Homeಸಿನಿಮಾಕ್ರೀಡೆಚಿನ್ನದ ಹುಡುಗಿ ಹಿಮಾ ದಾಸ್ ಳ ಮುತ್ತಿನಂಥ ಮಾತುಗಳ ವಿಡಿಯೋ ನೋಡಿ

ಚಿನ್ನದ ಹುಡುಗಿ ಹಿಮಾ ದಾಸ್ ಳ ಮುತ್ತಿನಂಥ ಮಾತುಗಳ ವಿಡಿಯೋ ನೋಡಿ

- Advertisement -
- Advertisement -

18 ದಿನಗಳಲ್ಲಿ ಐದು ಚಿನ್ನ ಗೆದ್ದು ಭಾರತದ ಹೆಸರನ್ನು ವಿಶ್ವಮಟ್ಟದಲ್ಲಿ ಮತ್ತೊಮ್ಮೆ ಮಿನುಗುವಂತೆ ಮಾಡಿದ ಚಿನ್ನದ ಹುಡುಗಿ ಹಿಮಾ ದಾಸ್ ತಮ್ಮ ಮುತ್ತಿನಂಥ ಮಾತುಗಳ ಮೂಲಕ ಬೆಂಬಲಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ತಿಳಿಸಿದ್ದಾರೆ. ವಿಡಿಯೋ ನೋಡಿ

ವಿಡಿಯೋದಲ್ಲಿ “ಭಾರತದ ಜನರ ತುಂಬು ಪ್ರೀತಿಯಿಂದ ನಾನು ಈ ಸಾಧನೆ ಮಾಡಲು ಸಾಧ್ಯವಾಗಿದೆ. ಟ್ವಿಟ್ಟರ್ ನಲ್ಲಿ ರಾಷ್ಟ್ರಪತಿ, ಕ್ರೀಡಾ ಸಚಿವರು, ಪ್ರಧಾನ ಮಂತ್ರಿ, ಸಿನಿಮಾ ನಟರು ಸೇರಿ ನನಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ಇದು ನನಗೆ ಬಹಳ ಖುಷಿ ನೀಡಿದೆ. ಇವರೆಲ್ಲರ ಆಶಿರ್ವಾದದಿಂದ ಮುಂದಕ್ಕೂ ಇದೇ ರೀತಿಯ ಸಾಧನೆ ಮಾಡಲು ಪ್ರಯತ್ನಿಸುತ್ತೇನೆ” ಎಂದಿದ್ದಾರೆ.

ಈ ತಿಂಗಳು ಯೂರೋಪ್ ನಲ್ಲಿ ಹಿಮಾ ದಾಸ್ ರವರ ಸಾಧನೆಯ ವಿವರ ಹೀಗಿದೆ.

ಜುಲೈ 02 ರಂದು ಪೋಲಾಂಡ್ ನಲ್ಲಿ ನಡೆದ ಪ್ರೊಜ್ನಾನ್ ಗ್ರ್ಯಾನ್ ಫ್ರಿ ರೇಸ್ ನಲ್ಲಿ 200 ಮೀಟರ್ ಓಟದಲ್ಲಿ ಚಿನ್ನದ ಗೆಲುವು

ಜುಲೈ 07 ರಂದು ಪೋಲಾಂಡ್ ನಲ್ಲಿ ನಡೆದ ಕುಂಟೋ ಅಥ್ಲೆಟಿಕ್ ಕ್ರೀಡಾಕೂಟದ 200 ಮೀಟರ್ ಓಟದಲ್ಲಿ ಚಿನ್ನದ ಸಾಧನೆ

ಜುಲೈ 13 ರಂದು ಜೆಕ್ ರಿಪಬ್ಲಿಕ್ ನಲ್ಲಿ ನಡೆದ ಕ್ಲಾಡೋ ಅಥ್ಲೆಟಿಕ್ ಕ್ರೀಡಾಕೂಟದ 200 ಮೀಟರ್ ಓಟದಲ್ಲಿ ಚಿನ್ನದ ಪದಕ

ಜುಲೈ 17 ರಂದು ಜೆಕ್ ರಿಪಬ್ಲಿಕ್ ನಲ್ಲಿ ನಡೆದ ತಬೂರ್ ಅಥ್ಲೆಟಿಕ್ ಕೂಟದಲ್ಲಿ ಚಿನ್ನದ ಗೆಲುವು

ಜುಲೈ 20 ರಂದು ಪ್ರಾಗ್ ನಲ್ಲಿ ನಡೆದ ನೊವಾ ಮೆಸ್ಟೊ ಅಥ್ಲೆಟಿಕ್ ಕೂಟದಲ್ಲಿ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -