HomeಮುಖಪುಟFact Check: ಮೋದಿಯನ್ನು ಸಾಯಿಸಬೇಕೆಂದು ದೊರೆಸ್ವಾಮಿಯವರು ಹೇಳಿಲ್ಲ.. ಅದು ಸುಳ್ಳು ಸುದ್ದಿ.

Fact Check: ಮೋದಿಯನ್ನು ಸಾಯಿಸಬೇಕೆಂದು ದೊರೆಸ್ವಾಮಿಯವರು ಹೇಳಿಲ್ಲ.. ಅದು ಸುಳ್ಳು ಸುದ್ದಿ.

- Advertisement -

ಮೋದಿಯನ್ನು ಮುಗಿಸಿಬಿಡಿ ಎಂದು ಕರ್ನಾಟಕದ ಜನತೆಗೆ ದೊರೆಸ್ವಾಮಿಯವರು ಕರೆ ಕೊಟ್ಟಿದ್ದಾರೆ ಎಂದು 2018ರ ಮೇ09 ರಂದು ಪಬ್ಲಿಕ್ ಟಿವಿ ಪ್ರಕಟಿಸಿದ್ದ ವರದಿ ಎಲ್ಲಾ ಕಡೆ ಹರಿದಾಡುತ್ತಿದೆ.

ಈ ಕುರಿತು ಫ್ಯಾಕ್ಟ್ ಚೆಕ್ ಮಾಡಿದಾಗ ಅದು ಸುಳ್ಳು ಎಂಬುದು ಸ್ಪಷ್ಟವಾಗುತ್ತದೆ. ಆ ವರದಿಯಲ್ಲಿರುವ ದೊರೆಸ್ವಾಮಿಯವರು ಮಾತನಾಡಿರುವ ಸುಮಾರು 07 ನಿಮಿಷಗಳ ವಿಡಿಯೋವನ್ನು ಕೂಲಂಕಷವಾಗಿ ನೋಡಿದರೆ ಈ ಅಂಶ ಸ್ಪಷ್ಟವಾಗುತ್ತದೆ.

ಕರ್ನಾಟಕದ ವಿಧಾನಸಭಾ ಚುನಾವಣೆಗೆ ಮುನ್ನಾ ದಿನ ಪಬ್ಲಿಕ್ ಟಿವಿಯವರು ದೊರೆಸ್ವಾಮಿಯವರನ್ನು ಅವರ ನಿವಾಸದಲ್ಲಿ ಮಾತನಾಡಿಸಿದ್ದಾರೆ. ಅದರಲ್ಲಿ ದೊರೆಸ್ವಾಮಿಯವರು “ಮೋದಿ ವರ್ಸಸ್ ಕರ್ನಾಟಕ ಎಂಬ ಪರಿಸ್ಥಿತಿ ನಿರ್ಮಣವಾಗಿದೆ. ಮೋದಿಯವರು ಎಲ್ಲಾ ರಾಜ್ಯಗಳನ್ನು ತನ್ನ ಕೈಗೆ ತೆಗೆದುಕೊಳ್ಳುತ್ತಾ, ಚಕ್ರಾಧಿಪತ್ಯ ಕಟ್ಟಿ ತನ್ನ ಹಿಡೆನ್ ಅಜೆಂಡಾ ಜಾರಿಗೊಳಿಸಲು ಮುಂದಾಗಿದ್ದಾರೆ. ಆತ ಬರೀ ಮಾತನಾಡುತ್ತಾನೆ, ಆದರೆ ನಿರ್ದಿಷ್ಟವಾಗಿ ಯಾವುದೇ ಕೆಲಸ ಮಾಡಿಲ್ಲ, ಟಚ್ ಅಂಡ್ ಗೋ ರೀತಿಯ ಕೆಲಸಗಳನ್ನು ಮಾತ್ರ ಮಾಡಿದ್ದಾರೆ. ಅವರು ವಿಫಲರಾಗಿದ್ದಾರೆ, ಮಾತು ಕೊಟ್ಟಿದ್ದನ್ನು ಉಳಿಸಿಕೊಂಡಿಲ್ಲ ಮತ್ತು ಬಹಳ ನೀಚತನದಿಂದ ಮಾತನಾಡುತ್ತಾರೆ. ಈ ಹಿಂದೆ ಎಂದೂ ಹೀಗೆ ಆಗಿಲ್ಲ‌. ಆಗೆಲ್ಲ ಜನರ ಆಶೋತ್ತರಗಳನ್ನು ಇಟ್ಟುಕೊಂಡು ಮಾತನಾಡುತ್ತಿದ್ದರು. ಆದರೆ ಇವರು ಬರೀ ವೈಯಕ್ತಿಕ ವಿಚಾರಗಳನ್ನು ಇಟ್ಟುಕೊಂಡು ಇನ್ನೊಬ್ಬರ ತೇಜೋವಧೆ ಮಾಡುವ ಕೆಲಸ ಮಾಡುತ್ತಿದ್ದಾರೆ ಇದು ಸರಿಯಲ್ಲ.

