Homeಕರ್ನಾಟಕಒಂದು ದಿನ, ಮೂರು ಪಾರ್ಟಿ, ಆಯಾರಾಮ್ ಗಯಾರಾಮ್ : ಪಕ್ಷಾಂತರ ಎಂಬ ಅಸಹ್ಯದ ಇತಿಹಾಸ

ಒಂದು ದಿನ, ಮೂರು ಪಾರ್ಟಿ, ಆಯಾರಾಮ್ ಗಯಾರಾಮ್ : ಪಕ್ಷಾಂತರ ಎಂಬ ಅಸಹ್ಯದ ಇತಿಹಾಸ

ಸದ್ಯ ಸದನದಲ್ಲಿ ಪಕ್ಷಾಂತರ ಮತ್ತು 30-40 ಕೋಟಿಗಳ ಆಪರೇಷನ್ ಕಮಲದ ಆಫರ್ ಕುರಿತಾಗಿಯೇ ಚರ್ಚೆ-ಗದ್ದಲ ಸಂಭವಿಸುತ್ತಿದೆ. ಈ ಪಕ್ಷಾಂತರ ಪಿಡುಗಿನ ಇತಿಕಾಸ ಇಲ್ಲಿದೆ...

- Advertisement -
- Advertisement -

ಪಕ್ಷಾಂತರ ಎಂಬ ಅಸಹ್ಯವೂ, ಆಪರೇಷನ್ ಕಮಲ ಎಂಬ ಬಿಜೆಪಿ ದಂಧೆಯೂ…

ಸದ್ಯ ಸದನದಲ್ಲಿ ಪಕ್ಷಾಂತರ ಮತ್ತು 30-40 ಕೋಟಿಗಳ ಆಪರೇಷನ್ ಕಮಲದ ಆಫರ್ ಕುರಿತಾಗಿಯೇ ಚರ್ಚೆ-ಗದ್ದಲ ಸಂಭವಿಸುತ್ತಿದೆ. ಈ ಹೊತ್ತಿನಲ್ಲಿ ಪಕ್ಷಾಂತರದ ಪಿಡುಗು ಬೆಳೆದ ಬಂದ ಅಸಹ್ಯ ಇತಿಹಾಸವನ್ನು ಇಲ್ಲಿ ನೀಡಿದ್ದೇವೆ.

ನಿನ್ನೆ (ಗುರುವಾರ) ಸದನದಲ್ಲಿ ಸಿದ್ದರಾಮಯ್ಯನವರು ವಿಶ್ವಾಸ ಮತದ ಮೇಲೆ ಮಾತನಾಡುತ್ತ, ಕ್ರಿಯಾಲೋಪ ಎತ್ತುವ ಮೊದಲು ಪಕ್ಷಾಂತರ ಪಿಡುಗಿನ ಇತಿಹಾಸದ ಒಂದು ವಿಲಕ್ಷಣ, ವಿಕೃತ ಪ್ರಸಂಗವನ್ನು ಜನರ ಎದರು ಇಟ್ಟರು. ‘ಒಂದೇ ದಿನದಲ್ಲಿ ಮೂರು ಬಾರಿ ವಿವಿಧ ಪಾರ್ಟಿಗಳಲ್ಲಿ ಕಾಣಿಸಿಕೊಂಡ ಗಯಾಲಾಲ್’ ಎಂಬ ಶಾಸಕನ ಕುರಿತು ಅವರು ಪ್ರಸ್ತಾಪಿಸಿದ್ದರು.

