Homeಕರ್ನಾಟಕಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣದ ಸಾಂವಿಧಾನಿಕ ಹಕ್ಕು ಮತ್ತು ಕರ್ನಾಟಕ ಸರ್ಕಾರದ ವೈಫಲ್ಯ

ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣದ ಸಾಂವಿಧಾನಿಕ ಹಕ್ಕು ಮತ್ತು ಕರ್ನಾಟಕ ಸರ್ಕಾರದ ವೈಫಲ್ಯ

- Advertisement -
- Advertisement -

ಫೆಬ್ರವರಿ 4ರಂದು ನಾವೆಲ್ಲ ಒಂದು ಆಘಾತಕಾರಿ ಘಟನೆಗೆ ಸಾಕ್ಷಿಯಾದೆವು. ಕುಂದಾಪುರದ ಸರಕಾರಿ ಕಾಲೇಜಿನ ಅಧ್ಯಾಪಕರು ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ತಲೆಯ ಮೇಲೆ ಹಿಜಾಬ್ ಧರಿಸಿ ಕಾಲೇಜಿನೊಳಗೆ ಬರುವುದನ್ನು ತಡೆಯಲು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದರು. ಈ ಘಟನೆಯ ನಂತರ ಇದೇ ರೀತಿಯಲ್ಲಿ ವಿವೇಚನಾರಹಿತವಾಗಿ ಉಡುಪಿಯ ಸರಕಾರಿ ಕಾಲೇಜೊಂದರಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು ತರಗತಿ ಪ್ರವೇಶಿಸದಂತೆ ತಡೆಯಲಾಯಿತು. ಈ ಹಿಜಾಬ್ ಧರಿಸಿದ ವಿದ್ಯಾರ್ಥಿಗಳನ್ನು ಕಾಲೇಜಿಗೆ ಸೇರಿಸದ ವಿವಾದ ಉಡುಪಿಯ ಸರಕಾರಿ ಕಾಲೇಜಿನಿಂದಲೇ ಪ್ರಾರಂಭವಾಗಿತ್ತು.

ಸದಾ ಹಿಜಾಬ್ ಧರಿಸಿಯೇ ಕಾಲೇಜಿಗೆ ಬರುತ್ತಿದ್ದ ವಿದ್ಯಾರ್ಥಿಗಳನ್ನು ಯಾವುದೇ ಮುನ್ಸೂಚನೆ ನೀಡದೆ, ಅಚಾನಕ್ಕಾಗಿ ಒಂದು ದಿನ ಪ್ರವೇಶ ನಿರಾಕರಿಸಲಾಯಿತು. ಆಗ ವಿದ್ಯಾರ್ಥಿಗಳು ಹೇಳಿದ್ದು ಹೀಗೆ ವರದಿಯಾಗಿದೆ: “ನಾವು ವಿದ್ಯಾರ್ಥಿಗಳು, ನಾವು ಮೊದಲಿನಿಂದಲೂ ಹಿಜಾಬ್ ಧರಿಸುತ್ತಿದ್ದೇವೆ. ಆದರೆ ಈಗ ಮಾತ್ರ ಅದನ್ನು ಸಮಸ್ಯೆಯನ್ನಾಗಿಸಲಾಗಿದೆ”. ಹಿಜಾಬ್ ಎಂಬುದು ಇದ್ದಕ್ಕಿದ್ದಂತೆಯೇ ಒಂದು ಸಮಸ್ಯೆಯಾಗಿದ್ದು ಈಗ ಅತ್ಯಂತ ಆಳದ ಮಹತ್ವ ಪಡೆದುಕೊಂಡಿದೆ. ಇದು ಸರಕಾರ ತೆಗೆದುಕೊಂಡ ಕ್ರಮದ ಬೇಕಾಬಿಟ್ಟಿಯಾದ ವಿವೇಚನಾರಹಿತವಾದ ಸ್ವರೂಪವನ್ನು ಎತ್ತಿತೋರಿಸುತ್ತದೆ. ಸರಕಾರದ ಈ ವಿವೇಚನಾರಹಿತ ಕ್ರಮ ಪ್ರಮುಖ ಪ್ರಶ್ನೆಯಾಗಬೇಕೇ ಹೊರತು ಹಿಜಾಬ್ ಎಂಬುದು ಇಸ್ಲಾಂಗೆ ಅತ್ಯಗತ್ಯವೋ ಇಲ್ಲವೋ ಎಂಬುದಲ್ಲ. ಏಕೆಂದರೆ, ವಿದ್ಯಾರ್ಥಿಗಳಿಗೆ ಶಿಕ್ಷಣದ ಹಕ್ಕಿದೆ ಹಾಗೂ ಪರೀಕ್ಷೆಗೆ ಎರಡು ತಿಂಗಳ ಮುನ್ನ ತರಗತಿಗೆ ಹಾಜರಾಗದಂತೆ ಇದ್ದಕ್ಕಿದ್ದಂತೆ ಅರ್ಥರಹಿತವಾಗಿ ತಡೆಯಲು ಸಾಧ್ಯವಿಲ್ಲ.

