Homeಮುಖಪುಟಏನಿದು ಫಿಲ್ಮ್ ಡೈರೆಕ್ಷನ್?

ಏನಿದು ಫಿಲ್ಮ್ ಡೈರೆಕ್ಷನ್?

- Advertisement -
- Advertisement -

| ರಾಜಶೇಖರ್ ಅಕ್ಕಿ |

ನಾನಾಗ ಹೈಸ್ಕೂಲಿನಲ್ಲಿದ್ದೆ, ಒಂದು ಸಿನೆಮಾ ನೋಡಿ ಬಂದ ನಂತರ ನನ್ನ ಒಬ್ಬ ಗೆಳೆಯ ಹೇಳಿದ್ದು, ‘ಪಿಚ್ಚರ್ ಅಷ್ಟು ಚೆನ್ನಾಗಿದ್ದಿಲ್ಲ, ಆದರೆ ಡರೆಕ್ಷನ್ ಮಸ್ತ್ ಇತ್ತು’. ಇದೇನಿದು? ಇದ್ಹೆಂಗೆ ಸಾಧ್ಯ? ಅಭಿನಯ ಅಂದ್ರೆ ಗೊತ್ತು, ಛಾಯಾಗ್ರಹಣ ಗೊತ್ತು, ಸಂಗೀತ ಗೊತ್ತು, ಈ ಡೈರೆಕ್ಷನ್ ಅಂದ್ರೇನು? ಸಿನೆಮಾಗಳನ್ನು ಇಷ್ಟು ಇಷ್ಟ ಪಡುವ ನನಗೆ ಈ ಡೈರೆಕ್ಷನ್ ಅನ್ನೋದೇನು ಎನ್ನೋದು ಗೊತ್ತೇ ಇಲ್ವಲ್ಲ? ನಾನು ಕಣ್ಣು ಪಿಳಿ ಪಿಳಿ ಬಿಟ್ಟು ನೋಡಿದೆ.

ಹಂಗಾದ್ರೆ ಚಲನಚಿತ್ರ ನಿರ್ದೇಶನ ಅಂದ್ರೇನು?
ಚಿತ್ರಕಥೆಯನ್ನು ತೆಗೆದುಕೊಂಡು ದೃಶ್ಯ ಮಾಧ್ಯಮಕ್ಕೆ ಇಳಿಸುವುದೇ ನಿರ್ದೇಶನ ಹಾಗೂ ಅದನ್ನು ದೃಶ್ಯ ಮಾಧ್ಯಮಕ್ಕೆ ಇಳಿಸುವ ಜವಾಬ್ದಾರಿ ಹೊತ್ತವನನ್ನು ನಿರ್ದೇಶಕ ಎನ್ನಬಹುದು. ಅಂದರೆ, ಸ್ಕ್ರಿಪ್ಟ್‍ಅನ್ನು ತೆಗೆದುಕೊಂಡು ಆಯಾ ದೃಶ್ಯಕ್ಕೆ ಬೇಕಾಗಿರುವ ಶಾಟ್‍ಗಳನ್ನು ಆಯ್ಕೆ ಮಾಡಿ ಶೂಟಿಂಗ್ ಮಾಡಿ ಸಂಕಲನ ಮಾಡಿದರೆ ಅದುವೇ ನಿರ್ದೇಶನ.

ಅಷ್ಟೇನಾ? ಹಂಗಂದ್ರೆ, ನನ್ನ ಗೆಳೆಯ ಹೇಳಿದ ಮಾತು, ಡೈರೆಕ್ಷನ್ ಮಸ್ತ್ ಇತ್ತು ಅಂದರೇನು? ನಿರ್ದೇಶನ ಮಸ್ತ್ ಆಗಲು ಏನೆಲ್ಲ ಮಾಡಬೇಕು? ಏನೆಲ್ಲ ಒಳಗೊಂಡಿರುತ್ತೆ ಈ ಚಲನಚಿತ್ರ ನಿರ್ದೇಶನ?

