Homeಮುಖಪುಟಸಾರ್ವಜನಿಕರ ಆಕ್ರೋಶಕ್ಕೆ ಮಣಿದು ಮಲಯಾಳಂ ನಿಷೇಧದ ಆದೇಶ ಹಿಂಪಡೆದ ದೆಹಲಿಯ ಆಸ್ಪತ್ರೆ

ಸಾರ್ವಜನಿಕರ ಆಕ್ರೋಶಕ್ಕೆ ಮಣಿದು ಮಲಯಾಳಂ ನಿಷೇಧದ ಆದೇಶ ಹಿಂಪಡೆದ ದೆಹಲಿಯ ಆಸ್ಪತ್ರೆ

- Advertisement -
- Advertisement -

ನರ್ಸ್‌ಗಳು ಆಸ್ಪತ್ರೆಯ ಆವರಣದಲ್ಲಿ ಮಲಯಾಳಂ ಭಾಷೆಯಲ್ಲಿ ಮಾತನಾಡುವಂತಿಲ್ಲ ಎಂದು ಆದೇಶ ಹೊರಡಿಸಿದ್ದ ದೆಹಲಿಯ ಗೋವಿಂದ್‌ ವಲ್ಲಭ ಪಂತ್‌ ಇನ್ಸ್‌ಟಿಟ್ಯೂಟ್‌ (GIPMER ) ಆಸ್ಪತ್ರೆ ಈಗ ತನ್ನ ಆದೇಶವನ್ನು ಹಿಂಪಡೆದಿದೆ. ಶನಿವಾರ ಜೂನ್‌ 5, 2021 ರಂದು ಹೊರಡಿಸಿದ್ದ ಸರ್ಕ್ಯುಲರ್‌ ಅನ್ನು ಇಂದು ಭಾನುವಾರ ಅಂದರೆ ಜೂನ್‌ 6, 2021 ರ ಸಂಜೆ ಆಸ್ಪತ್ರೆಯ ಆಡಳಿತ ಮಂಡಳಿ ಅಧಿಕೃತವಾಗಿ ಹಿಂಪಡೆದಿದೆ.

ದೆಹಲಿಯ ಆರೋಗ್ಯ ಇಲಾಖೆ ಕೂಡ ತನ್ನ ಅಧೀನ ಆಸ್ಪತ್ರೆ GIPMER ಗೆ ಮಲಯಾಳಂ ನಿಷೇಧದ ಸುತ್ತೋಲೆಯ ಕುರಿತು ಸ್ಪಷ್ಟನೆ ಕೇಳಿ ಮೆಮೊ ಜಾರಿ ಮಾಡಿತ್ತು. ಸರ್ಕಾರದ ಮೆಮೊ ಬೆನ್ನಲ್ಲೇ ಗೋವಿಂದ ವಲ್ಲಭ ಪಂತ್‌ ಆಸ್ಪತ್ರೆ ತನ್ನ ಆದೇಶವನ್ನು ಹಿಂಪಡೆದಿದ್ದು ಇದು ಆಡಳಿತ ಮಂಡಳಿಯ ಗಮನಕ್ಕೆ ಬರದೆ ನಡೆದಿರುವ ಘಟನೆ ಎಂದು ಸ್ಪಷ್ಟನೆಯನ್ನು ಸಹ ನೀಡಿದೆ. ನರ್ಸಿಂಗ್‌ ವಿಭಾಗದ ಮುಖ್ಯಸ್ಥರು ಹೊರಡಿಸಿರುವ ಆದೇಶವಿದು, ಆಡಳಿತ ಮಂಡಳಿ ಮತ್ತು GIPMER ಆಸ್ಪತ್ರೆ ಭಾಷೆ, ಪ್ರದೇಶ, ಧರ್ಮಗಳ ಆಧಾರದಲ್ಲಿ ಯಾವ ತಾರತಮ್ಯವನ್ನು ಮಾಡುವುದಿಲ್ಲ ಎಂದು ಹೇಳಿದೆ.

GIPMER ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಕೇರಳದ ನರ್ಸ್‌ಗಳಿಗೆ ಮಲಯಾಳಂ ಬದಲು ಹಿಂದಿಯಲ್ಲಿ ಮಾತನಾಡಲು ಆದೇಶಿಸಲಾಗಿದೆ ಎಂಬ ಸುದ್ದಿ ಇಂದು ದೇಶಾದ್ಯಂತ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ರಾಹುಲ್‌ ಗಾಂಧಿ, ಶಶಿ ತರೂರ್‌, ಥಾಮಸ್‌ ಐಸಾಕ್‌ ಸೇರಿದಂತೆ ವಿವಿಧ ರಾಜಕೀಯ ಪಕ್ಷದ ನಾಯಕರು ಮತ್ತು ಗಣ್ಯರು ಹಿಂದಿ ಹೇರಿಕೆಯ ವಿರುದ್ಧ ಧ್ವನಿ ಎತ್ತಿದ್ದರು.

ಸಾರ್ವಜನಿಕರ ಆಕ್ರೋಶ ಮತ್ತು ನಾಯಕರ ಒತ್ತಡಕ್ಕೆ ಮಣಿದ ದೆಹಲಿಯ ಗೋವಿಂದ್‌ ವಲ್ಲಭ ಪಂತ್‌ ಇನ್ಸ್‌ಟಿಟ್ಯೂಟ್‌ (GIPMER ) ಆಸ್ಪತ್ರೆ   ಆಡಳಿತ ಮಂಡಳಿ ಶನಿವಾರ ಜೂನ್‌ 5 ರ ಆದೇಶವನ್ನು ಹಿಂಪಡೆದಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...