Homeಎಕಾನಮಿ460 ಕೋಟಿ ಜನರು ಹೊಂದಿರುವ ಒಟ್ಟು ಆಸ್ತಿ ಕೇವಲ 2000 ಜನರ ಕೈಯಲ್ಲಿದೆ! ದಾವೋಸ್‌ನಲ್ಲಿ 'ಆಕ್ಸ್‌ಫಾಮ್'...

460 ಕೋಟಿ ಜನರು ಹೊಂದಿರುವ ಒಟ್ಟು ಆಸ್ತಿ ಕೇವಲ 2000 ಜನರ ಕೈಯಲ್ಲಿದೆ! ದಾವೋಸ್‌ನಲ್ಲಿ ‘ಆಕ್ಸ್‌ಫಾಮ್’ ವರದಿ

ಭಾರತದ ಕೇವಲ 63 ಮಂದಿ ಅತಿ ಶ್ರೀಮಂತರ ಒಟ್ಟು ಸಂಪತ್ತು 2018-19ರ ಹಣಕಾಸು ವರ್ಷದಲ್ಲಿ ಕೇಂದ್ರ ಬಜೆಟ್ ಮೊತ್ತವಾದ 24,42,200 ಕೋಟಿ ರೂ.ಗಳನ್ನು ಮೀರಿತ್ತು. ಇದರಿಂದಲೇ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಬಹುದು

- Advertisement -
- Advertisement -

ಮೂಲ: ‘ಲೈವ್‌ಮಿಂಟ್’
ನಿರೂಪಣೆ: ನಿಖಿಲ್ ಕೋಲ್ಪೆ

ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯೂಇಎಫ್)ಯ 50ನೇ ವಾರ್ಷಿಕ ಸಭೆಯ ಸಂದರ್ಭದಲ್ಲಿ ಮಾನವ ಹಕ್ಕು ಸಂಸ್ಥೆ ‘ಆಕ್ಸ್‌ಫಾಮ್’ ತನ್ನ ಅಧ್ಯಯನ ವರದಿ ‘ಟೈಮ್ ಟು ಕೇರ್” ಬಿಡುಗಡೆ ಮಾಡಿದ್ದು, ಅದು, ಭಾರತ ಮತ್ತು ಜಗತ್ತಿನಾದ್ಯಂತ ಅತಿ ಶ್ರೀಮಂತರು ಹಾಗೂ ಬಡವರ ನಡುವಿನ ಕಂದರ ಆತಂಕಕಾರಿಯಾಗಿ ಬೆಳೆದಿರುವುದು ಮತ್ತು ಜಗತ್ತಿನ ಸಂಪತ್ತು ಕೆಲವೇ ಶ್ರೀಮಂತರ ಕೈಯಲ್ಲಿರುವುದನ್ನು ತೋರಿಸಿಕೊಟ್ಟಿದೆ.

ಅದರ ಪ್ರಕಾರ, ಒಂದು ಶೇಕಡಾ ಸಿರಿವಂತ ಭಾರತೀಯರ ಸಂಪತ್ತು- 70 ಶೇಕಡಾ ಬಡ ಭಾರತೀಯರ, ಅಂದರೆ 95.3 ಕೋಟಿ ಜನರ ಒಟ್ಟು ಸಂಪತ್ತಿನ ನಾಲ್ಕು ಪಟ್ಟಿನಷ್ಟಿದೆ. ಜಗತ್ತಿನ ಕೇವಲ 2,153 ಮಂದಿ ಶತಕೋಟಿಪತಿಗಳು 460 ಕೋಟಿ, ಅಂದರೆ ಈ ಭೂಮಿಯ 60 ಶೇಕಡಾ ಜನರ ಒಟ್ಟು ಸಂಪತ್ತಿಗಿಂತ ಹೆಚ್ಚಿನ ಸಂಪತ್ತು ಹೊಂದಿದ್ದಾರೆ. ಕಳೆದ ದಶಕದಲ್ಲಿ ಶತಕೋಟಿಪತಿಗಳ ಸಂಖ್ಯೆ ದ್ವಿಗುಣಗೊಂಡಿದ್ದು, ಕಡು ಬಡವರ ಸಂಖ್ಯೆಯೂ ಅದೇ ರೀತಿಯಲ್ಲಿ ಬೆಳೆದಿದೆ.

