2018ರಲ್ಲಿ ಮಧ್ಯಪ್ರದೇಶದಲ್ಲಿ ಏಳು ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಅಪರಾಧಿಯೊಬ್ಬನಿಗೆ ನೀಡಲಾಗಿದ್ದ ಮರಣದಂಡನೆ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಕಳೆದ ವರ್ಷ ಮಧ್ಯಪ್ರದೇಶ ಹೈಕೋರ್ಟ್ ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಿ 2018ರ ಆಗಸ್ಟ್‌ನಲ್ಲಿ ತೀರ್ಪು ನೀಡಿತ್ತು. ಹೈಕೋರ್ಟ್ ಅದೇಶದ ವಿರುದ್ದ ಅಪರಾಧಿ 2021ರ ಸೆಪ್ಟೆಂಬರ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದನು.
ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಯು ಯು ಲಲಿತ್ ನೇತೃತ್ವದ ಪೀಠವು, ಮುಂದಿನ ಪರಿಗಣನೆಗೆ ಬಾಕಿಯಿದ್ದು, ಅಪರಾಧಿಗೆ ನೀಡಲಾದ ಮರಣದಂಡನೆಯ ಕಾರ್ಯಾಚರಣೆಯನ್ನು ತಡೆಹಿಡಿಯಲಾಗುವುದು ಎಂದು ಹೇಳಿದೆ.
ಅಪರಾಧಿಯ ಮಾನಸಿಕ ದೃಢತೆಯ ಮೌಲ್ಯಮಾಪನ ವರದಿಯನ್ನು ಪೀಠದ ಮುಂದೆ ಇಡಬೇಕು. ಮೇಲ್ಮನವಿದಾರ ಜೈಲಿನಲ್ಲಿದ್ದಾಗ ಆತನ ಕೆಲಸದ ಸ್ವರೂಪದ ಬಗ್ಗೆ ಜೈಲು ಆಡಳಿತದ ವರದಿಯನ್ನು ಸಹ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
“ಹೆಚ್ಚಿನ ಪರಿಗಣನೆಗೆ ಬಾಕಿ ಇದೆ, ಮೇಲ್ಮನವಿದಾರರಿಗೆ ನೀಡಲಾದ ಮರಣದಂಡನೆಯ ಪರಿಣಾಮ ಮತ್ತು ಕಾರ್ಯಾಚರಣೆಯನ್ನು ತಡೆಹಿಡಿಯಲಾಗುತ್ತದೆ. ಈ ಬಗ್ಗೆ ತಕ್ಷಣವೇ ಸಂಬಂಧಪಟ್ಟ ಕಾರಾಗೃಹಕ್ಕೆ ಸೂಚನೆಯನ್ನು ಕಳುಹಿಸಬೇಕು” ಎಂದು ನ್ಯಾಯಮೂರ್ತಿಗಳಾದ ಎಸ್.ಆರ್.ಭಟ್ ಮತ್ತು ಪಿ.ಎಸ್.ನರಸಿಂಹ ಅವರನ್ನೊಳಗೊಂಡ ಪೀಠವು ಫೆ. 14ರದು ನೀಡಿದ ಆದೇಶದಲ್ಲಿ ಹೇಳಿದೆ.
ಮುಂದಿನ ವಿಚಾರಣೆಯು ಮಾರ್ಚ್ 22ಕ್ಕೆ ನಡೆಯಲಿದ್ದು, ಅದಕ್ಕೂ ಮೊದಲೇ, ಮಧ್ಯಪ್ರದೇಶ ಸರ್ಕಾರವು ಮೇಲ್ಮನವಿದಾರರಿಗೆ ಸಂಬಂಧಿಸಿದ ಎಲ್ಲಾ ಪರೀಕ್ಷಾಧಿಕಾರಿಗಳ ವರದಿಗಳನ್ನು ತನ್ನ ಮುಂದೆ ಇಡಬೇಕು ಎಂದು ಪೀಠ ಸೂಚಿಸಿದೆ.
“ನ್ಯಾಯದ ಹಿತಾಸಕ್ತಿಯಿಂದ ನಾವು ಮೇಲ್ಮನವಿದಾರರ ಮಾನಸಿಕ ದೃಢತೆಯ ಪರೀಕ್ಷಾ ವರದಿಯನ್ನು ಪಡೆಯಬೇಕೆಂದು ನಾವು ಭಾವಿಸುತ್ತೇವೆ. ಮಧ್ಯಪ್ರದೇಶದ ಇಂಧೋರ್ ಜಿಲ್ಲಾ ಮೆಂಟಲ್ ಕೇರ್ ಆಸ್ಪತ್ರೆಯ ನಿರ್ದೇಶಕರು ಅಪರಾಧಿ (ಅರ್ಜಿದಾರ)ಯ ಮಾನಸಿಕ ಮೌಲ್ಯಮಾಪನಕ್ಕಾಗಿ ಸೂಕ್ತ ತಂಡವನ್ನು ರಚಿಸುವಂತೆ ನಾವು ನಿರ್ದೇಶಿಸುತ್ತೇವೆ. ಅವರು ಮುಂದಿನ ವಿಚಾರಣೆಗೂ ಮೊದಲೇ ವರದಿಯನ್ನು ಪೀಠದ ಮುಂದೆ ಇರಿಸಬೇಕು” ಎಂದು ಸುಪ್ರೀಂ ತಿಳಿಸಿದೆ.
ಅದೇ ರೀತಿಯಲ್ಲಿ, ಅರ್ಜಿದಾರ ಅಪರಾಧಿಯನ್ನು ಪ್ರಸ್ತುತ ಇರಿಸಲಾಗಿರುವ ಜೈಲಿನ ಅಧಿಕಾರಿಗಳು ಎಲ್ಲಾ ರೀತಿಯಲ್ಲೂ ಅಪರಾಧಿಯ ಪ್ರವೇಶ, ನಡತೆಗಳ ಬಗ್ಗೆ ಮೌಲ್ಯಮಾಪನ ನಡೆಸಲು ಅನುಕೂಲವಾಗುವಂತೆ ಸಂಪೂರ್ಣ ಸಹಕಾರವನ್ನು ನೀಡಬೇಕು ಎಂದು ಸುಪ್ರೀಂ ನಿರ್ದೇಶಿಸಿದೆ.
ಜೂನ್ 2018 ರಲ್ಲಿ, ಶಾಲಾ ತರಗತಿಗಳನ್ನು ಮುಗಿಸಿ ಹೊರಬಂದ ಬಾಲಕಿ ಶಾಲಾ ಆವರಣದಿಂದ ಕಾಣೆಯಾಗಿದ್ದಳು ಎಂದು ಮಂದಸೌರ್ನ ಪೊಲೀಸ್ ಠಾಣೆಯಲ್ಲಿ ಹುಡುಗಿಯ ಅಜ್ಜಿ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಾಲಕಿಗಾಗಿ ಹುಡುಕಾಟ ನಡೆಸಿದ್ದರು. ಮರುದಿನ ಬಾಲಕಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿ ಚಿಕಿತ್ಸೆ ನೀಡಲಾಗಿದೆ. ತನ್ನನ್ನು ಅಪರಾಧಿಗಳು ನಿರ್ಜನ ಪ್ರದೇಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ ಘಟನೆಯನ್ನು ಬಾಲಕಿ ಪೊಲೀಸರಿಗೆ ವಿವರಿಸಿದ್ದಳು.
ಸಾಕ್ಷ್ಯಾಧಾರಗಳನ್ನು ಪರಿಗಣಿಸಿದ ಬಳಿಕ ವಿಚಾರಣಾ ನ್ಯಾಯಾಲಯ ಇಬ್ಬರು ಅಪರಾಧಿಗಳಿಗೆ ಮರಣದಂಡನೆ ವಿಧಿಸಿತ್ತು. ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಅಪರಾಧಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್, ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿತ್ತು.
ಇದನ್ನೂ ಓದಿರಿ: ಉತ್ತರ ಪ್ರದೇಶ: ಹತ್ರಾಸ್ ಅತ್ಯಾಚಾರ ಪ್ರಕರಣ ಚುನಾವಣೆಯನ್ನು ಪ್ರಭಾವಿಸುವುದೇ?