ಸರಳವಾಗಿ ಹೇಳಬೇಕೆಂದರೆ, ಕಥೆಯ, ಚಿತ್ರಕಥೆಯ, ಛಾಯಾಗ್ರಹಣದ, ಅಭಿನಯದ ಮತ್ತು ಸಂಕಲನದ ಆಳವಾದ ಜ್ಞಾನ ನಿರ್ದೇಶಕನಿಗಿರಬೇಕು, ಈ ಎಲ್ಲಾ ವಿಭಾಗಗಳಿಗೂ ನಿರ್ದೇಶಕನೇ ಜವಾಬ್ದಾರ. ಅಂದರೆ ನಿರ್ದೇಶಕ ಬರೀ ಸೂಪರ್‍ವೈಸರ್ ಆಗಿರಬೇಕಾ? ಅಥವಾ ಆಯಾ ದೃಶ್ಯಗಳಲ್ಲಿ ಯಾವ್ಯಾವ ಶಾಟ್ ಬೇಕು ಎಂದು ಛಾಯಾಗ್ರಾಹಕನಿಗೆ ಮತ್ತು ನಟರಿಗೆ ಹೇಳುವುದೇ ನಿರ್ದೇಶಕನ ಕೆಲಸ ಮತ್ತು ಇತರ ಕೆಲಸಗಳನ್ನೆಲ್ಲಾ ಮೇಲ್ವಿಚಾರಣೆ ಮಾಡುವುದು ಎಂದು ಅನ್ನಬಹುದಾ?

ಇರಲಿ, ನಿರ್ದೇಶಕನ ಕೆಲಸಗಳೇನು ಎಂದು ಸದ್ಯಕ್ಕೆ ನನಗೆ ತಿಳಿದಿರುವ ಕೆಲಸಗಳ ಪಟ್ಟಿ ಮಾಡುವ.
ಒಂದು, ಕಥೆಯ ಆಳ ಜ್ಞಾನ, ಕಥೆ ಹೇಗೆ ಕೆಲಸ ಮಾಡುವುದು ಎನ್ನುವುದರ ಸ್ಪಷ್ಟತೆ (ಸ್ಟ್ರಕ್ಚರ್ ಬಗ್ಗೆ ಈಗಾಗಲೇ ಬರೆದಿದ್ದೇನೆ. ಲಿಂಕ್) ಈ ಕಥೆ ಏನು? ಈ ಕಥೆ ಏಕೆ? ಈ ಕಥೆಯೇ ಏಕೆ? ಈ ಕಥೆಗೆ ಈ ನಿರ್ದೇಶಕನೇ ಏಕೆ? ಈ ಕಥೆ ಇಂದೇಕೆ? ಮೊದಲು ಈ ಮೂಲಪ್ರಶ್ನೆಗಳಿಗೆ ಸಮಾಧಾನಕರ ಉತ್ತರ ನೀಡಿದ ನಂತರ ಈ ಕಥೆ ಯಾರದ್ದು, ಕಥೆಯ ಉದ್ದೇಶ ಏನು, ಕಥಾನಾಯಕಿಯ ಉದ್ದೇಶ ಏನು, ಕಥೆ ಎಲ್ಲೆಲ್ಲಿ ತಿರುವುಗಳನ್ನು ಪಡೆದುಕೊಳ್ಳುತ್ತಿದೆ, ಚಿತ್ರಕಥೆಯಲ್ಲಿ ಬರೆದ ದೃಶ್ಯಗಳು ಕಥೆಯ ಆತ್ಮವನ್ನು ಬಿಂಬಿಸುತ್ತಿವೆಯೇ ಎನ್ನುವ ಹತ್ತಾರು ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳಬೇಕು.

ಮೇಲಿನ ಎಲ್ಲಾ ಅಂಶಗಳನ್ನು ಖಾತ್ರಿಪಡಿಸಿಕೊಂಡ ನಂತರ ಆಯಾ ದೃಶ್ಯಗಳಿಗೆ ಆಗತ್ಯವಿರುವ ಶಾಟ್‍ಗಳನ್ನು ಆಯ್ಕೆ ಮಾಡಬೇಕು. (ಇದರ ಬಗ್ಗೆ ಮುಂದಿನ ಪ್ಯಾರಾದಲ್ಲಿ). ಆ ದೃಶ್ಯಕ್ಕೆ ಆಯ್ಕೆ ಮಾಡಿದ ಶಾಟ್‍ಗಳು ಸಾಕೇ, ಇನ್ನೂ ಕಡಿಮೆ ಶಾಟ್‍ಗಳಲ್ಲಿ ಆ ದೃಶ್ಯದ ಸಾರವನ್ನು ಸೆರೆಹಿಡಿಯಬಹುದೇ ಮುಂತಾದ ಪ್ರಶ್ನೆಗಳಿಗೆ ಉತ್ತರಿಸಿ ಅದರನುಗುಣವಾಗಿ ಚಿತ್ರೀಕರಣ ಮಾಡಬೇಕು. ಈ ಹಂತದಲ್ಲಿ ನಿರ್ದೇಶಕನಿಗೆ ತಾಂತ್ರಿಕ ಅಂಶಗಳ ಸಂಪೂರ್ಣ ಅರಿವು ಇರಬೇಕಾಗುತ್ತದೆ. ಯಾವ ಕ್ಯಾಮರ ಬಳಸಬೇಕು, ಯಾವ ಲೆನ್ಸ್ ಬಳಸಬೇಕು, ಯಾವ ಕೋನ ಇಡಬೇಕು, ಶಾಟ್‍ನಲ್ಲಿ ಕ್ಯಾಮರ ಚಲನೆ ಇರಬೇಕೇ ಇತ್ಯಾದಿ ಪ್ರಶ್ನೆಗಳೊಂದಿಗೆ ಪರದೆಯಲ್ಲಿ ಕಾಣುವ ಎಲ್ಲಾ ವಸ್ತುಗಳು ಹೇಗಿರಬೇಕು ಎನ್ನುವುದನ್ನೂ ನಿರ್ದೇಶಕನೇ ನಿರ್ಧರಿಸಬೇಕು.

ಇದರೊಂದಿಗೆ ಅಭಿನಯ. ನಟರ ಹಾವಭಾವದೊಂದಿಗೆ ಎಲ್ಲಾ ನಟರ ಚಲನೆಗಳನ್ನೂ ನಿರ್ದೇಶಕನೇ ನಿರ್ಧರಿಸಬೇಕು. (ಪಾತ್ರ ಸೃಷ್ಟಿಯಲ್ಲಿ ನಿರ್ದೇಶಕನ ಪಾತ್ರದ ಬಗ್ಗೆ ಈಗಾಗಲೇ ಬರೆದಿದ್ದೇನೆ.) ಚಿತ್ರೀಕರಣ ಮುಗಿಸಿದ ನಂತರ ಅತ್ಯಂತ ಮುಖ್ಯ ಅಂಗವಾದ ಸಂಕಲನದ ಪ್ರಕ್ರಿಯೆಯಲ್ಲಿ ಸಂಕಲನಕಾರಳೊಂದಿಗೆ ಸೇರಿ ಪ್ರೇಕ್ಷಕರಿಗೆ ಕೊನೆಯದಾಗಿ ಚಿತ್ರ ಹೇಗೆ ತಲುಪುವುದು ಎನ್ನುವ ಕೆಲಸ ಮುಗಿಸಬೇಕು. (ಸಂಕಲನದ ಬಗ್ಗೆ ಇನ್ನೊಂದು ಲೇಖನ ಬೇಕು.)

ಅಂದ್ರೆ? ಇಷ್ಟೇನಾ ನಿರ್ದೇಶನ ಅಂದರೆ?
ನಿರ್ದೇಶನದ ಬಗ್ಗೆ ಹಲವಾರು ಥಿಯರಿಗಳಿವೆ. ಅಂದ್ರೆ ತಾರ್ಕಾವ್‍ಸ್ಕಿ (Andrei Tarkovsky)ಎಂಬ ರಷಿಯಾದ ನಿರ್ದೇಶಕ ಸಿನೆಮಾ ಎನ್ನುವುದು ಸಮಯದಲ್ಲಿ ಕೆತ್ತನೆ (sculpting) ಮಾಡಿದಂತೆ ಎಂದು ಹೇಳಿ ಚಲನಚಿತ್ರ ಎಂದರೆ ಏನು, ಅದರ ಜೀವ ಎಂಥದ್ದು ಎನ್ನುವುದರ ಬಗ್ಗೆ ಮಾತನಾಡುತ್ತಾರೆ. ಸ್ಟಾಕರ್, ಸೊಲಾರಿಸ್, ಮಿರರ್ ಮುಂತಾದ ಸಿನೆಮಾಗಳನ್ನು ನಿರ್ದೇಶಿಸಿದ ಇವರ ಸಿನೆಮಾಗಳಲ್ಲಿ ಆಧ್ಯಾತ್ಮ, ಕನಸು ಮುಂತಾದ ವಿಷಯಗಳನ್ನು ಸೆರೆಹಿಡಿಯುವ ಪ್ರಯತ್ನ ಕಾಣಿಸುತ್ತದೆ. ಇವರ ಚಿತ್ರಗಳಲ್ಲಿ ತುಂಬಾ ಉದ್ದದ ಶಾಟ್‍ಗಳು ಮತ್ತು ತುಂಬಾ ಕಡಿಮೆ ಕಟ್‍ಗಳು ಕಾಣಿಸುತ್ತವೆ. ಆದರೆ ಐಸೆನ್‍ಸ್ಟೈನ್ ಮತ್ತು ಡೇವಿಡ್ ಮ್ಯಾಮೆಟ್(ಇವರ ಬಗ್ಗೆ ಬರೆದಿದ್ದೇನೆ) ಮುಂತಾದವರು ಮೊಂಟಾಜ್ ಥಿಯರಿಯನ್ನು ಮುಂದಿಡುತ್ತಾರೆ. ಚಿತ್ರದಲ್ಲಿ ಮುಂದೇನಾಗುವುದು ಎನ್ನುವ ಪ್ರಶ್ನೆ ಪ್ರೇಕ್ಷಕರನ್ನು ಹಿಡಿದಿಡಬೇಕು, ಪ್ರತಿಯೊಂದು ದೃಶ್ಯವೂ ಕಥೆಯನ್ನು ಮುಂದೊಯ್ಯಬೇಕು, ಪ್ರತಿಯೊಂದು ದೃಶ್ಯದ ಉದ್ದೇಶ ಸ್ಪಷ್ಟವಾಗಿರಬೇಕು, ಸಂಭಾಷಣೆಯ ಪ್ರತಿಯೊಂದು ತುಣುಕು ಸಹ ಚಿತ್ರಕ್ಕೆ ಪೂರಕವಾಗಿ ಕೆಲಸ ಮಾಡಬೇಕು ಇತ್ಯಾದಿ.

ಅಂದರೆ, ಈ ಎರಡೂ ಥಿಯರಿಗಳು ಒಂದಕ್ಕೊಂದು ವಿರುದ್ಧದ ಥಿಯರಿಗಳಾ? ದೃಶ್ಯದ ಉದ್ದೇಶ ಸ್ಪಷ್ಟವಾದರೆ ಸಾಕಲ್ವಾ, ಅದಕ್ಕೆ ಜೀವ ತುಂಬೋದು ಅಂದರೆ ಏನು?

ಕಥೆಗಳ ಆಧಾರದ ಮೇಲೆ ಅದರ ಹಿಂದಿರಬೇಕಾದ ಥಿಯರಿ ನಿರ್ಧಾರವಾಗಬೇಕೆ? ಅಥವಾ ನಿರ್ದೇಶಕ ಒಂದೇ ಥಿಯರಿಗೆ ಬದ್ಧವಾಗಬೇಕೆ?
1999ರಲ್ಲಿ ಪೋಸ್ಟ್‍ಮೆನ್ ಇನ ದ ಮೌಂಟನ್ಸ್ ಎನ್ನುವ ಚಿತ್ರ ಬಂತು. ಅದರಲ್ಲಿಯ ಮೊದಲ ದೃಶ್ಯ; ತಂದೆ ಮಗ ಇಬ್ಬರೂ ಮಾರನೆಯ ದಿನ ಬೆಳಗ್ಗೆ ತಮ್ಮ ಪ್ರವಾಸಕ್ಕೆ ಹೊರಡಲಿದ್ದಾರೆ, ಹಾಗಾಗಿ ರಾತ್ರಿ ದೀಪದ ಬೆಳಕಿನಲ್ಲಿ ನಕ್ಷೆಗಳನ್ನು, ಇತರ ಪತ್ರಗಳನ್ನು ಪರಿಶೀಲಿಸುತ್ತಿದ್ದಾರೆ. ಇನ್ನೊಂದು ದೃಶ್ಯದಲ್ಲಿ ತಂದೆ ಮಗ ಒಂದು ಊರಿಗೆ ಬೆಳ್ಳಂಬೆಳಗ್ಗೆ ಬಂದು ಮುಟ್ಟುತ್ತಾರೆ. ಈ ದೃಶ್ಯಗಳನ್ನು ನೋಡುತ್ತಿರುವಾಗ ಒಬ್ಬ ಪ್ರೇಕ್ಷಕನನ್ನು ಸಂಪೂರ್ಣವಾಗಿ ಅಲ್ಲಿಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗುತ್ತಾನೆ ನಿರ್ದೇಶಕ ಹೋ ಜಿಯಾಂಗಿ? ಅದನ್ನು ಮಾಡಲು ಹೇಗೆ ಸಾಧ್ಯವಾಯಿತು?

ಸಿಡ್ನಿ ಲುಮೆಟ್ ಅವರ ಚಿತ್ರ ದಿ ವರ್ಡಿಕ್ಟ್ ನೋಡುವಾಗ ಅದೊಂದು ವಿದ್ಯುತ್ ಪ್ರವಹಿಸುತ್ತಿರುವ ತಂತಿ ಎಂತಲೇ ಭಾಸವಾಯಿತು. ಪ್ರತಿಯೊಂದು ದೃಶ್ಯವೂ ಜೀವಂತವಾಗಿದೆ; ಅದರದೇ ಬಿಗಿತ, ಟೆನ್ಷನ್ ಹೊಂದಿದೆ. ಆ ಬಿಗಿತ ಪ್ರೇಕ್ಷಕನನ್ನು ಒಂದುಕ್ಷಣವೂ ಬಿಡುವುದಿಲ್ಲ. ಹಿನ್ನಲೆ ಸಂಗೀತ ಇಲ್ಲದೇ ಅಷ್ಟು ಟೆನ್ಷನ್ ತಂದಿಡುತ್ತಾರೆ. ಅದನ್ನು ಹೇಗೆ ಮಾಡಲು ಸಾಧ್ಯವಾಯಿತು?

ನಾವು ಚಿಕ್ಕವರಿದ್ದಾಗ ಒಂದು ಮಾಡ್ತಿದ್ವಿ. ಯಾರೋ ಸಿನೆಮಾ ನೋಡಿ ಬಂದಕೂಡಲೇ, ಅವರನ್ನು ಸ್ಟೋರಿ ಹೇಳು ಎಂದು ಪೀಡಿಸುತ್ತಿದ್ವಿ. ಅನೇಕ ಸಲ ಅವರು ಆ ಚಿತ್ರದ ಸಂಪೂರ್ಣ ಸ್ಟೋರಿಯನ್ನು ಕಣ್ಣಿಗೆ ಕಾಣುವ ಹಾಗೆ ಹೇಳುತ್ತಿದ್ದರು. (ಮಕ್ಕಳಷ್ಟೇ ಅಲ್ಲ, ವಯಸ್ಕರೂ ಇದನ್ನು ಮಾಡುತ್ತಿದ್ದರು.) ಅಂದರೆ, ಸಿನೆಮಾ ಎಂದರೆ ಕಥೆ ಎಂದಾಯಿತಲ್ಲ?

ಫಾರೆಸ್ಟ್ ಗಂಪ್, ಕಾಸ್ಟ್ ಅವೇ ಮುಂತಾದ ಚಿತ್ರಗಳು ಎಲ್ಲರಿಗೂ ಇಷ್ಟವಾಗಿದ್ದರೂ ಆ ಚಿತ್ರಗಳ ನಿರ್ದೇಶಕ ಯಾರು ಎಂದು ತಿಳಿದುಕೊಳ್ಳುವ ಗೋಜಿಗೆ ಯಾರೂ ಹೋಗುವುದಿಲ್ಲ. ಅದೇಕೆ?

ನಿರ್ದೇಶನದ ವಿಷಯಕ್ಕೆ ಬಂದಾಗ ಇನ್ನೂ ಇಂತಹ ನೂರಾರು ಪ್ರಶ್ನೆಗಳು ಎದುರಾಗುತ್ತವೆ. ಲೇಖಕನ ತಲೆಯಲ್ಲಿ ಬಿತ್ತಿದ ಕಥೆಯೆನ್ನುವ ಬೀಜ ಮೊಳಕೆಯೊಡೆದು, ಚಿಗುರಿ, ಗಿಡವಾಗಿ, ಮರವಾಗಿ ಹೂ ಹಣ್ಣು ಕೊಡುವ ಪ್ರಕ್ರಿಯೆ ಇದು; ಬೇರೆ ಬೇರೆ ಹಂತಗಳಲ್ಲಿ ಬೇರೆ ಬೇರೆಯವರು ಪೋಷಿಸುತ್ತ ಹೋಗುತ್ತಾರೆ. ನಮಗೆ ಹಣ್ಣು ರುಚಿಕರವಾಗಿರಬೇಕು ಅಷ್ಟೇ.

ಅಂದಹಾಗೆ, ‘ಪಿಚ್ಚರ್ ಚೆನ್ನಾಗಿದ್ದಿಲ್ಲ, ಆದರೆ ಡರೆಕ್ಷನ್ ಮಸ್ತ್ ಇತ್ತು’ ಎಂದು ಹೇಳಿದ ನನ್ನ ಹೈಸ್ಕೂಲಿನ ಆ ಗೆಳೆಯ ಡಬ್ಬಾ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...