ವಿಡಿಯೋ ನೋಡಿ.

ಕರ್ನಾಟಕವನ್ನು ತೆಗೆದುಕೊಂಡುಬಿಟ್ರೆ ಇಡೀ ದೇಶವನ್ನೇ ತಗೋಬಹುದು ಎಂದು ಆತನ ಆಲೋಚನೆ ಇದೆ. ಅದ್ದರಿಂದ ಈಗ ನಾವು ಆತನನ್ನು ಮುಗಿಸಬೇಕು. ಆತನನ್ನು ಸೋಲಿಸಬೇಕು. ಬಿಜೆಪಿಯಲ್ಲಿ ಇನ್ಯಾರೂ ನೇತಾರರಿಲ್ಲ ಬಿಡಿ. ಇದ್ದವರು ಯಡಿಯೂರಪ್ಪ ಮಾತ್ರ. ಆದರೆ ಅವರು ಭ್ರಷ್ಟರ ಸುಳಿಗೆ ಸಿಕ್ಕಿ, ಅವರು ಮಾಡಬಾರದ್ದನ್ನೆಲ್ಲ ಮಾಡಿ ಈ ರೀತಿ ಕೆಟ್ಟ ಹೆಸರು ತೆಗೆದುಕೊಂಡು, ಸೆರೆಮನೆಗೆ ಹೋಗಿ 22-23 ಆಪಾದನೆಗಳನ್ನು ಹೊತ್ತಿದ್ದಾರೆ.

ಮೋದಿಯವರು ಕಾಂಗ್ರೆಸ್ ಅನ್ನು ಮುಗಿಸಿಬಿಡುತ್ತೇನೆ ಅಂದಿದ್ದಾರೆ. ಸೋಲಿಸುತ್ತೇನೆ, ನಾನು ಅಧಿಕಾರಕ್ಕೆ ಬರುತ್ತೇನೆ ಎಂಬುದಕ್ಕಿಂತ ನಾಶ ಮಾಡುತ್ತೇನೆ ಎನ್ನುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ. ಪ್ರಜಾಪ್ರಭುತ್ವದ ರಾಜ್ಯವಾಳುತ್ತಾ, ಸರ್ವಾಧಿಕಾರಿ ಥರ ಮಾತನಾಡುತ್ತೀರಿ. ಎಲ್ಲರನ್ನು ನಾಶಮಾಡಿ ನೀವು ಅಧಿಕಾರ ನಡೆಸಬೇಕು ಅನ್ನುತ್ತಿದ್ದೀರಿ. ಇದು ಸರಿಯಿಲ್ಲ. ಇದನ್ನು ಒಪ್ಪಲು ಸಾಧ್ಯವಿಲ್ಲ.

ಹಾಗಾಗಿ ನಮ್ಮ ಹೋರಾಟ ನೇರ ಮೋದಿಯ ಮೇಲಿದೆ ಎಂದು ದೊರೆಸ್ವಾಮಿಯವರು ಹೇಳಿದ್ದಾರೆ. ಮುಂದುವರೆದ ಅದಕ್ಕೆ ಬೇರೆ ಯಾರಾದರೂ ಗೆಲ್ಲಬೇಕು. ಸದ್ಯಕ್ಕೆ ಅವಕಾಶ ಸಿದ್ದರಾಮಯ್ಯನವರಿಗೆ ಇದೆ. ದೇವೇಗೌಡರು ಇದನ್ನು ಅರ್ಥ ಮಾಡಿಕೊಳ್ಳಬೇಕು, ತನ್ನ ಮಗನೇ ಮುಖ್ಯಮಂತ್ರಿಯಾಗಬೇಕೆಂಬ ಹಠ ಹಿಡಿಯಬಾರದು ಎಂದು ಸಹ ಅವರು ಮಾತನಾಡಿದ್ದಾರೆ.

ಅವರು ಮಾತನಾಡಿರುವುದು ಚುನಾವಣೆಯ ಹಿಂದಿನ ದಿನ. ಹಾಗಾಗಿ ಮೋದಿ ಸೋಲಿಸಬೇಕು ಎಂಬುದು ಅವರ ಮಾತಿನ ಅರ್ಥವೇ ಹೊರತು ಸಾಯಿಸಬೇಕೆಂಬುದ್ದಲ್ಲ. ಇದು ಗೊತ್ತಿದ್ದರೂ ಸಹ ಇಡೀ ವಿಡಿಯೋದಲ್ಲಿ ಬರುವ 2.12 ನಿಮಿಷವನ್ನು (ಮೋದಿಯನ್ನು ಮುಗಿಸಬೇಕು) ಮಾತ್ರ ತೋರಿಸಿ ಸುಳ್ಳು ಹರಡಲಾಗುತ್ತಿದೆ.

ಅದರ ಮುಂದಿನ ವಾಕ್ಯವೇ ಅವರು ಮೋದಿಯನ್ನು ಸೋಲಿಸಬೇಕು ಎಂದಿರುವುದನ್ನು ಮರೆಮಾಚಲಾಗಿದೆ. ಅಲ್ಲದೇ ಆತ ಎಂಬುದನ್ನು ಬಿಟ್ಟರೆ ಉಳಿದೆಲ್ಲಾ ಕಡೆ ದೊರೆಸ್ವಾಮಿಯವರು ಬಹುವಚನವನ್ನೇ ಬಳಸಿದ್ದಾರೆ ಎಂಬುದನ್ನು ಗಮನಿಸಬೇಕಿದೆ.

ಈಗ ಈ ಸುದ್ದಿ ಹರಿದಾಡಲು ಕಾರಣವೇಂದರೆ ಅದು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ದೊರೆಸ್ವಾಮಿಯವರನ್ನು ಪಾಕ್ ಏಜೆಂಟ್, ನಕಲಿ ಸ್ವಾತಂತ್ರ್ಯ ಹೋರಾಟಗಾರ ಎಂದು ಕರೆದು ವಿವಾದಕ್ಕೆ ಸಿಲುಕಿದ್ದಾರೆ. ಹಾಗಾಗಿ ಅವರ ವಿರುದ್ಧ ಪ್ರತಿಭಟನೆಗಳು ಜೋರಾಗಿವೆ. ಇಂತಹ ಸಮಯದಲ್ಲಿ ಅದನ್ನು ಸಮರ್ಥಿಸಿಕೊಳ್ಳಲು ದೊರೆಸ್ವಾಮಿಯವರ ವಿರುದ್ಧ ಸುಳ್ಳು ಹರಡಲಾಗುತ್ತಿದೆ.

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಂಜಾಬ್‌: ಅಧಿಕಾರದ ಕಿತ್ತಾಟಕ್ಕೆ ಅಂತ್ಯ; ಸಿಎಂ ಅಭ್ಯರ್ಥಿ ಘೋಷಿಸಲು ನಿರ್ಧರಿಸಿದ ಕಾಂಗ್ರೆಸ್‌ | Naanu Gauri

ಪಂಜಾಬ್‌: ಅಧಿಕಾರದ ಕಿತ್ತಾಟಕ್ಕೆ ಅಂತ್ಯ; ಸಿಎಂ ಅಭ್ಯರ್ಥಿ ಘೋಷಿಸಲು ನಿರ್ಧರಿಸಿದ ಕಾಂಗ್ರೆಸ್‌

0
ಅಧಿಕಾರದ ಕಚ್ಚಾಟಕ್ಕೆ ಅಂತ್ಯ ಹಾಡಲು ಪಂಜಾಬ್‌ನಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಮೊದಲೇ ಘೋಷಿಸಲು ಕಾಂಗ್ರೆಸ್ ನಿರ್ಧರಿಸಿದೆ. ಜಲಂಧರ್‌ನ ಆನ್‌ಲೈನ್‌ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಶೀಘ್ರದಲ್ಲೇ ಕಾರ್ಯಕರ್ತರೊಂದಿಗೆ ಚರ್ಚಿಸಿ...
Wordpress Social Share Plugin powered by Ultimatelysocial