Homeಅಂತರಾಷ್ಟ್ರೀಯಗಾಝಾ - ಮದ್ಲೀನ್ | ಇಸ್ರೇಲ್‌ನಿಂದ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್‌ ಗಡೀಪಾರು

ಗಾಝಾ – ಮದ್ಲೀನ್ | ಇಸ್ರೇಲ್‌ನಿಂದ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್‌ ಗಡೀಪಾರು

- Advertisement -
- Advertisement -

ವಸಾಹತುಗಾರರು ಆಕ್ರಮಿಸಿರುವ ಪ್ಯಾಲೆಸ್ತೀನ್‌ನ ಗಾಝಾಕ್ಕೆ ಆಹಾರ, ನೀರು ಮತ್ತು ವೈದ್ಯಕೀಯ ಸಾಮಗ್ರಿಗಳೊಂದಿಗೆ ಹೊರಟಿದ್ದ ‘ಫ್ರೀಡಂ ಫ್ಲೋಟಿಲ್ಲಾ ಒಕ್ಕೂಟ (FFC)’ದ ನೆರವು ಹಡಗು ‘ಮದ್ಲೀನ್’ನ ಅನ್ನು ಇಸ್ರೇಲ್ ಅಂತಾರಾಷ್ಟ್ರೀಯ ಜಲ ಪ್ರದೇಶದಿಂದ ಅಪಹರಿಸಿತ್ತು. ಇದೀಗ ಹಡಗಿನಲ್ಲಿದ್ದ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್‌ ಅವರನ್ನು ಗಡೀಪಾರು ಮಾಡಲಾಗಿದೆ ಎಂದು ಮಂಗಳವಾರ ಅಲ್‌ಜಝೀರಾ ವರದಿ ಮಾಡಿದೆ. ಗಾಝಾ – ಮದ್ಲೀನ್

ಗ್ರೆಟಾ ಅವರನ್ನು ಗಡೀಪಾರು ಮಾಡಲಾಗಿದೆ ಎಂದು ಇಸ್ರೇಲ್ ವಿದೇಶಾಂಗ ಸಚಿವಾಲಯ ಹೇಳಿದ ನಂತರ, ಅವರು ವಿಮಾನದಲ್ಲಿ ಇರುವ ವಿಡಿಯೊವನ್ನು ಬಿಡುಗಡೆ ಮಾಡಲಾಗಿದೆ. ಮದ್ಲೀನ್‌ ಹಡಗಿನಲ್ಲಿದ್ದ 12 ಜನರಲ್ಲಿ ಗ್ರೇಟಾ ಕೂಡ ಒಬ್ಬರು, ಪ್ಯಾಲೆಸ್ತೀನ್‌ನ ಗಾಝಾದ ಮೇಲೆ ವಸಾಹತುಗಾರ ಇಸ್ರೇಲ್‌ ಹಾಕಿದ್ದ ನೌಕಾ ದಿಗ್ಬಂಧನವನ್ನು ಮುರಿಯಲು ಪ್ರಯತ್ನಿಸುವಾಗ ಅದರ ಸೇನೆ ಅವರನ್ನು ವಶಪಡಿಸಿಕೊಂಡಿತ್ತು.

ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್, ಯುರೋಪಿಯನ್ ಪಾರ್ಲಿಮೆಂಟ್‌ನ ಫ್ರೆಂಚ್ ಸದಸ್ಯೆ ರಿಮಾ ಹಸನ್ ಮತ್ತು ಅಲ್ ಜಜೀರಾ ಪತ್ರಕರ್ತ ಒಮರ್ ಫಯಾದ್ ಸೇರಿದಂತೆ ಮದ್ಲೀನ್‌ನ 12 ಸಿಬ್ಬಂದಿಯನ್ನು ಇಸ್ರೇಲ್ ಬಂಧಿಸಿತ್ತು. ಇದರ ನಂತರ ಮದ್ಲೀನ್ ಹಡಗನ್ನು ಆಕ್ರಮಿತ ಪ್ಯಾಲೆಸ್ತೀನ್‌ನ ಅಶ್ಡೋಡ್ ಬಂದರಿಗೆ ಎಳೆದೊಯ್ಯಲಾಗಿತ್ತು ಎಂದು ಅಲ್ ಜಝೀರಾ ವರದಿ ಮಾಡಿದೆ.