ಕರ್ನಾಟಕ ಸರಕಾರವು ಶಿಕ್ಷಣದ ಹಕ್ಕು ಮತ್ತು ತಾರತಮ್ಯರಹಿತ ಜೀವನದ ಹಕ್ಕು (ಇವುಗಳ ರಕ್ಷಣೆಗಾಗಿ ಸಂವಿಧಾನಾತ್ಮಕ ಹೊಣೆ ಹೊಂದಿದೆ), ಇವೆರಡರ ಉಲ್ಲಂಘನೆ ಆಗಿರುವುದನ್ನು ಉಪೇಕ್ಷಿಸಿದೆ. ಹಾಗೂ ಅದರ ಬದಲಿಗೆ ಒಂದು ಅತ್ಯಂತ ಬೇಜವಾಬ್ದಾರಿತನದಿಂದ ಕೂಡಿದ ಕಿತಾಪತಿಯ ಆದೇಶವನ್ನು ಹೊರಡಿಸಿತು. ಅದರಲ್ಲಿ ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳ ಹಿಂದಿನ ಆದೇಶಗಳು ’ತಲೆಯ ಮೇಲೆ ಹೊದ್ದುಕೊಳ್ಳುವ ಸ್ಕಾರ್ಫ್ ಅಥವಾ ಬಟ್ಟೆಯನ್ನು ನಿಷೇಧಿಸುವುದು ಸಂವಿಧಾನದ ಆರ್ಟಿಕಲ್ 25ರ ಉಲ್ಲಂಘನೆ ಆಗುವುದಿಲ್ಲ’ ಎಂದು ತಪ್ಪಾಗಿ ಉಲ್ಲೇಖಿಸಿದೆ. ಇದು ಹಿಂದೆ ಬಂದ ಆದೇಶಗಳ ತಪ್ಪು ಗ್ರಹಿಕೆಯಾಗಿದೆ. ಆ ಆದೇಶಗಳು ವಾಸ್ತವದಲ್ಲಿ ಹಿಜಾಬ್ ಧರಿಸುವ ಹಕ್ಕು ವರ್ಸಸ್ ಪರೀಕ್ಷೆಗಳಲ್ಲಿ ನಕಲು ಮಾಡುವುದನ್ನು ತಡೆಯಲು ಕಾಲೇಜುಗಳಿಗೆ ಇರುವ ಹಕ್ಕುಗಳ ಬಗ್ಗೆ ಹಾಗೂ ಅಲ್ಪಸಂಖ್ಯಾತರ ಸಂಸ್ಥೆಗಳು ಸಮವಸ್ತ್ರವನ್ನು ನಿಗದಿಪಡಿಸುವ ಹಕ್ಕುಗಳು ವರ್ಸಸ್ ಮುಸ್ಲಿಂ ಮಹಿಳೆಯರಿಗೆ ಹಿಜಾಬ್ ಧರಿಸಲು ಇರುವ ಹಕ್ಕುಗಳನ್ನು ಬ್ಯಾಲೆನ್ಸ್ ಮಾಡುವ ಪ್ರಕರಣಗಳಲ್ಲಿ ಬಂದಿದ್ದ ಆದೇಶಗಳಾಗಿವೆ.

