Homeಮುಖಪುಟಗಾಂಧೀಜಿ ನೆಚ್ಚಿನ ‘ಅಬೈಡ್‌‌ ವಿತ್‌ ಮೀ’ ಗೀತೆ ಗಣರಾಜ್ಯೋತ್ಸವದ ಬೀಟಿಂಗ್ ರಿಟ್ರೀಟ್‌ನಿಂದ ಹೊರಕ್ಕೆ!

ಗಾಂಧೀಜಿ ನೆಚ್ಚಿನ ‘ಅಬೈಡ್‌‌ ವಿತ್‌ ಮೀ’ ಗೀತೆ ಗಣರಾಜ್ಯೋತ್ಸವದ ಬೀಟಿಂಗ್ ರಿಟ್ರೀಟ್‌ನಿಂದ ಹೊರಕ್ಕೆ!

- Advertisement -
- Advertisement -

ಗಾಂಧಿಯವರ ಪುಣ್ಯಸ್ಮರಣೆಯ ಮುನ್ನಾದಿನ ಜನವರಿ 29ರಂದು ನಡೆಯುವ ಗಣರಾಜ್ಯೋತ್ಸವದ ಬೀಟಿಂಗ್ ರಿಟ್ರೀಟ್ ಸಮಾರಂಭದ ಕೊನೆಯಲ್ಲಿ ನುಡಿಸಲಾಗುತ್ತಿದ್ದ ‘ಅಬೈಡ್‌‌ ವಿತ್ ಮಿ’ಯನ್ನು (ಮಹಾತ್ಮ ಗಾಂಧಿಯವರ ನೆಚ್ಚಿನ ಗೀತೆ) ಈ ವರ್ಷ ಕೈಬಿಡಲಾಗಿದೆ.

2020ರಲ್ಲಿ ‘ಅಬೈಡ್‌‌ ವಿತ್‌ ಮೀ’ಯನ್ನು ಹೊರಗಿಟ್ಟಿದ್ದು ಕೋಲಾಹಲವನ್ನು ಸೃಷ್ಟಿಸಿತ್ತು. ಆದರೆ 2021ರ ಸಮಾರಂಭದಲ್ಲಿ ಮತ್ತೆ ಈ ಗೀತೆಯನ್ನು ಹಾಡಲಾಗಿತ್ತು.

ಬೀಟಿಂಗ್ ರಿಟ್ರೀಟ್ ಸಮಾರಂಭದಲ್ಲಿ ನುಡಿಸಬೇಕಾದ 26 ಟ್ಯೂನ್‌ಗಳ ಅಧಿಕೃತ ಪಟ್ಟಿಯಲ್ಲಿ ಅಬೈಡ್‌‌ ವಿತ್‌ ಮಿ ಗೀತೆಯನ್ನು ಉಲ್ಲೇಖಿಸಿಲ್ಲ. 1950ರಿಂದ ಪ್ರತಿ ವರ್ಷ ಸಮಾರಂಭದಲ್ಲಿ ಈ ಗೀತೆಯನ್ನು ನುಡಿಸಲಾಗುತ್ತಿದೆ. ಆದರೆ 2020ರಲ್ಲಿ ಕೈಬಿಡಲಾಗಿತ್ತು.

ಹೆನ್ರಿ ಫ್ರಾನ್ಸಿಸ್ ಲೈಟ್ ಅವರ ಗೀತೆಯನ್ನು ವಿಲಿಯಂ ಹೆನ್ರಿ ಮಾಂಕ್ ಅವರ ಈವೆನ್ಟೈಡ್ ಟ್ಯೂನ್‌ಗೆ ಹೊಂದಿಸಲಾಗಿದೆ. ಇದು ಗಾಂಧೀಜಿಯವರಿಗೆ ಬಲು ಇಷ್ಟವಾದ ಗೀತೆಯಾಗಿದೆ. ಭಾರತದಲ್ಲಿ ಪ್ರತಿ ವರ್ಷ ಜನವರಿ 29ರ ಸಂಜೆ ದೆಹಲಿಯ ವಿಜಯ್ ಚೌಕ್‌ನಲ್ಲಿ ನಡೆಯುವ ಬೀಟಿಂಗ್ ರಿಟ್ರೀಟ್ ಸಮಾರಂಭವು ಗಣರಾಜ್ಯೋತ್ಸವ ಆಚರಣೆಯ ಅಂತ್ಯಭಾಗವಾಗಿರುತ್ತದೆ.

ಈ ವರ್ಷದ ಸಮಾರಂಭದಲ್ಲಿ ಮೊದಲಿಗೆ ಬಗ್ಲರ್‌ಗಳಿಂದ ಫ್ಯಾನ್‌ಫೇರ್‌ ಆಯೋಜಿಸಲಾಗಿದೆ. ನಂತರ ಮಾಸ್ಡ್ ಬ್ಯಾಂಡ್‌ಗಳಿಂದ ವೀರ್ ಸೈನಿಕ್, ಪೈಪ್ಸ್ ಮತ್ತು ಡ್ರಮ್ಸ್ ಬ್ಯಾಂಡ್‌ನಿಂದ ಆರು ಟ್ಯೂನ್‌ಗಳು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಬ್ಯಾಂಡ್‌ಗಳಿಂದ ಮೂರು ಟ್ಯೂನ್‌ಗಳನ್ನು ನುಡಿಸಲಾಗುತ್ತದೆ. ನಂತರ ಏರ್ ಫೋರ್ಸ್ ಬ್ಯಾಂಡ್‌ನಿಂದ ನಾಲ್ಕು ಟ್ಯೂನ್‌ಗಳನ್ನು ನುಡಿಸಲಾಗುತ್ತದೆ. ಇದರಲ್ಲಿ ವಿಶೇಷವಾದ ಲಡಾಕೂ ಟ್ಯೂನ್ ಕೂಡ ಸೇರಿಸಲಾಗಿದೆ.

ನೇವಿ ಬ್ಯಾಂಡ್‌ನವರು ನಾಲ್ಕು ರಾಗಗಳನ್ನು ನುಡಿಸುತ್ತಾರೆ. ನಂತರ ಆರ್ಮಿ ಮಿಲಿಟರಿ ಬ್ಯಾಂಡ್ ಮೂರು ರಾಗಗಳನ್ನು ನುಡಿಸುತ್ತದೆ. ಕದಮ್ ಕದಮ್ ಬಧಯೇ ಜಾ, ಡ್ರಮ್ಮರ್ಸ್ ಕಾಲ್, ಏ ಮೇರೆ ವತನ್ ಕೆ ಲೋಗೋನ್ ಸೇರಿದಂತೆ ಮೂರು ಟ್ಯೂನ್‌ಗಳನ್ನು ಮಾಸ್ಡ್ ಬ್ಯಾಂಡ್‌ಗಳು ಕೊನೆಯಲ್ಲಿ ನುಡಿಸುತ್ತವೆ.

ಬಗ್ಲರ್‌ಗಳು ಸಾರೆ ಜಹಾನ್ ಸೆ ಅಚ್ಚಾ ನುಡಿಸುವುದರೊಂದಿಗೆ ಸಮಾರಂಭವು ಕೊನೆಗೊಳ್ಳುತ್ತದೆ. ಇಡೀ ಕಾರ್ಯಕ್ರಮದಲ್ಲಿ 44 ಬಗ್ಲರ್‌ಗಳು, 16 ಟ್ರಂಪೆಟರ್‌ಗಳು ಮತ್ತು 75 ಡ್ರಮ್ಮರ್‌ಗಳು ಭಾಗವಹಿಸಲಿದ್ದಾರೆ.

ಸುಮಾರು ಒಂದು ವಾರ ನಡೆಯುವ ಗಣರಾಜ್ಯೋತ್ಸವದ ಅಂತ್ಯವನ್ನು ಬೀಟಿಂಗ್ ರಿಟ್ರೀಟ್ ಸೂಚಿಸುತ್ತದೆ. ಗಣರಾಜ್ಯೋತ್ಸವ ಜನವರಿ 24ರಂದು ಪ್ರಾರಂಭವಾಗುತ್ತಿತ್ತು. ಈ ವರ್ಷ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವಾದ ಜನವರಿ 23ರಿಂದ ಚಾಲನೆ ಪಡೆಯಲಿದೆ. ಈ ವರ್ಷ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ವಾರ್ಷಿಕೋತ್ಸವವನ್ನು ‌ಆಚರಿಸಲಾಗುತ್ತಿದೆ.


ಇದನ್ನೂ ಓದಿರಿ: ಎನ್‌ಇಟಿ ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಹಿಂದಿ ವಿವಾದ: ‘ಕೀ ಆನ್ಸರ್‌’ ನೋಡಿ ಪರೀಕ್ಷಾರ್ಥಿಗಳಿಗೆ ಆತಂಕ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಭಾರತದಲ್ಲಿ ಬಿಕ್ಕಟ್ಟಿನಲ್ಲಿ ಪತ್ರಿಕಾ ಸ್ವಾತಂತ್ರ್ಯ: ವರದಿ

0
ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಸ್ಥಿತಿ ಅತ್ಯಂತ ಕಟ್ಟದಾಗಿದ್ದು, ನೆರೆಯ ಪಾಕಿಸ್ತಾನ, ಶ್ರೀಲಂಕಾ, ನೇಪಾಳಕ್ಕಿಂತಲೂ ಕಳಪೆಯಾಗಿದೆ. ಇದು ಪ್ರಜಾಪ್ರಭುತ್ವ ದೇಶಕ್ಕೆ ಯೋಗ್ಯವಾದ ಬೆಳವಣಿಗೆಯಲ್ಲ ಎಂದು ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ (ಆರ್‌ಎಸ್‌ಎಫ್) ಬಿಡುಗಡೆ ಮಾಡಿದ 2024ರ...