ಗಾಜಾದ ಮೇಲಿನ ಇಸ್ರೇಲ್‌ನ ಅಕ್ರಮ ದಿಗ್ಬಂಧನವನ್ನು ಮುರಿಯುವ ಗುರಿ ಕೂಡಾ ಹೊಂದಿದ್ದ ಈ ಹಡಗನ್ನು ವಸಾಹತುಗಾರ ಇಸ್ರೇಲಿ ಕಮಾಂಡೋಗಳು ಗಾಝಾ ತೀರದಿಂದ ಸುಮಾರು 100 ನಾಟಿಕಲ್ ಮೈಲುಗಳ (185 ಕಿಮೀ) ಅಂತರರಾಷ್ಟ್ರೀಯ ಜಲ ಪ್ರದೇಶದಿಂದ ವಶಪಡಿಸಿಕೊಂಳ್ಳಲಾಗಿತ್ತು. ಈ ವೇಳೆ ಹಡಗಿನಲ್ಲಿದ್ದ 11 ಹೋರಾಟಗಾರರು ಮತ್ತು ಪತ್ರಕರ್ತರನ್ನು ಟೆಲ್ ಅವೀವ್‌ನ ಬೆನ್ ಗುರಿಯನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಗಿತ್ತು. ಈ ವೇಳೆ ಹೇಳಿಕೆ ನೀಡಿದ್ದ ಇಸ್ರೇಲಿ ವಿದೇಶಾಂಗ ಸಚಿವಾಲಯ, ಶೀಘ್ರದಲ್ಲೇ ಅವರನ್ನು ಗಡೀಪಾರು ಮಾಡಲಾಗುತ್ತಿದೆ ಎಂದು ಹೇಳಿತ್ತು.

ಇದಕ್ಕೂ ಮೊದಲು ಫ್ರೀಡಂ ಪ್ಲೋಟಿಲ್ಲಾ ಒಕ್ಕೂಟವು, ಇಸ್ರೇಲ್ ಅಪಹರಿಸುವಾಗ ನಡೆದ ಘಟನೆಯ ವೀಡಿಯೊವನ್ನು ಬಿಡುಗಡೆ ಮಾಡಿತ್ತು. ಈ ವಿಡಿಯೊದಲ್ಲಿ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್, ಯುರೋಪಿಯನ್ ಪಾರ್ಲಿಮೆಂಟ್‌ನ ಫ್ರೆಂಚ್ ಸದಸ್ಯೆ ರಿಮಾ ಹಸನ್ ಸೇರಿದಂತೆ ಇತರ ಹೋರಾಟಗಾರರು ಕೈಗಳನ್ನು ಮೇಲಕ್ಕೆತ್ತಿರುವ ದೃಶ್ಯಗಳು ಮತ್ತು ಇಸ್ರೇಲಿ ಪಡೆಗಳು ಹಡಗನ್ನು ಹತ್ತಿ ಅವರನ್ನು “ಅಪಹರಿಸಿದ” ದೃಶ್ಯವನ್ನು ತೋರಿಸಲಾಗಿದೆ.

ಹೋರಾಟಗಾರರನ್ನು ಪ್ರತಿನಿಧಿಸುವ ಪ್ಯಾಲೆಸ್ತೀನಿಯನ್ ಕಾನೂನು ಕೇಂದ್ರವಾದ ಅದಾಲಾ ಇದಕ್ಕೆ ಪ್ರತಿಕ್ರಿಯಿಸಿದ್ದು, ಗಡೀಪಾರು ಮಾಡುವ ಮೊದಲು ಅವರನ್ನು ಬಂಧನ ಕೇಂದ್ರದಲ್ಲಿ ಇರಿಸಲಾಗುವುದು ಎಂದು ಹೇಳಿದ್ದಾರೆ.

ಅಂತರರಾಷ್ಟ್ರೀಯ ಜಲ ಪ್ರದೇಶದಲ್ಲಿದ್ದ ಹಡಗನ್ನು ಸ್ವಾಧೀನಪಡಿಸಿಕೊಳ್ಳಲು ಇಸ್ರೇಲ್‌ಗೆ “ಯಾವುದೇ ಕಾನೂನು ಅಧಿಕಾರ” ಇಲ್ಲ ಎಂದು ಅದು ಹೇಳಿದೆ. ಅವರು ಹೊರಟಿದ್ದು ಇಸ್ರೇಲ್‌ಗೆ ಅಲ್ಲ, ಬದಲಾಗಿ “ಪ್ಯಾಲೆಸ್ತೀನ್ ದೇಶದ ಪ್ರಾದೇಶಿಕ ಜಲಪ್ರದೇಶ”ಕ್ಕೆ ಹೋಗುತ್ತಿದ್ದ ಹಡಗು ಅದಾಗಿತ್ತು” ಎಂದು ಅದಾಲಾ ಹೇಳಿತ್ತು. 12 ನಿರಾಯುಧ ಹೋರಾಟಗಾರರ ಬಂಧನಗಳು ಅಂತರರಾಷ್ಟ್ರೀಯ ಕಾನೂನಿನ ಗಂಭೀರ ಉಲ್ಲಂಘನೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

ಸೋಮವಾರ ಮುಂಜಾನೆ ಬಂಧಿಸಲ್ಪಟ್ಟಾಗಿನಿಂದ ಹೋರಾಟಗಾರರೊಂದಿಗೆ ಯಾವುದೇ ಸಂಪರ್ಕವಿಲ್ಲ ಎಂದು FFC ಸಂಘಟಕರಾದ ಹುವೈದಾ ಅರಾಫ್ ಅಲ್ ಜಝೀರಾಗೆ ತಿಳಿಸಿದ್ದಾರೆ. “ಇಂದು ರಾತ್ರಿ – ಸಾಧ್ಯವಾದಷ್ಟು ಬೇಗ ಅವರನ್ನು ಸಂಪರ್ಕಿಸಲು ಒತ್ತಾಯಿಸಲು ನಾವು ವಕೀಲರನ್ನು ಸಿದ್ಧಪಡಿಸಿದ್ದೇವೆ” ಎಂದು ಅವರು ಹೇಳಿದ್ದಾರೆ.

ಮದ್ಲೀನ್ ಯುನೈಟೆಡ್ ಕಿಂಗ್‌ಡಮ್ ಧ್ವಜದ ಅಡಿಯಲ್ಲಿ ನೌಕಾಯಾನ ಮಾಡುತ್ತಿದ್ದಾಗ, ಇಸ್ರೇಲಿ ಕಮಾಂಡೋಗಳು ಅದನ್ನು ಬಲವಂತವಾಗಿ ವಶಪಡಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

“ಇಸ್ರೇಲ್ ಸೇನೆ ಅಂತರರಾಷ್ಟ್ರೀಯ ಜಲ ಪ್ರದೇಶಕ್ಕೆ ಹೋಗಿ ಸಾರ್ವಭೌಮ ಯುಕೆ ಹಡಗನ್ನು ಆಕ್ರಮಿಸಿತು. ಇದು ಸ್ಪಷ್ಟವಾಗಿ ಕಾನೂನುಬಾಹಿರವಾಗಿದೆ. ಯುನೈಟೆಡ್ ಕಿಂಗ್‌ಡಮ್‌ ಈ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ. ಅವರಿಂದ ನಾವು ಖಂಡನೆಯನ್ನು ನಾವು ನಿರೀಕ್ಷಿಸುತ್ತೇವೆ” ಎಂದು ಅವರು ಹೇಳಿದ್ದಾರೆ.

ಗಾಝಾದ ಆರೋಗ್ಯ ಸಚಿವಾಲಯದ ಪ್ರಕಾರ, ಗಾಝಾದ ಮೇಲೆ ಇಸ್ರೇಲ್ ನಡೆಸುತ್ತಿರುವ ಹತ್ಯಾಕಾಂಡದಲ್ಲಿ ಕನಿಷ್ಠ 54,927 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಮತ್ತು 126,615 ಜನರು ಗಾಯಗೊಂಡಿದ್ದಾರೆ. ಅಕ್ಟೋಬರ್ 7, 2023 ರಂದು ಹಮಾಸ್ ನೇತೃತ್ವದ ದಾಳಿಯ ಸಮಯದಲ್ಲಿ ಇಸ್ರೇಲ್‌ನಲ್ಲಿ ಅಂದಾಜು 1,139 ಜನರು ಸಾವನ್ನಪ್ಪಿದ್ದಾರೆ ಮತ್ತು 200 ಕ್ಕೂ ಹೆಚ್ಚು ಜನರನ್ನು ಸೆರೆಹಿಡಿಯಲಾಗಿದೆ.