ಈ ಅಧಿಸೂಚನೆಯಲ್ಲಿ ’ತಲೆಯನ್ನು ಮರೆಮಾಚುವ ಬಟ್ಟೆ ಅಥವಾ ಹೆಡ್‌ಸ್ಕಾರ್ಫ್‌ಅನ್ನು ನಿಷೇಧಿಸುವುದು ಸಂವಿಧಾನದ ಆರ್ಟಿಕಲ್ 25ರ ಉಲ್ಲಂಘನೆ ಆಗುವುದಿಲ್ಲ’ ಎಂದು ತೀರ್ಮಾನಿಸುತ್ತದೆ. ಹಾಗೂ ಸರಕಾರಿ ಕಾಲೇಜುಗಳಲ್ಲಿ ಯಾವುದೇ ಸಮವಸ್ತ್ರ ನಿಗದಿಪಡಿಸದೇ ಇದ್ದಲ್ಲಿ, ಧರಿಸುವ ಬಟ್ಟೆಗಳು ’ಏಕತೆ, ಸಮಾನತೆ ಮತ್ತು ಸಾರ್ವಜನಿಕ ಸುವ್ಯವಸ್ಥೆ’ಯ ಹಿತಾಸಕ್ತಿಗಳ ಮೇರೆಗೆ ಇರಬೇಕು ಎಂದು ಹೇಳುತ್ತದೆ. ಇದು ಕಾಲೇಜಿನ ಅಭಿವೃದ್ಧಿ ಸಮಿತಿಗಳಿಗೆ ಯಾವ ಸಮವಸ್ತ್ರ ಇರಬೇಕು ಎಂದು ನಿರ್ಣಯಿಸಲು ಅಧಿಕಾರ ನೀಡುತ್ತದೆ.

