Homeಮುಖಪುಟಜಾಗತಿಕ ಹೂಡಿಕೆದಾರರ ಸಮಾವೇಶ: ರಾಜ್ಯ ಸರ್ಕಾರದ ಹಸಿಹಸಿ ಸುಳ್ಳುಗಳು ಮತ್ತು ವಾಸ್ತವಗಳು- ಶಿವಸುಂದರ್‌ ವಿಶ್ಲೇಷಣೆ

ಜಾಗತಿಕ ಹೂಡಿಕೆದಾರರ ಸಮಾವೇಶ: ರಾಜ್ಯ ಸರ್ಕಾರದ ಹಸಿಹಸಿ ಸುಳ್ಳುಗಳು ಮತ್ತು ವಾಸ್ತವಗಳು- ಶಿವಸುಂದರ್‌ ವಿಶ್ಲೇಷಣೆ

ಕರ್ನಾಟಕ ಪಡೆದ ಹೂಡಿಕೆ ಭರವಸೆ 10 ಲಕ್ಷ ಕೋಟಿ ರೂ.ಗಳೋ? ಕೇವಲ 1.5 ಲಕ್ಷ ಕೋಟಿ ರೂ.ಗಳೋ?

- Advertisement -
- Advertisement -
  1. GIM- ಜಾಗತಿಕ ಹೂಡಿಕೆದಾರರ ಸಮ್ಮೇಳನದಿಂದ- ಕರ್ನಾಟಕ ಪಡೆದ ಹೂಡಿಕೆ ಭರವಸೆ 10 ಲಕ್ಷ ಕೋಟಿ ರೂ.ಗಳೋ? ಅಥವಾ ಕೇವಲ 1.5 ಲಕ್ಷ ಕೋಟಿ ರೂ.ಗಳೋ?
  2. GIMನಿಂದ ಸೃಷ್ಟಿಯಾಗುವ ಉದ್ಯೋಗಗಳು 6 ಲಕ್ಷವೋ? ಅಥವಾ ಕೆಲವೇ ಕೆಲ ಸಾವಿರವೋ? GIM ಭರವಸೆಗಳು ವಾಸ್ತವವಾಗಿ ಬದಲಾಗುವುದು ಶೇ. 80 ರಷ್ಟೋ ಅಥವಾ ಶೇ. 10ರಷ್ಟೊ?

ನಿನ್ನೆ ತಾನೇ ಮುಕ್ತಾಯವಾದ GIM (ಜಾಗತಿಕ ಹೂಡಿಕೆದಾರರ ಸಮ್ಮೇಳನ)ದಲ್ಲಿ ಹೂಡಿಕೆದಾರರು ಕರ್ನಾಟಕದಲ್ಲಿ 10 ಲಕ್ಷ ಕೋಟಿ ಹೂಡಿಕೆಯ ಭರವಸೆಯನ್ನು ನೀಡಿದ್ದಾರೆ ಎಂದು ಘೋಷಿಸಿಕೊಂಡಿದೆ. ಈ ಭರವಸೆಗಳಲ್ಲಿ ಶೇ. 80ರಷ್ಟು ವಾಸ್ತವವಾಗುತ್ತದೆ ಎಂದೂ ಇದರಿಂದಾಗಿ 5 ಲಕ್ಷ ಉದ್ಯೋಗಗಳ ಬದಲಿಗೆ 6 ಲಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತಿವೆ ಎಂದು ಬಿಜೆಪಿ ಹೇಳುತ್ತಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಅದನ್ನೇ ಕಿಂಚಿತ್ತೂ ಪರಿಶೀಲಿಸದೆ ಮಾಧ್ಯಮಗಳು ಪ್ರಕಟಿಸುತ್ತಿವೆ. ಆದರೆ ಅಂಕಿ ಸಂಖ್ಯೆಗಳನ್ನು ಮತ್ತು ಭಾರತ ಹಾಗೂ ಜಗತ್ತಿನಲ್ಲಿರುವ ಹೂಡಿಕೆಯ ವಾತಾವರಣವನ್ನು ಗಮನಿಸಿದರೆ ಅವೆಲ್ಲಾ ಎಷ್ಟು ಸುಳ್ಳು ಎಂಬುದು ಗೊತ್ತಾಗುತ್ತದೆ.