ಈ ನಡುವೆ, ಗಾಝಾದ ದಕ್ಷಿಣ ರಫಾದಲ್ಲಿರುವ ಅಮೆರಿಕ ಬೆಂಬಲಿತ ಗಾಜಾ ಹ್ಯುಮಾನಿಟೇರಿಯನ್ ಫೌಂಡೇಶನ್‌ನ (GHF) ನೆರವು ಕೇಂದ್ರದ ಬಳಿ ಕನಿಷ್ಠ 14 ಜನರು ಸೇರಿದಂತೆ ಗಾಝಾದಲ್ಲಿ ಕನಿಷ್ಠ 60 ಪ್ಯಾಲೆಸ್ತೀನಿಯನ್ನರನ್ನು ಸೋಮವಾರ ಇಸ್ರೇಲ್ ಪಡೆಗಳು ಕೊಂದಿವೆ ಎಂದು ವರದಿಯಾಗಿವೆ.

ವಸಾಹತುಗಾರರು ಆಕ್ರಮಿಸಿರುವ ಪ್ಯಾಲೆಸ್ತೀನ್‌ನ ಗಾಝಾಕ್ಕೆ ಆಹಾರ, ನೀರು ಮತ್ತು ವೈದ್ಯಕೀಯ ಸಾಮಗ್ರಿಗಳೊಂದಿಗೆ ‘ಫ್ರೀಡಂ ಫ್ಲೋಟಿಲ್ಲಾ ಒಕ್ಕೂಟ’ದ ನೆರವು ಹಡಗು ‘ಮದ್ಲೀನ್’ ಇಟಲಿಯ ಸಿಸಿಲಿಯಿಂದ ಜೂನ್ 1ರ ಭಾನುವಾರ ಹೊರಟಿತ್ತು.  ಹಡಗಿನಲ್ಲಿ ಸ್ವೀಡಿಷ್‌ ಮೂಲದ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್ ಅವರೊಂದಿಗೆ ಜರ್ಮನಿಯ ಯಾಸೆಮಿನ್ ಅಕಾರ್, ಬ್ರೆಜಿಲ್‌ನ ಥಿಯಾಗೊ ಅವಿಲಾ, ಫ್ರಾನ್ಸ್‌ನ ಒಮರ್ ಫಯಾದ್, ರಿಮಾ ಹಸನ್, ಬ್ಯಾಪ್ಟಿಸ್ಟ್ ಆಂಡ್ರೆ, ಪ್ಯಾಸ್ಕಲ್ ಮೌರಿಯರಾಸ್, ಯಾನಿಸ್ ಮಹಮ್ದಿ, ಟರ್ಕಿಯ ಶುವಾಯ್ಬ್ ಒರ್ಡು, ರೆವಾ ವಿಯಾರ್ಡ್, ಸ್ಪೇನ್‌ನ ಸೆರ್ಗಿಯೊ ಟೊರಿಬಿಯೊ ಮತ್ತು ನೆದರ್ಲ್ಯಾಂಡ್ಸ್‌ನ ಮಾರ್ಕೊ ವ್ಯಾನ್ ರೆನ್ನೆಸ್ ಹಡಗಿನಲ್ಲಿ ಇದ್ದರು.

ಹಡಗಿನಲ್ಲಿ ಬೇಬಿ ಫಾರ್ಮುಲಾ, ನ್ಯಾಪ್‌ಕಿನ್, ಹಿಟ್ಟು, ಅಕ್ಕಿ, ನೈರ್ಮಲ್ಯ ಉತ್ಪನ್ನಗಳು, ನೀರಿನ ಫಿಲ್ಟರ್‌ಗಳು ಮತ್ತು ವೈದ್ಯಕೀಯ ಸರಬರಾಜುಗಳು ಇದ್ದವು. ಜೊತೆಗೆ ಈ ಹಡಗು ಗಾಝಾದ ಮೇಲೆ ವಸಾಹತುಗಾರ ಇಸ್ರೇಲ್‌ನ ಎರಡು ದಶಕಗಳ ನೌಕಾ ದಿಗ್ಬಂಧನವನ್ನು ಮುರಿಯುವ ಉದ್ದೇಶ ಕೂಡಾ ಹೊಂದಿತ್ತು. ಹಡಗನ್ನು ಫ್ರೀಡಂ ಫ್ಲೋಟಿಲ್ಲಾ ಒಕ್ಕೂಟವು ಗಾಝಾಗೆ ಅಂತರರಾಷ್ಟ್ರೀಯ ಪ್ರಯತ್ನದ ಭಾಗವಾಗಿ ಆಯೋಜಿಸಿತ್ತು.