ಈ ಅಪಾಯಕಾರಿ ಅಧಿಸೂಚನೆಯೊಂದಿಗೆ ಕರ್ನಾಟಕ ಸರಕಾರವು ತಾನು ನೇರವಾಗಿ ಮಾಡಲು ಹಿಂಜರಿದ ಕೆಲಸವನ್ನು ಸುತ್ತುಬಳಸಿ ಮಾಡುತ್ತಿರುವುದು ತಿಳಿಯುತ್ತದೆ. ಸಮಾಜದಲ್ಲಿ ಜನರು ಅದನ್ನು ಮಾಡಬಾರದು, ಇದನ್ನು ಮಾಡಬಾರದು ಎಂದು ಹೇಳುವ ವಿಜಿಲಾಂಟೆ ಶಕ್ತಿಗಳಿಗೆ (ಸ್ವಘೋಷಿತ ನೈತಿಕ ಪೊಲೀಸರ) ಮತ್ತು ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ ರಹಸ್ಯವಾದ ಸಂದೇಶ ನೀಡಿದಂತೆ ಕಾಣುವ ಸರಕಾರವು ಅವರಿಗೆ ಹೇಳುತ್ತಿರುವುದೇನೆಂದರೆ, ಹಿಜಾಬ್ ಧರಿಸುವುದನ್ನು ಸಂವಿಧಾನ 25ನೇ ವಿಧಿಯಲ್ಲಿ ರಕ್ಷಣೆ ನೀಡಲಾಗಿಲ್ಲ ಹಾಗೂ ಈ ಶಕ್ತಿಗಳು ತಮಗಿಷ್ಟ ಬಂದಂತೆ ಮುಂದುವರೆದು ಹಿಜಾಬ್‌ಅನ್ನು ನಿಷೇಧಿಸಿ ಎಂದಿದೆ. ಈಗ ಈ ವಿಜಿಲಾಂಟೆ ಶಕ್ತಿಗಳಿಗೆ ಸಂದೇಶ ತಲುಪಿದೆ ಹಾಗೂ ಅವರುಗಳು ಸರಕಾರದ ನಿಜವಾದ ಆದರೆ ಗುಪ್ತವಾದ ಉದ್ದೇಶವನ್ನು ನೆರವೇರಿಸಲು ಹೊರಟಿದ್ದಾರೆ. ಫೆಬ್ರವರಿ 8ರಂದು, ಕೇಸರಿ ಶಾಲನ್ನು ಹೊದ್ದ ಕಿಡಿಗೇಡಿಗಳು ಜೈ ಶ್ರೀರಾಮ ಘೋಷಣೆ ಕೂಗುತ್ತ, ಕಾಲೇಜಿಗೆ ಹೋಗುತ್ತಿದ್ದ ಮುಸ್ಲಿಂ ವಿದ್ಯಾರ್ಥಿಯನ್ನು ಹೆದರಿಸಿ, ಕಿರುಕುಳ ನೀಡಿದರು. ದಕ್ಷಿಣ ಕನ್ನಡ, ಉಡುಪಿ, ಮಂಡ್ಯ, ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಕೊಡಗು ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಮುಸ್ಲಿಂ ಯುವತಿಯರು ತಮ್ಮ ಶಿಕ್ಷಣದ ಹಕ್ಕನ್ನು ಪಡೆಯುವುದನ್ನು ತಡೆಯಲಾಯಿತು. ಇಷ್ಟೆಲ್ಲ ಆದರೂ ಕರ್ನಾಟಕ ಸರಕಾರ ಮೂಕ ಪ್ರೇಕ್ಷಕನಾಗಿಯೇ ಇತ್ತು.

ಈ ಅಧಿಸೂಚನೆಯ ಮೂಲಕ ಕರ್ನಾಟಕ ಸರಕಾರ ಹೇಳುತ್ತಿರುವುದೇನೆಂದರೆ, ಮುಸ್ಲಿಂ ಬಾಲಕಿಯರ ಶಿಕ್ಷಣದ ಹಕ್ಕನ್ನು ರಕ್ಷಿಸುವ ಯಾವ ಜವಾಬ್ದಾರಿಯೂ ತಮಗಿಲ್ಲ ಎಂದು ಹಾಗೂ ಹಿಜಾಬ್ ಧರಿಸುವ ಮುಸ್ಲಿಂ ಬಾಲಕಿಯರನ್ನು ನಿಷೇಧಿಸುವ, ಅವಮಾನಿಸುವ, ಅವರನ್ನು ಹೊರಗಿಡುವುದು ಮುಂತಾದೆಲ್ಲವುಗಳಿಗೆ ಅನುವು ಮಾಡಿಕೊಡಲಾಗಿದೆ ಎಂದು. ಇದು ಒಂದು ಸಂವಿಧಾನಾತ್ಮಕವಾಗಿ ಚುನಾಯಿತ ಸರಕಾರಕ್ಕೆ ಸಂಬಂಧಪಟ್ಟಂತೆ, ತನ್ನ ಜವಾಬ್ದಾರಿಯನ್ನು ಕಳಚಿಕೊಳ್ಳುವ ಅತ್ಯಂತ ಆಘಾತಕಾರಿಯಾದ ನಡೆಯಾಗಿದೆ.

