Homeಕರ್ನಾಟಕಅಘೋಷಿತ ತುರ್ತುಪರಿಸ್ಥಿತಿಯಲ್ಲಿ "ಗಾಂಧಿ ಭಾರತ" ಅಗತ್ಯ

ಅಘೋಷಿತ ತುರ್ತುಪರಿಸ್ಥಿತಿಯಲ್ಲಿ “ಗಾಂಧಿ ಭಾರತ” ಅಗತ್ಯ

- Advertisement -
- Advertisement -

ಪ್ರಸ್ತುತ ಭಾರತದ ಅಘೋಷಿತ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ, ಎಲ್ಲಿ ನೋಡಿದರಲ್ಲಿ ಹಿಂಸಾತ್ಮಕ ದೃಶ್ಯಾವಳಿಗಳನ್ನು ನೋಡುತ್ತಾ ಯುವಜನತೆಯನ್ನು ಒಕ್ಕಲೆಬ್ಬಿಸುತ್ತಿರುವ ಪ್ರಸ್ತುತ ಭಾರತದ ಹಲವು ದುಷ್ಟಶಕ್ತಿಗಳನ್ನು ನಿರ್ನಾಮಮಾಡಿ, ಅಹಿಂಸಾತ್ಮಕ ಸದ್ಭಾವನೆಗಳನ್ನು ಮೂಡಿಸಿಕೊಳ್ಳುವಲ್ಲಿ “ಗಾಂಧಿ ಭಾರತ” ದ ಕಾರ್ಯಕ್ರಮದ ಅತ್ಯಗತ್ಯವಾಗಿತ್ತು.‌

1924 ಡಿಸೆಂಬರ್ 26 ಮಹಾತ್ಮಗಾಂಧಿಯವರು ಅಧ್ಯಕ್ಷರಾಗಿದ್ದ ಸಮಯದಲ್ಲಿ, ರಾಷ್ಟ್ರೀಯ ಅಧಿವೇಶನವನ್ನು ಬೆಳಗಾವಿಯಲ್ಲಿ ನೆಡೆಸಿದ್ದಕ್ಕೆ ಇಂದಿಗೆ ನೂರು ವರ್ಷ ಪೂರೈಸುತ್ತಿವೆ. ಇದೊಂದು ಅಭೂತಪೂರ್ವ ಭಾಗ್ಯ ಕರ್ನಾಟಕದಾಗಿತ್ತು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಅಲ್ಲಿಯವರೆಗೂ ಮುಂಬೈ -ಕಲ್ಕತ್ತಾ -ದೆಹಲಿ ಪ್ರಾಂತ್ಯಗಳಲ್ಲಿ ಬಹಳ ದಕ್ಷತೆಯಿಂದ ರಾಜಕಾರಣದಲ್ಲಿ ಕಾಂಗ್ರೆಸ್ ನೆಲೆಯೂರಿದ್ದರೂ, ಅದು ದೇಶಾದ್ಯಂತ ವ್ಯಾಪಿಸಲು ಈ ಬೆಳಗಾವಿ ಅಧಿವೇಶನ ಹೊಸ ದಿಕ್ಸೂಚಿಯನ್ನು ನೀಡಿತು ಎಂದರೆ ತಪ್ಪಾಗಲಾರದು.

ಮಹಾತ್ಮ ಗಾಂಧಿಯವರು ಕೇವಲ ರಾಜಕಾರಣಿಯಾಗಿರಲಿಲ್ಲ, ಅವರೊಬ್ಬ ಸಮಾಜ ಸುಧಾರಕರೂ ಆಗಿದ್ದರು.‌ ಹಾಗಾಗಿ ತಮ್ಮ ಅಧ್ಯಕ್ಷತೆ ಅವಧಿಯಲ್ಲಿ ಕಾಂಗ್ರೆಸ್ಸನ್ನು ಕೇವಲ ರಾಜಕೀಯ ಪಕ್ಷವಾಗಿ ನೋಡದೆ, ಸಮಾಜ ಸುಧಾರಣೆಯ ಅಂಶಗಳನ್ನು ಅಳವಡಿಸಿದರು. ದೇಶದ ಪ್ರತಿ ಮನೆಮನೆಗೂ ಕಾಂಗ್ರೆಸ್ ಪಕ್ಷವನ್ನು ತಲುಪಿಸುವಲ್ಲಿ ಈ ಅಧಿವೇಶನ ಬಹುಮುಖ್ಯ ಪಾತ್ರವಹಿಸಿತು. ಅಂದಿನಿಂದ ಕಾಶ್ಮೀರದಿಂದ ಕನ್ಯಾಕುಮಾರಿಗೂ ಕಾಂಗ್ರೆಸ್  ಕಾರ್ಯಕರ್ತರು ತಮ್ಮನ್ನು ತಾವು ಸ್ವಾತಂತ್ರ್ಯ ಚಳುವಳಿಗೆ ಸಮರ್ಪಿಸಿಕೊಂಡರು.

ಇಡೀ ಅಖಂಡ ಭಾರತದ ಉದ್ದಗಲಕ್ಕೂ ಪ್ರವಾಸ ಮಾಡಿದ ಗಾಂಧಿಯವರು, 18 ಬಾರಿ ಪ್ರವಾಸ ಮಾಡಿ, 122 ದಿನ ಕರ್ನಾಟಕದ ನೆಲದಲ್ಲಿ ಓಡಾಡಿದರು. ದೇಶದ ವಿವಿಧ ಜಾತಿ- ಧರ್ಮ- ಸಂಸ್ಕೃತಿ ಹಾಗೂ ಜನರ ಸಾಮಾಜಿಕ ಜೀವನವನ್ನು ಅಭ್ಯಾಸ ಮಾಡಿದ ಅವರು, “ಸ್ವಾತಂತ್ರ್ಯ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಭಾಷಾವಾರು ಪ್ರಾಂತ್ಯಗಳಾಗಬೇಕೆಂದು” ಘೋಷಣೆ ಮಾಡುವುದರ ಮೂಲಕ‌ ಅಂದೇ ಬಹುತ್ವ ಭಾರತಕ್ಕೆ ನಾಂದಿ ಹಾಡಿದರು. ಇದಲ್ಲದೇ ಅಸ್ಪೃಶ್ಯತೆ ನಿವಾರಣೆ, ಹಿಂದೂ- ಮುಸ್ಲಿಂ ಭಾತೃತ್ವ, ಸ್ವದೇಶಿ ಖಾದಿ ಬಳಕೆ ಹೀಗೆ ಹತ್ತು ಹಲವಾರು ನಿರ್ಣಯಗಳನ್ನು ಜಾರಿಗೆ ತಂದರು.

ಇಂದು ಕಾಂಗ್ರೆಸ್ಸಿನ ರಾಷ್ರ್ಟೀಯ ಅಧಿವೇಶನ ನೂರು ವರ್ಷ ಹಿಂದೆ ನೆಡೆದ ಸ್ಥಳದಲ್ಲಿ ನೆಡೆಯುತ್ತಿರುವುದು ಕೂಡ ಒಂದು ಐತಿಹಾಸಿಕ.‌ ಇಂದು ರಾಷ್ಟ್ರೀಯ ಕಾಂಗ್ರೇಸ್  ಅಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಖರ್ಗೆ  ಈ ರಾಷ್ಟ್ರೀಯ ಅಧಿವೇಶನದ ಅಧ್ಯಕ್ಷತೆ ವಹಿಸುತ್ತಿರುವುದು ಕೂಡ ಮತ್ತೊಂದು ಮೈಲಿಗಲ್ಲು. ಕಾರಣ ನೂರು ವರ್ಷದ ಹಿಂದೆ ನೆಡೆದ ಸಭೆಯಲ್ಲಿ ದಲಿತರನ್ನು ಮುಖ್ಯವಾಹಿನಿಗೆ ತರಬೇಕೆಂದು ಅಂದಿನ ಸರ್ವಸಮ್ಮತದ ನಿರ್ಧಾರವಾಗಿತ್ತು.‌ ನೂರನೇ ವರ್ಷದ ಈ ದಿನದ ಅಧಿವೇಶನದಲ್ಲಿ ದಲಿತರೊಬ್ಬರು ಕಾಂಗ್ರೆಸ್ ಅಧ್ಯಕ್ಷರಾದದ್ದು ಕೂಡ ಅಭೂತಪೂರ್ವ ಕ್ಷಣವೆಂದರೆ ಅತಿಶಯೋಕ್ತಿ ಅಲ್ಲ.

ಹಾಗೆ ದೇಶದ ಆದರ್ಶ ಮಹಿಳೆ ಸೋನಿಯಾಗಾಂಧಿ , ಬಹುತ್ವ ಭಾರತದ ಭರವಸೆಯ ಜನನಾಯಕ ರಾಹುಲ್ ಗಾಂಧಿಯವರು, CWC ಸದಸ್ಯರು,ಸ್ರ್ತೀಶಕ್ತಿ ಬೆನ್ನೆಲುಬಾದ ಪ್ರಿಯಾಂಕಗಾಂಧಿ, ರಾಷ್ಟ್ರೀಯ ನಾಯಕರು, ಕರ್ನಾಟಕದ ಸೈದ್ಧಾತಿಕ ಮೇರುವ್ಯಕ್ತಿತ್ವದ ಜನನಾಯಕರಾದ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು, ಹಾಗೂ ಎಲ್ಲಾ ಸಚಿವ ಸಂಪುಟದ ಸದಸ್ಯರು, ಶಾಸಕರು,ಸಂಸದರು, ವಿಧಾನಪರಿಷತ್ತು ರಾಜ್ಯಸಭಾ ಸದಸ್ಯರು, ರಾಷ್ಟ್ರೀಯ ಹಾಗೂ ರಾಜ್ಯ ಪಧಾಧಿಕಾರಿಗಳು, ಸೇವಾದಳದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಈ ಅಧಿವೇಶನದಲ್ಲಿ ಭಾಗಿಯಾದ ಎಲ್ಲರಿಗೂ ಶುಭಾಶಯಗಳು.

