Homeಮುಖಪುಟಬಾಂಗ್ಲಾದೇಶಿಗರು ಎಂಬ ಆರೋಪ : ಬಂಗಾಳದ ನಾಲ್ವರು ಮುಸ್ಲಿಂ ವ್ಯಾಪಾರಿಗಳಿಗೆ ಒಡಿಶಾ ತೊರೆಯಲು 72 ಗಂಟೆಗಳ...

ಬಾಂಗ್ಲಾದೇಶಿಗರು ಎಂಬ ಆರೋಪ : ಬಂಗಾಳದ ನಾಲ್ವರು ಮುಸ್ಲಿಂ ವ್ಯಾಪಾರಿಗಳಿಗೆ ಒಡಿಶಾ ತೊರೆಯಲು 72 ಗಂಟೆಗಳ ಗಡುವು

- Advertisement -
- Advertisement -

ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ನಾಲ್ವರು ಮುಸ್ಲಿಂ ವ್ಯಾಪಾರಿಗಳನ್ನು ಬಾಂಗ್ಲಾದೇಶಿಯರು ಮತ್ತು ರೋಹಿಂಗ್ಯಾ ವಲಸಿಗರು ಎಂದು ಆರೋಪಿಸಿ ಒಡಿಶಾದ ನಯಾಗಢವನ್ನು ತೊರೆಯಲು 72 ಗಂಟೆಗಳ ಗಡುವು ನೀಡಲಾಗಿದೆ ಎಂದು ದಿ ಟೆಲಿಗ್ರಾಫ್ ಮಂಗಳವಾರ (ಡಿ.2) ವರದಿ ಮಾಡಿದೆ.

ಈ ನಾಲ್ವರು ಪುರುಷರು ಹಲವಾರು ವರ್ಷಗಳಿಂದ ನಯಾಗಢದಲ್ಲಿ ದ್ವಿಚಕ್ರ ವಾಹನಗಳಲ್ಲಿ ಸೊಳ್ಳೆ ಪರದೆ, ಹೊದಿಕೆ ಮತ್ತು ಉಣ್ಣೆಯ ಬಟ್ಟೆಗಳನ್ನು ಮಾರಾಟ ಮಾಡುತ್ತಿದ್ದರು. ನಾಲ್ವರೂ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ಡೊಮ್ಕಲ್ ಉಪವಿಭಾಗದ ಜಲಂಗಿ ಬ್ಲಾಕ್‌ನಲ್ಲಿರುವ ಸಾಗರ್‌ಪಾರ ಗ್ರಾಮ ಪಂಚಾಯತ್‌ಗೆ ಸೇರಿದವರು.

ನವೆಂಬರ್ 27ರಂದು, ನಾಲ್ವರಲ್ಲಿ ಒಬ್ಬರಾದ ಸಾಹೇಬ್ ಶೇಖ್ ಎಂಬವರ ಬಾಡಿಗೆ ಮನೆಗೆ ಭೇಟಿ ನೀಡಿದ ಪೊಲೀಸ್ ಅಧಿಕಾರಿಗಳು, “ನೀವು ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ರೋಹಿಂಗ್ಯಾಗಳು” ಎಂದು ಆರೋಪಿಸಿದ್ದಾರೆ ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ.

ಅಧಿಕಾರಿಗಳು ತನ್ನ ಗುರುತಿನ ಚೀಟಿಗಳನ್ನು ಕೇಳಿದ್ದಾರೆ ಎಂದು ಶೇಖ್ ಹೇಳಿರುವುದಾಗಿ ವರದಿ ತಿಳಿಸಿದೆ.

“ಅಧಿಕಾರಿಗೆ ನಾನು ನನ್ನ ಆಧಾರ್ ಕಾರ್ಡ್‌ ಮತ್ತು ವೋಟರ್ ಐಡಿ ತೋರಿಸಿದೆ. ಅದಕ್ಕೆ ಅವರು ತೃಪ್ತರಾಗಲಿಲ್ಲ. ನನ್ನ ಬಾಡಿಗೆ ಮನೆಯ ಮಾಲೀಕರಿಗೆ ಕರೆ ಮಾಡಿ ಸಂಜೆ 5 ಗಂಟೆಯೊಳಗೆ ಎಲ್ಲರೂ ಠಾಣೆಗೆ ಬರುವಂತೆ ಸೂಚಿಸಿದರು” ಎಂದು ಸಾಹೇಬ್ ಶೇಖ್ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.

ಪೊಲೀಸ್ ಅಧಿಕಾರಿ ಹೇಳಿದಂತೆ ನಾಲ್ವರೂ ಓಡಗಾಂವ್ ಪೊಲೀಸ್ ಠಾಣೆಗ ಹೋಗಿದ್ದರು. ಅಲ್ಲಿ ಒಬ್ಬ ಅಧಿಕಾರಿ ನಾಲ್ವರೂ ಮೂರು ದಿನಗಳಲ್ಲಿ ಪಟ್ಟಣ ತೊರೆಯುವಂತೆ ಸೂಚಿಸಿದ್ದಾರೆ. ಬಂಗಾಳಿ ಭಾಷೆಯಲ್ಲಿ ಮಾತನಾಡಿದ ಕಾರಣ ಅವರನ್ನು ರೋಹಿಂಗ್ಯಾಗಳು ಮತ್ತು ಬಾಂಗ್ಲಾದೇಶಿಗಳು ಎಂಬುವುದಾಗಿ ಆರೋಪಿಸಲಾಗಿದೆ ಎಂದು ವರದಿ ಹೇಳಿದೆ.

ಪೊಲೀಸರು ನಾಲ್ವರಿಂದಲೂ ಸಹಿ ಮಾಡಿದ ದಾಖಲೆಗಳ ಪ್ರತಿಗಳನ್ನು ತೆಗೆದುಕೊಂಡಿದ್ದಾರೆ.

“ನಾವು ಠಾಣೆಗೆ ಹೋದಾಗ ನಮಗೆ ಕಿರುಕುಳ ನೀಡುತ್ತಿದ್ದ ಹಿಂದುತ್ವ ಗುಂಪು ಕೂಡ ಠಾಣೆಯಲ್ಲಿ ಇತ್ತು. ಅವರನ್ನು ನಾವು ಮಾರುಕಟ್ಟೆ ಸೇರಿದಂತೆ ವಿವಿದೆಡೆಗಳಲ್ಲಿ ನೋಡಿದ್ದೇವೆ. ಅವರ ಮುಖ ನಮಗೆ ಪರಿಚಯವಿದೆ” ಎಂದು ನಾಲ್ವರಲ್ಲಿ ಒಬ್ಬರಾದ ಅಬ್ದುಸ್ಸಲಾಂ ಎಂಬವರು ಹೇಳಿದ್ದಾರೆ ಎಂದು ದಿ ಟೆಲಿಗ್ರಾಫ್ ವಿವರಿಸಿದೆ.

ನಾಲ್ವರೂ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ಗೆ ಮರಳಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಹೇಳಿದೆ.

ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬಂಗಾಳಿ ಮಾತನಾಡುವ ಕಾರ್ಮಿಕರನ್ನು ಬಾಂಗ್ಲಾದೇಶೀಯರು ಎಂಬ ಅನುಮಾನದ ಮೇಲೆ ತಾರತಮ್ಯ ಮಾಡಲಾಗುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಆರೋಪಿಸಿದ ಬೆನ್ನಲ್ಲೇ ಈ ಘಟನೆ ನಡೆದಿದೆ.

ಏಪ್ರಿಲ್ 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆದ ನಂತರ, ಬಿಜೆಪಿ ಆಡಳಿತವಿರುವ ಹಲವಾರು ರಾಜ್ಯಗಳ ಪೊಲೀಸರು ಬಂಗಾಳಿ ಮಾತನಾಡುವ ಜನರನ್ನು, ಹೆಚ್ಚಾಗಿ ಮುಸ್ಲಿಮರನ್ನು ಬಂಧಿಸಿ, ಅವರು ಭಾರತೀಯ ನಾಗರಿಕರು ಎಂದು ಸಾಬೀತುಪಡಿಸಲು ಕೇಳುತ್ತಿದ್ದಾರೆ.

ಭಾರತೀಯ ಪೌರತ್ವವನ್ನು ಸಾಬೀತುಪಡಿಸಲು ವಿಫಲರಾದ ಆರೋಪದ ಮೇಲೆ ಹಲವಾರು ವ್ಯಕ್ತಿಗಳನ್ನು ಬಾಂಗ್ಲಾದೇಶಕ್ಕೆ ಬಲವಂತವಾಗಿ ಕಳುಹಿಸಲಾಗಿದೆ. ಕೆಲವು ಸಂದರ್ಭಗಳಲ್ಲಿ, ತಪ್ಪಾಗಿ ಬಾಂಗ್ಲಾದೇಶಕ್ಕೆ ಕಳುಹಿಸಲ್ಪಟ್ಟ ವ್ಯಕ್ತಿಗಳು ಭಾರತದಲ್ಲಿನ ರಾಜ್ಯ ಅಧಿಕಾರಿಗಳು ಅವರು ಭಾರತೀಯರು ಎಂದು ಸಾಬೀತುಪಡಿಸಿದ ನಂತರ ದೇಶಕ್ಕೆ ಮರಳಿದ್ದಾರೆ.

ಪಶ್ಚಿಮ ಬಂಗಾಳ ವಲಸೆ ಕಾರ್ಮಿಕರ ಕಲ್ಯಾಣ ಮಂಡಳಿ ಸಲ್ಲಿಸಿದ ಅರ್ಜಿಯ ಮೇರೆಗೆ ಸುಪ್ರೀಂ ಕೋರ್ಟ್ ಕೂಡ ಈ ವಿಷಯವನ್ನು ವಿಚಾರಣೆ ನಡೆಸುತ್ತಿದೆ.

ಒಡಿಶಾದಲ್ಲಿ, ಇತ್ತೀಚಿನ ದಿನಗಳಲ್ಲಿ ಬಂಗಾಳಿ ಮುಸ್ಲಿಮರು ಹಿಂಸಾಚಾರ ಮತ್ತು ಬೆದರಿಕೆಗಳನ್ನು ಎದುರಿಸುತ್ತಿರುವ ಬಗ್ಗೆ ಹಲವಾರು ವರದಿಯಾಗಿದೆ.

ನವೆಂಬರ್ 24ರಂದು, ಮುರ್ಷಿದಾಬಾದ್‌ನ ಚಳಿಗಾಲದ ಉಡುಪುಗಳ ಮಾರಾಟಗಾರ 24 ವರ್ಷದ ರಾಹುಲ್ ಇಸ್ಲಾಂ ಅವರನ್ನು ಬಾಂಗ್ಲಾದೇಶಿ ಎಂದು ಆರೋಪಿಸಲಾಗಿತ್ತು. ಗಂಜಾಂನಲ್ಲಿ ‘ಜೈ ಶ್ರೀ ರಾಮ್’ ಎಂದು ಹೇಳಲು ಅವರಿಗೆ ಒತ್ತಾಯಿಸಲಾಗಿತ್ತು. ನಿರಾಕರಿಸಿದ್ದಕ್ಕೆ ಗುಂಪೊಂದು ಅವರನ್ನು ಥಳಿಸಿತ್ತು ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ.

ಮುರ್ಷಿದಾಬಾದ್‌ನಲ್ಲಿರುವ ತನ್ನ ಮನೆಗೆ ಹಿಂದಿರುಗಿದ ಇಸ್ಲಾಂನ ಉದ್ಯೋಗದಾತ ಮೈನುಲ್ ಸರ್ಕಾರ್, ಸಹಾಯಕ್ಕಾಗಿ ಒಡಿಶಾದ ಪೊಲೀಸರ ಬಳಿ ಹೋಗಿದ್ದೆ ಆದರೆ ಯಾವುದೇ ಮಾಹಿತಿ ಸಿಗಲಿಲ್ಲ ಎಂದು ಆರೋಪಿಸಿದ್ದಾರೆ.

ಜುಲೈನಲ್ಲಿ, ಒಡಿಶಾದ ಜಾರ್ಸುಗುಡದಲ್ಲಿ ನೂರಾರು ಬಂಗಾಳಿ ಕಾರ್ಮಿಕರನ್ನು ಬಾಂಗ್ಲಾದೇಶೀಯರು ಎಂಬ ಅನುಮಾನದ ಮೇಲೆ ಬಂಧಿಸಲಾಗಿತ್ತು. ಅಧಿಕಾರಿಗಳು ಅವರು ಭಾರತೀಯರು ಎಂದು ಖಚಿತಪಡಿಸಿಕೊಂಡ ನಂತರ ಅವರಲ್ಲಿ ಹಲವರನ್ನು ಬಿಡುಗಡೆ ಮಾಡಲಾಯಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉನ್ನಾವೋ ಅತ್ಯಾಚಾರ ಪ್ರಕರಣ: ಕುಲದೀಪ್ ಸೆಂಗಾರ್ ಶಿಕ್ಷೆ ಅಮಾನತು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ ಸಿಬಿಐ 

ಉನ್ನಾವೋ ಅತ್ಯಾಚಾರ ಪ್ರಕರಣದ ಅಪರಾಧಿ ಕುಲದೀಪ್ ಸಿಂಗ್ ಸೆಂಗಾರ್ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿದ ದೆಹಲಿ ಹೈಕೋರ್ಟ್ ಆದೇಶವನ್ನು "ಕಾನೂನಿಗೆ ವಿರುದ್ಧ" ಮತ್ತು "ವಿಕೃತ" ಎಂದು ಕರೆದಿರುವ ಕೇಂದ್ರ ತನಿಖಾ ದಳ (ಸಿಬಿಐ) ಶುಕ್ರವಾರ...

ಮೋದಿ-ಮಲ್ಯ ಇಬ್ಬರನ್ನೂ ಭಾರತಕ್ಕೆ ಕರೆತರುವುದಾಗಿ ವಿದೇಶಾಂಗ ಸಚಿವಾಲಯ ಭರವಸೆ

ಲಲಿತ್ ಮೋದಿ ಮತ್ತು ವಿಜಯ್ ಮಲ್ಯ ಸೇರಿದಂತೆ ಆರ್ಥಿಕವಾಗಿ ಪರಾರಿಯಾಗಿರುವವರನ್ನು ವಿದೇಶದಿಂದ ವಾಪಸ್ ಕರೆತಂದು ದೇಶದಲ್ಲಿ ಕಾನೂನು ಕ್ರಮ ಜರುಗಿಸಲು ಬದ್ಧವಾಗಿದೆ ಎಂದು ಭಾರತ ಸರ್ಕಾರ ಶುಕ್ರವಾರ ಹೇಳಿದೆ. ವಿಜಯ್ ಅವರೊಂದಿಗೆ ಸಾಮಾಜಿಕ ಮಾಧ್ಯಮ...

ಉಕ್ರೇನ್ ರಾಜಧಾನಿ ಕೈವ್ ಮೇಲೆ ರಷ್ಯಾ ದಾಳಿ: ಸೇನಾ ಅಧಿಕಾರಿಗಳ ಹೇಳಿಕೆ

ಉಕ್ರೇನಿಯನ್ ರಾಜಧಾನಿ ಕೈವ್ ನಲ್ಲಿ ಶನಿವಾರ ಮುಂಜಾನೆ ರಷ್ಯಾದಿಂದ ಬೃಹತ್ ದಾಳಿ ನಡೆದಿದೆ ಎಂದು ಸೇನಾ ಅಧಿಕಾರಿಗಳು ಹೇಳಿದ್ದಾರೆ.  ಶನಿವಾರ ಬೆಳಗಿನ ಜಾವ ನಗರದಲ್ಲಿ ಸ್ಫೋಟಗಳ ಸದ್ದು ಕೇಳಿಬಂದಿತು, ವಾಯು ರಕ್ಷಣಾ ಪಡೆಗಳು ಕಾರ್ಯಾಚರಣೆಯಲ್ಲಿವೆ...