ಈ ಗಯಾಲಾಲ್‍ನ ಪ್ರಸಂಗವನ್ನು ಇಲ್ಲಿ ನೀಡುತ್ತಲೇ 60ರ ದಶಕದ ಅಂತ್ಯದಲ್ಲಿ ರಾಜಕಾರಣವು ಪಕ್ಷಾಂತರ ಪರ್ವದ ಕಾಲಘಟ್ಟವಾಗಿದ್ದ ಇತಿಹಾಸವನ್ನು ಮೆಲುಕು ಹಾಕೋಣ. ಪಕ್ಷಾಂತರ ನಿಷೇಧ ಕಾಯ್ದೆ ಇದ್ದರೂ, ಸುಪ್ರಿಂಕೋರ್ಟಿನ ಅಭಯದಿಂದಾಗಿ ಸದನಕ್ಕೆ ಬರದೇ ಮುಂಬೈಯಲ್ಲಿರುವ ಶಾಸಕರ ಸ್ವೇಚ್ಛಾಚಾರದ ಹಿನ್ನೆಲೆಯಲ್ಲಿ ಇದನ್ನೆಲ್ಲ ಅರಿಯುವುದು ಅಗತ್ಯ ಎನಿಸುತ್ತದೆ.

ಒಂದು ದಿನ, ಮೂರು ಪಾರ್ಟಿ, ಆಯಾರಾಮ್ ಗಯಾರಾಮ್
ಗಯಾಲಾಲ್ 15 ದಿನದ ಬಿರುಸಿನ ಚಟುವಟಿಕೆಯಲ್ಲಿ ಮೂರು ಪಕ್ಷಗಳಲ್ಲಿ ಕಾಣಿಸಿಕೊಂಡಿದ್ದರು. ಅದೆಲ್ಲಕ್ಕಿಂತ ಮುಖ್ಯವಾಗಿ ಒಂದೇ ದಿನದ ಮುಂಜಾನೆ ಒಂದು ಪಕ್ಷದಲ್ಲಿದ್ದ ಅವರು ಅಂದು ಮತ್ತೆರಡು ಸಲ ಪಕ್ಷ ಬದಸಲಿಸುವ ಮೂಲಕ ಒಂದೇ ದಿನ ಮೂರು ಪಾರ್ಟಿಗಳಲ್ಲಿ ಕಾಣಿಸಿಕೊಂಡು ಪಕ್ಷಾಂತರದ ವಿಕೃತ ಇತಿಹಾಸದಲ್ಲಿ ‘ಮೈಲಿ(ಗೆ)ಗಲ್ಲು’ ಆಗಿ ಉಳಿದು ಬಿಟ್ಟಿದ್ದಾರೆ.

ಈ ಪುಣ್ಯಾತ್ಮನ ಕಾರಣಕ್ಕೆ ‘ಆಯಾರಾಮ್ ಗಯಾರಾಮ್’ ಎಂಬ ನುಡಿಗಟ್ಟು ಚಾಲ್ತಿಗೆ ಬಂದು ಪಕ್ಷದಿಂದ ಪಕ್ಷ ಬದಲಿಸುವವರನ್ನು ವ್ಯಂಗ್ಯ ಮಾಡಲು ಈ ನುಡಿಗಟ್ಟು ಇನ್ನೂ ಬಳಕೆಯಲ್ಲಿದೆ. ‘ಆಯಾರಾಮ್ ಗಯಾರಾಮ್’ ಕುರಿತಾಗಿಯೇ ಬಂದ ಜೋಕುಗಳು, ಕಾರ್ಟೂನುಗಳಿಗೆ ಲೆಕ್ಕವಿಲ್ಲ!

