Homeನೂರರ ನೋಟಆದರೂ ಸಹ ನನ್ನ ಬಾಯಿಂದ ‘ಮುಗಿಸಿಬಿಡಿ’ ಎಂಬ ಮಾತು ಬರಬಾರದಾಗಿತ್ತು ಎಂದು ಆತ್ಮ ಹೇಳುತ್ತದೆ: ದೊರೆಸ್ವಾಮಿ

ಆದರೂ ಸಹ ನನ್ನ ಬಾಯಿಂದ ‘ಮುಗಿಸಿಬಿಡಿ’ ಎಂಬ ಮಾತು ಬರಬಾರದಾಗಿತ್ತು ಎಂದು ಆತ್ಮ ಹೇಳುತ್ತದೆ: ದೊರೆಸ್ವಾಮಿ

ದೇವನೂರು ಮಹದೇವ ಮತ್ತು ಸಚಿವ ಸುರೇಶ್‌ಕುಮಾರ್ ಮಧ್ಯೆ ನಡೆದ ಈ ಪತ್ರ ವ್ಯವಹಾರ ಬಹಳ ಆತ್ಮೀಯತೆಯಿಂದ ಕೂಡಿದೆ. ರಾಗದ್ವೇಷರಹಿತವಾದ ಈ ಬಗೆಯ ಪತ್ರ ವ್ಯವಹಾರ ಸಮಾಜದಲ್ಲಿ, ದ್ವೇಷ ಬೆಳೆಸುವ ಈ ದಿನಗಳಲ್ಲಿ ಸಾಮರಸ್ಯ ತರಲು ಸಹಕಾರಿಯಾಗುವುದೆಂದು ನಾನು ಭಾವಿಸುತ್ತೇನೆ.

- Advertisement -
- Advertisement -

ನನ್ನ ವಿಷಯದಲ್ಲಿ ದೇವನೂರು ಮಹದೇವ ಮತ್ತು ಸಚಿವ ಸುರೇಶ್‌ಕುಮಾರ್ ಮಧ್ಯೆ ನಡೆದ ಪತ್ರ ವ್ಯವಹಾರವನ್ನು ಇಲ್ಲಿ ಮುದ್ರಿಸಲಾಗಿದೆ.

ಉಭಯತ್ರರೂ ನನ್ನ ಸ್ನೇಹಿತರು ಹಾಗೂ ಹಿತೈಷಿಗಳು. ದೇವನೂರು ಮಹದೇವ ಅವರು ತಮ್ಮ ಪತ್ರದಲ್ಲಿ ಅಸಲಿಯನ್ನು ನಕಲಿ ಮಾಡುವುದು ಸರಿಯೇ ಎಂದು ಪ್ರಶ್ನೆ ಮಾಡಿದ್ದಾರೆ. ನನ್ನ ಮೇಲೆ ಸಲ್ಲದ ಆರೋಪ ಹೊರೆಸಿ ನನ್ನನ್ನು ನಕಲಿ ಹೋರಾಟಗಾರ ಪಾಕ್ ಏಜೆಂಟ್ ಎಂದೆಲ್ಲ ಆಧಾರ ರಹಿತ ಆಪಾದನೆ ಮಾಡಿ ತೇಜೋವಧೆ ಮಾಡಿರುವ ಬಸವ ಗೌಡ ಯತ್ನಾಳ್ ನಾನು ನಕಲಿ ಪತ್ರಕರ್ತ, 38 ದಿನಗಳ ಪೌರವಾಣಿ ಸಂಪಾದಕ, ಅರುಳು ಮರುಳು ಎಂದೆಲ್ಲ ಅಪ್ಪಟ್ಟ ಸುಳ್ಳು ಆರೋಪಗಳನ್ನು ಮಾಡಿ ನನ್ನ ಚಾರಿತ್ರ್ಯ ವಧೆ ಮಾಡಿರುವ ಬಾಬುಕೃಷ್ಣಮೂರ್ತಿ ಮುಂತಾದ ಮಹನೀಯರೆಲ್ಲರನ್ನೂ ಕುರಿತು ದೇವನೂರು ಮಹದೇವ ನೊಂದು ನುಡಿದಿದ್ದಾರೆ.

ಮಹಾದೇವು ಮುಂದುವರೆದು ಕೊಳೆತ ಹಣ್ಣುಗಳ ಜೊತೆ ತಾಜಾ ಹಣ್ಣುಗಳು ಬೆರೆತುಹೊದಾಗ, ಅವೂ ಕೆಡಬಹುದೇ ಎಂದು ಪ್ರಶ್ನೆ ಮಾಡಿದ್ದಾರೆ. ಮಹದೇವರ ಈ ಮಾತು ಸುರೇಶ್‌ಕುಮಾರ್ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಸುರೇಶ್‌ಕುಮಾರ್ ಅವರು ದೇವನೂರು ಮಹದೇವ ಅವರಿಗೆ ಈ ಪ್ರಶ್ನೆಗೆ ಉತ್ತರ ಕೊಡುವುದರಲ್ಲಿ ಮುಗ್ಗರಿಸಿ, ನನ್ನವರನ್ನು ಡಿಫೆಂಡ್ ಮಾಡಿಕೊಳ್ಳುವುದು ನನ್ನ ಧರ್ಮ ಎಂದು ಉತ್ತರಿಸಿದ್ದಾರೆ. ಅವರು ಯಾರನ್ನು ಡಿಫೆಂಡ್ ಮಾಡಿಕೊಂಡರು ಎಂಬುದನ್ನೂ ತಿಳಿಸಿದ್ದಾರೆ.


ಇದನ್ನೂ ಓದಿ: ದೊರೆಸ್ವಾಮಿಯವರ ವಿಚಾರವಾಗಿ ಎಸ್.ಸುರೇಶ್ ಕುಮಾರ್ ಅವರಿಗೆ ದೇವನೂರು ಮಹಾದೇವರವರು ಬರೆದ ಬಹಿರಂಗ ಪತ್ರ

ಇದನ್ನೂ ಓದಿ: ದೊರೆಸ್ವಾಮಿ ವಿಚಾರವಾಗಿ ದೇವನೂರು ಪತ್ರಕ್ಕೆ ಸುರೇಶ್‌ ಕುಮಾರ್‌ ಪ್ರತಿಕ್ರಿಯೆ..


ಬ್ರಿಟಿಷರ ವಿರುದ್ಧ ಅಷ್ಟೊಂದು ತೀವ್ರತೆಯಿಂದ ಹೋರಾಡಿದ ವೀರಸಾವರ್ಕರ್ ಕರಿನೀರುಶಿಕ್ಷೆ ಅನುಭವಿಸುವಾಗ ಏಕೆ ಶತ್ರು ಬ್ರಿಟಿಷರಿಗೆ ಶರಣಾಗತರಾದರು? ಬ್ರಿಟಿಷರು ಹಾಕಿದ ಎಲ್ಲ ಷರತ್ತುಗಳಿಗೆ ಅಂದರೆ ನಾನು ಬಿಡುಗಡೆಯಾದರೆ ನನ್ನ ಜಿಲ್ಲೆಬಿಟ್ಟು ಹೊರಗೆ ಓಡಾಡುವುದಿಲ್ಲ. ಪತ್ರಿಕೆಗಳಿಗೆ ಲೇಖನ ಬರೆಯುವುದಿಲ್ಲ. ನಿಮ್ಮ ಆಜ್ಞಾಪಾಲಕನಾಗಿರುತ್ತೇನೆ ಎಂದೆಲ್ಲ ಬರೆದುಕೊಡಲು ಅವರ ಮನಸ್ಸು ಹೇಗೆ ಒಪ್ಪಿಕೊಂಡಿತು? ಧರ್ಮ ಗ್ಲಾನಿ ಅವರಲ್ಲಿ ಹೇಗೆ ಉಂಟಾಯಿತು? ಎಂದು ವೀರ ಸಾವರ್ಕರ್ ನಡವಳಿಕೆಯನ್ನು ಒಪ್ಪಿಕೊಳ್ಳುವ ಮೊದಲು ಚಿಂತಿಸಬೇಡವೇ ಸುರೇಶ್‌ಕುಮಾರ್ ಅವರೇ?

