Homeರಂಜನೆಕ್ರೀಡೆಎಲ್ಲಾ ಮಾದರಿಯ ಕ್ರಿಕೆಟ್‌‌‌ಗೆ ವಿದಾಯ ಹೇಳಿದ ಹರ್ಭಜನ್‌ ಸಿಂಗ್‌‌

ಎಲ್ಲಾ ಮಾದರಿಯ ಕ್ರಿಕೆಟ್‌‌‌ಗೆ ವಿದಾಯ ಹೇಳಿದ ಹರ್ಭಜನ್‌ ಸಿಂಗ್‌‌

- Advertisement -
- Advertisement -

ಭಾರತ ಕ್ರಿಕೆಟ್‌ ತಂಡದ ಆಟಗಾರ ಹರ್ಭಜನ್ ಸಿಂಗ್‌ ಅವರು ಕ್ರಿಕೆಟ್‌‌ನ ಎಲ್ಲಾ ಮಾದರಿಯ ಆಟಕ್ಕೆ ವಿದಾಯ ಹೇಳಿದ್ದಾರೆ. ಈ ಬಗ್ಗೆ ಶುಕ್ರವಾರ ಯೂಟ್ಯೂಬ್‌‌ನಲ್ಲಿ ಭಾವನಾತ್ಮಕವಾದ ವಿಡಿಯೊವೊಂದನ್ನು ಅಪ್‌ಲೋಡ್‌ ಮಾಡಿದ್ದು, ಅದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೊ ಹಂಚಿಕೊಂಡಿರುವ ಟ್ವೀಟ್‌ನಲ್ಲಿ, “ಎಲ್ಲಾ ಒಳ್ಳೆಯ ವಿಷಯಗಳು ಕೊನೆಗೊಂಡಿವೆ ಮತ್ತು ಇಂದು ನಾನು ಜೀವನದಲ್ಲಿ ಎಲ್ಲವನ್ನೂ ನೀಡಿದ ಆಟಕ್ಕೆ ವಿದಾಯ ಹೇಳುತ್ತಿದ್ದೇನೆ. ಈ 23 ವರ್ಷಗಳ ಸುದೀರ್ಘ ಪ್ರಯಾಣವನ್ನು ಸುಂದರಗೊಳಿಸಿದ ಮತ್ತು ಸ್ಮರಣೀಯಗೊಳಿಸಿದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಹೃತ್ಪೂರ್ವಕ ಧನ್ಯವಾದಗಳು. ಕೃತಜ್ಞತೆಗಳು” ಎಂದು ಬರೆದಿದ್ದಾರೆ.

ಇದನ್ನೂ ಓದಿ: ಕೆಲವು ಕ್ರೀಡೆಗಳು ಸೃಷ್ಟಿಸುವ ಹೈಪರ್ ನ್ಯಾಷನಲಿಸಂ ಮತ್ತು ಕ್ರೀಡಾಪಟುಗಳ ಜಾತಿನಿಂದನೆ – ಇವುಗಳ ನಡುವೆ ಸಂಭ್ರಮಿಸುವುದಾದರೂ ಹೇಗೆ?

ಹರ್ಭಜನ್‌‌ ಅವರ ನಿವೃತ್ತಿ ಘೋಷಣೆಗೆ ಹಲವಾರು ಕ್ರಿಕೆಟ್ ಆಟಗಾರರು ಮುಂದಿನ ಜೀವನಕ್ಕೆ ಶುಭಾಶಯ ಘೋಷಿಸಿದ್ದಾರೆ. ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅವರು ಹರ್ಭಜನ್ ಬಗ್ಗೆ ಅಪಾರ ಪ್ರಶಂಸೆ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ್ದಾರೆ.

“ನನ್ನ ಶ್ರೇಷ್ಠ ಸಂಗಾತಿ ಹರ್ಭಜನ್‌ ಸಿಂಗ್‌ ಅವರಿಗೆ, ಗಮನಾರ್ಹ ವೃತ್ತಿಜೀವನದ ಹೃತ್ಪೂರ್ವಕ ಅಭಿನಂದನೆಗಳು! ಆಫ್-ಸ್ಪಿನ್‌ನ ಪ್ರಚಂಡ ಘಾತಕ, ಪ್ರತಿಭಾನ್ವಿತ ಬ್ಯಾಟ್ಸ್‌ಮನ್ ಮತ್ತು ಭಾರತಕ್ಕೆ ಅನೇಕ ಅದ್ಭುತ ವಿಜಯವನ್ನು ರೂಪಿಸಿದ ನಿಜವಾದ ಪ್ರತಿಸ್ಪರ್ಧಿ. ಅವರ ಭವಿಷ್ಯಕ್ಕಾಗಿ ಶುಭಾಶಯಗಳು, ಭಜ್ಜಿ, ಒಳ್ಳೆಯದಾಗಲಿ!” ಎಂದು ಲಕ್ಷಣ್ ಟ್ವೀಟ್ ಮಾಡಿದ್ದಾರೆ.

ಹರ್ಭಜನ್ ಟೀಂ ಇಂಡಿಯಾ ಪರ 103 ಟೆಸ್ಟ್, 236 ಏಕದಿನ ಮತ್ತು 28 T20 ಆಟಗಳನ್ನು ಆಡಿದ್ದಾರೆ. ಅವರು 2011 ಏಕದಿನ ವಲ್ಡ್‌ಕಪ್‌‌ ಮತ್ತು ದಕ್ಷಿಣ ಆಫ್ರಿಕಾದಲ್ಲಿ ನಡೆದ 2007 ರ T20 ವಿಶ್ವಕಪ್‌ನ ವಿಜೇತ ತಂಡದ ಭಾಗವಾಗಿದ್ದರು.

ಇದನ್ನೂ ಓದಿ: ಟಿ20 ಕ್ರಿಕೆಟ್‌ನಲ್ಲಿ ದಾಖಲೆ: 4 ಓವರ್‌ನಲ್ಲಿ ಒಂದೂ ರನ್ ಕೊಡದ ಮೊದಲ ಬೌಲರ್ ಅಕ್ಷಯ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...