1967ರಲ್ಲಿ ಒಂದು ದಿನ, ತಾನು ಹರ್ಯಾಣ ವಿಧಾನಸಭೆಗೆ ಶಾಸಕನಾಗಿ ಆರಿಸಿಬಂದಿದ್ದ ಕಾಂಗ್ರೆಸ್ ಪಕ್ಷದಿಂದ ಜನತಾ ಪಾರ್ಟಿಗೆ (ಉನೈಟೆಡ್ ಫ್ರಂಟ್ ಭಾಗವಾಗಿತ್ತು), ನಂತರ ಮತ್ತೆ ಸ್ವಲ್ಪ ತಾಸುಗಳಲ್ಲೇ ಮರಳಿ ತವರು ಪಕ್ಷ ಕಾಂಗ್ರೆಸ್‍ಗೆ…. ಕೇವಲ ಒಂಭತ್ತು ತಾಸುಗಳ ಅವಧಿಯಲ್ಲಿ ಮತ್ತೆ ಜನತಾ ಪಾರ್ಟಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಗಯಾಲಾಲ್ ಪಕ್ಷಾಂತರ ಪರ್ವ ಎಂಬ ಪದಕ್ಕೆ ಅನ್ವರ್ಥವಾಗಿ ಉಳಿದುಬಿಟ್ಟಿದ್ದಾರೆ.

ಆದರೆ, ಇಲ್ಲಿ ನಮ್ಮದೊಂದು ಪ್ರಶ್ನೆಯಿದೆ
ನಿನ್ನೆ ಸಿದ್ದರಾಮಯ್ಯರು ಪ್ರಸ್ತಾಪಿಸಿದಂತೆ ಬಹಳಷ್ಟು ಸದನಗಳಲ್ಲಿ ವಿಶ್ವಾಸಮತದ ಚರ್ಚೆ ನಡೆದಾಗ, ಪಕ್ಷಾಂತರದ ಆಟ ಸಾಗಿದಾಗ ಗಯಾಲಾಲ್ ಹೆಸರು ಪ್ರಸ್ತಾಪಿಸಿ ವ್ಯಂಗ್ಯ ಮಾಡಲಾಗುತ್ತದೆ, ಅದೇನೋ ಸರಿ. ಆದರೆ, ಅವತ್ತು ಗಯಾಲಾಲ್‍ರನ್ನು ಫುಟ್‍ಬಾಲ್‍ನಂತೆ ಆಟ ಆಡಿದ್ದು ಕಾಂಗ್ರೆಸ್ ಮತ್ತು ಜನತಾ ಪಾರ್ಟಿಗಳು.

ಸ್ವಾತಂತ್ರ್ಯಾ ನಂತರ ಸಂಸತ್ ಮತ್ತು ವಿಧಾನಸಭೆಗಳಲ್ಲಿ ಅಧಿಕಾರ ಹಿಡಿಯುತ್ತಲೇ ಬಂದಿದ್ದ ಕಾಂಗ್ರೆಸ್‍ಗೆ 1967ರಲ್ಲಿ ಜನ ದೊಡ್ಡ ಪಾಠವನ್ನೇ ಕಲಿಸಿದ್ದರು. ಅಧಿಕಾರ ಉಂಡೂ ಉಂಡೂ ಮೈಯುಂಡು ಬಿಟ್ಟಿದ್ದ ಕಾಂಗ್ರೆಸ್ ಆಗ ಚಡಪಡಿಸತೊಡಗಿತ್ತು. ಅದರ ಪರಿಣಾಮವಾಗಿಯೇ ದೇಶಾದ್ಯಂತ ಕಾಂಗ್ರೆಸ್ ಬೇರೆ ಚಿಹ್ನೆಗಳಿಂದ ಗೆದ್ದವರನ್ನು ಬೇಟೆಯಾಡಿ, ಅವಕಾಶವಾದಿ ರಾಜಕಾರಣದ ಮೂಲಕ ವಿವಿಧ ರಾಜ್ಯಗಳಲ್ಲಿ ಅಧಿಕಾರ ಹಿಡಿಯುವ ಸಂಚು ಮಾಡಿತ್ತು. ಅದರ ಪರಿಣಾಮವಾಗಿ ಹಲವು ಕಡೆ ಕಾಂಗ್ರೆಸ್ ಪಕ್ಷವೇ ಹೋಳಾಗಿತ್ತು.