ಹುಬ್ಬಳ್ಳಿ ಮರ್ಯಾದೆಗೇಡು ಹತ್ಯೆ ಪ್ರಕರಣ: ಪ್ರತ್ಯೇಕ ಕಾಯ್ದೆಗೆ ಪ್ರಗತಿಪರ ಸಂಘಟನೆಗಳ ಆಗ್ರಹ

ಮಾದಿಗ ಸಮುದಾಯದ ಯುವಕನನ್ನು ಮದುವೆಯಾಗಿದ್ದ ಲಿಂಗಾಯತ ಸಮುದಾಯದ ಮಾನ್ಯ ಪಾಟೀಲ್ ಎಂಬ ಯುವತಿಯ ಮರ್ಯಾದಾಗೇಡು ಹತ್ಯೆ ಪ್ರಕರಣವನ್ನು ಖಂಡಿಸಿ ಸಮಾನ ಮನಸ್ಕ ಪ್ರಗತಿಪರ ಸಂಘಟನೆಗಳು ಶುಕ್ರವಾರ (ಡಿ.26) ಸಂಜೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದವು. ಹುಬ್ಬಳ್ಳಿಯ...

ದೆಹಲಿ ವಾಯುಮಾಲಿನ್ಯ : ಏರ್ ಪ್ಯೂರಿಫೈಯರ್‌ ಜಿಎಸ್‌ಟಿ ಕಡಿತಕ್ಕೆ ಕೇಂದ್ರ ಆಕ್ಷೇಪ

ಏರ್‌ಪ್ಯೂರಿಫೈಯರ್‌ ಸಾಧನಗಳ ಮೇಲಿನ ಜಿಎಸ್‌ಟಿ ಕಡಿತಗೊಳಿಸುವಂತೆ ಜಿಎಸ್‌ಟಿ ಮಂಡಳಿಗೆ ಆದೇಶಿಸಿದರೆ ಅದು ಅಂತಹ ಇನ್ನಷ್ಟು ಪ್ರಕರಣಗಳು ಹೆಚ್ಚಳವಾಗಲು ಕಾರಣವಾಗುತ್ತದೆ (Pandora Box)ಎಂದು ಕೇಂದ್ರ ಸರ್ಕಾರ ಶುಕ್ರವಾರ (ಡಿ.26) ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ. ದೆಹಲಿ ಎನ್‌ಸಿಆರ್‌...

ಬಳ್ಳಾರಿ | ಪ್ರಭಾವ, ಗೂಂಡಾಗಿರಿ ಮೂಲಕ ಬಡ ಜನರ ಭೂ ಕಬಳಿಕೆ : ಬುಡಾ ಮಾಜಿ ಅಧ್ಯಕ್ಷನ ವಿರುದ್ಧ ಗಂಭೀರ ಆರೋಪ

ಬಳ್ಳಾರಿ ನಗರಕ್ಕೆ ಹೊಂದಿಕೊಂಡಿರುವ ಕೌಲ್‌ ಬಜಾರಿನ ದಾನಪ್ಪಬೀದಿ ಮತ್ತು ಬಂಡಿಹಟ್ಟಿ ಏರಿಯಾಗಳ ಬಡ ಜನರಿಗೆ ಇನಾಂ ರದ್ದತಿಯ ಬಳಿಕ ನೀಡಲಾಗಿದ್ದ ಭೂಮಿಯನ್ನು ಬಳ್ಳಾರಿ ನಗರಾಭಿವೃದ್ದಿ ಪ್ರಾಧಿಕಾರ (ಬುಡಾ) ದ ಮಾಜಿ ಅಧ್ಯಕ್ಷ ಎನ್‌....

ಕ್ರಿಸ್‌ಮಸ್‌ ದಿನ ದೇಶದ ಹಲವು ನಗರಗಳಲ್ಲಿ ಗಿಗ್‌ ಕಾರ್ಮಿಕರಿಂದ ಪ್ರತಿಭಟನೆ : ಹೊಸ ವರ್ಷದಂದು ಮತ್ತೊಂದು ಹೋರಾಟಕ್ಕೆ ಸಿದ್ದತೆ

ವರ್ಷಾಂತ್ಯದ ಎರಡು ಪ್ರಮುಖ ದಿನಗಳಾದ ಡಿಸೆಂಬರ್ 25ರ ಕ್ರಿಸ್‌ಮಸ್‌ ಮತ್ತು ಡಿಸೆಂಬರ್ 31ರ ಹೊಸ ವರ್ಷದ ಸಂಜೆ (ಮುನ್ನಾದಿನ) ದೇಶದಾದ್ಯಂತ ಪ್ರತಿಭಟನೆ ನಡೆಸಲು ಗಿಗ್ ಕಾರ್ಮಿಕರು ನಿರ್ಧರಿಸಿದ್ದಾರೆ. ಈಗಾಗಲೇ ಡಿಸೆಂಬರ್ 25ರ ಕ್ರಿಸ್‌ಮಸ್‌ ದಿನದಂದು...

ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯ ಗುಂಪು ಹತ್ಯೆ : ಘಟನೆಗೆ ಕೋಮು ಆಯಾಮವಿಲ್ಲ ಎಂದ ಮಧ್ಯಂತರ ಸರ್ಕಾರ

ಬಾಂಗ್ಲಾದೇಶದ ರಾಜ್‌ಬರಿ ಜಿಲ್ಲೆಯಲ್ಲಿ ಸುಲಿಗೆ ಯತ್ನದ ಆರೋಪದ ಮೇಲೆ ವ್ಯಕ್ತಿಯೊಬ್ಬರನ್ನು ಗುಂಪೊಂದು ಥಳಿಸಿ ಕೊಂದಿದೆ. ಇದು ಇತ್ತೀಚೆಗೆ ಹಿಂದೂ ವ್ಯಕ್ತಿಯನ್ನು ಗುಂಪು ಹತ್ಯೆ ನಡೆಸಿರುವ ಎರಡನೇ ಘಟನೆಯಾಗಿದೆ. ಆದರೆ, ಅಲ್ಲಿನ ಮಧ್ಯಂತರ ಸರ್ಕಾರ...

ದೆಹಲಿ ವಾಯು ಮಾಲಿನ್ಯದಿಂದ ಸಾಂತಾ ಕ್ಲಾಸ್ ಮೂರ್ಛೆ ಹೋದ ವಿಡಿಯೋ ಹಂಚಿಕೆ : ಎಎಪಿಯ ಸೌರಭ್ ಭಾರದ್ವಾಜ್ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿಪರೀತ ವಾಯುಮಾಲಿನ್ಯದಿಂದ ಸಾಂತಾಕ್ಲಾಸ್ ವೇಷ ಧರಿಸಿದ ಪುರುಷರು ಮೂರ್ಛೆ ಹೋಗುತ್ತಿರುವುದನ್ನು ತೋರಿಸುವ ವಿಡಿಯೋ ಸ್ಕಿಟ್ (ಅಭಿನಯ) ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರಾದ...

ಕ್ರಿಸ್‌ಮಸ್‌ ವೇಳೆ ಶಾಲೆಗೆ ನುಗ್ಗಿ ದಾಂಧಲೆ : ವಿಹೆಚ್‌ಪಿ-ಬಜರಂಗದಳದ ನಾಲ್ವರ ಬಂಧನ

ನಲ್ಬರಿ ಜಿಲ್ಲೆಯ ಶಾಲೆಯೊಂದಕ್ಕೆ ನುಗ್ಗಿ ಕ್ರಿಸ್‌ಮಸ್ ಅಲಂಕಾರವನ್ನು ಧ್ವಂಸ ಮಾಡಿದ, ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ಮತ್ತು ಬಜರಂಗದಳದ ನಾಲ್ವರನ್ನು ಅಸ್ಸಾಂ ಪೊಲೀಸರು ಗುರುವಾರ (ಡಿ.25) ಬಂಧಿಸಿದ್ದಾರೆ. ಬಂಧಿತರನ್ನು ವಿಹೆಚ್‌ಪಿ ಜಿಲ್ಲಾ ಕಾರ್ಯದರ್ಶಿ ಭಾಸ್ಕರ್...