Homeಎಕಾನಮಿಅಸಮಾನತೆ ನಿವಾರಣೆಗಾಗಿ ಪಿಕೆಟಿ ಪಿಸುಮಾತಿಗೆ ಕಿವಿಗೊಡುವುದೇ ಲೇಸು.

ಅಸಮಾನತೆ ನಿವಾರಣೆಗಾಗಿ ಪಿಕೆಟಿ ಪಿಸುಮಾತಿಗೆ ಕಿವಿಗೊಡುವುದೇ ಲೇಸು.

ಆಫ್ರಿಕಾ ಖಂಡದ ಅಮೇರಿಕದವನೊಬ್ಬ ಹೀಗೆ ಬರೆದುಕೊಂಡಿದ್ದಾನೆ, ನನಗೆ ಅವಮಾನ ಮತ್ತು ದ್ವೇಷ ತಿಳಿದಿರಲಿಲ್ಲ. ಅದನ್ನು ತಿಳಿಯಲು ಶಾಲೆಗೆ ಹೋಗಬೇಕಾಯಿತು.

- Advertisement -
- Advertisement -

ಆಫ್ರಿಕಾ ಖಂಡದ ಅಮೇರಿಕದವನೊಬ್ಬ ಹೀಗೆ ಬರೆದುಕೊಂಡಿದ್ದಾನೆ, ನನಗೆ ಅವಮಾನ ಮತ್ತು ದ್ವೇಷ ತಿಳಿದಿರಲಿಲ್ಲ. ಅದನ್ನು ತಿಳಿಯಲು ಶಾಲೆಗೆ ಹೋಗಬೇಕಾಯಿತು. ಸಿಮೋನ್ ಡಿ ಬೋವಾ ನಾನು ಮಹಿಳೆಯಾಗಿ ಹುಟ್ಟಲಿಲ್ಲ, ಆದರೆ ಆಗಲ್ಪಟ್ಟೆ ಎಂದಿದ್ದರು. ಸಮಾಜ ವ್ಯಕ್ತಿ ಮತ್ತು ವ್ಯಕ್ತಿತ್ವದ ಸೃಷ್ಟಿಗೆ ನೀಡುವ ಅಪಾರವಾದ ಸಕಾರಾತ್ಮಕ ಅಥವ ನಕಾರಾತ್ಮಕ ಕೊಡುಗೆಯನ್ನು ಈ ಹೇಳಿಕೆಗಳಲ್ಲಿ ಕಾಣಬಹುದು.

ಥಾಮಸ್ ಪಿಕೆಟಿ

ಈ ಶತಮಾನದ ಅತಿ ಹೆಚ್ಚು ಪ್ರಭಾವಿಸಿದ ಅರ್ಥಶಾಸ್ರಜ್ಞರನ್ನಾಗಿ ಥಾಮಸ್ ಪಿಕೆಟಿಯವರನ್ನು ಗುರುತಿಸುತ್ತಾರೆ. ಅವರ ಕ್ಯಾಪಿಟಲ್ ಇನ್ ದಿ 21ನೇ ಶತಮಾನದ ಒಂದು ಮೈಲುಗಲ್ಲು ಎಂದೇ ಪರಿಗಣಿಸಲಾಗಿದೆ. ಅವರ ಇತ್ತೀಚಿನ ಪುಸ್ತಕ ಕ್ಯಾಪಿಟಲ್ ಅಂಡ್ ಐಡಿಯಾಲಜಿ ಕೂಡಾ ಅದೇ ಮಟ್ಟದಲ್ಲಿ ಜಗತ್ತಿನಾದ್ಯಂತ ಚರ್ಚೆ ಆಗುತ್ತಿರುವ ಪುಸ್ತಕ. 1039 ಪುಟದ ಈ ಪುಸ್ತಕ ಒತ್ತಿ ಹೇಳುವುದು ಆರ್ಥಿಕ ಅಸಮಾನತೆಗೆ ಸಾಮಾಜಿಕ, ಸಾಂಸ್ಥಿಕ, ಸೈದ್ಧಾಂತಿಕ ಮತ್ತು ರಾಜಕೀಯ ಆಯಾಮಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ ಎಂದು.

ಕಾರ್ಲ್ ಮಾರ್ಕ್ಸ್ ನ ವರ್ಗ ಸಂಘರ್ಷದ ಹೊರತಾಗಿ, ಸಾಮಾಜಿಕ ಆಯಾಮಗಳಾದ ಜಾತಿ, ಲಿಂಗ, ಬಣ್ಣ, ಧಾರ್ಮಿಕ ಸಂಘಟನೆಗಳು ವ್ಯಕ್ತಿಯನ್ನು ಕೃತಕವಾಗಿ ಮೇಲಿನ ಸ್ಥರದಲ್ಲಿಟ್ಟು ಬಹುಜನರನ್ನು ಹತ್ತಿಕ್ಕಿ ಹತೋಟಿಯಲ್ಲಿಡುವ ಕಾರ್ಯವನ್ನು ಪಿಕೆಟಿ ಐತಿಹಾಸಿಕವಾಗಿ ವಿಸ್ತರಿಸುತ್ತಾ ಹೋಗುತ್ತಾರೆ. ಅಂಕಿ ಅಂಶಗಳಿಲ್ಲದೆ ಪಿಕೆಟಿ ಏನನ್ನೂ ಹೇಳಹೋಗುವುದಿಲ್ಲ. ನಮ್ಮಲ್ಲಿ ಹೀಗೆ ಹೇಳುವುದುಂಟು, ದತ್ತಾಂಶಗಳನ್ನು ನೀಡಿದರೆ ನನ್ನ ದಿಕ್ಕು ಬದಲಿಸುತ್ತೇನೆ ಎಂದು. ಇದಕ್ಕೆ ತಕ್ಕಂತೆ ಪಿಕೆಟಿ ಅನೇಕ ದೇಶಗಳ ಮತ್ತು ಸಾಮ್ರಾಜ್ಯಗಳ ಆಡಳಿತ, ಶ್ರೇಣೀಕೃತ ವರ್ಗ, ಕಾನೂನು ಮತ್ತು ತೆರಿಗೆಗಳ ಮೂಲಕ ಹೇಗೆ ಆರ್ಥಿಕ ಅಸಮಾನತೆಯನ್ನು ಉಂಟುಮಾಡಿವೆ ಎನ್ನುವುದನ್ನು ವಿಸ್ತರಿಸುತ್ತಾರೆ.

ವಿಜಯನಗರ ಸಾಮ್ರಾಜ್ಯದಲ್ಲಿ ಬ್ರಾಹ್ಮಣ ಕ್ಷತ್ರಿಯ ವರ್ಣಗಳ ಒಡಂಬಡಿಕೆ, ಬ್ರಾಹ್ಮಣರಿಗೆ ಭೂದಾನಗಳನ್ನು ಮಾಡಿದ್ದು ಹಾಗೂ ಪುದುಕೊಟ್ಟೆಯಲ್ಲಿ ಕಲಾರ್ಸ್ ದಲಿತರು ಪಟ್ಟಕ್ಕೇರಿದ ಮೇಲೇ ಅವರನ್ನು ಕ್ಷತ್ರಿಯ ವರ್ಣಕ್ಕೆ ಸೇರಿಸಲು ಬ್ರಾಹ್ಮಣ ವರ್ಗದ ಮುದ್ರೆಯ ಅವಶ್ಯಕತೆ ಉಂಟುಮಾಡಿ, ಆ ಪಟ್ಟಕ್ಕಾಗಿ ಬ್ರಾಹ್ಮಣರು ಗಿಟ್ಟಿಸಿಕೊಂಡ ಭೂಮಿ ಮತ್ತು ಗಳಿಸಿದ ಸಂಪತ್ತನ್ನು ವಿವರಿಸುತ್ತಾನೆ. ಶಿವಾಜಿ ಮಹರಾಜ ಕೂಡಾ ಇದೇ ರೀತಿಯ ಒಡಂಬಡಿಕೆ ಮಾಡಿಕೊಳ್ಳಬೇಕಾದ ಪ್ರಸಂಗವು ಬರುತ್ತದೆ. ಈ ರೀತಿ ಆರ್ಥಿಕ ಮುಗ್ಗಟ್ಟಿಗೆ ಅಸಮಾನತೆಗೆ ಸಾಮಾಜಿಕ ಆಯಾಮ ಹೇಗೆ ಕಾರಣ ಎಂದು ಗಣನೀಯವಾಗಿ ಪರಿಗಣಿಸಿ ವಿವರಿಸುತ್ತಾರೆ ಪಿಕೆಟಿ.

ಇಂದಿಗೂ ಸಹ ರಾಜಕಾರಣ, ರಾಜ್ಯ ಮತ್ತು ಕೈಗಾರಿಕೋದ್ಯಮಿಗಳು ಹೇಗೆ ಪರಸ್ಪರ ತಮ್ಮ ತಮ್ಮನ್ನು ಭದ್ರಪಡಿಸಿಕೊಳ್ಳಲು ತಮಗೆ ಬೇಕಾದ ಕಾನೂನು ಮತ್ತು ನಿಯಮಾವಳಿಗಳನ್ನು ಆಗ್ಗಿಂದಾಗ್ಗೆ ರೂಪಿಸಿಕೊಳ್ಳುತ್ತಾರೆ (Regulated regulate regulators)ಎಂಬುದನ್ನು ವಿವರಿಸುತ್ತಾರೆ. ಇದೇ ಸಮಯದಲ್ಲಿ ಈ ಪ್ರಸಂಗ ನೆನಪಾಗುತ್ತದೆ: ಹಿಂದೊಮ್ಮೆ ಆಯವ್ಯಯದ ಮುಂಗಡ ಪತ್ರ ಲೋಕಸಭೆಯಲ್ಲಿ ಮಂಡನೆಯಾಗುವ ಮೊದಲೇ ಅಂಬಾನಿ ಮನೆಯಲ್ಲಿ ರೇಡ್ ಆದಾಗ ಸಿಕ್ಕಿಬಿತ್ತು. ಆಗ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಇದು ಹಣಕಾಸು ಸಚಿವಾಲಯ ಅಂಬಾನಿಗೆ ಮೊದಲೇ ಕೊಟ್ಟಿದ್ದೋ ಅಥವಾ ಅಂಬಾನಿಯೇ ಕೊಟ್ಟ ಪ್ರತಿಯೋ ಎಂದು ಬರೆದಿದ್ದರು. ನ್ಯೂಯಾರ್ಕರ್ ನಿಯತಕಾಲಿಕದ ಕಾರ್ಟೂನ್ ಒಂದು ಹೀಗೆ ಹೇಳುತ್ತದೆ., ಉದ್ಯೋಗಪತಿಗೆ ಒಬ್ಬ ಕೇಳುತ್ತಾನೆ, ನೀವು ಟೀಂ ಪ್ಲೇಯರ್ರೇ?ಎಂದು. ಆತ ಹೇಳುತ್ತಾನೆ, ಇಲ್ಲ, ನಾನು ಟೀಂ ಓನರೆಂದು. ನಮ್ಮ ಕ್ರಿಕೆಟ್ ಟೀಂಗೂ ಇದನ್ನು ಹೋಲಿಸಬಹುದು.