ಈ ಹಿಂದೆ ಕೂಡಾ ಫ್ರೀಡಂ ಫ್ರೋಟಿಲ್ಲಾ ಒಕ್ಕೂಟದ ನೆರವಿನೊಂದಿಗೆ ಹೊರಟಿದ್ದ ಹಡಗಿನ ಮೇಲೆ ಮೆಡಿಟರೇನಿಯನ್‌ ಸಮುದ್ರದಲ್ಲಿ ಡ್ರೋನ್ ದಾಳಿಗಳಾಗಿದ್ದವು. ಹಾಗಾಗಿ, ಈ ಬಾರಿ ಟ್ರ್ಯಾಕರ್‌ನೊಂದಿಗೆ ತನ್ನ ‘ಮದ್ಲೀನ್’ ಹಡಗನ್ನು ಕಳುಹಿಸಿತ್ತು.

“2014 ರಲ್ಲಿ ಗಾಝಾದ ಮೊದಲ ಮತ್ತು ಏಕೈಕ ಮೀನುಗಾರ ಮಹಿಳೆಯಾದ ‘ಮದ್ಲೀನ್’ ಅವರ ಹೆಸರನ್ನು ಹಡಗಿಗೆ ಇಡಲಾಗಿದ್ದು, ಪ್ಯಾಲೆಸ್ತೀನಿ ಹೋರಾಟದ ಅವಿಶ್ರಾಂತ ಮನೋಭಾವ ಮತ್ತು ಇಸ್ರೇಲ್‌ನ ಸಾಮೂಹಿಕ ಶಿಕ್ಷೆ ಮತ್ತು ಉದ್ದೇಶಪೂರ್ವಕ ಹಸಿವು ನೀತಿಗಳ ಹೇರಿಕೆಗಳ ವಿರುದ್ಧ ಬೆಳೆಯುತ್ತಿರುವ ಜಾಗತಿಕ ಪ್ರತಿರೋಧವನ್ನು ಇದು ಸಂಕೇತಿಸುತ್ತದೆ” ಎಂದು ಫ್ರೀಡಂ ಫ್ಲೋಟಿಲ್ಲಾ ಒಕ್ಕೂಟ ಹೇಳಿತ್ತು.

ಗಾಝಾ ಪ್ರದೇಶದ ಸುಮಾರು 20 ಲಕ್ಷ ನಿವಾಸಿಗಳು ಹಸಿವನ್ನು ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಸಹ ಸಂಸ್ಥೆಗಳು ಮತ್ತು ಪ್ರಮುಖ ಮಾನವೀಯ ಸಂಸ್ಥೆಗಳು ಗಾಝಾದಲ್ಲಿನ ಭೀಕರ ಪರಿಸ್ಥಿತಿಗಳನ್ನು ವರದಿ ಮಾಡುತ್ತಲೇ ಇವೆ. ವಸಾಹತುಗಾರ ಇಸ್ರೇಲಿ ನಿರ್ಬಂಧಗಳು, ನಾಗರಿಕ ಸುವ್ಯವಸ್ಥೆಯಲ್ಲಿನ ಕುಸಿತ ಮತ್ತು ವ್ಯಾಪಕ ಲೂಟಿಯು ನೆರವು ವಿತರಣೆಗೆ ಪ್ರಾಥಮಿಕ ಅಡೆತಡೆಗಳಾಗಿ ಅವರು ಉಲ್ಲೇಖಿಸಿದ್ದಾರೆ.ಗಾಝಾ – ಮದ್ಲೀನ್

ಇಲ್ಲಿ ಕ್ಲಿಕ್ ಮಾಡಿ

ಇದನ್ನೂಓದಿ:  #AllEyesOnDeck | ಗಾಝಾಗೆ ಹೊರಟ ‘ಮದ್ಲೀನ್‌’ಗೆ 4ನೇ ಬೆಳಗು; ಗ್ರೀಸ್‌ ತೀರದ ಬಳಿ ಡ್ರೋನ್ ಹಾರಾಟ

#AllEyesOnDeck | ಗಾಝಾಗೆ ಹೊರಟ ‘ಮದ್ಲೀನ್‌’ಗೆ 4ನೇ ಬೆಳಗು; ಗ್ರೀಸ್‌ ತೀರದ ಬಳಿ ಡ್ರೋನ್ ಹಾರಾಟ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...