ಸ್ವಾತಂತ್ರ್ಯ ಭಾರತದ ನಂತರ ಈ ದೇಶಕ್ಕೆ ” ಗಾಂಧಿ ಭಾರತ” ಎಂದು ಹೆಸರಿಡಬೇಕು ಎಂದು ಸಮಾಜವಾದಿ ಲೋಹಿಯಾ ಅವರ ಅಪೇಕ್ಷೆಯಾಗಿತ್ತು. ಈ ದೇಶ ಬ್ರಿಟಿಷರ ದಾಸ್ಯದಿಂದ ಮುಕ್ತವಾಗಿಸಿ ಸ್ವತಂತ್ರ ತಂದುಕೊಟ್ಟ ಗಾಂಧಿಯವರ ನೇತೃತ್ವದ ಸ್ವಾತಂತ್ರ್ಯ ಅದೆಷ್ಟು ಮುಖ್ಯವೋ, ಸ್ವಾತಂತ್ರ್ಯ ನಂತರದ ಭಾರತದ ಭವಿಷ್ಯಕ್ಕಾಗಿ ನಿರ್ಮಾಣವಾದ ಅಂಬೇಡ್ಕರ್ ನೇತೃತ್ವದ ಸಂವಿಧಾನ ಅಷ್ಟೇ ಮುಖ್ಯ. ಸ್ವಾತಂತ್ರ್ಯ ಮತ್ತು ಸಂವಿಧಾನ ಒಂದು ನಾಣ್ಯದ ಎರಡು ಮುಖಗಳಂತೆ. ಭಾರತದ ಸಂವಿಧಾನ ಈ ದೇಶದ ಉದ್ದಗಲಕ್ಕೂ ಹರಿಯುವ ಮಹಾನದಿಯಾದರೆ, ರಾಷ್ಟ್ರಪಿತ ಮಹಾತ್ಮಗಾಂಧಿ ಮತ್ತು ಸಂವಿಧಾನಶಿಲ್ಪಿ ಅಂಬೇಡ್ಕರ್ ಎರಡು ದಡಗಳು..

ಹೀಗಾಗಿ ಇಂದಿನ ರ್ಯಾಲಿಗೆ ” ಜೈ ಬಾಪೂ – ಜೈ ಭೀಮ್- ಜೈ ಸಂವಿಧಾನ್ ” ಹೆಸರು ಬಹಳ ಅರ್ಥಪೂರ್ಣವಾಗಿದೆ. ಮನುವಾದಿಗಳನ್ನು ನಿರ್ನಾಮ ಮಾಡಲು ಈ ಮೂರು ವಾಕ್ಯಗಳು ನಮ್ಮ ಕಾಂಗ್ರೆಸ್ಸಿನ  ಮುಂದಿನ ಘೋಷಣೆಗಳಾಗಬೇಕು.

“ಗಾಂಧಿ, ಭಾರತದ ಆತ್ಮವಾದರೆ- ಅಂಬೇಡ್ಕರ್ ದೇಶವೆಂಬ ದೇಹದಲ್ಲಿ ಹರಿದಾಡುವ ರಕ್ತ” ಇತಿಹಾಸದಲ್ಲಿ‌ ಆದ ಹಲವು ಕಹಿಘಟನೆಗಳನ್ನು ಮರೆತು, ನಮ್ಮ ಮುಂದಿನ ಭವಿಷ್ಯದ ಬಹುತ್ವಭಾರತಕ್ಕಾಗಿ ಗಾಂಧಿ ಮತ್ತು ಅಂಬೇಡ್ಕರ್ ಅವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಜವಬ್ದಾರಿ ನಮ್ಮೆಲ್ಲರದು.

ಒಂದು ವರ್ಷದ ” ಗಾಂಧಿ ಭಾರತ” ದ ರೂಪರೇಷೆಗಳು ವಿಭಿನ್ನವಾಗಿರಲಿ ಹಾಗೂ ಈ ಸುದಿನ ಅರ್ಥಪೂರ್ಣವಾಗಿ ಮುಂದಿನ ಭಾರತದ ನಿರ್ಮಾಣಕ್ಕೆ ಭದ್ರ ಭವಿಷ್ಯ ನಿರ್ಮಾಣ ಮಾಡುವ ಐತಿಹಾಸಿಕ ನಿರ್ಣಯಗಳು ಹೊರಹೊಮ್ಮಲಿ ಎಂದು ಆಶಿಸೋಣ.‌

ಕಾಂಗ್ರೆಸ್ಸಿನ ಬೆಳಗಾವಿ ಮಹಾಧಿವೇಶನಕ್ಕೆ 100ರ ಸಂಭ್ರಮ: ಕುವೆಂಪು ಆತ್ಮಕತೆಯಲ್ಲಿದೆ ಇದರ ಕುರಿತ ಲೇಖನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...