ಹರಿಯಾಣದ ಬಿಜೆಪಿ ಸರ್ಕಾರದ ಸಚಿವ ಅನಿಲ್ ವಿಜ್ ಭಾನುವಾರ ತಮ್ಮ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮೋಹನ್ ಲಾಲ್ ಬಡೋಲಿ ಅವರ ರಾಜೀನಾಮೆಗೆ ಮತ್ತೆ ಒತ್ತಾಯಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. “ಅವರು ಸೆಕ್ಷನ್ 376D [ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ ಸೆಕ್ಷನ್] ಅಡಿಯಲ್ಲಿ ಆರೋಪಿಯಾಗಿದ್ದಾರೆ,” ಎಂದು ವಿಜ್ ಹೇಳಿರುವುದಾಗಿ ಪತ್ರಿಕೆ ಉಲ್ಲೇಖಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷನಿಂದ
“ಅಂತಹ ವ್ಯಕ್ತಿ ಮಹಿಳೆಯರ ಸಭೆಯ ಅಧ್ಯಕ್ಷತೆಯನ್ನು ಹೇಗೆ ವಹಿಸಲು ಸಾಧ್ಯ? ಪಕ್ಷದ ತತ್ವಗಳನ್ನು ಎತ್ತಿಹಿಡಿಯಲು, ಅವರು ತಕ್ಷಣವೇ ರಾಜೀನಾಮೆ ನೀಡಬೇಕು.” ಎಂದು ಸಚಿವ ವಿಜ್ ಆಗ್ರಹಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷನಿಂದ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಕಾರ್ಮಿಕ, ಇಂಧನ ಮತ್ತು ಸಾರಿಗೆ ಖಾತೆಗಳನ್ನು ಹೊಂದಿರುವ ವಿಜ್, “ಆಡ್ವಾಣಿ ಜಿ ಅವರಂತಹ ನಮ್ಮ ಹಿರಿಯ ನಾಯಕರು ಸಹ ಅವರ ವಿರುದ್ಧ ಆರೋಪಗಳು ಬಂದಾಗ ರಾಜೀನಾಮೆ ನೀಡಿದ್ದರು. ಅವರು ಅವರಿಗಿಂತ ಮೇಲಲ್ಲ.” ಎಂದು ಹೇಳಿದ್ದಾರೆ.
ಬಡೋಲಿ ಮತ್ತು ಗಾಯಕ ರಾಕಿ ಮಿತ್ತಲ್ ಅವರ ವಿರುದ್ಧ ಡಿಸೆಂಬರ್‌ನಲ್ಲಿ ಹಿಮಾಚಲ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಲಾಗಿತ್ತು. ಆದರೆ ಇಬ್ಬರೂ ಆರೋಪಗಳನ್ನು ನಿರಾಕರಿಸಿದ್ದಾರೆ.
ವಿಧಾನಸಭಾ ಚುನಾವಣೆಗೆ ಮುನ್ನ ಜುಲೈನಲ್ಲಿ ಬಡೋಲಿ ಹರಿಯಾಣ ಬಿಜೆಪಿ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು. 2019 ರಿಂದ ಅಕ್ಟೋಬರ್ 2024 ರವರೆಗೆ ರಾಯ್ ಕ್ಷೇತ್ರದ ಶಾಸಕರಾಗಿದ್ದ ಅವರು, ಜೂನ್‌ನಲ್ಲಿ ಸೋನಿಪತ್‌ನಿಂದ ಲೋಕಸಭಾ ಚುನಾವಣೆಯಲ್ಲಿ ಸೋತರು. ಆದರೆ, ಗಾಯಕ ಮಿತ್ತಲ್ ಆಗಸ್ಟ್‌ನಲ್ಲಿ ಕಾಂಗ್ರೆಸ್ ಸೇರಿದ್ದರು.
ಅತ್ಯಾಚಾರ ಪ್ರಕರಣದ ಬಗ್ಗೆ ಜನವರಿ 18 ರಂದು ಪ್ರತಿಕ್ರಿಯಿಸಿದ್ದ ಸಚಿವ ವಿಜ್, ಬದೋಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿದ್ದರು. “ಹಿಮಾಚಲ ಪ್ರದೇಶ ಪೊಲೀಸರ ತನಿಖೆಯಲ್ಲಿ ಅವರು ನಿರಪರಾಧಿ ಎಂದು ಸಾಬೀತುಪಡಿಸುತ್ತಾರೆ ಎಂದು ನಾನು ನಂಬುತ್ತೇನೆ. ಆದಾಗ್ಯೂ, ಅಲ್ಲಿಯವರೆಗೆ, ಪಕ್ಷದ ಪಾವಿತ್ರ್ಯವನ್ನು ಕಾಪಾಡಿಕೊಳ್ಳಲು, ಅವರು ಈ ಹುದ್ದೆಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಬೇಕು.” ಎಂದು ಅವರು ಹೇಳಿದ್ದರು.
ಇದನ್ನೂಓದಿ: ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಚಟುವಟಿಕೆಗಳು ಮತ್ತು ವಿವಾದಗಳು
ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಚಟುವಟಿಕೆಗಳು ಮತ್ತು ವಿವಾದಗಳು