ನನ್ನನ್ನು ಶಾಸನ ಸಭೆಯಲ್ಲಿ ಮೇಲ್ಮನೆ ಸದಸ್ಯ ಬಿಜೆಪಿ ಎಂಎಲ್‌ಸಿ ರವಿಕುಮಾರ್ ನನಗೆ ಅಂತರಾಷ್ಟ್ರೀಯ ವ್ಯಕ್ತಿಗಳ ಸಂಬಂಧ ಇದೆ ಎಂದು ವಿಧಾನ ಪರಿಷತ್ತಿನಲ್ಲಿ ಹೇಳಿದ್ದಾರೆ. ಮಂತ್ರಿ ಈಶ್ವರಪ್ಪನವರು ನಾನು ಯಾರದ್ದೋ ಜೊತೆಗಿರುವ ಫೋಟೊ ತೋರಿಸಿ ಪಾಕಿಸ್ತಾನದ ನಂಟು ನನಗಿದೆ ಎಂದು ವಿಧಾನಸಭೆಯಲ್ಲಿ ಹೇಳಿದ್ದಾರೆ. ನಾನು ಅತಿಥಿಯಾಗಿ ಹೋಗಿರುವ ನೂರಾರು ಸಮಾರಂಭಗಳಲ್ಲಿ ಸಮಾರಂಭ ಮುಗಿದ ಮೇಲೆ ಜನ ನನ್ನ ಜೊತೆ ಫೋಟೊ ತೆಗೆಸಿಕೊಳ್ಳಲು ಮುಗಿಬೀಳುತ್ತಾರೆ. ಹೀಗೆ ಫೋಟೊ ತೆಗೆಸಿಕೊಂಡವರು ಸಾವಿರಾರು ಜನ, ಅದರಲ್ಲಿ ಇದೂ ಒಂದಿರಬಹುದು. ಅಷ್ಟಕ್ಕೇ ನನ್ನನ್ನು ನಕ್ಸಲಿಯ, Anti National, ಪಾಕಿಸ್ತಾನಿ ಏಜೆಂಟ್ ಎಂದು ಕರೆಯವರು ಮೊದಲು ನನ್ನ ಅರಾಷ್ಟ್ರಿಕತೆಗೆ, ಪಾಕಿಸ್ತಾನ್ ಏಜೆಂಟ್ ಎಂಬುದಕ್ಕೆ ಬೇರೆ ಪುರಾವೆಗಳನ್ನು ನೀಡುವ ಒಂದು ಫೋಟೊ ತೋರಿಸಿ. ಇಂತಹ ಗುರುತರ ಆಪಾದನೆ ಮಾಡುವುದು ಮಂತ್ರಿವರ್ಯರಿಗೆ, ಶಾಸಕರಿಗೆ ಗೌರವ ತರುವುದಿಲ್ಲ.

ಅನಂತಕುಮಾರ್ ರಾಷ್ಟ್ರವಿರೊಧಿ ವ್ಯಕ್ತಿ ಎಂದು ಹೇಳಿ ನನಗೆ ಧಿಕ್ಕಾರ ಹೇಳಿದ್ದು, ಮಂತ್ರಿಗಳಾದ ಸೋಮಣ್ಣ, ಈಶ್ವರಪ್ಪ ಮುಂತಾದವರು ನನ್ನ ಮೇಲೆ ಆರೊಪಗಳನ್ನು ಮಾಡಿದ್ದು ನಿಮಗೆ ಸಮ್ಮತ ಮತ್ತು ಅವರನ್ನೆಲ್ಲ ಬೆಂಬಲಿಸುವುದು ನಿಮ್ಮ ಧರ್ಮ ಎಂದು ನಿಮ್ಮ ಹೃದಯ ಒಪ್ಪುತ್ತದೆಯೇ?

ವೀರಸಾವರ್ಕರರಿಗೂ, ಭಗತ್‌ಸಿಂಗ್‌ಗೂ ಬ್ರಿಟಿಷರ ಬಗೆಗೆ ಒಂದೇ ಬಗೆಯ ಭಾವನೆ ಇತ್ತು. ಬ್ರಿಟಿಷರನ್ನು ಭಾರತದಿಂದ ಓಡಿಸಲು ಅವರದೇ ಕಾರ್ಯಕ್ರಮವಿತ್ತು, ಭಗತ್‌ಸಿಂಗ್‌ಗೆ ಮರಣದಂಡನೆ ವಿಧಿಸಿ ಸೆರೆಮನೆಯಲ್ಲಿಟ್ಟಿದ್ದರು. ಆಗ ಅವರ ತಂದೆ ಬ್ರಿಟಿಷರಿಗೆ ಪತ್ರ ಬರೆದು ‘ನನ್ನ ಮಗ ತಿಳಿಯದೆ ಈ ಹತ್ಯೆ ಮಾಡಿದ್ದಾನೆ ದಯವಿಟ್ಟು ಅವನಿಗೆ ಪ್ರಾಣಭಿಕ್ಷೆ ನೀಡಿ’ ಎಂದು ಪತ್ರ ಬರೆದಿರುವ ವಿಚಾರ ಭಗತ್‌ಸಿಂಗ್‌ಗೆ ಗೊತ್ತಾಯಿತು. ನನ್ನ ತಂದೆ ಪುತ್ರ ಮೋಹದಿಂದ ನನ್ನ ಪ್ರಾಣ ಉಳಿಸಲು ನಮ್ಮ ಶತ್ರುಗಳಾದ ಬ್ರಿಟಿಷರಲ್ಲಿ ನನ್ನ ಪ್ರಾಣಭಿಕ್ಷೆ ಕೋರಿದ್ದಾರೆ ಇವರೆಂತಹ ತಂದೆ! ನನ್ನನ್ನು ಬ್ರಿಟಿಷರು ಪ್ರಾಣಭಿಕ್ಷೆ ನೀಡಿ ಬಿಡುಗಡೆ ಮಾಡಿದರೂ ನಾನೂ ಬ್ರಿಟಿಷ್ ಅಧಿಕಾರಿಗಳನ್ನು ಕೊಲ್ಲುವ ಕಾರ್ಯವನ್ನು ಮುಂದುವರೆಸುತ್ತೇನೆ ಎಂದು ಘರ್ಜಿಸಿದರು.

ತನ್ನ ಉಸಿರುವವರೆಗೆ ದೇಶಭಕ್ತಿಯನ್ನು ಬೆಳಗಿದ ಭಗತ್‌ಸಿಂಗ್ ಎಲ್ಲಿ? ಹೋರಾಟದ ಮಧ್ಯೆಯೇ ಶತ್ರುವಿಗೆ ಶರಣಾಗತನಾಗಿ, ಸ್ವಾತಂತ್ರ್ಯ ಹೋರಾಟಕ್ಕೆ ಕಪ್ಪು ಮಸಿ ಬಳಿದ ವೀರಸಾವರ್ಕರ್ ಎಲ್ಲಿ? ತನ್ನವರನ್ನು ಬೆಂಬಲಿಸುವ ಆತುರದಲ್ಲಿ ಹೋರಾಟದ ಚರಿತ್ರೆಯನ್ನೇ ಮರೆತರು ಸಚಿವ ಸುರೇಶ್‌ಕುಮಾರ್!

ಇನ್ನು ಎರಡನೆಯ ವಿಷಯವೆಂದರೆ ನಾನು ಮೋದಿಯವರನ್ನು ಮುಗಿಸಿಬಿಡಿ ಎಂದು ಹೇಳಿದೆನೆಂಬುದು. ಈ ಮಾತನ್ನು ನಾನು ಆಡಿರುವುದು ಕರ್ನಾಟಕದಲ್ಲಿ ನಡೆದ ವಿಧಾನಸಭೆ ಚುನಾವಣೆ ಸಮಯದಲ್ಲಿ. ಮಹದೇವು ಈ ವಿಚಾರದಲ್ಲಿ ವಿವರಿಸಿ ಸಮಜಾಯಿಸಿ ನೀಡಿದ್ದಾರೆ. ಇದು ಚುನಾವಣೆ ಸಂದರ್ಭದಲ್ಲಿ ಹೇಳಿದ ಮಾತು. ಚುನಾವಣೆಯಲ್ಲಿ ಹೇಗಾದರೂ ಮಾಡಿ ವಿರೋಧ ಪಕ್ಷಗಳಾದ ಕಾಂಗ್ರೆಸ್, ಜಾತ್ಯಾತೀತ ಜನತಾದಳಗಳನ್ನು ಸೋಲಿಸಬೇಕೆಂದು ಮೋದಿ ಪಣ ತೊಟ್ಟಿದ್ದ ಸಂದರ್ಭ ಅದು. ಆದರೆ ಆ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಬೇಕಾದಷ್ಟು ಸ್ಥಾನಗಳು ಮೋದಿಯ ಬಿಜೆಪಿಗೆ ಲಭಿಸಲೇ ಇಲ್ಲ.

ಆದರೂ ಸಹ ನನ್ನ ಬಾಯಿಂದ ‘ಮುಗಿಸಿಬಿಡಿ’ ಎಂಬ ಮಾತು ಬರಬಾರದಾಗಿತ್ತು ಎಂದು ಆತ್ಮ ಹೇಳುತ್ತದೆ.

ದೇವನೂರು ಮಹದೇವ ಮತ್ತು ಸಚಿವ ಸುರೇಶ್‌ಕುಮಾರ್ ಮಧ್ಯೆ ನಡೆದ ಈ ಪತ್ರ ವ್ಯವಹಾರ ಬಹಳ ಆತ್ಮೀಯತೆಯಿಂದ ಕೂಡಿದೆ. ರಾಗದ್ವೇಷರಹಿತವಾದ ಈ ಬಗೆಯ ಪತ್ರ ವ್ಯವಹಾರ ಸಮಾಜದಲ್ಲಿ, ದ್ವೇಷ ಬೆಳೆಸುವ ಈ ದಿನಗಳಲ್ಲಿ ಸಾಮರಸ್ಯ ತರಲು ಸಹಕಾರಿಯಾಗುವುದೆಂದು ನಾನು ಭಾವಿಸುತ್ತೇನೆ.


ಇದನ್ನೂ ಓದಿ: ಊಟ, ಉದ್ಯೋಗ, ಸ್ವಾವಲಂಬನೆ ಎಲ್ಲರ ಹಕ್ಕಾಗಲಿ: 103ನೇ ಜನ್ಮದಿನದಂದು HS ದೊರೆಸ್ವಾಮಿಯವರ ಆಶಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...