Homeಮುಖಪುಟಯತ್ನಾಳ್ ಹಾಗೂ ಸೋಮಣ್ಣ ವಿರುದ್ಧ ಬಿಜೆಪಿ ಉಗ್ರ ಕ್ರಮ ಕೈಗೊಳ್ಳಬೇಕು: ಎಎಪಿ

ಯತ್ನಾಳ್ ಹಾಗೂ ಸೋಮಣ್ಣ ವಿರುದ್ಧ ಬಿಜೆಪಿ ಉಗ್ರ ಕ್ರಮ ಕೈಗೊಳ್ಳಬೇಕು: ಎಎಪಿ

- Advertisement -
- Advertisement -

ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರನ್ನು ಅವಹೇಳನ ಮಾಡಿದ ಬಿಜೆಪಿ ನಾಯಕರ ಹೇಳಿಕೆಯನ್ನು ರಾಜ್ಯ ಆಮ್ ಆದ್ಮಿ ಪಕ್ಷ ತೀವ್ರವಾಗಿ ಖಂಡಿಸಿದೆ. ಬೇಜಾಬ್ದಾರಿ ಹೇಳಿಕೆ ನೀಡಿರುವ ಯತ್ನಾಳ್ ಹಾಗೂ ಸೋಮಣ್ಣ ವಿರುದ್ಧ ಬಿಜೆಪಿ ಪಕ್ಷವು ಉಗ್ರ ಕ್ರಮ ಕೈಗೊಳ್ಳುವಂತೆ ಆಪ್‌ ಆಗ್ರಹಿಸಿದೆ.

ಈ ಕುರಿತು ಆಪ್‌ನ ರಾಜ್ಯ ಮಾಧ್ಯಮ ಸಂಚಾಲಕರಾದ ಜಗದೀಶ್ ವಿ. ಸದಂರವರು ಹೇಳಿಕೆ ನೀಡಿ, “ಈ ನಾಡು ಕಂಡ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರ ಸ್ವಾತಂತ್ರ್ಯ ಹೋರಾಟಗಳನ್ನು ಅನುಮಾನಿಸುವ ಹಾಗೂ ಪ್ರಶ್ನಿಸುವ ಮಟ್ಟಿನ ಧಾರ್ಷ್ಟ್ಯ ತನವನ್ನು ತೋರಿಸುತ್ತಿರುವ, ನಕಲಿ ಹೋರಾಟಗಾರರೆಂದು ಹೇಳುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಿಜಕ್ಕೂ ಮತಿಗೆಟ್ಟರುವ ಮತ್ತು ಬುದ್ಧಿಹೀನವಾಗಿರುವಂತೆ ಕಂಡುಬರುತ್ತಿದೆ. ಇವರ ಹೇಳಿಕೆಗಳಿಗೆ ಪ್ರಚೋದನೆ ಹಾಗೂ ಬೆಂಬಲವನ್ನು ನೀಡಿರುವ ರಾಜ್ಯದ ಸಚಿವ ವಿ.ಸೋಮಣ್ಣನವರ ಹೇಳಿಕೆಯನ್ನು ಸಹ ಆಮ್ ಆದ್ಮಿ ಪಕ್ಷವು ಕಟುವಾಗಿ ಖಂಡಿಸುತ್ತದೆ. ಈ ರೀತಿ ಸ್ವಾತಂತ್ರ್ಯ ಹೋರಾಟಗಾರರನ್ನು ನಿಂದಿಸುವುದು ಪರಿಪಾಠ ಬಿಜೆಪಿಗರಿಗೆ ಇದೇ ಮೊದಲೇನಲ್ಲ” ಎಂದು ಆರೋಪಿಸಿದ್ದಾರೆ.

ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದೊರೆಸ್ವಾಮಿಯವರು ಅನೇಕ ದಶಕಗಳಿಂದ ಆಳುವ ಸರ್ಕಾರಗಳ ನಿರ್ಲಜ್ಜ ನಡೆಗಳನ್ನು ಪಕ್ಷಾತೀತವಾಗಿ ವಿರೋಧಿಸುತ್ತಲೇ ಬಂದಿರುವವರು. ಇಂತಹ ಹಿರಿಯ ಮುತ್ಸದ್ದಿಗಳನ್ನು ಒಂದು ಪಕ್ಷಕ್ಕೆ ಮಾತ್ರ ಸೀಮಿತಗೊಳಿಸಿ ಕಾಂಗ್ರೆಸ್ ಏಜೆಂಟ್, ಪಾಕಿಸ್ತಾನ ಏಜೆಂಟ್ ಎಂದು ಸಂಬೋಧಿಸುತ್ತಿರುವ ಬಿಜೆಪಿಗರ ಈ ಪರಿಯನ್ನು ರಾಜ್ಯದಾದ್ಯಂತ ಜನತೆ ಒಕ್ಕೊರಲಿನಿಂದ ವಿರೋಧಿಸಬೇಕು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇನ್ನಾದರೂ ಈ ಇಬ್ಬರು ಮತಿಹೀನ ಮಹನೀಯರುಗಳ ವಿರುದ್ಧ ಭಾರತೀಯ ಜನತಾ ಪಕ್ಷ ಕ್ರಮ ಕೈಗೊಳ್ಳಲೇಬೇಕು ಹಾಗೂ ಇವರಿಬ್ಬರೂ ನಾಡಿನ ಜನತೆಯ ಮುಂದೆ ಕ್ಷಮೆ ಕೋರಬೇಕು ಎಂದು ಪಕ್ಷವು ಒತ್ತಾಯಿಸುತ್ತದೆ ಎಂದು ಆಮ್ ಆದ್ಮಿ ಪಕ್ಷವು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...