್ತದೆ ಎಂದು ನಾವು ಪಾಕಿಸ್ತಾನಕ್ಕೆ ಸಾಬೀತುಪಡಿಸಿದ್ದೇವೆ ಎಂದು ನಾನು ನಂಬುತ್ತೇನೆ. ಹಾಗಾಗಿಯೆ ಅಂತಿಮವಾಗಿ ಅವರ ಡಿಜಿಎಂಒ ಕದನ ವಿರಾಮದ ಸಾಧ್ಯತೆಯ ಬಗ್ಗೆ ಚರ್ಚಿಸಲು ನಮ್ಮದನ್ನು ಕರೆಯುವಂತೆ ಮಾಡಿತು” ಎಂದು ಅವರು ಹೇಳಿದ್ದಾರೆ.

“ನಾನು ಶಕ್ತಿ ಮತ್ತು ವಿನಾಶವನ್ನು ಉಲ್ಲೇಖಿಸಿದೆ, ಆದರೆ ಸಾಮಾಜಿಕವಾಗಿ ಕಳೆದುಹೋದ ಜೀವಗಳ ಬಗ್ಗೆ ಕೂಡಾ ಹೇಳಬೇಕಿದೆ. ದಾಳಿಯಲ್ಲಿ ತಮ್ಮ ಹೆತ್ತವರನ್ನು ಕಳೆದುಕೊಳ್ಳುವ ಅಥವಾ ಗಡಿ ಪ್ರದೇಶಗಳಲ್ಲಿ ಶೆಲ್ ದಾಳಿಯಲ್ಲಿ ಕೊಲ್ಲಲ್ಪಟ್ಟ ಮಕ್ಕಳ ಬಗ್ಗೆ ಮಾತಾಡಬೇಕಿದೆ. ಆದರೆ, ಈ ರೀತಿಯ ವಿನಾಶವನ್ನು ಯಾರೂ ಗಣನೆಗೆ ತೆಗೆದುಕೊಳ್ಳುವುದಿಲ್ಲ” ಎಂದು ಅವರು ಹೇಳಿದ್ದಾರೆ. ಆದರೆ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಈ ಆಘಾತವು ತಲೆಮಾರುಗಳವರೆಗೆ ಮುಂದುವರಿಯುತ್ತದೆ ಎಂದು ಅವರು ಹೇಳಿದ್ದಾರೆ.

“ಪಿಟಿಎಸ್‌ಡಿ (ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್) ಎಂಬುದೂ ಇದೆ. ಭಯಾನಕ ದೃಶ್ಯಗಳನ್ನು ನೋಡಿದ ಜನರು 20 ವರ್ಷಗಳ ನಂತರವೂ ಚಳಿಯಲ್ಲೂ ಬೆವರುತ್ತಾರೆ, ಅಂತಹ ಜನರಿಗೆ ಮನೋವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ” ಎಂದು ಅವರು ಹೇಳಿದ್ದಾರೆ.

“ಯುದ್ಧವು ರೋಮ್ಯಾಂಟಿಕ್ ವಿಚಾರವಲ್ಲ. ಇದು ನಿಮ್ಮ ಬಾಲಿವುಡ್ ಸಿನಿಮಾ ಅಲ್ಲ. ಇದು ತುಂಬಾ ಗಂಭೀರವಾದ ವ್ಯವಹಾರ. ಯುದ್ಧ ಅಥವಾ ಹಿಂಸೆಯನ್ನು ನಾವು ಕೊನೆಯ ಅಸ್ತ್ರವಗಿ ಬಳಸಬೇಕು. ಅದಕ್ಕಾಗಿಯೇ ನಮ್ಮ ಪ್ರಧಾನಿ ಇದು ಯುದ್ಧದ ಯುಗವಲ್ಲ ಎಂದು ಹೇಳಿದ್ದಾರೆ. ಅವಿವೇಕಿ ಜನರು ಯುದ್ಧ ಮಾಡಲು ನಮ್ಮನ್ನು ಬಲವಂತಪಡಿಸಿದರೂ, ನಾವು ಅದಕ್ಕಾಗಿ ಬೆಂಬಲ ವ್ಯಕ್ತಪಡಿಸಬಾರದು” ಎಂದು ಅವರು ಹೇಳಿದ್ದಾರೆ.