ಸುಳ್ಳು- 1

ಹೇಳಿಕೆ – GIMನಲ್ಲಿ ನೀಡಲಾಗಿರುವ ಹೂಡಿಕೆಯ ಭರವಸೆ 10 ಲಕ್ಷ ಕೋಟಿ ರೂ.

ವಾಸ್ತವ- GIMನಲ್ಲಿ ನೀಡಲಾಗಿರುವ ಹೂಡಿಕೆಯ ಭರವಸೆ ಕೇವಲ 1.5 ಲಕ್ಷ ಕೋಟಿ ರೂ.

ಮಂತ್ರಿ ಮುರುಗೇಶ್ ನಿರಾಣಿಯವರೇ ನೀಡಿರುವ ಹೇಳಿಕೆಯ ಪ್ರಕಾರ 10 ಲಕ್ಷ ಕೋಟಿ ಭರವಸೆ ಬಂದಿರುವುದು GIM -ಜಾಗತಿಕ ಹೂಡಿಕೆದಾರರ ಸಮ್ಮೇಳನದಿಂದ ಅಲ್ಲ.

ಬದಲಿಗೆ GIMಗೆ ಮುಂಚೆ ಈ ವರ್ಷದ ಜನವರಿಯಿಂದ GIMವರೆಗೆ ಹೂಡಿಕೆದಾರರು ಕರ್ನಾಟಕದಲ್ಲಿ ಹೂಡಿಕೆ ಮಾಡುವುದಾಗಿ ನೀಡಿರುವ ಭರವಸೆ 8,24,784 ಕೋಟಿ ರೂ.ಗಳು. GIM ಸಮ್ಮೇಳನದಲ್ಲಿ ನೀಡಲಾದ ಭರವಸೆ ಕೇವಲ 1,57,000 ಕೋಟಿ ರೂ.ಹಾಗೂ GIMನಲ್ಲಿ ಹೊಸದಾಗಿ ಎರಡೇ ಎರಡು ಹೊಸ ಭರವಸೆಗಳನ್ನು ಮಾತ್ರ ನೀಡಲಾಗಿದೆ.

ಹಳೆಯ ಹಾಗೂ ಹೊಸ ಭರವಸೆಗಳೆನ್ನೆಲ್ಲಾ ಒಟ್ಟು ಸೇರಿಸಿ ಬಿಜೆಪಿ ಸರ್ಕಾರ GIMನಿಂದ 9.81 ಲಕ್ಷ ಕೋಟಿ ರೂ. ಬಂಡವಾಳದ ಭರವಸೆ ಹರಿದು ಬಂದಿದೆ ಎಂದು ಹಸಿ ಹಸಿ ಸುಳ್ಳು ಹೇಳುತ್ತಿದೆ. ಮಾಧ್ಯಮಗಳು ಕಣ್ಣು ಮುಚ್ಚಿಕೊಂಡು ಅದನ್ನೇ ಪ್ರಕಟಿಸುತ್ತಿವೆ.

ಸರ್ಕಾರದ ಅಂಕಿಅಂಶಗಳ ವಿವರಗಳಿಗೆ ‘ದಿ ಹಿಂದೂ’ ಪತ್ರಿಕೆಯಲ್ಲಿ ಪ್ರಕಟವಾಗಿರುವ ಈ ಕೋಷ್ಟಕವನ್ನು ನೋಡಿ: (ಲಿಂಕ್‌ ‘ಕ್ಲಿಕ್’ ಮಾಡಿ)

ಆದರೆ ಬಿಜೆಪಿ ಸರ್ಕಾರ GIM ನಿಂದಲೇ 5 ಲಕ್ಷ ಕೋಟಿ ಹೆಚ್ಚುವರಿ ಬಂಡವಾಳ ನಿರೀಕ್ಷಿಸಿತ್ತು. ಅಂದರೆ ಅವರ ನಿರೀಕ್ಷೆಯ ಶೇ. 25 ರಷ್ಟು ಭರವಸೆಗಳು ಕೂಡ GIMನಿಂದ ಬಂದಿಲ್ಲ. ಹಾಗಿದ್ದಲ್ಲಿ ಇದೊಂದು ಯಶಸ್ವಿ ಸಮ್ಮೇಳನ ಎಂದು ಬಿಜೆಪಿ ಹೇಳುವುದು, ಅದನ್ನೇ ಮಾಧ್ಯಮಗಳು ಬರೆಯುವುದು ಎಷ್ಟು ಹಾಸ್ಯಾಸ್ಪದವಾಗಿದೆಯಲ್ಲವೇ?