“ಇಂತಹಾ ದಂಗುಬಡಿಸುವ ಕಂದರವನ್ನು ಕಡಿಮೆ ಮಾಡುವುದು, ಉದ್ದೇಶಪೂರ್ವಕವಾದ ಧೋರಣೆ ಮತ್ತು ಪ್ರಯತ್ನವಿಲ್ಲದೇ ಸಾಧ್ಯವಿಲ್ಲ. ಆದರೆ, ಕೆಲವೇ ಕೆಲವು ಸರಕಾರಗಳು ಇಂತಹಾ ಪ್ರಯತ್ನಗಳಿಗೆ ಬದ್ಧತೆ ಹೊಂದಿವೆ” ಎಂದು ‘ಆಕ್ಸ್‌ಫಾಮ್’ನ ಭಾರತ ವಿಭಾಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಿತಾಬ್ ಬೆಹರ್ ಹೇಳುತ್ತಾರೆ.

ಆದಾಯ ಮತ್ತು ಲಿಂಗ ಅಸಮಾನತೆಯ ಸಮಸ್ಯೆಗಳು ಐದು ದಿನಗಳ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಗೆ ಒಳಗಾಗುವ ನಿರೀಕ್ಷೆಯಿದೆ. ಡಬ್ಲ್ಯೂಇಎಫ್‌ನ ವಾರ್ಷಿಕ ಜಾಗತಿಕ ಅಪಾಯ ಕುರಿತ ಸ್ವಂತ ವರದಿ ಕೂಡಾ 2020ರಲ್ಲಿ ಜಾಗತಿಕ ಆರ್ಥಿಕತೆಯು ಕೆಳಮುಖ ಒತ್ತಡ ಎದುರಿಸುವ ಕುರಿತು ಎಚ್ಚರಿಕೆ ನೀಡಿದೆ. 2019ರಲ್ಲಿಯೂ ಅರ್ಥಿಕ ಅಸಮಾನತೆಯ ತೀವ್ರತೆ ಮುಂದುವರಿದಿತ್ತು.

ಲ್ಯಾಟಿನ್ ಮತ್ತು ಮಧ್ಯ ಅಮೆರಿಕ ದೇಶಗಳು ಸೇರಿದಂತೆ, ಜಗತ್ತಿನ ಪ್ರತಿಯೊಂದು ಖಂಡದಲ್ಲಿ ಸಾಮಾಜಿಕ ತಲ್ಲಣಗಳು ಸಂಭವಿಸುತ್ತಿದ್ದು, ಪ್ರಜಾಪ್ರಭುತ್ವಗಳು ಅಪಾಯದಲ್ಲಿರುವ ಈ ಸಂದರ್ಭದಲ್ಲಿ ಹೆಚ್ಚುತ್ತಿರುವ ಆರ್ಥಿಕ ಕಂದರ ಎಚ್ಚರಿಕೆಯ ಗಂಟೆಯನ್ನು ಬಾರಿಸುತ್ತಿದ್ದು, ಪರಿಸ್ಥಿತಿಯ ಸ್ಫೋಟಕತೆಯನ್ನು ಸೂಚಿಸುತ್ತದೆ. ಏಕೆಂದರೆ, ಭಾರತವೂ ಸೇರಿದಂತೆ ಹಲವಾರು ದೇಶಗಳಲ್ಲಿ ಕಂಡುಬರುತ್ತಿದ್ದು, ತೀವ್ರಗೊಳ್ಳುತ್ತಿರುವ ಸಾಮಾಜಿಕ ಅಶಾಂತಿಗೆ ಹೆಚ್ಚುತ್ತಿರುವ ಭ್ರಷ್ಟಾಚಾರ, ಸಂವಿಧಾನದ ಉಲ್ಲಂಘನೆ, ಬಲಪಂಥೀಯ ಪ್ರಭಾವ, ಫ್ಯಾಸಿಸ್ಟ್ ಶಕ್ತಿಗಳ ದಬ್ಬಾಳಿಕೆ, ದಿನಬಳಕೆಯ ಅಗತ್ಯ ವಸ್ತುಗಳ ಬೆಲೆಯಲ್ಲಿ ತೀವ್ರ ಹೆಚ್ಚಳ, ನಿರುದ್ಯೋಗ, ಕುಸಿಯುತ್ತಿರುವ ಆದಾಯ ಇತ್ಯಾದಿಯಾಗಿ ಹಲವಾರು ಕಾರಣಗಳಿವೆ.

ದೇಶದೇಶಗಳ ನಡುವಿನ ಆರ್ಥಿಕ ಅಸಮಾನತೆ ಕಳೆದ ಮೂರು ದಶಕಗಳಲ್ಲಿ ಕಡಿಮೆಯಾಗಿದ್ದರೂ, ದೇಶಗಳೊಳಗೆ ಜನರ ಆದಾಯದಲ್ಲಿ ಅಸಮಾನತೆ ತೀವ್ರಗೊಂಡಿದೆ. ಇದು ಮುಖ್ಯವಾಗಿ ಮುಂದುವರಿದ ಆರ್ಥಿಕತೆಗಳನ್ನೂ ತಟ್ಟಿದ್ದು, ಕೆಲವು ದೇಶಗಳಲ್ಲಿ ಐತಿಹಾಸಿಕ ಮಟ್ಟವನ್ನು ತಲುಪಿದೆ. ಇದರ ಅರ್ಥ ಶ್ರೀಮಂತರು ಹೆಚ್ಚುಹೆಚ್ಚು ಶ್ರೀಮಂತರಾಗುತ್ತಿದ್ದು, ಬಡವರು ಹೆಚ್ಚುಹೆಚ್ಚು ಬಡವರಾಗುತ್ತಿದ್ದಾರೆ.

‘ಆಕ್ಸ್‌ಫಾಮ್’ ವರದಿ ಹೇಳುವ ಪ್ರಕಾರ ಕೆಲವು ದೊಡ್ಡ ರಾಷ್ಟ್ರಗಳು- ಸಾಮಾನ್ಯ ಜನರು, ಅದರಲ್ಲೂ ಮುಖ್ಯವಾಗಿ ಮಹಿಳೆಯರ ಹಿತಾಸಕ್ತಿಯನ್ನು ಬಲಿಗೊಟ್ಟು, ಕೆಲವೇ ಅತಿ ಶ್ರೀಮಂತರು ಹೆಚ್ಚು ಹೆಚ್ಚು ಹಣ ಸಂಗ್ರಹಿಸಲು ಅವಕಾಶ ಮಾಡಿಕೊಡುವುದರ ಮೂಲಕ ಅಸಮಾನತೆಯ ಬೆಂಕಿಗೆ ತುಪ್ಪ ಸುರಿಯುತ್ತಿವೆ.

ಭಾರತದಲ್ಲಿಯೂ ಸಾಮಾನ್ಯ ಜನರು ಮತ್ತು ಮಧ್ಯಮ ಕೈಗಾರಿಕೆಗಳು ಆರ್ಥಿಕ ಬಿಕ್ಕಟ್ಟಿನ ಬಿಸಿ ಅನುಭವಿಸುತ್ತಿರುವಾಗ, ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಳ್ಳುತ್ತಿರುವಾಗ, ನಿರುದ್ಯೋಗ ದಾಖಲೆ ಪ್ರಮಾಣಕ್ಕೆ ಏರುತ್ತಿರುವಾಗ, ಆರ್ಥಿಕ ಬೆಳವಣಿಗೆ 4.3 ಶೇಕಡಾದ ಆಸುಪಾಸಿಗೆ ಕುಸಿದಿರುವಾಗ ಅದಾನಿ, ಅಂಬಾನಿಗಳ ಹಾಗೂ ಬಿಜೆಪಿಯ ಆದಾಯ ಮತ್ತು ಸಂಪತ್ತು ಗಣನೀಯವಾಗಿ ಏರಿರುವುದನ್ನು ಉದಾಹರಣೆಯಾಗಿ ನೋಡಬಹುದು.

‘ಆಕ್ಸ್‌ಫಾಮ್’ ವರದಿಯ ಪ್ರಕಾರ ಭಾರತದ ಕೇವಲ 63 ಮಂದಿ ಅತಿ ಶ್ರೀಮಂತರ ಒಟ್ಟು ಸಂಪತ್ತು 2018-19ರ ಹಣಕಾಸು ವರ್ಷದಲ್ಲಿ ಕೇಂದ್ರ ಬಜೆಟ್ ಮೊತ್ತವಾದ 24,42,200 ಕೋಟಿ ರೂ.ಗಳನ್ನು ಮೀರಿತ್ತು. ಇದರಿಂದಲೇ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಮೊದಲಿಗೆ ಹೆಸರು ಮಾಡುವವರು ಬಡ ಸಾಮಾನ್ಯರನ್ನ ತಲೆ ಹೊಡೆಯುತ್ತಾರೆ ಎರಡನೆಯದಾಗಿ ಪೊಲಿಟಿಕಲ್ ಪವರ್ ಬಳಸಿಕೊಳ್ಳುವ ತಂತ್ರ ಹುಡುಕಿಕೊಳ್ಳುತ್ತಾರೆ
    ಅದಾದ ನಂತರ ಅವರದೇ ಆದ ಧಾಟಿಯಲ್ಲಿ ಸಮಾಜದ ನಾಗರಿಕರ ಮೇಲೆ ಒತ್ತಡ ಭಯ ಹೆಸರು ಗಳಿಸಿಕೊಳ್ಳುತ್ತಾರೆ
    ಇವಿಷ್ಟು ಆದನಂತರ ಒಬ್ಬ ನಿಷ್ಠಾವಂತ ವ್ಯಕ್ತಿಯನ್ನು ತಲೆ ಹೊಡೆದು ನನ್ನದೇನೂ ತಪ್ಪಿಲ್ಲ ಎಂದು ಕಾನೂನಿನ ಚೌಕಟ್ಟಿನಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿರುವ ನ್ಯಾಯಾಲಯದಲ್ಲಿ ನಾನು ಅಪರಾಧಿಯಲ್ಲ ಎಂದು ಪ್ರೊ ಮಾಡಿಕೊಳ್ಳುತ್ತಾರೆ ಇದಾದ ನಂತರ ಗಣ್ಯಾತಿಗಣ್ಯರು ಅವನ ಬಲಾಡ್ಯ ತನಕ್ಕೆ ಮಣಿದು ಪೊಲಿಟಿಕಲ್ ಸ್ಕೆಳೆ ತರುತ್ತಾರೆ ಅದಾದ ನಂತರ ಯಾವುದು 1 ದೊಡ್ಡ ಇಮೇಜ್ ಬಂದಂತಾಗುತ್ತದೆ
    ನ್ಯಾಯವಾಗಿ ಸಂಪಾದನೆ ಮಾಡಬಹುದಾದ ವ್ಯಕ್ತಿಗಳಿಗೆ ಸಮಾಜದಲ್ಲಿ ಬೆಲೆ ಇಲ್ಲ
    ಲೂಟಿಕೋರರ ಸಮಾಜದಲ್ಲಿ ಸಾಮಾನ್ಯ ವ್ಯಕ್ತಿತ್ವವುಳ್ಳವರು ಬದುಕುವಂತಹ ದುರ್ದೈವ ಭಾರತ ದೇಶಕ್ಕೆ ಬಂದೊದಗಿದೆ
    ಆಳುವವರಿಗೆ ನಾನು ಮೊದಲು ಅಖಂಡ ಚಕ್ರವರ್ತಿಯಾಗಬೇಕು ಎನ್ನುವ ಆಸೆ ಅಧಿಕವಾಗಿ ತುಂಬಿಕೊಂಡಿರುತ್ತವೆ
    ಬಡವರ ಬಂಧು ದೀನದಲಿತರ ಕಣ್ಮಣಿ ದಲಿತರ ಮನೆ ಊಟ ದಲಿತರ ಏಳಿಗೆಗೆ ನಾಯಕ ನಾನು ಎಂದು ಬಿಂಬಿಸಿಕೊಳ್ಳುತ್ತಾರೆ ಇವೆಲ್ಲಾ ಹೇಳುವುದಷ್ಟೇ ಸೀಮಿತವಾಗಿರುತ್ತದೆ ಬದಲಾವಣೆ ಮಾತ್ರ ಶೂನ್ಯ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...

TMC ತೊರೆದು BJP ಸೇರಿದ ಮಾಜಿ ಸಂಸದರಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ರಾಜ್ಯಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಿದ ಕೆಲವೇ ವಾರಗಳಲ್ಲಿ, ಆ ಮೂವರು ಮಾಜಿ ಸಂಸದರು ಈಗ ಬೇರೆ ಬಣ್ಣದ (BJP) ಶಾಲು ಧರಿಸಿ ಮತ್ತೆ...

ಪಶ್ಚಿಮ ಬಂಗಾಳ: ಟಿಎಂಸಿ ಖಾತೆ ಫ್ರೀಜ್ ಮಾಡಿದ್ದ ಪೊಲೀಸರಿಗೆ ಕಲ್ಕತ್ತಾ ಹೈಕೋರ್ಟ್ ತರಾಟೆ!

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹಲವು ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದ ಪಕ್ಷದ ಮೂರು ಬ್ಯಾಂಕ್...

ಬಂಗಾಳದ ಬಿಸಿಯೂಟ ಇಸ್ಕಾನ್‌ಗೆ ಹಸ್ತಾಂತರವಿಲ್ಲ: ಸರ್ಕಾರದ ಸ್ಪಷ್ಟನೆ, ಕಲ್ಕತ್ತಾ ಹೈಕೋರ್ಟ್‌ನಿಂದ ಅಫಿಡವಿಟ್‌ಗೆ ನಿರ್ದೇಶನ 

ಕೋಲ್ಕತ್ತಾ: ರಾಜ್ಯದ ಶಾಲೆಗಳಲ್ಲಿ ಜಾರಿಯಲ್ಲಿರುವ ಪಿಎಂ-ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಯ ನಿರ್ವಹಣೆಯನ್ನು ಇಸ್ಕಾನ್ ಸಂಸ್ಥೆಗೆ ಹಸ್ತಾಂತರಿಸುವ ಯಾವುದೇ ಅನುಮೋದಿತ ಪ್ರಸ್ತಾಪ ಸರ್ಕಾರಕ್ಕಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಅಫಿಡವಿಟ್...