Homeಕರ್ನಾಟಕತಳಮಟ್ಟದ ವರದಿ ಎಂದರೆ ಕೊನೆ ನಿಮಿಷದಲ್ಲಿ ವಿಮಾನಗಳಲ್ಲಿ ಓಡಾಡಿ ಮಾಡುವ ಕಂಫರ್ಟ್ ಝೋನ್‌ನ ಕೆಲಸವಲ್ಲ -...

ತಳಮಟ್ಟದ ವರದಿ ಎಂದರೆ ಕೊನೆ ನಿಮಿಷದಲ್ಲಿ ವಿಮಾನಗಳಲ್ಲಿ ಓಡಾಡಿ ಮಾಡುವ ಕಂಫರ್ಟ್ ಝೋನ್‌ನ ಕೆಲಸವಲ್ಲ – ಪತ್ರಕರ್ತೆ ಪ್ರಿಯಾ ತವಸ್ಸೆರಿ

- Advertisement -
- Advertisement -

ತಳಮಟ್ಟದ ವರದಿ ಎಂಬುದು ಕೊನೆ ನಿಮಿಷದಲ್ಲಿ ವಿಮಾನಗಳಲ್ಲಿ ಓಡಾಡಿ ಕಾರ್‌ಗಳಲ್ಲಿ ತಿರುಗಾಡಿ ಮಾಡುವ ಕಂಫರ್ಟ್ ಝೋನ್‌ನ ಕೆಲಸವಲ್ಲ, ಚುನಾವಣಾ ವರದಿಗಳಂತಲ್ಲ ಎಂದು ಚಂಬಲ್ ಮೀಡಿಯಾದ ನಿರ್ದೇಶಕಿ ಪ್ರಿಯಾ ತವಸ್ಸೆರಿ ಶನಿವಾರ ಹೇಳಿದ್ದಾರೆ. ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ನಡೆದ ಈದಿನ.ಕಾಮ್ ಎರಡನೇ ವರ್ಷದ ಓದುಗರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮದು ಮುಖ್ಯವಾಹಿನಿ ಮಾಧ್ಯಮಗಳಂತಹ ಸಂಸ್ಥೆಳಗಲ್ಲ, ಬದಲಾಗಿ ನಮ್ಮಂತಹ ಸಂಸ್ಥೆಗಳು ಇದನ್ನು ಸಾಮಾಜಿಕ ಮೌಲ್ಯಗಳ, ಜಾತಿ, ಜೆಂಡರ್‌ನಂತಹ ಪ್ರಶ್ನೆಗಳನ್ನೆತ್ತಲು ಇದನ್ನು ಮಾಡುತ್ತಿವೆ ಎಂದು ಹೇಳಿದರು.

ಪ್ರಿಯಾ ತವಸ್ಸೆರಿ ಅವರ ಚಂಬಲ್ ಮೀಡಿಯಾವು, ದಲಿತ, ಮುಸ್ಲಿಮ್ ಮತ್ತು ಅಂಚಿಗೊತ್ತಲ್ಪಟ್ಟ ಸಮುದಾಯಗಳ ಮಹಿಳೆಯರು ಸೇರಿ ಕಳೆದ 23 ವರ್ಷಗಳಿಂದ ನಡೆಸುತ್ತಿರುವ ಪತ್ರಿಕೆಯಾಗಿದೆ. ಈದಿನ.ಕಾಮ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಮ್ಮ ಸಂಸ್ಥೆ ಬಹುತ್ವದಿಂದ ಕೂಡಿದ ಮಾಧ್ಯಮ ಸಂಸ್ಥೆಯ ಭಾಗ. ಗ್ರಾಮೀಣ ಅಂಚಿಗೊತ್ತಲ್ಪಟ್ಟ ಮಹಿಳೆಯರು ತಳಮಟ್ಟದಲ್ಲಿ ಕೆಲಸ ಮಾಡುತ್ತಾ ನಡೆಸಯತ್ತಿರುವ ಏಕೈಕ ಮಾಧ್ಯಮ ಸಂಸ್ಥೆಯ ಭಾಗವಾಗಿರುವುದು ನಮಗೆ ಹೆಮ್ಮೆ” ಎಂದು ಹೇಳಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ

“ಚಂಬಲ್ ಮೀಡಿಯಾದ, ಖಬರ್ ಲೆಹರಿಯಾಗಿಂತ ಮುಂಚೆ ನಾನು ರಾಷ್ಟ್ರೀಯ ಮಾಧ್ಯಮವೊಂದರ ಭಾಗವಾಗಿದ್ದೆ. ಯಾವ ಚಾನಲ್ ಎಂಬುದನ್ನು ನೀವೇ ಊಹಿಸಿ. ಅದು ಜನಪರವಾಗಿ ಆರಂಭವಾಗಿ ಕಾರ್ಪೊರೇಟ್‌ಗಳ ಪಾಲಾದ ಮಾಧ್ಯಮ ಸಂಸ್ಥೆಯಾಗಿದೆ. ಈ ಚಾನಲ್‌ ಅನ್ನು ಕಾರ್ಪೊರೇಟ್‌ಗಳು ಆವರಿಸಿದಾಗ ಮೊಟ್ಟಮೊದಲು ಮುಚ್ಚಿದ್ದು ತಳಮಟ್ಟದ ವರದಿ ಮಾಡುತ್ತಿದ್ದ ನಮ್ಮ ಕಾರ್ಯಕ್ರಮವಾಗಿದೆ.” ಎಂದು ಬೇಸರ ವ್ಯಕ್ತಪಡಿಸಿದರು.

ಮಾಧ್ಯಮ ಸಂಸ್ಥೆಗಳಾದ ಖಬರ್ ಲೆಹರಿಯಾ, ಈದಿನ, ವೈರ್ ರೀತಿಯ ಹಲವು ಮಾಧ್ಯಮಗಳು ಉಳಿದುಕೊಂಡು ಕೆಲಸ ಮಾಡಬೇಕಾದ ಸವಾಲನ್ನು ಎದುರಿಸಿ ತಮ್ಮ ಕರ್ತವ್ಯ ನಿಭಾಯಿಸುತ್ತಿವೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

“ತಳಮಟ್ಟದ ವರದಿ ಎಂಬುದು ಕೊನೆ ನಿಮಿಷದಲ್ಲಿ ವಿಮಾನಗಳಲ್ಲಿ ಓಡಾಡಿ ಕಾರ್‌ಗಳಲ್ಲಿ ತಿರುಗಾಡಿ ಮಾಡುವ ಕಂಫರ್ಟ್ ಝೋನ್‌ನ ಕೆಲಸವಲ್ಲ. ಚುನಾವಣಾ ವರದಿಗಳಲ್ಲ. ನಮ್ಮದು ಮುಖ್ಯವಾಹಿನಿ ಮಾಧ್ಯಮಗಳಂತಹ ಸಂಸ್ಥೆಳಗಲ್ಲ, ಬದಲಾಗಿ ನಮ್ಮಂತಹ ಸಂಸ್ಥೆಗಳು ಇದನ್ನು ಸಾಮಾಜಿಕ ಮೌಲ್ಯಗಳ, ಜಾತಿ, ಜೆಂಡರ್‌ನಂತಹ ಪ್ರಶ್ನೆಗಳನ್ನೆತ್ತಲು ಇದನ್ನು ಮಾಡುತ್ತಿವೆ. ಈ ವಿಷಯಗಳು ಸಂಕೀರ್ಣವಾಗಿದ್ದು, ಇದು ಮೇಲ್ಮಟ್ಟದ ವಿಷಯಗಳಲ್ಲ. ಇವೆಲ್ಲ ಎಷ್ಟು ಆಳವಾಗಿ ಬೇರುಬಿಟ್ಟಿವೆ ಎಂದರೆ ಇದನ್ನು ನಿಭಾಯಿಸುವ ಮಾರ್ಗಗಳನ್ನು ಹುಡುಕಬೇಕಾಗುತ್ತದೆ. ಚಂಬಲ್ ಅಕಾಡೆಮಿಯಂತಹ ಸಂಸ್ಥೆಗಳು ಇದರಲ್ಲಿ ಭಾಗವಾದಾಗ, ವಿದ್ಯಾರ್ಥಿಗಳು ಎಷ್ಟೋ ಬಾರಿ ಹೊಸ ಕಣ್ಣೋಟ ಪಡೆಯುತ್ತಾರೆ” ಎಂದು ಹೇಳಿದರು.

“ಒಬ್ಬ ವಿದ್ಯಾರ್ಥಿನಿ ರಾಜ್ಯ ಮಟ್ಟದ ಕಬ್ಬಡಿ ಆಡುವಾಗ ಜೆಂಡರ್ ಜಾತಿ ತಾರತಮ್ಯ ಅನುಭವಿಸಿದ ಕಥೆಯನ್ನು ಬೇರೆ ದೃಷ್ಟಿಯಿಂದ ನೋಡುವುದನ್ನು ಚಂಬಲ್ ಅಕಾಡೆಮಿ ಕಲಿಸುತ್ತದೆ. ನಮ್ಮ ಹಿರಿಯ ಪತ್ರಕರ್ತರಾದ ಶಿವದೇವಿ ಅವರು ದಲಿತ ಸಮುದಾಯದಿಂದ ಬಂದವರು. ಅವರು ನಮ್ಮ ಕಣ್ಣೋಟವನ್ನು ಬದಲಿಸುತ್ತಾರೆ. ಕೆಲವೇ ಬದ್ಧತೆಯುಳ್ಳ ಪತ್ರಕರ್ತರು ಮಾತ್ರ ಗ್ರಾಮೀಣ ವಿಷಯಗಳನ್ನು ಹೇಳುತ್ತಿದ್ದಾರೆ” ಎಂದು ಹೇಳಿದರು.

“ಮಾಧ್ಯಮಗಳೊಳಗೆ ಗ್ರಾಮೀಣ ವಿಷಯಗಳ ಪ್ರಾತಿನಿಧ್ಯದಲ್ಲಿ ಬಹಳ ಅಸಮಾನತೆಯಿದೆ. ಅಂಚಿಗೊತ್ತಲ್ಪಟ್ಟ ಸಮುದಾಯಗಳ ಈ ಕಥೆಗಳು ಹೊರಬರುವವರೆಗೆ ಈ ಅಸಮಾನತೆಗಳು ಬೆಳೆಯುತ್ತಲೇ ಹೋಗುತ್ತವೆ. ಕಳೆದ 23 ವರ್ಷಗಳಲ್ಲಿ ದಲಿತ, ಮುಸ್ಲಿಮ್, ಆದಿವಾಸಿ ಮಹಿಳೆಯರನ್ನು ಪತ್ರಕರ್ತರಾಗಿ ಸಬಲರನ್ನಾಗಿಸುವ ಕೆಲಸ, ಅವರು ಸರ್ಕಾರಗಳನ್ನು ಉತ್ತರದಾಯಿಗಳನ್ನಾಗಿ ಹಿಡಿಯುವ ಸಾಮರ್ಥ್ಯಗಳಿಸಿಕೊಳ್ಳುವ ಕೆಲಸ ಮಾಡಿದ್ದೇವೆ.

ಇಂತಹ ಸ್ತ್ರೀವಾದಿ ತಳಮಟ್ಟದ ಮಾಧ್ಯಮವನ್ನು ಉಳಿಸಿಕೊಳ್ಳವುದು ಸುಲಭವಲ್ಲ. 23 ವರ್ಷ ಉಳಿದಿದ್ದೇವೆ ಎಂದರೆ ನಾವು ಸಮಯಕ್ಕೆ ತಕ್ಕಂತೆ ಬದಲಾಗಿದ್ದೇವೆ ಪ್ರಯೋಗಳನ್ನು ಮಾಡಿದ್ದೇವೆ ಎಂದರ್ಥ. ನಾವು ಡಿಜಿಟಲೀಕರಣ ಆದೆವು, ಸಂಶೋಧನಾ ವಿಭಾಗ ಆರಂಭಿಸಿದೆವು. ಸಾಕ್ಷರತಾ ಕಾರ್ಯಕ್ರಮವಾಗಿ ಆರಂಭವಾಗಿ, ಪ್ರಪಂಚ ಮಟ್ಟದಲ್ಲಿ ಗುರುತಿಸಲ್ಪಡುವ ಮಾಧ್ಯಮವಾಗಿ ಬೆಳೆದಿರುವುದು, ವೈವಿಧ್ಯಮಯವಾದ ದನಿಗಳನ್ನು ಮುನ್ನೆಲೆಗೆ ತಂದಿರುವುದು, ನಾಲ್ಕು ರಾಜ್ಯಗಳಲ್ಲಿ ತಳಮಟ್ಟದ ಸುದ್ದಿಗಳನ್ನು ಹೊರತಂದಿರುವುದು, ಸಿನೆಮಾಗಳನ್ನು ಮಾಡಿರುವುದು ನಮ್ಮ ವಿಶೇಷ” ಎಂದು ಪ್ರಿಯಾ ಅವರು ಹೇಳಿದ್ದಾರೆ.

ಇದನ್ನೂ ಓದಿ: ಬೇರೆ ಮಾಧ್ಯಮಗಳಿಗೆ ಹೋಲಿಸಿದರೆ ಡಿಜಿಟಲ್ ಮಾಧ್ಯಮ ಸತ್ಯ ತಿಳಿಸುತ್ತದೆ – ಸಿಎಂ ಸಿದ್ದರಾಮಯ್ಯ

ಬೇರೆ ಮಾಧ್ಯಮಗಳಿಗೆ ಹೋಲಿಸಿದರೆ ಡಿಜಿಟಲ್ ಮಾಧ್ಯಮ ಸತ್ಯ ತಿಳಿಸುತ್ತದೆ – ಸಿಎಂ ಸಿದ್ದರಾಮಯ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಬಿವಿಪಿ ದಾಂಧಲೆ : ಚರ್ಚಾ ಕಾರ್ಯಕ್ರಮ ಆಯೋಜಿಸಿದ್ದ ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಿಸಿದ ಅಜೀಂ ಪ್ರೇಮ್ ಜಿ ವಿವಿ

ಅಜೀಂ ಪ್ರೇಮ್‌ ಜಿ ವಿಶ್ವವಿದ್ಯಾಲಯಕ್ಕೆ (ಎಪಿಯು) ಎಬಿವಿಪಿ ಸದಸ್ಯರು ನುಗ್ಗಿ ದಾಂಧಲೆ ನಡೆಸಿದ ಬಳಿಕ, ಕ್ಯಾಂಪಸ್‌ನಲ್ಲಿ ಚರ್ಚಾ ಕಾರ್ಯಕ್ರಮ ಆಯೋಜಿಸಿದ್ದ 'ಸ್ಪಾರ್ಕ್ ರೀಡಿಂಗ್ ಸರ್ಕಲ್' ಎಂಬ ಸಾಮಾಜಿಕ ಮಾಧ್ಯಮ ಪುಟದ ವಿರುದ್ಧ ಕುಲಸಚಿವರು...

2019ರ ಈಸ್ಟರ್ ದಾಳಿಗೆ ಸಂಬಂಧಿಸಿದಂತೆ ಶ್ರೀಲಂಕಾದ ಮಾಜಿ ಗುಪ್ತಚರ ಮುಖ್ಯಸ್ಥರ ಬಂಧನ

2019ರ ಈಸ್ಟರ್ ಭಾನುವಾರದ ಬಾಂಬ್ ಸ್ಫೋಟಗಳಿಗೆ ಸಂಬಂಧಿಸಿದಂತೆ ಶ್ರೀಲಂಕಾದ ಅಪರಾಧ ತನಿಖಾಧಿಕಾರಿಗಳು ಮಾಜಿ ರಾಜ್ಯ ಗುಪ್ತಚರ ಸೇವೆ (SIS) ಮುಖ್ಯಸ್ಥ ನಿವೃತ್ತ ಮೇಜರ್ ಜನರಲ್ ಸುರೇಶ್ ಸಲ್ಲೇ ಅವರನ್ನು ಬಂಧಿಸಿದ್ದಾರೆ ಎಂದು ಪೊಲೀಸ್...

ಹೈದರಾಬಾದ್| ವಿಡಿಯೋ ಗೇಮ್ ಆಡಬೇಡ ಎಂದಿದ್ದಕ್ಕೆ ನೇಣಿಗೆ ಶರಣಾದ 12 ವರ್ಷದ ಬಾಲಕ

ವಿಡಿಯೋ ಗೇಮ್ ಆಡಿದ್ದಕ್ಕಾಗಿ ತಂದೆ ನಿರಂತರವಾಗಿ ಬೈಯುತ್ತಿದ್ದ ಕಾರಣ 12 ವರ್ಷದ ಬಾಲಕ (ಫೆ.26) ಗುರುವಾರ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ ಎಂದು 'ಸಿಯಾಸತ್' ವರದಿ ಮಾಡಿದೆ. ಬಂಜಾರಾ ಹಿಲ್ಸ್‌ನ...

‘ಕೋಮು ಸಾಮರಸ್ಯ ಕದಡುವ ಸಾಧ್ಯತೆ’: ‘ದಿ ಕೇರಳ ಸ್ಟೋರಿ-2’ ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ

'ಕೇರಳ ಸ್ಟೋರಿ 2 : ಗೋಸ್ ಬಿಯಾಂಡ್' ಸಿನಿಮಾದ ಸೆನ್ಸಾರ್ ಪ್ರಮಾಣೀಕರಣವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ಗುರುವಾರ (ಫೆ.26) ಸಿನಿಮಾದ ಬಿಡುಗಡೆಗೆ ತಡೆ ನೀಡಿದೆ. ಸಿನಿಮಾ ನಾಳೆ...

ಕೈದಿಗಳಿಗೆ ನಿಯತಕಾಲಿಕ ವೈದ್ಯಕೀಯ ತಪಾಸಣೆಯ ಹಕ್ಕಿದೆ: ಮದ್ರಾಸ್ ಹೈಕೋರ್ಟ್ 

ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು, ಪ್ರತಿಯೊಬ್ಬ ಕೈದಿಯೂ ನಿಯತಕಾಲಿಕ ವೈದ್ಯಕೀಯ ತಪಾಸಣೆಗೆ ಅರ್ಹನಾಗಿದ್ದು, ಅಂತಹ ಆರೋಗ್ಯ ರಕ್ಷಣೆ ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಲಾದ ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ವ್ಯಾಪ್ತಿಗೆ...

ಡಿಜೆ ಮ್ಯೂಸಿಕ್ ವಿವಾದ: ಅಲಿಗಢದಲ್ಲಿ ದಲಿತ ಕುಟುಂಬದ ಮದುವೆ ಮೆರವಣಿಗೆ ಮೇಲೆ ದಾಳಿ

ಉತ್ತರ ಪ್ರದೇಶ ರಾಜ್ಯದ ಅಲಿಗಢ ಸಮೀಪದ ಸುನಾನಾ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದ ಬಾರಾತ್ ಸಮಯದಲ್ಲಿ ಹಾಕಿದ್ದ ಡಿಜೆ ಮ್ಯೂಸಿಕ್‌ನಿಂದ ವಿವಾದ ಉಂಟಾಗಿದ್ದು, ದಲಿತ ಕುಟುಂಬದ ಮದುವೆ ಮೆರವಣಿಗೆಯ ಮೇಲೆ ದಾಳಿ ಮಾಡಲಾಗಿದೆ...

‘ನೆತನ್ಯಾಹು ಅವರ ನಿರ್ಲಜ್ಜ ಸಮರ್ಥನೆ’ : ಪ್ರಧಾನಿ ಮೋದಿಯ ನೆಸೆಟ್ ಭಾಷಣ ಟೀಕಿಸಿದ ಕಾಂಗ್ರೆಸ್

ಇಸ್ರೇಲ್ ಸಂಸತ್ ನೆಸೆಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣವನ್ನು ಕಾಂಗ್ರೆಸ್ ಗುರುವಾರ (ಫೆ.26) ತೀವ್ರವಾಗಿ ಟೀಕಿಸಿದ್ದು, ಇದು ಅವರ ಆತಿಥೇಯರಾದ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ 'ನಿರ್ಲಜ್ಜ ಸಮರ್ಥನೆ' ಎಂದಿದೆ. ಇಸ್ರೇಲ್ ರಾಷ್ಟ್ರದ...

ವಿವಾದಿತ ಎನ್‌ಸಿಇಆರ್‌ಟಿ ಪಠ್ಯಪುಸ್ತಕ ನಿಷೇಧಿಸಿದ ಸುಪ್ರೀಂ ಕೋರ್ಟ್

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಸಿದ್ದಪಡಿಸಿದ 8 ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿರುವ 'ನ್ಯಾಯಾಂಗದಲ್ಲಿನ ಭ್ರಷ್ಟಾಚಾರ' ಎಂಬ ಅಧ್ಯಾಯದ ಕುರಿತು ಸುಪ್ರೀಂ ಕೋರ್ಟ್ ಗುರುವಾರ (ಫೆ.26) ತೀವ್ರ ಅಸಮಾಧಾನ...

ಕ್ಯೂಬಾ ಜಲಪ್ರದೇಶ ಪ್ರವೇಶಿಸಿದ ಅಮೆರಿಕಾ ಮೂಲದ ಸ್ಪೀಡ್‌ಬೋಟ್ ಮೇಲೆ ಕ್ಯೂಬಾ ಪಡೆಗಳಿಂದ ಗುಂಡಿನದಾಳಿ, ನಾಲ್ವರು ಸಾವು 

ಕ್ಯೂಬಾ: ಬುಧವಾರ ಕ್ಯೂಬಾದ ಪ್ರಾದೇಶಿಕ ಜಲಪ್ರದೇಶವನ್ನು ಪ್ರವೇಶಿಸಿದ ಫ್ಲೋರಿಡಾ-ನೋಂದಾಯಿತ ಸ್ಪೀಡ್‌ಬೋಟ್‌ನ ಮೇಲೆ ಕ್ಯೂಬಾ ಭದ್ರತಾ ಪಡೆಗಳು ಗುಂಡು ಹಾರಿಸಿವೆ. ಈ ವೇಳೆ ಬೋಟ್ ನಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದು, ಆರು ಜನರು ಗಾಯಗೊಂಡರುವುದಾಗಿ ವರದಿಯಾಗಿದೆ....

ಬಾಲಕಿಯೊಂದಿಗೆ ಅನುಚಿತ ವರ್ತನೆ : ಸ್ವಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪ್ರಕರಣ ದಾಖಲು

ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪ ಮೇಲೆ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಮಹಲ್ ರೋಝಾದ ಸ್ವಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪ್ರಕರಣ ದಾಖಲಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಶಹಾಪುರ...