Homeಮುಖಪುಟಲಾಕ್‌ಡೌನ್ 15 ದಿನ ವಿಸ್ತರಣೆಗೆ ಹಲವು ಮುಖ್ಯಮಂತ್ರಿಗಳು ಹೇಳಿದ್ದೇನು?

ಲಾಕ್‌ಡೌನ್ 15 ದಿನ ವಿಸ್ತರಣೆಗೆ ಹಲವು ಮುಖ್ಯಮಂತ್ರಿಗಳು ಹೇಳಿದ್ದೇನು?

- Advertisement -
- Advertisement -

ಕೊರೊನಾ ಲಾಕ್‌ಡೌನ್ ಅನ್ನು ಎಪ್ರಿಲ್ 30 ವರೆಗೆ ಮುಂದುವರೆಸಲು, ಪ್ರಧಾನಿ ಮೋದಿ ಮತ್ತು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ವಿಡಿಯೋ ಸಭೆಯಲ್ಲಿ ಒಪ್ಪಿಕೊಂಡಿದ್ದಾರೆ.

ಇಂದು ವಿಡಿಯೋ ಸಮ್ಮೇಳನದಲ್ಲಿ ಮುಖ್ಯಮಂತ್ರಿಗಳೊಂದಿಗೆ ನಾಲ್ಕು ಗಂಟೆಗಳ ಕಾಲ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಕೊರೊನಾ ಲಾಕ್‌ಡೌನ್ ಅನ್ನು ಎರಡು ವಾರಗಳವರೆಗೆ ವಿಸ್ತರಿಸಲಾಗುವುದು ಎಂದು ಸೂಚಿಸಿದ್ದಾರೆ. ಈ ಹಿಂದೆ ಘೋಷಿಸಿದ್ದ 21 ದಿನಗಳ ಲಾಕ್‌ಡೌನ್ ಮಂಗಳವಾರ ಕೊನೆಕೊಳ್ಳುತ್ತದೆ.

“ಪ್ರಧಾನಿ ಲಾಕ್‌ಡೌನ್ ವಿಸ್ತರಿಸಿ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ. ಲಾಕ್‌ಡೌನ್ ಅನ್ನು ಮೊದಲೇ ಪ್ರಾರಂಭಿಸಿದ್ದರಿಂದ, ಮುಂದುವರಿದ ದೇಶಗಳಿಗಿಂತ ಭಾರತದ ಪರಿಸ್ಥಿತಿ ಉತ್ತಮವಾಗಿದೆ. ಅದನ್ನು ಈಗ ನಿಲ್ಲಿಸಿದರೆ ಎಲ್ಲಾವು ನಷ್ಟವಾಗುತ್ತದೆ. ಲಾಕ್ ಡೌನ್ ವಿಸ್ತರಿಸುವುದು ಮುಖ್ಯವಾಗಿದೆ” ಸಭೆಯ ಕೆಲವೇ ನಿಮಿಷಗಳ ನಂತರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಒಡಿಶಾ ಮತ್ತು ಪಂಜಾಬ್ ಈಗಾಗಲೇ ಲಾಕ್ ಡೌನ್ ವಿಸ್ತರಣೆಯನ್ನು ಘೋಷಿಸಿವೆ. ಬಿಹಾರ ಸರ್ಕಾರ ಕೇಂದ್ರಕ್ಕೆ ಬರೆದ ಪತ್ರದಲ್ಲಿ ಲಾಕ್ ಡೌನ್ ಅನ್ನು ವಿಸ್ತರಿಸಲು ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ; ಆದರೆ ಗ್ರಾಮೀಣ ನಿರ್ಮಾಣ ಮತ್ತು ಪ್ರವಾಹ ಪರಿಹಾರ ಕಾರ್ಯಗಳನ್ನು ಮುಂದುವರೆಸಲು ಬಯಸಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಬಿಹಾರದಲ್ಲಿ ಕಳೆದ ವರ್ಷ ಭಾರಿ ಪ್ರವಾಹ ಬಂದಿದ್ದರಿಂದ ಅಲ್ಲಿ ಪುನರ್ನಿರ್ಮಾಣ ಕಾರ್ಯಗಳು ಇನ್ನೂ ನಡೆಯುತ್ತಿವೆ.

ಲಾಕ್‌ಡೌನ್ ಅನ್ನು ಈಗಲೇ ತೆಗೆದುಹಾಕಿ ಕೊರೊನಾ ಪ್ರಕರಣಗಳು ಹೆಚ್ಚಾದರೆ ಅದನ್ನು ಎದುರಿಸಲು ಅಗತ್ಯವಾದ ಬೃಹತ್ ಸಂಪನ್ಮೂಲಗಳು ಇಲ್ಲ ಎಂದು ವಿಡಿಯೋ ಸಮ್ಮೇಳನದಲ್ಲಿ ಭಾಗವಹಿಸಿದ ಹೆಚ್ಚಿನ ಮುಖ್ಯಮಂತ್ರಿಗಳು ಹೇಳಿದರು. ಬಿಜೆಪಿ ಅಲ್ಲದ ಎಲ್ಲ ಮುಖ್ಯಮಂತ್ರಿಗಳು ಪ್ರಧಾನಿಯ ಬಳಿ ಪರಿಹಾರ ಪ್ಯಾಕೇಜ್ ಕೇಳಿದರು.

ಲಾಕ್ ಡೌನ್ ವಿಸ್ತರಣೆಯನ್ನು ಘೋಷಿಸಲು ಪ್ರಧಾನಿ ಮೋದಿ ಮತ್ತೆ ರಾಷ್ಟ್ರಕ್ಕೆ ದೂರದರ್ಶನ ಭಾಷಣ ಮಾಡುವ ಸಾಧ್ಯತೆ ಇದೆ. ಇಂದು ನಡೆದ ಸಭೆಯ ಅಂತ್ಯದ ವೇಳೆಗೆ, ಕೈಗಾರಿಕೆಗಳನ್ನು ಶ್ರೇಣೀಕೃತ ರೀತಿಯಲ್ಲಿ ಮತ್ತೆ ತೆರೆಯಲು ಅವಕಾಶ ನೀಡುವುದಾಗಿ ಪ್ರಧಾನಿ ಮೋದಿ ಹೇಳಿದರು.

“ಲಾಕ್‌ಡೌನ್ ಅನ್ನು ವಿಸ್ತರಿಸಿ. ಕೊರೊನಾ ವೈರಸ್ ಅನ್ನು ಎದುರಿಸಲು ಮೂಲಸೌಕರ್ಯಗಳ ಕೊರತೆಯಿಲ್ಲ, ಆದರೆ ನೀತಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದೇ ಪ್ರಶ್ನೆ. ಪ್ರಧಾನಿ ಮೋದಿ ಯಾವಾಗಲೂ ರಾಜ್ಯಗಳ ಸಲಹೆಗಳನ್ನು ಸ್ವಾಗತಿಸಿದ್ದಾರೆ” ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಹೇಳಿದ್ದಾರೆ.

“ರಾಷ್ಟ್ರವ್ಯಾಪಿ ಲಾಕ್‌ಡೌನ್ ವಿಸ್ತರಿಸುವುದು ಮುಖ್ಯ …ಚಳಿಗಾಲದ ಬೆಳೆಗೆ ನಮಗೆ ಸಾಮಾನ್ಯ ಪರಿಹಾರ ನೀಡಬೇಕು” ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ಪರಿಸ್ಥಿತಿಗಳು ಕಳವಳಕಾರಿ ಆಗಿರುವುದರಿಂದ ಮಂಗಳವಾರ ಕೊನೆಗೊಳ್ಳಲಿರುವ ಪ್ರಸ್ತುತ ಲಾಕ್‌ಡೌನ್ ವಿಸ್ತರಣೆಯನ್ನು ಪ್ರಧಾನಿ ಮೋದಿ ಸೂಚಿಸಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.

ಭಾರತದಲ್ಲಿ 7,400 ಕ್ಕೂ ಹೆಚ್ಚು ಕರೋನವೈರಸ್ ಪ್ರಕರಣಗಳನ್ನು ದೃಡಪಟ್ಟಿವೆ ಮತ್ತು 239 ಸಾವುಗಳು ವರದಿಯಾಗಿದೆ. ದೆಹಲಿಯಲ್ಲಿ 903 ಪ್ರಕರಣಗಳು (ದೇಶದಲ್ಲಿ ಮೂರನೇ ಅತಿ ಹೆಚ್ಚು) ಮತ್ತು 13 ಸಾವುಗಳು ವರದಿಯಾಗಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ತೆಲಂಗಾಣದಲ್ಲಿ ಮುಸ್ಲಿಮರಿಗೆ ನೀಡಿದ್ದ ಮೀಸಲಾತಿಯನ್ನು ರದ್ದುಪಡಿಸುತ್ತೇವೆ: ಅಮಿತ್‌ ಶಾ

0
ಲೋಕಸಭೆ ಚುನಾವಣೆ ಹಿನ್ನೆಲೆ ಮುಸ್ಲಿಮರನ್ನೇ ಟಾರ್ಗೆಟ್‌ ಮಾಡಿಕೊಂಡು ದ್ವೇಷದ ಹೇಳಿಕೆ ನೀಡುತ್ತಾ ಬಿಜೆಪಿ ನಾಯಕರು ಹಿಂದೂ ಸಮುದಾಯದ ಜನರ ಓಲೈಕೆ ರಾಜಕೀಯ ಮಾಡುತ್ತಿರುವುದು ವ್ಯಾಪಕವಾಗಿದೆ. ಇದರ ಮುಂದುವರಿದ ಭಾಗವಾಗಿ ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು...