Homeಕರ್ನಾಟಕಹ್ಯಾರಿಸ್-ಆರ್.ಅಶೋಕ್: ಎರಡು ‘ಮಕ್ಕಳ’ ಪ್ರಕರಣಗಳು ; ಎರಡು ರೀತಿಯ ನಿಷ್ಕರ್ಷೆ

ಹ್ಯಾರಿಸ್-ಆರ್.ಅಶೋಕ್: ಎರಡು ‘ಮಕ್ಕಳ’ ಪ್ರಕರಣಗಳು ; ಎರಡು ರೀತಿಯ ನಿಷ್ಕರ್ಷೆ

- Advertisement -
- Advertisement -

ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಎರಡು high profile ಅಪಘಾತ ಪ್ರಕರಣಗಳು ಸಾಕಷ್ಟು ಸದ್ದು ಮಾಡುತ್ತಿವೆ. ಒಂದು ಶಾಂತಿನಗರ ಶಾಸಕ ಎನ್.ಎ.ಹ್ಯಾರಿಸ್ ಮಗ ನಲಪಾಡ್ ಪ್ರಕರಣವಾದರೆ, ಮತ್ತೊಂದು ಹೊಸಪೇಟೆ ತಾಲೂಕಿನಲ್ಲಾದ ಆರ್.ಅಶೋಕ್ ಮಗ ಶರತ್ ಹೆಸರು ತಳುಕು ಹಾಕಿದ್ದ ಭೀಕರ ಅಪಘಾತ ಪ್ರಕರಣ.

ಆದರೆ, ಈ ಎರಡೂ ಪ್ರಕರಣದಲ್ಲಿ ಪೊಲೀಸ್ ಇಲಾಖೆ ನಡೆದುಕೊಂಡ ರೀತಿ ಮತ್ತು ವಿಚಾರಣೆ ನಡೆಸಿದ ಧೋರಣೆಯನ್ನು ಗಮನಿಸಿದರೆ, ನಲಪಾಡ್‍ನನ್ನು ಹಣಿಯಲೇಬೇಕು ಎಂಬ ನಿರ್ಧರಿಸಿದ್ದ ಇದೇ ಪೊಲೀಸರು ಸಚಿವ ಆರ್.ಅಶೋಕ್ ಮಗ ಶರತ್‍ನನ್ನು ಹೊಸಪೇಟೆ ಅಪಘಾತ ಪ್ರಕರಣದಲ್ಲಿ ರಕ್ಷಿಸಲು ಪಟ್ಟ ಶ್ರಮ ಕಣ್ಣಿಗೆ ರಾಚುವಂತೆ ಎದ್ದು ಕಾಣುತ್ತದೆ.

ಈ ಎರಡೂ ಪ್ರಕರಣಗಳ ಬೆನ್ನತ್ತಿ ಹೊರಟ ನ್ಯಾಯಪಥ ತಂಡಕ್ಕೆ ಹತ್ತಾರು ಮಹತ್ವದ ಹಾಗೂ ಅಷ್ಟೇ ಕುತೂಹಲಕಾರಿಯಾದ ಹಲವಾರು ವಿಚಾರಗಳು ಕಂಡಿವೆ. ಆ ಕುರಿತ ಸಂಪೂರ್ಣ ವರದಿ ಇಲ್ಲಿದೆ.

ಪ್ರಕರಣ 1: ಮೊಹಮ್ಮದ್ ನಲಪಾಡ್

ಕಳೆದ ಭಾನುವಾರ ನಗರದ ಮೇಖ್ರಿ ವೃತ್ತದ ಬಳಿ ಐಶಾರಾಮಿ ಬೆಂಟ್ಲಿ ಕಾರು ಅಪಘಾತ ಮಾಡಿದ್ದ ಪ್ರಕರಣದಲ್ಲಿ ಶಾಂತಿನಗರ ಶಾಸಕ ಹ್ಯಾರಿಸ್ ಮಗ ಮಹಮ್ಮದ್ ನಲಪಾಡ್ ಹೆಸರು ಕೇಳಿ ಬಂದಿತ್ತು. ಮೂರು ವಾಹನಗಳಿಗೆ ಸರಣಿ ಡಿಕ್ಕಿ ಹೊಡೆದಿದ್ದ ಬೆಂಟ್ಲಿ ಕಾರನ್ನು ಅಪಘಾತದ ಸಂದರ್ಭದಲ್ಲಿ ಚಲಾಯಿಸುತ್ತಿದ್ದದ್ದು ಸ್ವತಃ ನಲಪಾಡ್ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. ಈ ಪ್ರಕರಣದಲ್ಲಿ ಓರ್ವ ವ್ಯಕ್ತಿಯ ಕಾಲಿನ ಮೂಳೆ ಮುರಿದಿತ್ತು.

ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನಲಪಾಡ್‍ಗೆ ನೋಟಿಸ್ ಜಾರಿ ಮಾಡಿದ್ದರು. ವಿಚಾರಣೆಗೆ ಹಾಜರಾಗುತ್ತಿದ್ದಂತೆ ನಲಪಾಡ್‍ನನ್ನು ಬಂಧಿಸಿದ್ದ ಪೊಲೀಸರು ವಿಚಾರಣೆ ನಂತರ ವಿಶೇಷ ಜಾಮೀನಿನ ಮೇಲೆ ಬಿಡುಗಡೆ ಮಾಡಿ ಕಳಿಸಿದ್ದರು. 2018ರಲ್ಲಿ ಯುಬಿ ಸಿಟಿ ಗಲಾಟೆ ವಿವಾದದಲ್ಲಿ ಪ್ರಸ್ತುತ ಜಾಮೀನಿನ ಮೇಲೆ ಹೊರಗಿರುವ ನಲಪಾಡ್ ಮೇಲೆ ಮತ್ತೆ ಯಾವುದೇ ಎಫ್‍ಐಆರ್ ದಾಖಲಾದರೂ ಆತ ಜೈಲು ಪಾಲಾಗಬೇಕಾಗುತ್ತದೆ. ಇದೇ ಕಾರಣಕ್ಕೆ ಈ ಪ್ರಕರಣ ಸಾಕಷ್ಟು ಮಹತ್ವ ಪಡೆದುಕೊಂಡಿತ್ತು.

ಆದರೆ, ನಲಪಾಡ್ ಕಾರು ಗುದ್ದಿ ಕಾಲಿನ ಮೂಳೆ ಮುರಿದಿದ್ದರೂ ಬೈಕ್ ಸವಾರ ಪ್ರಫುಲ್ಲಾ ತನಗೆ ಏನೂ ಆಗಿಲ್ಲ ಎಂದು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಹೇಳಿಕೆ ನೀಡಿದ್ದು ನಲಪಾಡ್‍ಗೆ ವರದಾನವಾಗಿತ್ತು. ಆದರೆ, ಪ್ರಫುಲ್ಲಾ ಹೇಳಿಕೆ ಹಿಂದೆ ಯಾರ ಒತ್ತಡವೂ ಇಲ್ಲ ಎಂದು ಹೇಳುವುದು ಅಸಾಧ್ಯ.

ಪ್ರಕರಣ 2: ಹೊಸಪೇಟೆ ಐಶಾರಾಮಿ ಕಾರು ದುರಂತ

ಫೆ.10ರ ಮಧ್ಯಾಹ್ನ ಸುಮಾರು 3.15ರ ಸಮಯ. ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಅತಿಯಾದ ವೇಗದಲ್ಲಿ ಚಲಿಸುತ್ತಿದ್ದ ಕೆಂಪು ಬಣ್ಣದ ಬೆಂಜ್ ಕಾರು ತನ್ನ ಮುಂದಿದ್ದ ಲಾರಿಯನ್ನು ಎಡಭಾಗದಿಂದ ಓವರ್‍ಟೇಕ್ ಮಾಡಲು ಮುಂದಾಗಿದೆ. ಕಾರಿನ ಚಾಲಕನ ನಿಯಂತ್ರಣ ತಪ್ಪಿ ಎಡಭಾಗದಲ್ಲಿ ಹೋಟೆಲ್ ಎದುರಿದ್ದ ದಾರಿಹೋಕ ರವಿನಾಯ್ಕ ಎಂಬುವವರಿಗೆ ಡಿಕ್ಕಿ ಹೊಡೆದಿದೆ.

ಹೀಗೆ ಡಿಕ್ಕಿ ಹೊಡೆದ ಕಾರು ಆತನ ಜೊತೆಗೆ ದಾರಿಯ ತಿರುವಿನಲ್ಲಿದ್ದ ತಗ್ಗಿನಲ್ಲಿ ಎರಡು ಬಾರಿ ಪಲ್ಟಿ ಹೊಡೆದು ಉರುಳಿದೆ. ಈ ವೇಳೆ ಸೀಟ್ ಬೆಲ್ಟ್ ಹಾಕದ ಕಾರಣಕ್ಕೆ ಕಾರಿನಲ್ಲಿದ್ದ ಸಚಿನ್ ಎಂಬಾತ ಮೃತಪಟ್ಟಿದ್ದರೆ, ಕಾರು ಚಾಲಕ ಗಾಯಗಳೊಂದಿಗೆ ಬಚಾವ್ ಆಗಿದ್ದ. ತಾನು ಮಾಡದ ತಪ್ಪಿಗೆ 16 ವರ್ಷದ ರವಿನಾಯ್ಕ್ ಎಂಬ ಯುವಕ ಮೃತಪಟ್ಟಿದ್ದ.

ಆದರೆ, ಅಪಘಾತಕ್ಕೊಳಗಾದ ಈ ಕಾರಿಗೂ ಸಚಿವ ಆರ್.ಅಶೋಕ್ ಮಗ ಶರತ್‍ಗೂ ಸಂಬಂಧ ಕಲ್ಪಿಸಿ ಸಾಕಷ್ಟು ಸುದ್ದಿಗಳು ಹರಿದಾಡಿದವು. ಅಪಘಾತಕ್ಕೊಳಗಾದ ಕಾರಿಗೂ ಅದರಲ್ಲಿ ಶರತ್ ಎಂಬ ವ್ಯಕ್ತಿ ಇದ್ದ ಎಂಬುದಕ್ಕೂ ಸಾಕಷ್ಟು ಸಾಕ್ಷಿಗಳಿವೆ. ಹೀಗಾಗಿ ಈ ಸುದ್ದಿಯನ್ನು ಸುಳ್ಳು ಎಂದು ತೆಗೆದುಹಾಕುವುದು ಸಾಧ್ಯವಿಲ್ಲ. ಆದರೆ, ಅಂತಹ ಪ್ರಯತ್ನಕ್ಕೆ ಕೈಹಾಕಿರುವ ಬಳ್ಳಾರಿ ಪೆÇಲೀಸರು ಶರತ್‍ನನ್ನು ಬಚಾವ್ ಮಾಡಿ ಮನೆಗೆ ಕಳುಹಿಸಿದ್ದಾರೆ.

ಅಸಲಿಗೆ ಸಚಿವ ಆರ್.ಅಶೋಕ್ ಮಗ ಶರತ್ ಆ ಕಾರಿನಲ್ಲಿ ಇದ್ದನೇ? ಆತನೇ ಡ್ರೈವ್ ಮಾಡಿದನೇ? ಅಥವಾ ಹಿಂದಿನ ಕಾರಿನಲ್ಲಿದ್ದನೇ? ಈ ಪ್ರಕರಣದಲ್ಲಿ ಇಷ್ಟೊಂದು ಗೊಂದಲ ಏಕೆ? ಇಲ್ಲಿದೆ ಪ್ರರಕಣದ ಅಸಲಿ ಕಥೆ.

ಆಕ್ಸಿಡೆಂಟ್ ರಿಯಲ್ ಫ್ಯಾಕ್ಟ್!

ನ್ಯಾಯಪಥಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ 10 ಜನರನ್ನೊಳಗೊಂಡ ಶರತ್ ಅಂಡ್ ಟೀಮ್ ಎರಡು ಕಾರಿನಲ್ಲಿ ಹೊಸಪೇಟೆಗೆ ಮದುವೆಗೆಂದು ಹೋಗಿರುವುದು ಸತ್ಯ. ಮುಂದೆ ಚಲಿಸುತ್ತಿದ್ದ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ 5 ಹಾಗೂ ಅದರ ಹಿಂದಿದ್ದ ಆಡಿ ಕಾರಿನಲ್ಲಿ 5 ಜನ ಮದುವೆ ಮುಗಿಸಿ ಹಂಪಿ ಪ್ರವಾಸಕ್ಕೆ ತೆರಳಿದ್ದಾರೆ. ಈ ವೇಳೆ ಹೊಸಪೇಟೆಯ ಮರಿಯಮ್ಮನಹಳ್ಳಿ ಬಳಿ ಅಪಘಾತ ಸಂಭವಿಸಿದೆ. ಅಲ್ಲಿಗೆ ಶರತ್‍ಗೂ ಈ ಅಪಘಾತಕ್ಕೂ ಸಂಬಂಧ ಇದೆ ಎಂಬುದು ಸಾಬೀತಾಗಿದೆ. ಆದರೆ, ಆತ ಅಪಘಾತಕ್ಕೆ ಒಳಗಾದ ಕಾರನ್ನು ಸ್ವತಃ ಚಲಾಯಿಸುತ್ತಿದ್ದನೇ? ಎಂಬುದು ಪ್ರಶ್ನೆ.

ಥಿಯೆರಿ 1- ಅಪಘಾತ ನಡೆದ ಸ್ಥಳದಲ್ಲಿ ಕಾರಿನಲ್ಲಿದ್ದ ಓರ್ವ ವ್ಯಕ್ತಿ ಬಲಿಯಾಗಿದ್ದರೆ, ಉಳಿದ ನಾಲ್ಕು ಜನಕ್ಕೆ ತೀವ್ರ ಗಾಯಗಳಾಗಿದ್ದವು. ಹೊಸಪೇಟೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ಇವರನ್ನು ಮರುದಿನವೇ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಒಂದು ವೇಳೆ ಈ ಕಾರಿನಲ್ಲಿ ಶರತ್ ಇದ್ದದ್ದೇ ನಿಜವಾದರೆ ಅವರಿಗೆ ಕನಿಷ್ಟ ಸಣ್ಣಪುಟ್ಟ ಗಾಯಗಳಾದರೂ ಆಗಬೇಕಿತ್ತು. ಆದರೆ, ಅವರಿಗೆ ಯಾವುದೇ ಗಾಯಗಳಾಗಿಲ್ಲ. ಹೀಗಾಗಿ ಆತ ಅಪಘಾತಕ್ಕೊಳಗಾದ ವಾಹನದಲ್ಲಿ ಇದ್ದ ಸಾಧ್ಯತೆ ತೀರಾ ಕಡಿಮೆ.

ಥಿಯೆರಿ 2- ಒಂದು ವೇಳೆ ಶರತ್ ಕಾರು ಚಲಾಯಿಸದೆ ವಾಹನ ಚಾಲಕನ ಪಕ್ಕದಲ್ಲಿ ಕುಳಿತಿದ್ದರೆ, ಆತನೂ ಓರ್ವ ಸಂತ್ರಸ್ತನೆ ಹೊರತು ಆರೋಪಿಯಲ್ಲ.