ಯಾವಾಗ ಒಂದು ಸರಕಾರ ತನ್ನ ಸಂವಿಧಾನಾತ್ಮಕ ಜವಾಬ್ದಾರಿಯನ್ನು ನಿಭಾಯಿಸಲು ವಿಫಲವಾಗುತ್ತದೆಯೋ, ಆಗ ಆ ಜವಾಬ್ದಾರಿ ಅದರ ನಾಗರಿಕರ ಮೇಲೆ ಬೀಳುತ್ತದೆ. ಬಿ.ಕಾಂ ಓದುತ್ತಿರುವ ಒಬ್ಬ ಮುಸ್ಲಿಂ ಯುವತಿ ಮುಸ್ಕಾನ್ ಕಾಲೇಜಿನ ಕ್ಯಾಂಪಸ್ಸಿನಲ್ಲಿ ತನ್ನ ವಾಹನದಲ್ಲಿ ಬಂದು, ಕೇಸರಿ ಶಾಲನ್ನು ಹೊದ್ದು ಪೀಡಿಸುತ್ತಿದ್ದ ಹೇಡಿಗಳನ್ನು ಧೈರ್ಯದಿಂದ ಎದುರಿಸಿದ್ದನ್ನು ಇಡೀ ಜಗತ್ತೇ ನೋಡಿತು. ಅವಳ ಧೈರ್ಯ, ಅವಳ ಆತ್ಮಸ್ಥೈರ್ಯ ಹಾಗೂ ತನ್ನ ಅಭಿವ್ಯಕ್ತಿ ಸ್ವಾತಂತ್ರದ ಹಕ್ಕು, ಶಿಕ್ಷಣದ ಹಕ್ಕು ಮತ್ತು ತಾರತಮ್ಯಕ್ಕೆ ಒಳಗಾಗದೇ ಇರುವ ಹಕ್ಕನ್ನು ಅವಳು ನಿರ್ಭೀತಿಯಿಂದ ಮತ್ತು ಘನತೆಯಿಂದ ಪ್ರತಿಪಾದಿಸಿದ್ದು, ಸಂವಿಧಾನದ ತತ್ವಗಳಾದ ಸ್ವಾತಂತ್ರ, ಸಮಾನತೆ ಮತ್ತು ಭ್ರಾತೃತ್ವದ ನಿಜ ಅರ್ಥದ ಪ್ರದರ್ಶನವಾಗಿತ್ತು.

ಯಾವಾಗ ಎಲ್ಲಾ ಸಂಸ್ಥೆಗಳ ಹೊಣೆಗಾರಿಕೆ ವಿಫಲವಾಗುತ್ತದೋ, ಆಗ ಹೊಣೆಗಾರಿಕೆಯನ್ನು
ಖಾತ್ರಿಪಡಿಸುವ ಜವಾಬ್ದಾರಿ ಅಂತಿಮವಾಗಿ ನ್ಯಾಯಾಂಗದ ಮೇಲೆ ಬೀಳುತ್ತದೆ. ದುರದೃಷ್ಟವಶಾತ್, ಕರ್ನಾಟಕ ಉಚ್ಚ ನ್ಯಾಯಾಲಯ ಏಕ ಸದಸ್ಯ ಪೀಠವು ಮುಸ್ಲಿಂ ಯುವತಿಯರಿಗೆ ತಾತ್ಕಾಲಿಕ/ಮಧ್ಯಂತರ ಪರಿಹಾರ ನೀಡಬೇಕು ಹಾಗೂ ಎರಡು ತಿಂಗಳ ನಂತರ ನಡೆಯಲಿರುವ ಪರೀಕ್ಷೆಯ ತನಕ, ಅವರಿಗೆ ತಾವು ಮುಂಚೆ ಧರಿಸಿದಂತೆ ಬಟ್ಟೆ ಧರಿಸಿ ಬರಲು ಅವಕಾಶ ಮಾಡಿಕೊಡಬೇಕು ಎಂಬ ಅರ್ಜಿದಾರರ ಮನವಿಗೆ ಕದಲಲಿಲ್ಲ. ಹಿಜಾಬ್ ಧರಿಸಿ ಪರೀಕ್ಷೆಗಳಲ್ಲಿ ಹಾಜರಾಗಲು ಅನುಮತಿ ನೀಡಲು, ಮಧ್ಯಂತರ ಪರಿಹಾರಕ್ಕಾಗಿ ಸಲ್ಲಿಸಿದ ಮನವಿಯನ್ನು ವಿರೋಧಿಸಿ ಕರ್ನಾಟಕ ಸರಕಾರವು ತನ್ನ ಕ್ರೌರ್ಯವನ್ನು ಮೆರೆಯಿತು. ವಿಷಯವು ಕರ್ನಾಟಕ ಉಚ್ಚ ನ್ಯಾಯಾಲಯದ ಪೂರ್ಣ ಪೀಠಕ್ಕೆ ತಲುಪಿದಾಗ, ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿತಲ್ಲದೇ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ವಿಚಾರಣೆಯ ಮುಂದಿನ ದಿನಾಂಕದ ತನಕ ಕಾಲೇಜಿನ ಅಭಿವೃದ್ಧಿ ಸಮಿತಿಗಳು ಆದೇಶಿಸಿದಲ್ಲಿ ಹಿಜಾಬ್‌ಗಳನ್ನು ಧರಿಸುವ ಹಕ್ಕನ್ನು ನಿರಾಕರಿಸುವುದನ್ನು ಕಾನೂನುಬದ್ಧಗೊಳಿಸಿತು. ಅಂದರೆ ಉಚ್ಚ ನ್ಯಾಯಾಲಯ ಮಾಡಿದ್ದೇನೆಂದರೆ, ಸರಕಾರದ ಬೇಜವಾಬ್ದಾರಿತನ ಹಾಗೂ ಕಾನೂನಿನ ವಿರುದ್ಧದ ಕ್ರಮಗಳಿಗೆ ಒಂದು ರೀತಿಯ ಲೈಸನ್ಸ್ ಕೊಟ್ಟಿದ್ದು. ಉಚ್ಚ ನ್ಯಾಯಾಲಯವು ಹಿಜಾಬ್ ಧರಿಸುವುದು ಇಸ್ಲಾಂನ ಅತ್ಯಗತ್ಯ ಅಂಶವೇ ಎಂಬ ಪ್ರಶ್ನೆಗೆ ಗಮನ ಹರಿಸುವುದರೊಂದಿಗೆ, ಅದಕ್ಕೂ ಮುಖ್ಯವಾದ ವಿಷಯವನ್ನು ನಿರ್ಲಕ್ಷಿಸಿದೆ; ಅದೇನೆಂದರೆ ಕೇವಲ ಹಿಜಾಬ್ ಧರಿಸಿದ್ದರೆಂದು ಮುಸ್ಲಿಂ ಯುವತಿಯರಿಗೆ ಶಿಕ್ಷಣದ ಹಕ್ಕನ್ನು ನಿರಾಕರಿಸುವುದರ ಪ್ರಶ್ನೆ. ಇಂದಿನಿಂದ ಮುಸ್ಲಿಂ ಯುವತಿಯರು ಹಿಜಾಬ್ ಧರಿಸಿದ ಕಾರಣಕ್ಕೆ ಅವರಿಗೆ ಕಾಲೇಜಿನಲ್ಲಿ ಮತ್ತು ಶಾಲೆಗಳಲ್ಲಿ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಕರ್ನಾಟಕ ನಿಜ ಆತ್ಮಸಾಕ್ಷಿಯೊಂದಿಗೆ ಅಂದರೆ ಸಕಾರಣಗಳೊಂದಿಗೆ ಹೇಳಬಲ್ಲದೇ? ಇದೇ ಪ್ರಶ್ನೆಯನ್ನು ನ್ಯಾಯಾಲಯ ಪರಿಗಣಿಸಬೇಕಿತ್ತು ಆದರೆ ದುರದೃಷ್ಟವಷಾತ್ ಹಾಗಾಗಲಿಲ್ಲ.

ಮುಸ್ಕಾನ್

ಎಲ್ಲಾ ಸಾಂವಿಧಾನಿಕ ಸಂಸ್ಥೆಗಳ ವೈಫಲ್ಯದ ಸಮಯದಲ್ಲಿ ನಾಗರಿಕ ಸಮಾಜದ ಧ್ವನಿ ಮತ್ತು ಮಾಧ್ಯಮಗಳು ಸಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಕೆಲಸ ಮಾಡಬೇಕಿದೆ. ಎಲ್ಲಿಯವರೆಗೆ ಸಂವಿಧಾನಿಕ ಅಂತಸ್ಸಾಕ್ಷಿ ಎಚ್ಚರಗೊಳ್ಳುವುದಿಲ್ಲವೋ ಹಾಗೂ ಕರ್ನಾಟಕ ಸರಕಾರ ಸಂವಿಧಾನದ ಅನುಗುಣವಾಗಿ ಕೆಲಸ ಮಾಡುವುದಿಲ್ಲವೋ, ಅಲ್ಲಿಯವರೆಗೆ ಮಾಧ್ಯಮ ಮತ್ತು ನಾಗರಿಕ ಸಮಾಜ ಈ ಜವಾಬ್ದಾರಿಯನ್ನು ಹೊರಬೇಕಿದೆ.

(ಕನ್ನಡಕ್ಕೆ): ರಾಜಶೇಖರ್ ಅಕ್ಕಿ

ಅರವಿಂದ್ ನಾರಾಯಣ್

ಅರವಿಂದ್ ನಾರಾಯಣ್
ಸಂವಿಧಾನ ತಜ್ಞರು, ಪಿಯುಸಿಎಲ್-ಕೆ ನ ರಾಜ್ಯಾಧ್ಯಕ್ಷರು


ಇದನ್ನೂ ಓದಿ: ಹಿಜಾಬ್‌-ಕೇಸರಿ ಶಾಲು ವಿವಾದ: ಸಾಮರಸ್ಯಕ್ಕೆ ಧರ್ಮಗುರುಗಳ ಕರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಿರಣ್ ರಿಜಿಜು ‘ಸೇಫ್‌’ವಾದ ಅಲ್ಲಗಳೆದ ಸರಣಿ ಮುಸ್ಲಿಂ ವಿರೋಧಿ ಹಿಂಸಾಚಾರಾಗಳು

ಜೂನ್ 15, 2026ರಂದು ಪ್ರಕಟಗೊಂಡ ಇಂಡಿಯನ್ ಎಕ್ಸ್‌ಪ್ರೆಸ್‌ನ 'ಐಡಿಯಾ ಎಕ್ಸ್‌ಚೇಂಜ್' ಕಾರ್ಯಕ್ರಮದ ಸಂದರ್ಶನವೊಂದರಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು, “ಭಾರತದಲ್ಲಿ ಮುಸ್ಲಿಮರು ಸುರಕ್ಷಿತವಾಗಿಲ್ಲ ಎಂದು ಹೇಳುವ ಮೂಲಕ ನೀವು ದೇಶದ ಚಾರಿತ್ರ್ಯಕ್ಕೆ...

ರಾಮ ಮಂದಿರ ದೇಣಿಗೆ ದುರುಪಯೋಗ ವಿವಾದ; ಪ್ರಾಥಮಿಕ ವರದಿ ಸಲ್ಲಿಸಿದ ಎಸ್‌ಐಟಿ

ಅಯೋಧ್ಯೆಯ ರಾಮ ಮಂದಿರದಲ್ಲಿ ಸ್ವೀಕರಿಸಿದ ದೇಣಿಗೆಯ ದುರುಪಯೋಗದ ಆರೋಪದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಜೂನ್ 23 ಮಂಗಳವಾರ ಉತ್ತರ ಪ್ರದೇಶ ಸರ್ಕಾರಕ್ಕೆ ತನ್ನ ಪ್ರಾಥಮಿಕ ತನಿಖಾ ವರದಿಯನ್ನು ಸಲ್ಲಿಸಿದೆ...

ಮುಖ್ಯಮಂತ್ರಿ ಸುವೇಂದು ಅಧಿಕಾರಿಗೆ ನೋಟಿಸ್ ಜಾರಿ ಮಾಡಿದ ಕಲ್ಕತ್ತಾ ಹೈಕೋರ್ಟ್

ಭವಾನಿಪುರ ವಿಧಾನಸಭಾ ಕ್ಷೇತ್ರದ ಇತ್ತೀಚಿನ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ಅವರ ಆಯ್ಕೆಯನ್ನು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಹಾಗೂ ಟಿಎಂಸಿ (TMC) ನಾಯಕಿ ಮಮತಾ ಬ್ಯಾನರ್ಜಿ ಸಲ್ಲಿಕೆ ಮಾಡಿರುವ ಚುನಾವಣಾ ಅರ್ಜಿಗೆ ಸಂಬಂಧಿಸಿದಂತೆ ಕಲ್ಕತ್ತಾ...

TMC ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿಯನ್ನು ಉಚ್ಚಾಟಿಸಿದ ತೃಣಮೂಲ ಬಂಡಾಯ ಶಾಸಕರು

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಸೋಲಿನ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ಪಕ್ಷವು ಇತಿಹಾಸದಲ್ಲೇ ಕಾಣದ ಅತ್ಯಂತ ದೊಡ್ಡ ಬಂಡಾಯಕ್ಕೆ ಸಾಕ್ಷಿಯಾಗಿದೆ. ಬಂಡಾಯ ಶಾಸಕರ ನೇತೃತ್ವ ವಹಿಸಿರುವ ಋತಬ್ರತಾ ಬ್ಯಾನರ್ಜಿ ಸೋಮವಾರ ಮಮತಾ ಬ್ಯಾನರ್ಜಿ...

ಯುಪಿ: ಮೊಹರಂ ಮೆರವಣಿಗೆಯಲ್ಲಿ ಪಿತೂರಿ: ಪಾಕ್ ಪರ ಘೋಷಣೆಯ ಸುಳ್ಳು ವಿಡಿಯೋ ಹರಿಬಿಟ್ಟ ಇಬ್ಬರು ಹಿಂದುತ್ವವಾದಿಗಳ ಬಂಧನ 

ಬರೇಲಿ (ಉತ್ತರ ಪ್ರದೇಶ): ಮೊಹರಂ ಮೆರವಣಿಗೆಯೊಂದರಲ್ಲಿ "ಪಾಕಿಸ್ತಾನ್ ಜಿಂದಾಬಾದ್" ಎಂದು ದೇಶವಿರೋಧಿ ಘೋಷಣೆ ಕೂಗಲಾಗಿದೆ ಎಂಬ ನಕಲಿ ವೀಡಿಯೋ ಸೃಷ್ಟಿಸಿ, ಮುಸ್ಲಿಂ ಸಮುದಾಯದ ಮೇಲೆ ಸುಳ್ಳು ಆರೋಪ ಹೊರಿಸಲು ಯತ್ನಿಸಿದ ಇಬ್ಬರು ಹಿಂದುತ್ವವಾದಿ...

ಮಕ್ಕಳಿಗೆ ಆರ್‌ಎಸ್‌ಎಸ್‌ ತರಬೇತಿ ನೀಡುವುದನ್ನು ಟೀಕಿಸಿ ವಿಡಿಯೋ ಹಂಚಿಕೆ : ಯುವಕನನ್ನು ವಶಕ್ಕೆ ಪಡೆದ ಪೊಲೀಸರು!

ರಾಜಸ್ಥಾನದ ಜುಂಜುನು ಜಿಲ್ಲೆಯ ನವೀನ್ ಚೌಧರಿ ಎಂಬ 25 ವರ್ಷದ ಯುವಕ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಕುರಿತು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. 'ಜುಂಜುನು ಎಕ್ಸ್‌ಪ್ರೆಸ್' ಎಂಬ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ...

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...