ಸುಳ್ಳು-2

ಹೇಳಿಕೆ- GIMನಲ್ಲಿ ಹೂಡಿಕೆದಾರರು ನೀಡುವ ಭರವಸೆಗಳಲ್ಲಿ ಈ ಬಾರಿ ಶೇ. 80 conversion ಆಗಿ ವಾಸ್ತವಕ್ಕೆ ಬರಲಿದೆ.

ವಾಸ್ತವ: ಈ ಬಾರಿಯ GIMನಲ್ಲಿ ನೀಡಲಾದ ಭರವಸೆಗಳಲ್ಲಿ ಶೇ. 10 ರಷ್ಟು conversion ಆದರೆ ಹೆಚ್ಚು.

ಉದಾಹರಣೆಗೆ ಸರ್ಕಾರವೇ ನೀಡಿರುವ ಅಂಕಿಅಂಶಗಳ ಪ್ರಕಾರ:

– 2010ರಲ್ಲಿ ಯಡಿಯೂರಪ್ಪನವರ ಕಾಲದಲ್ಲಿ 3.94 ಲಕ್ಷ ಕೋಟಿಗೆ MoU ಆಯಿತೆಂದು ಬಿಜೆಪಿ ಕೊಚ್ಚಿಕೊಂಡರೂ ವಾಸ್ತವಕ್ಕೆ ಬಂದದ್ದು ಶೇ. 14 ಕ್ಕಿಂತ ಕಡಿಮೆ. ಅವೂ ಜಿಮ್‌ ಇಂದ ಬಂದವಲ್ಲ.

-2012ರಲ್ಲಿ ನಡೆದ GIMನಲ್ಲಿ 6.77 ಲಕ್ಷ ಕೋಟಿ MoUಗಳಾದರೂ ವಾಸ್ತವಕ್ಕೆ ಬಂದದ್ದು ಶೇ. 8ಕ್ಕಿಂತ ಕಡಿಮೆ

– 2016 ರಲ್ಲಿ 3.05 ಲಕ್ಷ ಕೋಟಿಗೆ MoU ಆದರೂ ವಾಸ್ತವಕ್ಕೆ ಬಂದದ್ದು ಶೇ. 15 ಕ್ಕಿಂತ ಕಡಿಮೆ.

GIMಗಳಲ್ಲಿ ಹೂಡಿಕೆದಾರರು ಘೋಷಣೆ ಮಾಡಿದ ಮೇಲೆ ಅದರ ಬಗ್ಗೆ ಸರ್ಕಾರ ಅವರ ಜೊತೆ MoU ಮಾಡಿಕೊಳ್ಳುವುದು ಮೊದಲನೇ ಹಂತ. ಅವುಗಳಿಗೆ ಸರ್ಕಾರದ ಉನ್ನತ ಸಮಿತಿಯು ಕಾನೂನಾತ್ಮಕ ಅನುಮೋದನೆ ಪಡೆಯುವುದು (Approval) ಎರಡನೇ ಹಂತ. ಇವೆರಡು ಹಂತ ದಾಟಲು 5-6 ತಿಂಗಳುಗಳು ಬೇಕು. ಆದರೂ ಇವೆರೆಡೂ ಸರ್ಕಾರಕ್ಕೆ, ಸುಳ್ಳು ಹೇಳುವವರಿಗೆ ಸುಲಭದ ಹಂತಗಳೇ. ಮೂರನೇ ಹಂತ ಜಮೀನು, ಸೈಟು, ರಿಯಾಯತಿ ಒಪ್ಪಂದ. ಅದಾದ ನಂತರ ನಾಲ್ಕನೇ ಹಂತ. ಅಲ್ಲಿ ಹಂತ ಹಂತದ ಹೂಡಿಕೆ, ನಿರ್ಮಾಣ ಮತ್ತು ಉತ್ಪಾದನೆ. ಈ ಕೊನೆ ಎರಡು ಹಂತಗಳ ತನಕ ಶೇ. 80 ರಷ್ಟು MoUಗಳು ಬರುವುದೇ ಇಲ್ಲ. ಏಕೆಂದರೆ, GIMನಲ್ಲಿ ಹೂಡಿಕೆ ಭರವಸೆ ನೀಡುವ ಬಂಡವಾಳಿಗರು ಹೂಡಿಕೆ ಮಾಡುವುದು ಅವರ ಲಾಭ ಖಾತರಿಯಾಗಿದ್ದರೆ ಮತ್ತು ಲಾಭದ ದರ ಹೆಚ್ಚಿದ್ದರೆ ಮಾತ್ರ. ಜಗತ್ತಿನ ಇತರೆಡೆಗಳಲ್ಲಿ ಇದಕ್ಕಿಂತ ಹೆಚ್ಚು ಲಾಭದ ಮತ್ತು ಕಾನೂನಿನ ತೊಡಕುಗಳು ಇಲ್ಲವಾದರೆ ಇಲ್ಲಿ ಹೂಡಿಕೆ ಮಾಡುವ ಭರವಸೆ ನೀಡಿದ್ದರೂ ಬೇರೆಡೆಗೆ ಹಾರುತ್ತವೆ.

ಅದಲ್ಲದೆ, ಇದೀಗ ಕೋವಿಡ್ ನಂತರದಲ್ಲಿ ಜಗತ್ತಿನಾದ್ಯಂತ ಆರ್ಥಿಕ ಹಿಂಜರಿತದ (Recession) ವಾತಾವರಣವಿದೆ. ದೇಶಿಯ ಮಾರುಕಟ್ಟೆಯಲ್ಲೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಬೇಡಿಕೆಯ ಕುಸಿತವಿದೆ. ಏಕೆಂದರೆ ಜನರಲ್ಲಿ ಕೊಳ್ಳುವ ಶಕ್ತಿಯಿಲ್ಲ.

IMF ನೀಡಿರುವ ಮುನ್ಸೂಚನೆಯ ಪ್ರಕಾರ ಇನ್ನು ಎರಡು ಮೂರು ವರ್ಷಗಳು ಭಾರತವನ್ನೂ ಒಳಗೊಂಡಂತೆ ಎಲ್ಲಾ ದೇಶಗಳಲ್ಲೂ ಬೇಡಿಕೆಯ ಕುಸಿತ ಮತ್ತು ಅದರಿಂದಾಗಿ ಆರ್ಥಿಕ ಅನಾರೋಗ್ಯವಿರುತ್ತದೆ. ಅರ್ಥಾತ್ ಹೂಡಿಕೆಯ ಮೇಲೆ ಲಾಭವು ಖಾತರಿಯಲ್ಲ.

ಹೀಗಾಗಿ ಕೇವಲ ಲಾಭದ ದುರಾಸೆ ಮಾತ್ರ ಇರುವ ಈ ಹೂಡಿಕೆದಾರರು ಎಲ್ಲಿಯೂ ಉತ್ಸಾಹದಿಂದ ಹೂಡಿಕೆ ಮಾಡುತ್ತಿಲ್ಲ. ಭಾರತದಲ್ಲಂತೂ ಮೊನ್ನೆ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಸರ್ಕಾರವು ಎಷ್ಟೆಲ್ಲಾ ಉತ್ತೇಜನ ನೀಡಿದರೂ (PLI- Production Linked Incentives)ನಮ್ಮ ದೇಶದ ಬಂಡವಾಳಿಗರು ಹೂಡಿಕೆ ಮಾಡುತ್ತಿಲ್ಲ ಎಂದು ಆಕ್ಷೇಪಿಸಿದ್ದಾರೆ.

ಈ ನಿರುತ್ಸಾಹದ ಛಾಯೆ ಈ ಬಾರಿಯ GIM ಮೇಲೂ ಬಿದ್ದಿರುವುದು ಸ್ಪಷ್ಟ. ಏಕೆಂದರೆ ಕನಿಷ್ಠ ಪಕ್ಷ ಕಳೆದ GIMಗಳಲ್ಲಿ 3 ಲಕ್ಷ ಕೋಟಿ, 7 ಲಕ್ಷ ಕೋಟಿ ಮತ್ತು 4 ಲಕ್ಷ ಕೋಟಿ ರೂ.ಗಳಷ್ಟು ಭರವಸೆಯಾದರೂ ಬಂದಿದ್ದವು.

ಆದರೆ ಈ ಬಾರಿ ಭರವಸೆ ಬಂದಿರುವುದೇ ಅವುಗಳ ಕಾಲು ಭಾಗ- ಕೇವಲ 1.5 ಲಕ್ಷ ಕೋಟಿ ಮಾತ್ರ. ಇದು ಇಂದು ಜಗತ್ತಿನಲ್ಲಿರುವ Investors Confidence – ಹೂಡಿಕೆದಾರರ ವಿಶ್ವಾಸಕ್ಕೆ ಒಂದು ಸಂಕೇತವಾಗಿದ್ದಲ್ಲಿ, ಈ ಬಾರಿಯ GIMನ conversion ದರ ಕೂಡ ಹಿಂದಿನ GIMಗಳ ಕಾಲು ಭಾಗ ಅರ್ಥಾತ್ ಶೇ. 5 ಕ್ಕಿಂತ ಜಾಸ್ತಿ ಆಗಲಾರದು. ಅಂದರೆ ಹೆಚ್ಚೆಂದರೆ 5-10 ಸಾವಿರ ಕೋಟಿ ರೂ.ಗಳ ಬಂಡವಾಳ ಹೂಡಿಕೆ! 1. 5 ಲಕ್ಷ ಕೋಟಿ ರೂ.ಗಳಲ್ಲ.

ಸುಳ್ಳು-3

ಹೇಳಿಕೆ – GIM ನಿಂದಾಗಿ 6 ಲಕ್ಷ ಉದ್ಯೋಗಳು ಸೃಷ್ಟಿಯಾಗುತ್ತದೆ.

ವಾಸ್ತವ: 6 ಲಕ್ಷವಿರಲಿ 6 ಸಾವಿರ ಉದ್ಯೋಗವೂ ಸೃಷ್ಟಿಯಾಗದು.

ಸರ್ಕಾರದ ಪ್ರಕಾರ, “GIM ನಿಂದಾಗಿ 5 ಲಕ್ಷ ಕೋಟಿ ಬಂಡವಾಳ ನಿರೀಕ್ಷೆ ಮಾಡಲಾಗಿತ್ತು. ಆದರೆ ಅದು ಈಗ 9.82 ಲಕ್ಷ ಕೋಟಿಯಾಗಿದೆ. ಆದ್ದರಿಂದ ಮೊದಲು ಅಂದುಕೊಂಡಂತೆ GIMನಿಂದ 5 ಲಕ್ಷ ಉದ್ಯೋಗಗಳ ಬದಲಿಗೆ 6 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ.”

ಆದರೆ ಈಗಾಗಲೇ ನೋಡಿದಂತೆ GIMನಲ್ಲಿ ಹೂಡಿಕೆಯ ಭರವಸೆ ಬಂದಿರುವುದು 9.82 ಲಕ್ಷ ಕೋಟಿಯಲ್ಲ. ಕೇವಲ 1. 5 ಲಕ್ಷ ಕೋಟಿ. ಹಾಗೂ ಆರ್ಥಿಕ ಹಿಂದ್ಸರಿತದಿಂದಾಗಿ ಅದರ Conversion ಶೇ. 5-10ನ್ನು ಮೀರುವುದು ಕಷ್ಟ. ಅಂದರೆ ಹೆಚ್ಚೆಂದರೆ 5-10 ಸಾವಿರ ಕೋಟಿ ಹೂಡಿಕೆ.

ಹೀಗಾಗಿ ಸರಳ ಗಣಿತದ ಪ್ರಕಾರವೂ ಉದ್ಯೋಗ ಸೃಷ್ಟಿಯಾಗುವುದು ಕೆಲವು ಸಾವಿರಗಳನ್ನು ಮೀರುವುದಿಲ್ಲ. ಆದರೆ ಈ ಹೂಡಿಕೆಗಳು ಕೂಡ ಕಾರ್ಮಿಕರನ್ನು ಹೆಚ್ಚಾಗಿ ಕೇಳದ ಕ್ಷೇತ್ರದಲ್ಲಿ ಹೂಡಿಕೆಯಾಗುತ್ತದೆ. ಸರ್ಕಾರವು ಈ ಉದ್ದೇಶಕ್ಕೆ 50,000 ಎಕರೆ ರೈತರ ಜಮೀನನ್ನು ಕಸಿಯುವುದಾಗಿ ಹೇಳಿದೆ. ಇವತ್ತು ಒಂದು ಎಕರೆ ಜಮೀನಿನ ಮೇಲೆ ಆರೆಂಟು ಜನರ ಜೀವನೋಪಾಯ ನಡೆಯುತ್ತದೆ ಎಂದು ಲೆಕ್ಕ ಹಿಡಿದರೂ…

