Homeಮುಖಪುಟಗೋವಾ: 4 ವರ್ಷದಲ್ಲಿ 50% ಶಾಸಕರು ಪಕ್ಷಾಂತರ!

ಗೋವಾ: 4 ವರ್ಷದಲ್ಲಿ 50% ಶಾಸಕರು ಪಕ್ಷಾಂತರ!

- Advertisement -
- Advertisement -

2017 ರಿಂದ ಕಳೆದ ನಾಲ್ಕು ವರ್ಷಗಳಲ್ಲಿ ಗೋವಾದ ರಾಜಕೀಯ ವಲಯವು ಹೊಸ ಯುಗವನ್ನು ಪ್ರವೇಶಿಸಿದೆ. ಗೋವಾ ವಿಧಾನ ಸಭೆಯ 40 ಶಾಸಕರಲ್ಲಿ 50% ದಷ್ಟು ಸದಸ್ಯರು 2017 ರಲ್ಲಿ ತಮ್ಮನ್ನು ಆಯ್ಕೆ ಮಾಡಿದ ಪಕ್ಷವನ್ನು ತೊರೆದಿದ್ದರೆ. ಆಡಳಿತಾರೂಢ ಬಿಜೆಪಿಯು ಕಳೆದ ನಾಲ್ಕು ವರ್ಷಗಳಲ್ಲಿ ಕಾಂಗ್ರೆಸ್, ಪ್ರಾದೇಶಿಕ ಪಕ್ಷಗಳು ಮತ್ತು ಪಕ್ಷೇತರ ಶಾಸಕರು ಸೇರಿದಂತೆ ಹಲವರನ್ನು ತನ್ನೆಡೆಗೆ ಸೆಳೆದಿದೆ.

ವಿಧಾನಸಭಾ ಚುನಾವಣೆಯ ಮತ ಎಣಿಕೆ ಮುಗಿದು ಕೆಲವೇ ದಿನಗಳಲ್ಲಿ ಬಾಗಿಲು ತೆರೆದು ನಂತರ ಮುಚ್ಚುತ್ತಿದ್ದ ‘ಕುದುರೆ ವ್ಯಾಪಾರ’ವು ಈಗ ವರ್ಷದಾದ್ಯಂತ ನಡೆಯುವ ವಿದ್ಯಮಾನವಾಗಿ ಪರಿಣಮಿಸಿದೆ.

ಇದನ್ನೂ ಓದಿ:ಲೈಂಗಿಕ ದೌರ್ಜನ್ಯ ಆರೋಪ: ಗೋವಾ ಬಿಜೆಪಿ ಸಚಿವ ಮಿಲಿಂದ್ ನಾಯಕ್ ರಾಜೀನಾಮೆ!

2017 ರಿಂದ, ತಮ್ಮ ಪಕ್ಷಗಳನ್ನು ತೊರೆದ ಶಾಸಕರು ಪಟ್ಟಿ ಕಳಗಿನಂತಿದೆ.

2017 ರಲ್ಲಿ ಕಾಂಗ್ರೆಸ್‌ಗೆ 17 ಶಾಸಕರು ಗೆದ್ದು ಬಂದರೂ, 13 ಶಾಸಕರನ್ನು ಹೊಂದಿದ್ದ ಬಿಜೆಪಿ ಮೈತ್ರಿಗಳ ಬೆಂಬಲದೊಂದಿಗೆ ಅಧಿಕಾರ ಹಿಡಿಯಿತು. ಇದರ ನಂತರ, ಕಾಂಗ್ರೆಸ್ ಶಾಸಕ ವಿಶ್ವಜಿತ್ ರಾಣೆ ಅವರು ವಿಶ್ವಾಸಮತ ಯಾಚೆನೆಯ ದಿನ ಮಾರ್ಚ್ 16 ರಂದು ಪಕ್ಷಕ್ಕೆ ರಾಜೀನಾಮೆ ನೀಡಿದರು.

ವಿಶ್ವಜಿತ್ ರಾಣೆ, ಅವರ ತಂದೆ ಪ್ರತಾಪ್ಸಿಂಗ್ ರಾಣೆ ಅವರು ಹಿರಿಯ ಕಾಂಗ್ರೆಸ್ ನಾಯಕರಾಗಿದ್ದು, ಮಾಜಿ ಮುಖ್ಯಮಂತ್ರಿಯಾಗಿದ್ದರು. ವಿಶ್ವಜಿತ್‌ ಅವರು ಪಕ್ಷ ತೊರೆದ ನಂತರ ಆಗಿನ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ನೇತೃತ್ವದ ಸಂಪುಟದಲ್ಲಿ ಆರೋಗ್ಯ ಸಚಿವರಾಗಿ ನೇಮಕಗೊಂಡರು.

ಒಂದು ವರ್ಷದ ನಂತರ, ಇನ್ನೂ ಇಬ್ಬರು ಕಾಂಗ್ರೆಸ್ ಶಾಸಕರಾದ ದಯಾನಂದ ಸೋಪ್ಟೆ ಮತ್ತು ಮಾಜಿ ರಾಜ್ಯಾಧ್ಯಕ್ಷ ಸುಭಾಷ್ ಶಿರೋಡ್ಕರ್‌ ಅಕ್ಟೋಬರ್ 16 ರಂದು ಪಕ್ಷವನ್ನು ತೊರೆದು ಅದೇ ದಿನ ಬಿಜೆಪಿಗೆ ಸೇರಿದ್ದರು. ರಾಜೀನಾಮೆ ನೀಡದ ಮೂವರೂ ಬಿಜೆಪಿಯಿಂದ ಉಪಚುನಾವಣೆಗಳನ್ನು ಎದುರಿಸಿ ಹೊಸದಾಗಿ ಶಾಸಕರಾದರು.

ಇದನ್ನೂ ಓದಿ:ಗೋವಾ ಚುನಾವಣೆ: ಟಿಎಂಸಿ, ಆಪ್ ಜೊತೆ ಮೈತ್ರಿಯತ್ತ ಕಾಂಗ್ರೆಸ್ ಚಿತ್ತ?

2019 ರ ಮಾರ್ಚ್ ತಿಂಗಳ 27 ರಂದು, ಮೂವರು ಶಾಸಕರಿರುವ ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷದ ಇಬ್ಬರನ್ನು(ಮನೋಹರ್ ಅಜಗಾಂವ್ಕರ್ ಮತ್ತು ದೀಪಕ್ ಪೌಸ್ಕರ್) ಬಿಜೆಪಿ ಸೆಳೆದುಕೊಂಡಿತು.

ಒಂದು ಪಕ್ಷದ ಮೂರನೇ ಒಂದು ಭಾಗದಷ್ಟು ಶಾಸಕರು ಪಕ್ಷವನ್ನು ತೊರೆದರೆ ಅವರು, ರಾಜೀನಾಮೆ ನೀಡಬೇಕಾಗಿಲ್ಲ, ಹಾಗಾಗಿ ಅವರು ಶಾಸಕರಾಗಿಯೆ ಉಳಿಯುತ್ತಾರೆ. ಜೊತೆಗೆ ಅವರ ಪಕ್ಷವನ್ನು ಬೇರೆ ಪಕ್ಷದ ಜೊತೆಗೆ ವಿಲೀನಗೊಳಿಸಬಹುದಾಗಿದೆ.

ಬಿಜೆಪಿ ಗೋವಾದಲ್ಲಿ ಒಟ್ಟು ಮೂರು ಬಾರಿ ಕಾಂಗ್ರೆಸ್‌ನ ಶಾಸಕರನ್ನು ಸೆಳೆದಿದೆ. ಮೂರನೇ ಬಾರಿಗೆ ಅದು ಕಾಂಗ್ರೆಸ್‌ 10 ಶಾಸಕರನ್ನು ಸೆಳೆದುಕೊಂಡಿದೆ. ಇದು ಕಾಂಗ್ರೆಸ್ ಗೋವಾದಲ್ಲಿ ಮತ್ತಷ್ಟು ತತ್ತರಿಸುವಂತೆ ಮಾಡಿದೆ.

ಮನೋಹರ್‌ ಪರಿಕ್ಕರ್‌ ನಿಧನದ ನಂತರ ಉತ್ತರಾಧಿಕಾರಿಯಾಗಿ ನೇಮಕಗೊಂಡ ಹೊಸ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತುಸು ಸಮಯ ಆಪರೇಷನ್‌ ಕಮಲಕ್ಕೆ ವಿರಾಮ ನೀಡಿದ್ದರು.

ಇದನ್ನೂ ಓದಿ:ಗೋವಾ ಚುನಾವಣೆ: ಕಾಂಗ್ರೆಸ್ ಜೊತೆಗೆ ಗೋವಾ ಫಾರ್ವಾಡ್ ಪಾರ್ಟಿ ಮೈತ್ರಿ

ಇದೀಗ ಗೋವಾ ಫಾರ್ವರ್ಡ್ ಪಕ್ಷದ ಹಾಲಿ ಶಾಸಕ ಜಯೇಶ್ ಸಲ್ಗಾಂವ್ಕರ್,ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ನ ಶಾಸಕ ರವಿ ನಾಯ್ಕ್ ಮತ್ತು ಸ್ವತಂತ್ರ ಶಾಸಕ ರೋಹನ್ ಖೌಂಟೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಲ್ಲಿ ಇಬ್ಬರು ಈಗಾಗಲೇ ಬಿಜೆಪಿಗೆ ಸೇರ್ಪಡೆಗೊಂಡಿದ್ದರೆ, ರೋಹನ್‌ ಖೌಂಟೆ ಶುಕ್ರವಾರ ಬಿಜೆಪಿಗೆ ಸೇರಲಿದ್ದಾರೆ.

ಮತ್ತೊಬ್ಬ ಕಾಂಗ್ರೆಸ್ ಶಾಸಕ ಲುಜಿನ್ಹೋ ಫಲೈರೊ ಮಾರ್ಚ್‌ನಲ್ಲಿ ತೃಣಮೂಲ ಕಾಂಗ್ರೆಸ್‌ಗೆ ಸೇರಿದ್ದಾರೆ. ಈ ಮಧ್ಯೆ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಏಕೈಕ ಶಾಸಕ ಚರ್ಚಿಲ್ ಅಲೆಮಾವೊ ಈ ತಿಂಗಳ ಆರಂಭದಲ್ಲಿ ತೃಣಮೂಲ ಪಕ್ಷಕ್ಕೆ ವಿಲೀನಗೊಂಡಿರುವುದಾಗಿ ಹೇಳಿಕೊಂಡಿದ್ದಾರೆ.

ಆಶ್ಚರ್ಯವೆಂಬಂತೆ ಹಾಲಿ ಬಿಜೆಪಿ ಶಾಸಕಿ, ರಾಜ್ಯದ ಮಾಜಿ ಅರಣ್ಯ ಸಚಿವ ಅಲಿನಾ ಸಲ್ಡಾನ್ಹಾ ಅವರು ಗುರುವಾರದಂದು ಬಿಜೆಪಿ ತೊರೆದಿದ್ದು, ಶೀಘ್ರದಲ್ಲೇ ಆಮ್ ಆದ್ಮಿ ಪಕ್ಷಕ್ಕೆ ಸೇರಲಿದ್ದಾರೆ.

ಇದನ್ನು ಓದಿ:ಗೋವಾ ಚುನಾವಣೆ: ಉಚಿತ ವಿದ್ಯುತ್, ಉದ್ಯೋಗ ಖಾತ್ರಿ ಭರವಸೆ ನೀಡಿದ ಅರವಿಂದ್ ಕೇಜ್ರಿವಾಲ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಮಹಾಲಕ್ಷಿ ಮತ್ತು ಮೆಟ್ರೋ’: ತೆಲಂಗಾಣ ಸರ್ಕಾರ-ಎಲ್‌&ಟಿ ನಡುವೆ ಜೋರಾದ ಜಟಾಪಟಿ

0
ಹೈದರಾಬಾದ್ ಮಹಾನಗರ ಮೆಟ್ರೋ ಸೇವೆ ಸೇರಿದಂತೆ ತೆಲಂಗಾಣ ರಾಜ್ಯದ ಹಲವು ಬೃಹತ್ ಯೋಜನೆಗಳ ಅನುಷ್ಠಾನ ಮತ್ತು ನಿರ್ವಹಣೆ ಮಾಡುತ್ತಿರುವ 'ಲಾರ್ಸೆನ್ ಮತ್ತು ಟೂಬ್ರೊ (ಎಲ್ & ಟಿ)' ಕಂಪನಿ ಮತ್ತು ರಾಜ್ಯ ಸರ್ಕಾರದ...