Homeಕರ್ನಾಟಕಜಿಂದಾಲ್‍ಗೆ ಭೂಮಿ: ಇಂದಿನ ಸಚಿವ ಸಂಪುಟ ಉಪಸಮಿತಿ ಸಭೆಯಿಂದ ಜನರಿಗೆ ನ್ಯಾಯ ಸಿಗುತ್ತಾ?

ಜಿಂದಾಲ್‍ಗೆ ಭೂಮಿ: ಇಂದಿನ ಸಚಿವ ಸಂಪುಟ ಉಪಸಮಿತಿ ಸಭೆಯಿಂದ ಜನರಿಗೆ ನ್ಯಾಯ ಸಿಗುತ್ತಾ?

- Advertisement -
- Advertisement -

| ಪಿ.ಕೆ ಮಲ್ಲನಗೌಡರ್ |

ಬಳ್ಳಾರಿಯಲ್ಲಿ ಜಿಂದಾಲ್‍ಗೆ 3667 ಎಕರೆ ಭೂಮಿಯನ್ನು ಮಾರಾಟ ಮಾಡುವ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತವಾದ ನಂತರ, ಇದನ್ನು ಮರುಪರಿಶೀಲಿಸಲು ಸಂಪುಟ ಉಪಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿ ಇಂದು ಸಭೆ ಸೇರಲಿದ್ದು ಅದು ನೀಡಲಿರುವ ಶಿಫಾರಸುಗಳು ಈ ರಾಜ್ಯದ ಜನತೆಗೆ ನ್ಯಾಯ ಒದಗಿಸಬಲ್ಲವೇ?

ಭೂಮಿ ಮಾರಾಟ ಮಾಡುವುದರಲ್ಲಿ ತಪ್ಪಿಲ್ಲ ಎಂದೋ ಅಥವಾ ಮಾರಾಟ ದರವನ್ನು ಹೆಚ್ಚಿಸಿ ಎಂದೋ ಸಮಿತಿ ಶಿಫಾರಸ್ಸು ಮಾಡಿದರೆ, ಅದು ಜನತೆಯ ಹಿತಾಸಕ್ತಿಯನ್ನು ಕಾಪಾಡುವುದೇ? ಇಂತಹ ಶಿಫಾರಸು ಬಂದರೆ ಬಿಜೆಪಿ ಮತ್ತೆ ಹೋರಾಟಕ್ಕೆ ಇಳಿಯುವುದೇ ಎಂಬ ಸಂಶಯಗಳು ಕಾಡುತ್ತಿವೆ. ಇದನ್ನು ವಿವರಿಸಲು ಈವರೆಗೆ ನಡೆದ ವಿದ್ಯಮಾನ ಮತ್ತು ನಾಟಕೀಯ ಪ್ರಸಂಗಗಳನ್ನು ನೋಡುವುದು ಅಗತ್ಯವಾಗಿದೆ.

ಬಿಜೆಪಿಯ ನಾಮಕಾವಸ್ಥೆ ಪ್ರತಿಭಟನೆ

ಏಕಾಏಕಿ ಮೇ 27ರಂದು ಸಚಿವ ಸಂಪುಟದ ಸಭೆಯಲ್ಲಿ ಜಿಂದಾಲ್ (ಜೆಎಸ್‍ಡ್ಬ್ಲೂ) ಕಂಪನಿಗೆ ಬಳ್ಳಾರಿಯಲ್ಲಿ 3,667 ಎಕರೆ ಭೂಮಿಯನ್ನು ಎಕರೆಗೆ ಒಂದು-ಒಂದೂವರೆ ಲಕ್ಷ ರೂ ದರದಲ್ಲಿ ಮಾರಲು ನಿರ್ಧರಿಸಲಾಗಿತು. ತಕ್ಷಣಕ್ಕೆ ಬಿಜೆಪಿಯಿಂದ ಇದಕ್ಕೆ ಯಾವುದೇ ವಿರೋಧ ವ್ಯಕ್ತವಾಗಲಿಲ್ಲ. ಸಂಪುಟದ ಈ ನಿರ್ಧಾರವನ್ನು ಆಡಳಿತ ಪಕ್ಷದ ಕಾಂಗ್ರೆಸ್ ಶಾಸಕ ಎಚ್‍ಕೆ ಪಾಟೀಲರು ಮರುದಿನವೇ ಸಾರ್ವಜನಿಕವಾಗಿಯೇ ವಿರೋಧಿಸಿ, ರಾಜ್ಯಕ್ಕೆ ಅನ್ಯಾಯ ಎಸಗುವ ನಿರ್ಧಾರವನ್ನು ಕೂಡಲೇ ಕೈಬಿಡಬೇಕು ಎಂದು ಮುಜಖ್ಯಮಂತ್ರಿಗಳಿಗೆ ಪತ್ರ ಬರೆದರು. ಅವರ ಈ ನಿಲುವಿಗೆ ಪೂರಕವಾದ ಅಂಕಿ-ಅಂಶ ಮತ್ತು ದಾಖಲೆಗಳನ್ನು ಅವರು ಬಹಿರಂಗಪಡಿಸಿದರು. ನಾನುಗೌರಿ.ಕಾಮ್ ಮತ್ತು ಇನ್ನಿತರ ಕೆಲವು ಸುದ್ದಿಸಂಸ್ಥೆಗಳು ಹಾಗೂ ಕೆಲವು ಜನಪರ ಸಂಘಟನೆಗಳು ಈ ವಿಷಯವಾಗಿ ಸತತ ಪ್ರತಿರೋಧ ವ್ಯಕ್ತಪಡಿಸಿದ ಮೇಲಷ್ಟೇ ಬಿಜೆಪಿ ತಾನೂ ಸರ್ಕಾರದ ಈ ನಿರ್ಣಯದ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಘೋಷಿಸಿ ಬೆಂಗಳೂರಿನಲ್ಲಿ ಎರಡು ದಿನ ಪ್ರತಿಭಟನೆ ನಡೆಸಿತ್ತು..

ಕಾಲಹರಣದ ಮೊರೆ ಹೋದ ಸರ್ಕಾರ
ಈ ವಿಷಯಕ್ಕೆ ಸಂಬಂಧಿಸಿದಂತೆ ಮರುಪರಿಶೀಲನೆ ನಡೆಸಲು ಸಂಪುಟ ಸಮಿತಿ ರಚಿಸುವುದಾಗಿ ಜೂನ್ 14ರ ಕ್ಯಾಬಿನೆಟ್ ಸಭೆಯಲ್ಲಿ ನಿರ್ಣಯ ತೆಗೆದುಕೊಂಡ ಸರ್ಕಾರ ಉಪ ಸಮಿತಿ ರಚನೆಗೆ ತುರ್ತು ಆಸಕ್ತಿ ತೋರಲಿಲ್ಲ. ಇದನ್ನು ಪ್ರಸ್ನಿಸಬೇಕಾಗಿದ್ದ ಬಿಜೆಪಿ ಮತ್ತು ಕನ್ನಡದ ಬಹುಪಾಲು ಮೀಡಿಯಾಗಳು ನಿರಾಸಕ್ತಿ ತೋರಿದವು. ಆ ಹೊತ್ತಿಗೆ ಅವಕ್ಕೆ ಐಎಂಎ ವಂಚನೆ ವಿಷಯ ಮುಖ್ಯವಾಗಿತ್ತು.

ಮೊನ್ನೆಯಷ್ಟೇ (ಜೂನ್ 26) ಸರ್ಕಾರ ಸಂಪುಟ ಉಪಸಮಿತ ರಚಿಸಿದೆ. ಇದಕ್ಕೆ ಅಧ್ಯಕ್ಷರಾಗಿ ಗೃಹ ಸಚಿವ ಎಂ. ಬಿ ಪಾಟೀಲ್, ಸದಸ್ಯರಾಗಿ ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ್, ಪಂಚಾಯತ್‍ರಾಜ್ ಸಚಿವ ಕೃಷ್ಣ ಭೈರೇಗೌಡ ಮತ್ತು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆಯವರನ್ನು ನೇಮಿಸಲಾಗಿದೆ. ವರದಿ ನೀಡಲು ಯಾವ ಕಾಲಮಿತಿಯನ್ನು ಸೂಚಿಸಿಲ್ಲ.

ಯಾವುದೇ ವ್ಯಕ್ತಿಯ ಸಾಮಥ್ರ್ಯವನ್ನು ಸುಲಭಕ್ಕೆ ಅಂದಾಜಿಸಬಾರದು ಎಂಬ ಅರಿವನ್ನು ಇಟ್ಟುಕೊಂಡು ನೋಡೋಣ. ಉದ್ಯಮಗಳಿಗೆ ಸರ್ಕಾರಿ ಭೂಮಿ ಮಾರುವ ಕುರಿತಂತೆ ಸಮಿತಿಯ ಸದಸ್ಯರಿಗೆ ನೀತಿ ನಿಯಮಗಳ ಜ್ಞಾನವಿದೆಯೇ, ಅವನ್ನೂ ಪರಿಶೀಲಿಸಿದ ನಂತರವೂ ಅವರು ಕ್ಯಾಬಿನೆಟ್ ನಿರ್ಣಯಕ್ಕೆ ವಿರೋಧವಾದ ವರದಿ ನೀಡುವರೇ? ಜಿಂದಾಲ್‍ಗೆ ಭೂಮಿ ಮಾರುವುದೇ ನ್ಯಾಯಯುತ ಎಂದು ವರದಿ ಶಿಫಾರಸು ಮಾಡಿದರೆ ಆಗಲೂ ಬಿಜೆಪಿ ಹೋರಾಟಕ್ಕೆ ಇಳಿಯುವುದೇ ಎಂಬ ಪ್ರಶ್ನೆಗಳು ಏಳುತ್ತವೆ. ಇಂದಿನ ಇಂತಹ ಬಹುತೇಕ ಸಂದರ್ಭಗಳನ್ನು ಅವಲೋಕಿಸಿದಾಗ ಇವೆಲ್ಲ ಅಸಾಧ್ಯ ಅನಿಸುತ್ತಿದೆ.

ಗೃಹ ಖಾತೆ ನೋಡಿಕೊಳ್ಳುತ್ತಿರುವ ಎಂ.ಬಿ. ಪಾಟೀಲರಿಗೆ ಈ ವಿಷಯವನ್ನು ತುರ್ತಾಗಿ ಪರಿಶೀಲಿಸಲು ಅಗತ್ಯವಾದ ಅಧ್ಯಯನ ಮಾಡಲು ಆಸಕ್ತಿ ಇರುವಂತೆ ಕಾಣುತ್ತಿಲ್ಲ. ಲಿಂಗಾಯತ ಧರ್ಮದ ಹೋರಾಟದಲ್ಲೂ ಆಗಾಗ ಕಾಣಿಸಿಕೊಳ್ಳುವ ಅವರಿಗೆ ಪುರುಸೊತ್ತೂ ಇಲ್ಲ. ಸಚಿವ ಕಾಶೆಂಪುರರಿಗೆ ಅಂತಹ ಸ್ಪೀಡು ಮತ್ತು ಚಾಕಚಕ್ಯತೆಯೂ ಇಲ್ಲ. ತನ್ನ ಗುಟ್ಟು ಮುಚ್ಚಿಕೊಳ್ಳಲು ಕಾಂಗ್ರೆಸ್ ಪ್ರಿಯಾಂಕ ಖರ್ಗೆಯವರನ್ನು ಹತೋಟಿ ಮಾಡಬಲ್ಲದು. ಮಿಗಿಲಾಗಿ ಅನನುಭವಿ ಪ್ರಿಯಾಂಕರಿಗೆ ಇದು ಗಂಭೀರ ವಿಷಯವೂ ಅಲ್ಲ. ಅಧ್ಯನಯನಶೀಲ ಸ್ವಭಾವದ, ಪಕ್ಷಪಾತಿಯಲ್ಲದ, ಈ ವಿವಾದದ ಹಿಂದಿನ ಹಿಕ್ಮತ್ತುಗಳನ್ನು ಶೀಘ್ರವಾಗಿ ಅರಿಯಬಲ್ಲ ತಾಕತ್ತಿರುವ ಕೃಷ್ಣ ಭೈರೇಗೌಡ ಒಬ್ಬರೇ ಏನು ಮಾಡಲು ಸಾಧ್ಯ?

ಹೀಗಾಗಿ, ಪಬ್ಲಿಕ್ ಮೆಮರಿ ಇಸ್ ಶಾರ್ಟ್ ಎನ್ನುವಂತೆ ಜನ ಈ ವಿಷಯವನ್ನು ಮರೆಯುತ್ತಾರೆ, ಮಾಧ್ಯಮಗಳು ಜಾಣ ಮರೆವು ಪ್ರದರ್ಶಿಸುತ್ತವೆ. ಜಿಂದಾಲ್ ಪರವಾಗಿರುವ ಎಲ್ಲ ಪಕ್ಷಗಳ ಲಾಬಿ ಕಾರ್ಯಾಚರಣೆಗೆ ಇಳಿಯುತ್ತದೆ. ಒಂದಿ ದಿನ ಯಾವ ದೊಡ್ಡ ಸುದ್ದಿಯಾಗದೇ ಜಿಂದಾಲ್‍ಗೆ ಕ್ರಯಪತ್ರವನ್ನು ಸರ್ಕಾರ ಹಸ್ತಾಂತರಿಸುತ್ತದೆ. ಅಲ್ಲಿಗೇ ಎಲ್ಲವೂ ‘ಸರಿ’ಯಾಗಿರುತ್ತದೆ!

ಸರ್ಕಾರಕ್ಕೆ ಮರುಪರಿಶೀಲನೆಯ ಬಗ್ಗೆ ನಿಜಕ್ಕೂ ಕಾಳಜಿ ಇದ್ದರೆ ಸಂಪುಟ ಉಪಸಮಿತಿ ಬದಲು ಸದನ ಸಮಿತಿ ರಚಿಸಬೇಕಿತ್ತು. ಹಾಗೆ ಮಾಡಿ ಎಂದು ಒತ್ತಾಯಿಸಬೇಕಾಗಿದ್ದ ಬಿಜೆಪಿಯೇ ಚಕಾರ ಎತ್ತಲಿಲ್ಲ. ಈ ವಿಷಯ ಕುರಿತು ಮೊದಲಿಗೆ ದಾಖಲೆ ಸಮೇತ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಶಾಸಕ ಎಚ್.ಕೆ. ಪಾಟೀಲ ನೇತೃತ್ವದಲ್ಲಿ ಸದಸನ ಸಮಿತಿ ರಚಿಸಬಹುದಿತ್ತಲ್ಲ? ಹೀಗೆ ಮಾಡಿ ಎಂದು ಬಿಜೆಪಿಯೂ ಕೇಳಲಿಲ್ಲವಲ್ಲ? ಆದರೂ ಇಂದು ಏನಾಗುತ್ತೆ ನೋಡೋಣ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...