ಥಿಯೆರಿ-3: ಅಸಲಿಗೆ 10 ಜನ ಗೆಳೆಯರು ಎರಡು ಕಾರಿನಲ್ಲಿ ಹೊಸಪೇಟೆ ತಲುಪಿದ್ದಾರೆ. ಮುಂದಿದ್ದ ಬೆಂಜ್ ಕಾರಿಗೆ ಅಪಘಾತವಾಗಿದೆ. ಈ ಸಂದರ್ಭದಲ್ಲಿ ಶರತ್ ಹಿಂಬದಿ ಇದ್ದ ಆಡಿ ಕಾರಿನಲ್ಲಿ ಇದ್ದರು. ವಾಹನ ಅಪಘಾತಕ್ಕೆ ಒಳಗಾದ ಸಂದರ್ಭದಲ್ಲಿ ಗಾಯಾಳುಗಳನ್ನು ಸ್ವತಃ ಆಸ್ಪತ್ರೆಗೆ ದಾಖಲು ಮಾಡಿಸಿದ್ದಾರೆ. ಹೀಗೆ ನೋಡಿದರೂ ಸಹ ಶರತ್ ಮೇಲೆ ಯಾವುದೇ ಕಾನೂನು ಕ್ರಮ ಜರುಗಿಸಲು ಸಾಧ್ಯವಿಲ್ಲ.

ಇದೊಂದು ಅಪಘಾತ ಪ್ರಕರಣವೇ ಹೊರತು ಕ್ರಿಮಿನಲ್ ಪ್ರಕರಣ ಅಲ್ಲ. ಒಂದು ವೇಳೆ ಅಪಘಾತಕ್ಕೆ ಒಳಗಾದ ಕಾರಿನಲ್ಲಿ ಸಚಿವ ಅಶೋಕ್ ಅವರ ಮಗ ಇದ್ದರೂ ಸಹ ಅದೊಂದು ದೊಡ್ಡ ಅಪರಾಧವೇನಲ್ಲ. ಅಪಘಾತ ಪ್ರಕರಣ ದಾಖಲಿಸಿ ಎಲ್ಲಾ ಪ್ರಕರಣದಂತೆ ಈ ಪ್ರಕರಣವನ್ನು ಪರಿಗಣಿಸಬಹುದಿತ್ತು.

ಆದರೆ, ಅಪಘಾತ ಸ್ಥಳದಲ್ಲಿ ಶರತ್ ಇಲ್ಲವೇ ಇಲ್ಲ ಎಂದು ವಾದಿಸುವ ಸಲುವಾಗಿ ಪೊಲೀಸ್ ಇಲಾಖೆ ಹಾಗೂ ಸಚಿವ ಅಶೋಕ್ ನೀಡಿರುವ ಕೆಲವು ಗೊಂದಲದ ಹೇಳಿಕೆಗಳು ಹಲವಾರು ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ.

ಪೊಲೀಸರು ಎಡವಿದ್ದೆಲ್ಲಿ?

ಹೊಸಪೇಟೆ ಅಪಘಾತ ಪ್ರಕರಣದಲ್ಲಿ ಕಾರಿನಲ್ಲಿದ್ದ ಎಲ್ಲರೂ ಮದ್ಯಪಾನ ಮಾಡಿದ್ದಾರೆ, ಮದ್ಯಪಾನ ಮಾಡಿ ಅತೀ ವೇಗದಲ್ಲಿ ವಾಹನ ಚಲಾವಣೆ ಮಾಡಿದ್ದೇ ಈ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ.

ಯಾವುದೇ ಅಪಘಾತವಾದರೂ ಕಾನೂನಿನ ಪ್ರಕಾರ ಅಪಘಾತವಾಗಿ ಗರಿಷ್ಟ 6 ಗಂಟೆಯ ಒಳಗಾಗಿ ವಾಹನ ಚಾಲಕ ಮದ್ಯಪಾನ ಮಾಡಿದ್ದಾನೆಯೇ? ಎಂದು ಪೊಲೀಸರು ಪರೀಕ್ಷೆ ಮಾಡಿಸಬೇಕು. ಆದರೆ, ಪೊಲೀಸರು ಈ ಪ್ರಕರಣದಲ್ಲಿ ಅಂತಹ ಯಾವುದೇ ಪರೀಕ್ಷೆ ಮಾಡಿಸಿಲ್ಲ. ಅಲ್ಲಿಗೆ ಅಪಘಾತಕ್ಕೆ ಸಂಬಂಧಿಸಿದ ಪ್ರಮುಖ ಸಾಕ್ಷಿಯೊಂದನ್ನು ಸ್ವತಃ ಪೊಲೀಸರೇ ನಾಶ ಮಾಡಿದಂತಾಗಿದೆ.

ಇನ್ನು ಅಪಘಾತದಲ್ಲಿ ಕಾರಿನಲ್ಲಿದ್ದ ಸಚಿನ್ ಎಂಬ ವ್ಯಕ್ತಿ ಮೃತಪಟ್ಟಿದ್ದಾನೆ. ಆದರೆ, ಆತನ ಶವವನ್ನು ತುರ್ತಾಗಿ ಮರಣೋತ್ತರ ಪರೀಕ್ಷೆ ಮಾಡಲು ವೈದ್ಯರು ಒಪ್ಪಿರಲಿಲ್ಲ. ಆದರೆ, ಪೊಲೀಸರು ಮೃತ ವ್ಯಕ್ತಿ ಸಚಿವ ಆರ್.ಅಶೋಕ್ ಕಡೆಯವರು ಎಂದು ಹೇಳಿ ತುರ್ತಾಗಿ ಮರಣೋತ್ತರ ಪರೀಕ್ಷೆ ನಡೆಸಿ ಫೆ.11ಕ್ಕೆ ಶವವನ್ನು ಬೆಂಗಳೂರಿಗೆ ರವಾನೆ ಮಾಡಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಅಸಲಿಗೆ ಮರಣೋತ್ತರ ಪರೀಕ್ಷೆಯನ್ನು ಇಷ್ಟು ಅವಸರವಾಗಿ ನೆರವೇರಿಸುವ ಅಗತ್ಯವಾದರೂ ಏನು? ಮರಣೋತ್ತರ ಪರೀಕ್ಷೆಗಾಗಿ ಸ್ವತಃ ಪೊಲೀಸರೇ ಸಚಿವ ಆರ್.ಅಶೋಕ್ ಹೆಸರನ್ನು ಬಳಸಿದ್ದು ಏಕೆ ಎಂಬುದು ಪ್ರಶ್ನೆ?

ಅಸಲಿಗೆ ಅಪಘಾತದ ನಂತರ ಗಾಯಾಳುಗಳು ಸರ್ಕಾರಿ ಆಸ್ಪತ್ರೆಗೆ ತೆರಳುವ ಮುನ್ನವೇ ಮೈತ್ರಿ ಎಂಬ ಖಾಸಗಿ ಆಸ್ಪತ್ರೆಗೆ ತೆರಳಿದ್ದಾರೆ. ಈ ವೇಳೆ ಸಚಿವ ಅಶೊಕ್ ಮಗ ಶರತ್ ಗಾಯಾಳುಗಳನ್ನು ಸಾಗಿಸಲು ಆಸ್ಪತ್ರೆ ಸಿಬ್ಬಂದಿಯ ಬಳಿ ಸ್ವತಃ ಮಾತನಾಡಿ ಸ್ಟ್ರೆಚರ್ ಕೇಳಿದ್ದಾರೆ. ಇದನ್ನು ಆಸ್ಪತ್ರೆಯಲ್ಲಿ ಕೆಲಸ ಮಾಡುವ ಭಾರತಿಬಾಯಿ ಎಂಬವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಅಪಘಾತ ಸ್ಥಳದಲ್ಲಿ ಶರತ್ ಇರುವ ಚಿತ್ರಗಳು ಸಾಕಷ್ಟಿದ್ದು, ಅಪಘಾತದ ಸ್ಥಳದಲ್ಲಿ ಆತ ಇದ್ದ ಮತ್ತು ಅಪಘಾತದಲ್ಲಿ ಮೃತಪಟ್ಟವರು ಆತನ ಕಡೆಯವರೇ ಎಂಬುದು ಸಾಬೀತಾಗಿದೆ.
ಒಟ್ಟಲ್ಲಿ ಶರತ್ ಅಪಘಾತ ಮಾಡಿಲ್ಲದೆ ಇರಬಹುದು. ಆದರೆ, ಅಪಘಾತಕ್ಕೂ ಆತನಿಗೂ ಸಂಬಂಧ ಇರುವುದು ಮಾತ್ರ ಖಚಿತ. ಆದರೂ, ‘ಆತ ಸ್ಥಳದಲ್ಲಿ ಇರಲಿಲ್ಲ. ಈ ಅಪಘಾತಕ್ಕೂ ಆತನಿಗೂ ಸಂಬಂಧವೇ ಇಲ್ಲ’ ಎಂದು ಆರ್.ಅಶೋಕ್ ಹಾಗೂ ಪೊಲೀಸರು ವಾದಿಸುತ್ತಿರುವುದೇಕೆ ಗೊತ್ತೆ?