“ಆದರೂ, ಪೂರ್ಣ ಪ್ರಮಾಣದ ಯುದ್ಧಕ್ಕೆ ನಾವು ಏಕೆ ಹೋಗಿಲ್ಲ ಎಂದು ಜನರು ಕೇಳುತ್ತಿದ್ದಾರೆ. ಒಬ್ಬ ಮಿಲಿಟರಿ ವ್ಯಕ್ತಿಯಾಗಿ, ಸರ್ಕಾರ ಆದೇಶಿಸಿದರೆ, ನಾನು ಯುದ್ಧಕ್ಕೆ ಹೋಗುತ್ತೇನೆ. ಆದರೆ ಅದು ನನ್ನ ಮೊದಲ ಆಯ್ಕೆಯಾಗಿರುವುದಿಲ್ಲ” ಎಂದು ಮಾಜಿ ಭಾರತೀಯ ಸೇನಾ ಮುಖ್ಯಸ್ಥರೂ ಆಗಿರುವ ಅವರು ಹೇಳಿದ್ದಾರೆ. ಈ ವಿಚಾರದಲ್ಲಿ ತಾನು ರಾಜತಾಂತ್ರಿಕತೆಯನ್ನು ಆರಿಸಿಕೊಳ್ಳುವುದಾಗಿ ಅವರು ಹೇಳಿದ್ದು, ಸಂವಾದದ ಮೂಲಕ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿದರೆ ಸಶಸ್ತ್ರ ಸಂಘರ್ಷದ ಉಂಟಾಗುವುದಿಲ್ಲ ಎಂದು ತಿಳಿಸಿದ್ದಾರೆ.

“ರಾಷ್ಟ್ರೀಯ ಭದ್ರತೆಯಲ್ಲಿ ನಾವೆಲ್ಲರೂ ಸಮಾನ ಪಾಲುದಾರರು. ದೇಶಗಳ ನಡುವೆ ಮಾತ್ರವಲ್ಲದೆ, ಕುಟುಂಬಗಳಲ್ಲಿ ಅಥವಾ ರಾಜ್ಯಗಳು, ಪ್ರದೇಶಗಳು ಮತ್ತು ಸಮುದಾಯಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ನಾವು ಪ್ರಯತ್ನಿಸಬೇಕು. ಯಾವುದಕ್ಕೂ ಹಿಂಸಾಚಾರ ಉತ್ತರವಲ್ಲ” ಎಂದು ಅವರು ಹೇಳಿದ್ದಾರೆ. ಅವಿವೇಕಿಗಳು ಯುದ್ಧಕ್ಕಾಗಿ

ಇಲ್ಲಿ ಕ್ಲಿಕ್ ಮಾಡಿ

ಇದನ್ನೂಓದಿ:  ‘ನನ್ನ ಸಿಂಧೂರ ವಾಪಸ್ ಕೊಡಿ’: ಪಾಕಿಸ್ತಾನ ಸೆರೆಹಿಡಿದ ಬಿಎಸ್‌ಎಫ್ ಯೋಧನ ಪತ್ನಿ ಕಣ್ಣೀರು

‘ನನ್ನ ಸಿಂಧೂರ ವಾಪಸ್ ಕೊಡಿ’: ಪಾಕಿಸ್ತಾನ ಸೆರೆಹಿಡಿದ ಬಿಎಸ್‌ಎಫ್ ಯೋಧನ ಪತ್ನಿ ಕಣ್ಣೀರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕ ಕೋರ್ಟ್ ಮೆಟ್ಟಿಲೇರಿದ ಅದಾನಿ : ಎಸ್‌ಇಸಿ ವಂಚನೆ ಪ್ರಕರಣ ವಜಾಗೊಳಿಸುವಂತೆ ಮನವಿ

ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಮತ್ತು ಅವರ ಸೋದರಸಂಬಂಧಿ ಸಾಗರ್ ಅದಾನಿ ಅವರು ತಮ್ಮ ವಿರುದ್ಧದ ಭ್ರಷ್ಟಾಚಾರ ಮತ್ತು ವಂಚನೆ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಅಮೆರಿಕ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ವರದಿಯಾಗಿದೆ. ಅಮೆರಿಕದ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್...

ಜಮ್ಮು-ಕಾಶ್ಮೀರ: ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಆರೋಪ; ಇಬ್ಬರು ಸರ್ಕಾರಿ ನೌಕರರನ್ನು ವಜಾಗೊಳಿಸಿದ ಮನೋಜ್ ಸಿನ್ಹಾ

ಲಷ್ಕರ್-ಎ-ತೈಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಸೇರಿದಂತೆ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಬುಧವಾರ ಇಬ್ಬರು ಸರ್ಕಾರಿ ನೌಕರರನ್ನು ವಜಾಗೊಳಿಸಿದ್ದಾರೆ ಎಂದು...

ಭಾರಿ ಜನ ಬೆಂಬಲದ ನಡುವೆ ಭವಾನಿಪುರದಲ್ಲಿ ನಾಮಪತ್ರ ಸಲ್ಲಿಸಿದ ಮಮತಾ ಬ್ಯಾನರ್ಜಿ: ಶಕ್ತಿ ಪ್ರದರ್ಶನವಾಗಿ ಮಾರ್ಪಟ್ಟ ಮೆರವಣಿಗೆ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ತಮ್ಮ ಕಾಲಿಘಾಟ್ಕಾಲ್ ನಿವಾಸದಿಂದ ಹೊರಬಂದು ಭಬಾನಿಪುರ ವಿಧಾನಸಭಾ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಕಾಲ್ನಡಿಗೆಯಲ್ಲಿ ತೆರಳಿದರು, ಆ ಸಮಯದಲ್ಲಿ ಬೆಂಬಲಿಗರ ದೊಡ್ಡ ಗುಂಪೊಂದು ತೃಣಮೂಲ ಕಾಂಗ್ರೆಸ್...

‘ಜ್ಞಾನೇಶ್ ಕುಮಾರ್ ನಮಗೆ ‘ಗೆಟ್ ಲಾಸ್ಟ್’ ಅಂದ್ರು’ : ಮುಖ್ಯ ಚುನಾವಣಾ ಆಯುಕ್ತರೊಂದಿಗಿನ ಸಭೆ ಬಳಿಕ ಟಿಎಂಸಿ ನಾಯಕರಿಂದ ಆರೋಪ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರೊಂದಿಗೆ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ನಾಲ್ವರು ಸದಸ್ಯರ ನಿಯೋಗ ನಡೆಸಿದ ಸಭೆಯು ಬುಧವಾರ ಕಾವೇರಿದ ಚರ್ಚೆಗೆ ಸಾಕ್ಷಿಯಾಯಿತು. ಈ ವೇಳೆ ಚುನಾವಣಾ ಆಯುಕ್ತರು ನಮಗೆ...

ಅಸ್ಸಾಂ ಸಿಎಂ ಪತ್ನಿ ದೂರಿನ ಮೇರೆಗೆ ಪವನ್ ಖೇರಾ ವಿರುದ್ಧ ಮಾನನಷ್ಟ, ಕ್ರಿಮಿನಲ್ ಪಿತೂರಿ ಆರೋಪದಡಿ ಪ್ರಕರಣ ದಾಖಲು

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ನೀಡಿದ ದೂರಿನ ಆಧಾರದ ಮೇಲೆ ಅಸ್ಸಾಂ ಪೊಲೀಸರು ಪವನ್ ಖೇರಾ ವಿರುದ್ಧ ಮಾನನಷ್ಟ, ನಕಲಿ ಮತ್ತು ಕ್ರಿಮಿನಲ್ ಪಿತೂರಿ ಸೇರಿದಂತೆ...