1967: ವಿ.ಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್‍ಗೆ ಪೆಟ್ಟು
1967ರಲ್ಲಿ 16 ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆದು ಕಾಂಗ್ರೆಸ್ ಎಂಟು ರಾಜ್ಯಗಳಲ್ಲಿ ಬಹುಮತ ಕಳೆದುಕೊಂಡಿತ್ತು ಮತ್ತು ಏಳರಲ್ಲಿ ಸರ್ಕಾರ ರಚಿಸಲು ವಿಫಲವಾಗಿತ್ತು. ಕಾಂಗ್ರೆಸ್‍ಗೆ ಅದು ಮರ್ಮಾಘಾತದ ವಿಷಯವೇ ಆಗಿತ್ತು. ಆ ಸಂದರ್ಭವೇ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಅಡಿಯಲ್ಲಿ ಸಮ್ಮಿಶ್ರ ಸರ್ಕಾರಗಳ ಯುಗಕ್ಕೆ ನಾಂದಿ ಹಾಡಿತು. ಇದು ದೊಡ್ಡ ಪ್ರಮಾಣದ ಪಕ್ಷಾಂತರವನ್ನೂ ಉದ್ಘಾಟನೆ ಮಾಡಿತು.

1967-71ರ ನಾಲ್ಕು ವರ್ಷಗಳ ಅವಧಿಯಲ್ಲಿ ಸಂಸತ್ತಿನಲ್ಲಿ 142 ಪಕ್ಷಾಂತರಗಳು ಮತ್ತು ವಿವಿಧ ರಾಜ್ಯ ವಿಧಾನಸಭೆಗಳಲ್ಲಿ 1969 ಪಕ್ಷಾಂತರ ಪ್ರಕರಣಗಳು ಸಂಭವಿಸಿಬಿಟ್ಟವು! ಇದೆ ದೇಶ ಕಂಡ ಅಸಹ್ಯ ಪಕ್ಷಾಂತರ ಪರ್ವದ ಕಾಲಾವಧಿ. ಇದರ ಪರಿಣಾಮವಾಗಿ 32 ಸರ್ಕಾರಗಳು ಲಗಾಟಿ ಹೊಡೆದವು ಮತ್ತು 212 ಪಕ್ಷಾಂತರಿಗಳಿಗೆ ಸಚಿವ ಸ್ಥಾನಗಳು ಲಭಿಸಿದ್ದವು! (ಕಳೆದ ಶುಕ್ರವಾರ ಈ ಅಂಕಿಅಂಶಗಳನ್ನು ಸ್ಪೀಕರ್ ರಮೇಶಕುಮಾರ್ ಸದನದಲ್ಲಿ ಉಲ್ಲೇಖಿಸಿದ್ದರು).

ಹರ್ಯಾಣದಲ್ಲಿ ಕಾಂಗ್ರೆಸ್ ಸರ್ಕಾರ ಬುಡಮೇಲಾಯಿತು. ಕಾಂಗ್ರೆಸ್‍ನ ಭಿನ್ನಮತೀಯರ ಗುಂಪು ವಿಪಕ್ಷದೊಂದಿಗೆ ಸೇರಿ ಸರ್ಕಾರ ರಚಿಸಿತ್ತು. ಈ ಕಾಲಾವಧಿಯಲ್ಲಿಯೇ ಗಯಾಲಾಲ್ ಪ್ರಸಂಗ ನಡೆದಿತ್ತಷ್ಟೇ.

