Homeಕರೋನಾ ತಲ್ಲಣಕಾಶ್ಮೀರ, ಅಸ್ಸಾಂನ ಎರಡು ಜೈಲುಗಳಲ್ಲಿ ಅರ್ಧದಷ್ಟು ಖೈದಿಗಳಿಗೆ ಕೊರೊನಾ ಸೋಂಕು!

ಕಾಶ್ಮೀರ, ಅಸ್ಸಾಂನ ಎರಡು ಜೈಲುಗಳಲ್ಲಿ ಅರ್ಧದಷ್ಟು ಖೈದಿಗಳಿಗೆ ಕೊರೊನಾ ಸೋಂಕು!

60 ಖೈದಿಗಳನ್ನು ಇರಿಸುವ ಸಾಮರ್ಥ್ಯವಿರುವ ಕಾಶ್ಮೀರದ ಜೈಲಿನಲ್ಲಿ ಪ್ರಸ್ತುತ 193 ಖೈದಿಗಳು ಇದ್ದಾರೆ. ಅದರಲ್ಲಿ 86 ಖೈದಿಗಳಿಗೆ ಸೋಂಕು ದೃಢಪಟ್ಟಿದೆ.

- Advertisement -
- Advertisement -

ಕಳೆದ ವಾರ, ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲಾ ಜೈಲಿನಲ್ಲಿರುವ 86 ಜನರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಅವರಲ್ಲಿ ಜೈಲಿಗೆ ಸಾಮಗ್ರಿಗಳನ್ನು ತರುವ ಜೈಲಿನ ಸಿಬ್ಬಂದಿ ಮತ್ತು ಒಬ್ಬ ಕಾರ್ಮಿಕ ಸೇರಿದ್ದಾರೆ ಎಂದು ಅನಂತ್‌ನಾಗ್ ಜೈಲಿನ ಅಧೀಕ್ಷಕ ಸಿರೋಜ್ ಅಹ್ಮದ್ ಭಟ್ ಹೇಳಿದ್ದಾರೆ.

60 ಖೈದಿಗಳನ್ನು ಇರಿಸುವ ಸಾಮರ್ಥ್ಯವಿರುವ ಕಾಶ್ಮೀರದ ಜೈಲಿನಲ್ಲಿ ಪ್ರಸ್ತುತ 193 ಖೈದಿಗಳು ಇದ್ದಾರೆ. ಅದರಲ್ಲಿ 86 ಖೈದಿಗಳಿಗೆ ಸೋಂಕು ದೃಢಪಟ್ಟಿದೆ. “ಅವರಲ್ಲಿ 48 ಜನರಿಗೆ ಬೇರೆ ಕಡೆ ಸೌಲಭ್ಯ ಒದಗಿಸಿ ಕ್ವಾರಂಟೈನ್ ಮಾಡಲಾಗಿದೆ. 38 ಜನರನ್ನು ಜೈಲಿನೊಳಗೆ ಕ್ವಾರಂಟೈನ್ ಮಾಡಲಾಗಿದೆ” ಎಂದು ಭಟ್ ಹೇಳಿದರು.

ಅಸ್ಸಾಂನ ಗೌಹಾಟಿಯ ಕೇಂದ್ರ ಕಾರಾಗೃಹದಲ್ಲಿರುವ, ಡಿಸೆಂಬರ್‌ನಲ್ಲಿ ನಡೆದ ಸಿಎಎ ಕಾಯ್ದೆ ವಿರೋಧಿ ಪ್ರತಿಭಟನೆಗಾಗಿ ಬಂಧಿಸಲ್ಪಟ್ಟ ಕಾರ್ಯಕರ್ತರಲ್ಲಿ ಒಬ್ಬರಾದ ರೈತ ಮುಖಂಡ ಅಖಿಲ್ ಗೊಗೊಯ್ ಅವರು ಸಹ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆಂದು ತಿಳಿದುಬಂದಿದೆ.

ಈ ವಾರಾಂತ್ಯದಲ್ಲಿ ಗುವಾಹಟಿ ಕೇಂದ್ರ ಕಾರಾಗೃಹದಲ್ಲಿರುವ ಕೊರೊನಾ ಸೋಂಕಿತರ ಸಂಖ್ಯೆ 438 ಕ್ಕೆ ಏರಿತು. ಅವರಲ್ಲಿ ಮೂವರು ಜೈಲು ಸಿಬ್ಬಂದಿ ಎಂದು ಅಸ್ಸಾಂನ ಜೈಲುಗಳ ಇನ್ಸ್‌ಪೆಕ್ಟರ್ ಜನರಲ್ ದಶರಥ್ ದಾಸ್ ಹೇಳಿದ್ದಾರೆ. ಜೈಲಿನಲ್ಲಿ ಸುಮಾರು 1,000 ಖೈದಿಗಳು ಇದ್ದಾರೆ. ಅವರಲ್ಲಿ ಸುಮಾರು 43% ರಷ್ಟು ಜನರು ಸೋಂಕಿಗೆ ಒಳಗಾಗಿದ್ದಾರೆ. ಎಲ್ಲಾ ಖೈದಿಗಳನ್ನು ಪರೀಕ್ಷಿಸಲಾಯಿತು ಎಂದು ದಾಸ್ ಹೇಳಿದರು.

ಸೋಂಕಿತರಲ್ಲಿ, 154 ಖೈದಿಗಳು ಪ್ರಸ್ತುತ ನಗರದ ಮತ್ತು ಸುತ್ತಮುತ್ತಲಿನ ವಿವಿಧ ವೈದ್ಯಕೀಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. “ಉಳಿದವರು ಚೇತರಿಸಿಕೊಂಡು ಮತ್ತೆ ಜೈಲಿಗೆ ಮರಳಿದ್ದಾರೆ” ಎಂದು ದಾಸ್ ಹೇಳಿದರು.

ಗುವಾಹಟಿ ಮತ್ತು ದಕ್ಷಿಣ ಕಾಶ್ಮೀರ ಜೈಲುಗಳು, ದೇಶದ ರಾಜಕೀಯವಾಗಿ ಅತ್ಯಂತ ಸೂಕ್ಷ್ಮವಾದ ಕೆಲವು ಪ್ರಕರಣಗಳಲ್ಲಿನ ಖೈದಿಗಳನ್ನು ಇರಿಸಿಕೊಂಡಿವೆ. ಅವರಲ್ಲಿ ಹಲವರು ರಾಜ್ಯದ ವಿರುದ್ಧದ ಅಪರಾಧದ ಆರೋಪಗಳನ್ನು ಹೊಂದಿದ್ದಾರೆ. ಸಾಂಕ್ರಾಮಿಕ ರೋಗವು ದೇಶವನ್ನು ಅಪ್ಪಳಿಸುತ್ತಿದ್ದಂತೆ ಭಾರತದಾದ್ಯಂತ ಜೈಲುಗಳು ಭಾಗಶಃ ಖಾಲಿಯಾಗಿದ್ದರೂ, ಇಲ್ಲಿನ ಖೈದಿಗಳಿಗೆ ಈ ಭಾಗ್ಯ ದೊರಕಿಲ್ಲ.

ಕೊರೊನಾ ಸೋಂಕು ಭಾರತದ ಕಿಕ್ಕಿರಿದ, ಆರೋಗ್ಯಕರವಲ್ಲದ ಕಾರಾಗೃಹಗಳನ್ನು ತಲುಪಿದ ನಂತರ, ಖೈದಿಗಳಲ್ಲಿ ಕಾಡ್ಗಿಚ್ಚಿನಂತೆ ಹರಡುವ ವೈರಸ್ ಅನ್ನು ತಡೆಯುವುದು ಕಷ್ಟಕರವಾಗಿತ್ತು. ಇದಕ್ಕೆ ಹೆದರಿ ಸುಪ್ರೀಂ ಕೋರ್ಟ್ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಾರ್ಚ್‌ನಲ್ಲಿ ಜೈಲುಗಳನ್ನು ಆದಷ್ಟು ಖಾಲಿ ಮಾಡುವಂತೆ ಆದೇಶಿಸಿತ್ತು.

ಅಂದಿನಿಂದ, ಜೂನ್ 20ರ ವೇಳೆಗೆ ದೆಹಲಿಯ ಮೂರು ಜೈಲುಗಳಿಂದ 4,129 ಖೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಜೂನ್ 26ರ ಹೊತ್ತಿಗೆ 18,000 ಖೈದಿಗಳನ್ನು ಬಿಡುಗಡೆ ಮಾಡಿದ್ದೇವೆ ಎಂದು ಉತ್ತರ ಪ್ರದೇಶ ಹೇಳಿಕೊಂಡಿದೆ.

ಮಾರ್ಚ್‌ನಲ್ಲಿ ಸುಪ್ರೀಂ ಕೋರ್ಟ್ ಆದೇಶದ ನಂತರ ಅಸ್ಸಾಂ 3,550 ಖೈದಿಗಳನ್ನು ಬಿಡುಗಡೆ ಮಾಡಿದೆ ಎಂದು ಮೇ ತಿಂಗಳಿನಲ್ಲಿ ವರದಿಯಾಗಿದೆ. ಇದರಲ್ಲಿ ಅಸ್ಸಾಂನ ವಿದೇಶಿ ನ್ಯಾಯಮಂಡಳಿಗಳು, ಅರೆ-ನ್ಯಾಯಾಂಗ ಸಂಸ್ಥೆಗಳು ಘೋಷಿಸಿದ ವಿದೇಶಿಯರ ಬಂಧನ ಕೇಂದ್ರಗಳಲ್ಲಿ ದಾಖಲಾದ 300 ಜನರನ್ನು ಒಳಗೊಂಡಿದೆ.

ಏಪ್ರಿಲ್ 23 ರ ಹೊತ್ತಿಗೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಕನಿಷ್ಠ 288 ಖೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಅವರಲ್ಲಿ ಅನೇಕರ ಬಂಧನ ಆದೇಶಗಳನ್ನು ಈಗ ಸರ್ಕಾರ ರದ್ದುಪಡಿಸಿದೆ. ಅದರಲ್ಲಿ ಪೆರೋಲ್ ಅಥವಾ ಬಿಡುಗಡೆಗೆ ಅರ್ಹರಲ್ಲದವರಲ್ಲಿ ಉಗ್ರಗಾಮಿತ್ವ ಸಂಬಂಧಿತ ಆರೋಪಗಳ ಮೇಲೆ ಅಥವಾ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಆಕ್ಟ್ ಅಡಿಯಲ್ಲಿ ಬಂಧಿತ ಖೈದಿಗಳು ಸೇರಿದ್ದಾರೆ.

ಕಿಕ್ಕಿರಿದ ಜೈಲುಗಳಲ್ಲಿ ಉಳಿದವರು ಸೋಂಕಿನ ತೀವ್ರತೆಯನ್ನು ಎದುರಿಸಬೇಕಾಗಿದೆ.

ಕಾಶ್ಮೀರದ ಕಿಕ್ಕಿರಿದ ಜೈಲುಗಳು

“ನಾವು ಮಾರ್ಚ್‌ನಲ್ಲಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದೇವೆ” ಎಂದು ಜೈಲು ಅಧೀಕ್ಷಕ ಸಿರೋಜ್ ಭಟ್ ಹೇಳಿದ್ದಾರೆ. “ಜಮ್ಮು ಕಾಶ್ಮೀರದಲ್ಲಿಯೇ ಮೊದಲಿಗೆ ಅನಂತ್ ನಾಗ್ ಜಿಲ್ಲಾ ಜೈಲು ಕೊರೊನಾ ಬಗ್ಗೆ ಕಾರ್ಯಾಗಾರವನ್ನು ಆಯೋಜಿಸಿತು. ಅದರ ನಂತರ ನಾವು ನಿಯಮಿತವಾಗಿ ಜೈಲು ಆವರಣದಲ್ಲಿ ಸೋಂಕುನಿವಾರಕಗಳನ್ನು ಸಿಂಪಡಿಸುವುದನ್ನು ಮುಂದುವರಿಸಿದ್ದೇವೆ” ಎಂದಿದ್ದಾರೆ.

ಸೋಂಕು ಹರಡುವುದನ್ನು ತಡೆಗಟ್ಟಲು ಜೈಲು ಸಂದರ್ಶಕರಿಗೆ ಮತ್ತು ಕೈದಿಗಳಿಗೆ ಮನೆಯಲ್ಲಿ ಬೇಯಿಸಿದ ಆಹಾರ ನೀಡುವುದನ್ನು ನಿರ್ಬಂಧಿಸಲಾಯಿತು ಎಂದು ಅವರು ಹೇಳಿದರು. “ಆದರೆ ಜೈಲು ಕಿಕ್ಕಿರಿದ ಕಾರಣ ಸಾಮಾಜಿಕ ಅಂತರ ಸಾಧ್ಯವಾಗಲಿಲ್ಲ” ಎಂದು ಅವರು ಒಪ್ಪಿಕೊಂಡರು.

ಗುವಾಹಟಿ ಕೇಂದ್ರ ಕಾರಾಗೃಹದಲ್ಲಿ, ಜೂನ್ 4 ರಂದು ಮೊದಲ ಪ್ರಕರಣ ಪತ್ತೆಯಾಗಿದೆ ಮತ್ತು ಜೈಲನ್ನು ತಕ್ಷಣವೇ ನಿಯಂತ್ರಣ ವಲಯವೆಂದು ಘೋಷಿಸಲಾಗಿದೆ ಎಂದು ದಾಸ್ ಹೇಳಿದರು.

“ಸೋಂಕಿತ ವ್ಯಕ್ತಿಯೊಂದಿಗೆ ನೇರ ಅಥವಾ ಪರೋಕ್ಷ ಸಂಪರ್ಕದಲ್ಲಿದ್ದ ಪ್ರತಿಯೊಬ್ಬರ ಸ್ವ್ಯಾಬ್ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಪರೀಕ್ಷಾ ಫಲಿತಾಂಶಗಳನ್ನು ಘೋಷಿಸುವವರೆಗೆ ಅವರೆಲ್ಲರನ್ನೂ ಪ್ರತ್ಯೇಕವಾಗಿ ಇಡಲಾಗಿದೆ” ಎಂದು ದಾಸ್ ಹೇಳಿದರು. ಎಲ್ಲಾ ಸಂಪರ್ಕಿತರಿಗೂ ಸೋಂಕು ಇಲ್ಲ ಎಂಬುದು ದೃಢಪಟ್ಟಿದೆ ಎಂದು ಹೇಳಿದರು.

14 ದಿನಗಳ ನಂತರ ಜೈಲಿನ ನಿಯಂತ್ರಣ ವಲಯದ ಸ್ಥಿತಿಯನ್ನು ಹಿಂತೆಗೆದುಕೊಳ್ಳಲಾಗುತ್ತಿದ್ದಂತೆ, ಹಲವಾರು ಹೊಸ ಖೈದಿಗಳನ್ನು ಕೊರೊನಾ ಚಿಕಿತ್ಸೆಗೆ ದಾಖಲಿಸಲಾಯಿತು. “ಸೋಂಕು ಹೊಸ ಖೈದಿಗಳಲ್ಲೇ ಹೆಚ್ಚಾಗಿರಬಹುದು” ಎಂದು ದಾಸ್ ಹೇಳಿದರು.


ಇದನ್ನೂ ಓದಿ: ಕೊರೊನಾ ಎಫೆಕ್ಟ್: ಜೈಲು ಖೈದಿಗಳಿಗೆ ಪೆರೋಲ್‌ ನೀಡಲು ಸುಪ್ರೀಂ ನಿರ್ದೇಶನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...