ಭಾರತದೇಶ ಸಾಮಾಜಿಕ ಚಲನಶೀಲತೆಯಲ್ಲಿ ಅತ್ಯಂತ ಕಳಪೆ ಸ್ಥಾನವನ್ನು ಹೊಂದಿದೆ. ಕಳೆದ ವರ್ಷ 82 ದೇಶಗಳಲ್ಲಿ 76ನೇ ಸ್ಥಾನವನ್ನು ಪಡೆದಿತ್ತು. ಅತ್ಯಂತ ಕೆಳಮಟ್ಟದ ಈ ಸ್ಥಾನಕ್ಕೆ ನಮ್ಮಲ್ಲಿನ ಜಾತಿ, ವರ್ಣಬೇಧ ನೀತಿ, ಆರ್ಥಿಕ ಅಸಮಾನತೆ ಕಾರಣ. ಇವೆಲ್ಲವೂ ಸಾಮಾಜಿಕ ಮುಗ್ಗಟ್ಟಿನ ಚಕ್ರವ್ಯೂಹದಿಂದ ಹೊರಕ್ಕೆ ದಾಟಿ ಹೋಗದಂತೆ ತಡೆಗೋಡೆ ಹಾಕಿ ನೋಡಿಕೊಳ್ಳುತ್ತವೆ. ಸೋಶಿಯಲ್ ಮೊಬಿಲಿಟಿ ಇಂಡೆಕ್ಸ್ ಎಂದು ಹೇಳುವ ಈ ಸಾಮಾಜಿಕ ಚಲನಶೀಲತೆಗೆ ನಮ್ಮ ಸಾಂಸ್ಥಿಕ ಸಂಘಟನೆಗಳು, ಧರ್ಮ ಮತ್ತು ಜಾತಿ ವ್ಯವಸ್ಥೆ ಬಲಿಷ್ಟ ತಡೆಗೋಡೆಗಳಾಗಿ ನಿಂತಿವೆ. ಆರ್ಥಿಕ ಅಸಮಾನತೆ ಇಂದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸಂಗತಿ. ವಿಪರ್ಯಾಸವೆಂದರೆ ಕೊರೊನ ಮಹಾಮಾರಿಯ ಕಾಲದಲ್ಲೂ ಬಿಲಿಯನೇರ್‌ಗಳ ಆಸ್ತಿ ಕೊರೋನ ಸೋಂಕು ಮತ್ತು ಸಾವನ್ನು ಮೀರಿ ಬೆಳೆಯುತ್ತಿದೆ. ಅಮೇರಿಕಾದ ಪ್ರಜಾಪ್ರಭುತ್ವವನ್ನು,‘by the 1%, of the 1%, for the 1%’  ಎನ್ನುವುದುಂಟು. ಆಸ್ತಿ ತೆರಿಗೆಯನ್ನು ಸಮಗ್ರವಾಗಿ ಅನುಸ್ಠಾನಗೊಳಿಸಿದ್ದಲ್ಲಿ ಆರ್ಥಿಕ ಅಸಮಾನತೆಯನ್ನು ಹೇಗೆ ತಡೆಗಟ್ಟಬಹುದು ಎನ್ನುವುದನ್ನು ಪಿಕೆಟಿ ಅನೇಕ ಉದಾಹರಣೆಗೊಳೊಂದಿಗೆ ವಿವರಿಸುತ್ತಾನೆ. ಫ್ರಾನ್ಸ್ ದೇಶದಲ್ಲಿ 19ನೇ ಶತಮಾನದಲ್ಲಿ ಪೀಳಿಗೆಯಿಂದ ಪೀಳಿಗೆಗೆ ಬರುವ ಆಸ್ತಿಯ ಮೇಲೆ ಹಾಕಿದ ಕನಿಷ್ಟ ತೆರಿಗೆಯಿಂದ ಹೇಗೆ ಅಸಮಾನತೆಯನ್ನು ಹಿಂದಿಕ್ಕಲು ಸಾಧ್ಯವಾಯಿತೆಂದು ವಿವರಿಸುತ್ತಾನೆ. ಇಂದಿನ ಈ 1% ಪ್ರಜಾಪ್ರಭುತ್ವವನ್ನು ತಡೆಗಟ್ಟಲು ಪಿಕೆಟಿ ಪಿಸುಮಾತಿಗೆ ಕಿವಿಗೊಡುವುದೇ ಲೇಸು.


ಇದನ್ನೂ ಓದಿ: ಭಾರತದಲ್ಲಿ ಧರ್ಮಗಳು ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ಅರಿತ್ತಿದ್ದೇವೆಯೇ? : ಬಿ. ಶ್ರೀಪಾದ ಭಟ್

460 ಕೋಟಿ ಜನರು ಹೊಂದಿರುವ ಒಟ್ಟು ಆಸ್ತಿ ಕೇವಲ 2000 ಜನರ ಕೈಯಲ್ಲಿದೆ! ದಾವೋಸ್‌ನಲ್ಲಿ ‘ಆಕ್ಸ್‌ಫಾಮ್’ ವರದಿ

ಕೊರೊನ ಸಮಯದ ಮತ್ತು ಕೊರೊನೋತ್ತರ ಆರ್ಥಿಕ ಪುನಶ್ಚೇತನಕ್ಕೆ ನಮ್ಮ ಸರ್ಕಾರ ಮಾಡುತ್ತಿರುವುದೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...