1984ರಲ್ಲಿ ಇಂದಿರಾ ಗಾಂಧಿ ಅವರ ಹತ್ಯೆಯಾದ ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಬಹುದೊಡ್ಡ ಬಹುಮತ ಸಿಕ್ಕಿ, ರಾಜೀವ್ ಗಾಂಧಿ ಅವರಿಗೆ ಪ್ರಧಾನಮಂತ್ರಿಯಾದರು. ಅಂದು ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ್ದ ರಾಷ್ಟ್ರಪತಿ ಅವರು ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತರುತ್ತೇವೆಂದು ಪ್ರಸ್ತಾಪ ಮಾಡಿದ್ದರು. 1985ರಲ್ಲಿ ಪಕ್ಷಾಂತರ ಕಾಯ್ದೆ ಜಾರಿಗೆ ಬಂತು. ಆಗ ಮೂರನೇ ಒಂದು ಭಾಗದಷ್ಟು ಕಡಿಮೆ ಶಾಸಕರು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ವಲಸೆ ಹೋದಲ್ಲಿ ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಸ್ಪೀಕರ್ ಅಥವಾ ರಾಜ್ಯಸಭಾ ಮತ್ತು ವಿಧಾನಪರಿಷತ್ತು ಅಧ್ಯಕ್ಷರು ಅವರನ್ನು ಅನರ್ಹಗೊಳಿಸಬಹುದು ಎಂಬ ನಿಯಮವನ್ನು ತಂದು ಸಂವಿಧಾನದ 10ನೇ ಶೆಡ್ಯುಲ್‍ನಲ್ಲಿ ಸೇರಿಸಲಾಯಿತು. ಹೀಗೆ ಒಂದು ಸಾಂವಿಧಾನಿಕ ತಿದ್ದುಪಡಿಯನ್ನೇ ತರಲಾಯಿತು.

ಇದು ಪಕ್ಷಾಂತರವನ್ನು ಕಡಿಮೆ ಮಾಡಿತೆ ಅಥವಾ ತಡೆಗಟ್ಟಿತೆ ಎಂದು ನೋಡುವುದಾದರೆ ಅದು ಹಾಗೆ ಆಗಲಿಲ್ಲ. ಬದಲಿಗೆ ಮೂರನೇ ಒಂದು ಭಾಗದಷ್ಟು ಶಾಸಕರು ಒಟ್ಟಿಗೆ ಸೇರಿ ವಲಸೆ ಹೊಗಲಿಕ್ಕೆ ಆರಂಭ ಮಾಡಿದರು. ನಂತರ 2003ರಲ್ಲಿ ಅಟಲ್ ಬಿಹಾರಿ ವಾಜಪೆಯಿ ಪ್ರಧಾನಮಂತ್ರಿಯಾಗಿದ್ದಾಗ ಪುನಃ ಪಕ್ಷಾಂತರ ನಿಷೇಧ ಕಾಯ್ದೆ ಚರ್ಚೆಗೆ ಬಂತು. ಆಗ ಮೂರನೆ ಒಂದು ಭಾಗವಲ್ಲ, ಮೂರನೆ ಎರಡು ಭಾಗದಷ್ಟು ಶಾಸಕರು ಸಂಸದರು ಪಕ್ಷಾಂತರ ಮಾಡಿದ್ದಲ್ಲಿ ಅದನ್ನು ವಿಲೀನ ಎಂದು ಪರಿಗಣಿಸಲಾಗುತ್ತದೆ. ಹಾಗೆ ವಿಲೀನ ಮಾಡಿದಾಗ ಹಳೆ ಪಕ್ಷದಲ್ಲಿ ಉಳಿಯುವವರು ಅವರ ಪಾಡಿಗೆ ಇರುತ್ತಾರೆ ಮತ್ತು ಪಕ್ಷಾಂತರ ಮಾಡಿದವರೂ ಸಹ ಅನರ್ಹರಾಗುವುದಿಲ್ಲ ಎಂಬ ತಿದ್ದುಪಡಿಯನ್ನು ಸಂವಿಧಾನದ 91ನೇ ತಿದ್ದುಪಡಿ ಮಾಡಿ ಮುಂದಿಡಲಾಯಿತು.