ಇದನ್ನೂ ಓದಿರಿ: 7 ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ: BJP 4, RJD, TRS, ಶಿವಸೇನೆ ತಲಾ ಒಂದು ಕ್ಷೇತ್ರಗಳಲ್ಲಿ ಮುನ್ನಡೆ

ಈ ಹೂಡಿಕೆಗಳು 2 ಲಕ್ಷಕ್ಕೂ ಹೆಚ್ಚು ರೈತಾಪಿಯ ಉದ್ಯೋಗ -ಜೀವನ ಕಸಿದು, ಕೆಲವು ಸಾವಿರ ಮೇಲ್ವರ್ಗದ ಸುಶಿಕ್ಷಿತ ತಂತ್ರಜ್ಞರಿಗೆ ಉದ್ಯೋಗ ಸೃಷ್ಟಿಸಬಹುದು. ಹೀಗಾಗಿ ಒಟ್ಟು ಲೆಕ್ಕದಲ್ಲಿ GIMಇಂದ ಉದ್ಯೋಗ ಸೃಷ್ಟಿಯಾಗುವುದಕ್ಕಿಂತ ನಷ್ಟವಾಗುವುದೇ ಹೆಚ್ಚು.

ಒಟ್ಟಾರೆಯಾಗಿ GIM ಎಂಬುದು ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡುವುದಿಲ್ಲ. ಬದಲಿಗೆ ಚುನಾವಣೆಗೆ ಮುನ್ನ ಬಿಜೆಪಿಯು ಜನರಲ್ಲಿ ಪ್ರಗತಿ-ಅಭಿವೃದ್ಧಿಯ ಭ್ರಾಂತಿ ಮೂಡಿಸುತ್ತದೆ. ಆದ್ದರಿಂದ ಈ GIM ಎಂಬುದು ತನ್ನ ಭ್ರಷ್ಟಾಚಾರ ಹಾಗೂ ತಾನು ಮೂಡಿಸಿರುವ ಸಾಮಾಜಿಕ ಅಸ್ಥಿರತೆ, ಆರ್ಥಿಕ ದುಸ್ಥಿತಿ, ನಿರುದ್ಯೋಗ ಇತ್ಯಾದಿಗಳನ್ನು ಮುಚ್ಚಿಕೊಳ್ಳಲು ಬಿಜೆಪಿ ಸರ್ಕಾರವು ನಡೆಸಿದ ಒಂದು ಚುನಾವಣಾ GIMMICK ಹೊರತು ಮತ್ತೇನು ಅಲ್ಲ ಎಂಬುದು ಸ್ಪಷ್ಟ, ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಸ್ಸಾಂ | ರಾಜಧಾನಿ ಎಕ್ಸ್ ಪ್ರೆಸ್ ರೈಲು ಢಿಕ್ಕಿ : 8 ಆನೆಗಳು ಸಾವು

ಶನಿವಾರ (ಡಿಸೆಂಬರ್ 20, 2025) ಬೆಳಗಿನ ಜಾವ ಅಸ್ಸಾಂನ ಹೊಜೈ ಜಿಲ್ಲೆಯಲ್ಲಿ ಸಾಯಿರಂಗ್-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದ ಪರಿಣಾಮ ಎಂಟು ಆನೆಗಳು ಸಾವನ್ನಪ್ಪಿದ್ದು, ಒಂದು ಗಾಯಗೊಂಡಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಐದು...

ಮಲಯಾಳಂ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಶ್ರೀನಿವಾಸನ್ ನಿಧನ

ಮಲಯಾಳಂ ಚಿತ್ರರಂಗದ ಹಿರಿಯ ನಟ, ಚಿತ್ರಕಥೆಗಾರ, ನಿರ್ದೇಶಕ ಹಾಗೂ ನಿರ್ಮಾಪಕ ಶ್ರೀನಿವಾಸನ್ ಶನಿವಾರ (ಡಿ.20) ನಿಧನರಾದರು. ಅವರಿಗೆ 69 ವರ್ಷ ವಯಸ್ಸಾಗಿತ್ತು. ದೀರ್ಘ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀನಿವಾಸನ್ ಅವರು, ಚಿಕಿತ್ಸೆ...

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...