Homeಮುಖಪುಟಕೊರೊನಾ ಎಫೆಕ್ಟ್: ಜೈಲು ಖೈದಿಗಳಿಗೆ ಪೆರೋಲ್‌ ನೀಡಲು ಸುಪ್ರೀಂ ನಿರ್ದೇಶನ

ಕೊರೊನಾ ಎಫೆಕ್ಟ್: ಜೈಲು ಖೈದಿಗಳಿಗೆ ಪೆರೋಲ್‌ ನೀಡಲು ಸುಪ್ರೀಂ ನಿರ್ದೇಶನ

- Advertisement -
- Advertisement -

ಕಡಿಮೆ ಅಪರಾಧಗಲ್ಲಿ ಭಾಗಿಯಾದ ಕೈದಿಗಳಿಗೆ ಪೆರೋಲ್ ನೀಡುವುದನ್ನು ಪರಿಗಣಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

COVID-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ ಕಾರಾಗೃಹಗಳಲ್ಲಿ ಜನದಟ್ಟಣೆ ತಪ್ಪಿಸಲು ಸುಪ್ರೀಂ ಕೋರ್ಟ್ ಸೋಮವಾರ ಈ ನಿರ್ದೇಶನ ನೀಡಿದೆ.

ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೈದಿಗಳ ವರ್ಗವನ್ನು ನಿರ್ಧರಿಸಲು ಉನ್ನತ ಮಟ್ಟದ ಸಮಿತಿಗಳನ್ನು ರಚಿಸುತ್ತವೆ. ಅವು ರಾಜ್ಯದ ಕಾನೂನು ಸೇವಾ ಪ್ರಾಧಿಕಾರದೊಂದಿಗೆ ಸಮಾಲೋಚಿಸಿ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದೆ.

ಏಳು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಹೊಂದಿರುವ ಅಪರಾಧಗಳಿಗೆ ಜೈಲು ಶಿಕ್ಷೆಗೆ ಪೆರೋಲ್ ನೀಡಬಹುದು. ನಾಲ್ಕರಿಂದ ಆರು ವಾರಗಳವರೆಗೆ ಪೆರೋಲ್‌ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಎಸ್‌.ಎ ಬಾಬ್ಡೆ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ.

“ಆದ್ದರಿಂದ ಪ್ರತಿ ರಾಜ್ಯವು ಗೃಹ ಇಲಾಖೆ ಕಾರ್ಯದರ್ಶಿ ಮತ್ತು ಅಧ್ಯಕ್ಷರನ್ನೊಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚಿಸಬೇಕೆಂದು ನಾವು ನಿರ್ದೇಶಿಸುತ್ತೇವೆ. ರಾಜ್ಯ ಕಾನೂನು ಸೇವಾ ಪ್ರಾಧಿಕಾರವು ಕೈದಿಗಳ ವರ್ಗವನ್ನು ನಿರ್ಧರಿಸಿ ಅವರನ್ನು ನಾಲ್ಕರಿಂದ ಆರು ವಾರಗಳವರೆಗೆ ಅಥವಾ ಮಧ್ಯಂತರ ಜಾಮೀನಿನ ಮೇಲೆ ಪೆರೋಲ್ ಮೇಲೆ ಬಿಡುಗಡೆ ಮಾಡಬಹುದು ಎಂದು ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ್‌‌ ರಾವ್‌ ಮತ್ತು ಸೂರ್ಯ ಕಾಂತ್ ರವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.

ನ್ಯಾಯಾಲಯವು ಸ್ವಯಂ ಪ್ರೇರಿತ ಅರ್ಜಿ ವಿಚಾರಣೆ ನಡೆಸಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೋಟಿಸ್ ನೀಡಿದೆ.

ಕಾರಾಗೃಹಗಳ ದಟ್ಟಣೆಯ ಬಗ್ಗೆ ಕಾಳಜಿ ವ್ಯಕ್ತಪಡಿಸಿದ ಉನ್ನತ ನ್ಯಾಯಾಲಯವು ದೇಶದಲ್ಲಿ ಸುಮಾರು 1,339 ಕಾರಾಗೃಹಗಳಿದ್ದು, 4,66,084 ಖೈದಿಗಳಿದ್ದಾರೆ ಎಂದು ಹೇಳಿದೆ. ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (ಎನ್‌ಸಿಆರ್‌ಬಿ) ಯ ವರದಿಯನ್ನು ಉಲ್ಲೇಖಿಸಿ, ಜೈಲುಗಳ ಸಾಮರ್ಥ್ಯಕ್ಕಿಂತ ಹೆಚ್ಚಿನ ಖೈದಿಗಳನ್ನು ಒಳಗೊಂಡಿದೆ ಎಂದು ದೂರಿದೆ. ಅದರಲ್ಲಿಯೂ ಸಿಕ್ಕಿಂ ಮತ್ತು ಉತ್ತರ ಪ್ರದೇಶದ ಜೈಲುಗಳು ಅತಿಹೆಚ್ಚಿನ ಖೈದಿಗಳನ್ನು ಹೊಂದಿದ್ದಾರೆ ಎಂದಿದೆ.

ಹಲವಾರು ಜೈಲು ಸಿಬ್ಬಂದಿ ಮತ್ತು ಭೇಟಿ ನೀಡುವವರು ನಿಯಮಿತವಾಗಿ ಕಾರಾಗೃಹಗಳಿಗೆ ಪ್ರವೇಶಿಸುತ್ತಾರೆ. ಕಾರಾಗೃಹಗಳಂತಹ ಮುಚ್ಚಿದ ಸ್ಥಳಗಳಲ್ಲಿ ವೈರಸ್‌ಗಳು ವೇಗವಾಗಿ ವೃದ್ಧಿಸಬಹುದು. ಆದ್ದರಿಂದ, COVID-19 ಅನ್ನು ಜೈಲು ಕೈದಿಗಳಿಗೆ ರವಾನಿಸುವ ಹೆಚ್ಚಿನ ಅಪಾಯವಿದೆ. ಹಾಗಾಗಿ ಜೈಲು ಖೈದಿಗಳು ಸಹ ಇತರ ವೈರಲ್ ಕಾಯಿಲೆಗಳಂತೆ, COVID 19 ಗೆ ಒಳಗಾಗುವ ಸಾಧ್ಯತೆ ಹೆಚ್ಚು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಕೃಪೆ: ಲೈವ್‌ಲಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...