2008ರಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯನ್ನೆ ಅಣಕಿಸುವಂತೆ ಕರ್ನಾಟಕದಲ್ಲಿ ಆಪರೇಷನ್ ಕಮಲ ಎಂಬ ಹೇಸಿಗೆ ರಾಜಕಾರಣ ಶುರುವಾಗಿತು. ಅಂದರೆ ಅವರು ಕೋಟಿ ಕೋಟಿ ಹಣ ಮತ್ತು ಮಂತ್ರಿಗಿರಿಯ ಆಸೆಗೆ ಮೊದಲು ಅವರು ತಮ್ಮ ಪಕ್ಷಕ್ಕೆ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನಂತರ ಇನ್ನೊಂದು ಪಕ್ಷವನ್ನು ಸೇರಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಮಂತ್ರಿಯಾಗುವುದು. ಅದನ್ನು ಉದ್ಘಾಟಿಸಿದ ಬಿಜೆಪಿಯೇ ಈಗ ಮತ್ತೆ 15 ಶಾಸಕರನ್ನು ಮುಂಬೈಯಲ್ಲಿ ‘ಹಿಡಿದಿಟ್ಟು’ ಅಧಿಕಾರದ ಹಪಾಹಪಿಯಲ್ಲಿ ತೊಳಲಾಡುತ್ತಿದೆ, ಇನ್ನೊಂದು ಕಡೆ ಅರ್ಜೆಂಟಾಗಿ ಅಧಿಕಾರ ಸಿಗಲಿದೆ ಎಂಬ ಆಶೆಯಲ್ಲಿ ಖುಷಿ ಅನುಭವಿಸುತ್ತಿದೆ…..

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕ; ಲೋಕಾಯುಕ್ತ ಪೊಲೀಸರಿಂದ ಚಂದ್ರು ಲಮಾಣಿ ಬಂಧನ

ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರು ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಗುತ್ತಿಗೆದಾರ ವಿಜಯ್ ಪೂಜಾರ್ ಅವರ ದೂರಿನ ಮೇರೆಗೆ ಗದಗ ಲೋಕಾಯುಕ್ತ ಪೊಲೀಸರು ನಡೆಸಿದ...

ಎಐ ಶೃಂಗಸಭೆಯಲ್ಲಿ ಪ್ರತಿಭಟನೆ : ನಾಲ್ವರು ಯುವ ಕಾಂಗ್ರೆಸ್‌ ಕಾರ್ಯಕರ್ತರು 5 ದಿನ ಪೊಲೀಸ್ ಕಸ್ಟಡಿಗೆ

ನವದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಿದ್ದ ಎಐ ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದ ನಾಲ್ವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ದೆಹಲಿ ನ್ಯಾಯಾಲಯ ಶನಿವಾರ (ಫೆ.21) 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ದೆಹಲಿ ಪೊಲೀಸರು...

ಮೈಮೇಲೆ ದೇವರು ಬಂದಂತೆ ನಟಿಸಿ ದಲಿತ ನವದಂಪತಿ ದೇವಸ್ಥಾನ ಪ್ರವೇಶ ನಿರಾಕರಣೆ: ವ್ಯಕ್ತಿ ಬಂಧನ

ಮೈಮೇಲೆ ದೇವರು ಬಂದಂತೆ ನಾಟಕವಾಡಿದ ವ್ಯಕ್ತಿಯೊಬ್ಬ, ದೇವಸ್ಥಾನಕ್ಕೆ ಬಂದಿದ್ದ ದಲಿತ ನವದಂಪತಿಯನ್ನು ಹೊರಗೆ ಕಳುಹಿಸುವ ಮೂಲಕ ಅಸ್ಪೃಶ್ಯತೆ ಆಚರಣೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಗೋಣಿ ತುಮಕೂರಿನಲ್ಲಿ (ಫೆ.20) ನಡೆದಿದೆ. ಗೃಹ...

ಜಾತಿವಾದಿ ಹೇಳಿಕೆ: ಜೆಎನ್‌ಯು ಉಪಕುಲಪತಿ ರಾಜೀನಾಮೆಗೆ ವಿದ್ಯಾರ್ಥಿ ಸಂಘ ಆಗ್ರಹ

ದೆಹಲಿಯ ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯದ (ಜೆಎನ್‌ಯು) ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು 'ದ ಸಂಡೇ ಗಾರ್ಡಿಯನ್' ಯೂಟ್ಯೂಬ್‌ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ 'ಜಾತಿ ಮತ್ತು ವಿಕ್ಟಿಮ್ ಕಾರ್ಡ್' ಕುರಿತು ನೀಡಿದ ಹೇಳಿಕೆ...

10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ : ದಂಪತಿಗೆ ಮರಣದಂಡನೆ

ಸುಮಾರು 10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ದಂಪತಿಗೆ ಮರಣದಂಡನೆ ವಿಧಿಸಿ ಉತ್ತರ ಪ್ರದೇಶದ ಬಂಡಾ ವಿಶೇಷ ಪೋಕ್ಸೋ ನ್ಯಾಯಾಲಯ ಶುಕ್ರವಾರ (ಫೆ.20) ಆದೇಶಿಸಿದೆ. ಉತ್ತರ ಪ್ರದೇಶದ...

ರಾಜ್ಯಸಭೆ ಚುನಾವಣೆ : ಬಿಹಾರದಲ್ಲಿ ಕಿಂಗ್ ಮೇಕರ್ ಆದ ಓವೈಸಿ ಪಕ್ಷ

ಮಾರ್ಚ್ 16ರಂದು ನಡೆಯಲಿರುವ ಬಿಹಾರದ ಐದು ರಾಜ್ಯಸಭಾ ಸ್ಥಾನಗಳ ಚುನಾವಣೆಯಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು 'ಕಿಂಗ್ ಮೇಕರ್' ಆಗಿ ಹೊರಹೊಮ್ಮಿದೆ. ಬಿಹಾರದಲ್ಲಿ ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು ಕನಿಷ್ಠ...

ದೆಹಲಿ : ಪ್ರಧಾನಿ ಮನೆ ಬಳಿಯ ಕೊಳಗೇರಿಗಳ 717 ಕುಟುಂಬಗಳಿಗೆ ಮನೆ ಖಾಲಿ ಮಾಡುವಂತೆ ನೋಟಿಸ್

ನವದೆಹಲಿಯ ಪ್ರಧಾನಿ ನಿವಾಸದ ಬಳಿಯ ಮೂರು ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಏಳುನೂರ ಹದಿನೇಳು ಕುಟುಂಬಗಳು ಮಾರ್ಚ್ 6ರೊಳಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ದರಾಗುವಂತೆ ಎಚ್ಚರಿಕೆ ನೀಡಲಾಗಿದೆ...

ಹೊಸ ಅಸ್ತ್ರ ಪ್ರಯೋಗಿಸಿದ ಟ್ರಂಪ್ : ಎಲ್ಲಾ ರಾಷ್ಟ್ರಗಳ ಆಮದು ಮೇಲೆ ಶೇ.10ರಷ್ಟು ಜಾಗತಿಕ ಸುಂಕ ಘೋಷಣೆ

ಎಲ್ಲಾ ದೇಶಗಳ ಆಮದುಗಳ ಮೇಲೆ ಹೊಸದಾಗಿ ಶೇಕಡ 10 ಸುಂಕ ವಿಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ಘೋಷಿಸಿದ್ದಾರೆ. ಇದಕ್ಕೂ ಕೆಲ ಗಂಟೆಗಳ ಮೊದಲು,...

ಭಾರತದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ: ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಟ್ರಂಪ್ ಹೇಳಿಕೆ

ಅಮೆರಿಕ ಸುಪ್ರೀಂ ಕೋರ್ಟ್ ಪ್ರತಿ ಸುಂಕ (Reciprocal tariffs) ನೀತಿಯನ್ನು ರದ್ದುಗೊಳಿಸಿದರೂ, ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ತಿಳಿಸಿದ್ದಾರೆ. ಶ್ವೇತಭವನದಲ್ಲಿ...

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...