ಅಮೆರಿಕ-ಇರಾನ್ ಕದನ ವಿರಾಮಕ್ಕೆ ಪಾಕ್ ಮಧ್ಯಸ್ಥಿಕೆ, ಬೆತ್ತಲಾದ ವಿಶ್ವಗುರು : ಕಾಂಗ್ರೆಸ್

ಕೇಂದ್ರ ಸರ್ಕಾರದ ವಿರುದ್ಧ ಬುಧವಾರ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮಕ್ಕೆ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಿರುವುದನ್ನು ಪ್ರಧಾನಿ ನರೇಂದ್ರ ಮೋದಿಯವರ 'ಅತ್ಯಂತ ವೈಯಕ್ತಿಕ ರಾಜತಾಂತ್ರಿಕತೆಗೆ' ಉಂಟಾದ...

ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅಸ್ಸಾಂ ಸಿಎಂ ನಿಂದನೀಯ ಪದ ಬಳಕೆ; ‘ಸಂಪೂರ್ಣ ನಾಚಿಕೆಗೇಡಿನ ಸಂಗತಿ’ ಎಂದ ಪ್ರಿಯಾಂಕಾ ಗಾಂಧಿ 

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು "ಅವಾಚ್ಯ" ಭಾಷೆ ಬಳಸಿರುವುದು "ಸಂಪೂರ್ಣವಾಗಿ ನಾಚಿಕೆಗೇಡಿನ" ಸಂಗತಿ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ...

ಇರಾಕ್‌ನಲ್ಲಿ ಅಪಹರಣಕ್ಕೊಳಗಾಗಿದ್ದ ಅಮೆರಿಕದ ಪತ್ರಕರ್ತೆ ಬಿಡುಗಡೆ

ಇರಾಕಿನ ರಾಜಧಾನಿ ಬಾಗ್ದಾದ್‌ನಲ್ಲಿ ಒಂದು ವಾರದ ಹಿಂದೆ ಅಪಹರಿಸಲ್ಪಟ್ಟಿದ್ದ ಅಮೆರಿಕದ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ತಿಳಿಸಿದ್ದಾರೆ. ಮಾರ್ಚ್ 31ರಂದು ಶೆಲ್ಲಿ...

ಅಸ್ಸಾಂನ ನಾಗಾಂವ್‌ನಲ್ಲಿ ದರೋಡೆ ಶಂಕೆಯ ಮೇಲೆ ಗುಂಪು ದಾಳಿ: ಮೂವರು ಮುಸ್ಲಿಂ ಪುರುಷರು ಸಾವು

ದರೋಡೆಯಲ್ಲಿ ಭಾಗಿಯಾಗಿದ್ದಾರೆಂದು ಶಂಕಿಸಿ ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ನಡೆದ ಗುಂಪು ದಾಳಿಯಲ್ಲಿ ಮೂವರು ಮುಸ್ಲಿಂ ಪುರುಷರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಸೈಫುಲ್ಲಾ, ಅಜೀಬುರ್ ಅಲಿಯಾಸ್ ಖೈರುಲ್ ಮತ್ತು ಇನಾಮುಲ್...

ಏ.10ರಂದು ಇಸ್ಲಾಮಾಬಾದ್‌ನಲ್ಲಿ ಅಮೆರಿಕ-ಇರಾನ್ ಶಾಂತಿ ಮಾತುಕತೆ : 10 ಷರತ್ತುಗಳನ್ನು ಮುಂದಿಟ್ಟ ಇರಾನ್

ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಇಸ್ಲಾಮಾಬಾದ್‌ನಲ್ಲಿ ಶಾಂತಿ ಮಾತುಕತೆ ಆಯೋಜಿಸಲಾಗಿದೆ. ಅಮೆರಿಕ ಮತ್ತು ಇರಾನ್ ನಿಯೋಗಗಳ ನಡುವಿನ ಈ ಮಹತ್ವದ ಮಾತುಕತೆಯು 2026ರ ಏಪ್ರಿಲ್ 10ರಂದು (ಶುಕ್ರವಾರ) ಇಸ್ಲಾಮಾಬಾದ್‌ನಲ್ಲಿ ನಡೆಯಲಿದೆ ಎಂದು ಪಾಕಿಸ್ತಾನದ...