ಸಚಿವ ಆರ್.ಅಶೋಕ್‍ಗೇಕೆ ಭಯ?

ಇದೊಂದು ಅಪಘಾತ ಪ್ರಕರಣ. ಅಲ್ಲದೆ, ಹೇಗೆ ನೋಡಿದರೂ ಅಪಘಾತದ ಸಂದರ್ಭದಲ್ಲಿ ಶರತ್ ಅಪಘಾತಕ್ಕೊಳಗಾದ ಕಾರನ್ನು ಓಡಿಸಿರಲಿಲ್ಲ ಎಂಬುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಏಕೆಂದರೆ ಅವರು ಕಾರು ಚಲಾಯಿಸಿದ್ದರೆ, ಕನಿಷ್ಟ ಸಣ್ಣ ಗಾಯಗಳಾದರೂ ಆಗಬೇಕಿತ್ತು.
ಹೀಗಾಗಿ ಈ ಪ್ರಕರಣದಲ್ಲಿ ಶರತ್ ಓರ್ವ ಅಪರಾಧಿ ಎಂದು ಹೇಳಲು ಯಾವುದೇ ಸಾಕ್ಷಿ ಪುರಾವೆಗಳಿಲ್ಲ. ಆದರೂ ಅಪಘಾತ ಪ್ರಕರಣ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾದ ನಂತರದ ಬೆಳವಣಿಗೆಯಲ್ಲಿ ಸಚಿವ ಆರ್.ಅಶೋಕ್ ಅಷ್ಟೊಂದು ಗಾಬರಿಗೊಳಗಾದದ್ದು ಏಕೆ? ಗೊಂದಲದ ಹೇಳಿಕೆ ನೀಡಿದ್ದು ಏಕೆ? ಎಂಬ ಪ್ರಶ್ನೆಗಳು ಉದ್ಭವವಾಗುತ್ತದೆ.

ಅಸಲಿಗೆ ಶರತ್‍ಗೂ ಶಾಸಕ ಹ್ಯಾರಿಸ್ ಮಗ ನಲಪಾಡ್‍ಗೂ ತುಂಬಾ ವ್ಯತ್ಯಾಸವೇನಿಲ್ಲ. ಹೈಪ್ರೊಫೈಲ್ ರಾಜಕಾರಣಿಗಳ ಇಬ್ಬರೂ ಮಕ್ಕಳೂ ಪುಂಡರೇ ಎಂದು ಹೇಳುತ್ತವೆ ಅವರ ಹತ್ತಿರದ ಮೂಲಗಳು. ನಲಪಾಡ್ ಪುಂಡಾಟಿಕೆ ಎರಡು ವರ್ಷಗಳ ಹಿಂದೆಯೇ ಬೆಳಕಿಗೆ ಬಂದಿದ್ದರೆ, ಶರತ್ ಹೆಸರು ಈಗ ಮುನ್ನೆಲೆಗೆ ಬರುತ್ತಿದೆ.

ಒಂದು ವೇಳೆ ಅಪಘಾತಕ್ಕೂ ಶರತ್‍ಗೂ ಸಂಬಂಧ ಇದೆ ಎಂಬ ವಿಚಾರ ಬಹಿರಂಗವಾದರೆ, ದೃಶ್ಯ ಮಾಧ್ಯಮಗಳು ನಲಪಾಡ್ ಪ್ರಕರಣದಂತೆ ಶರತ್ ಬೆನ್ನು ಬೀಳುತ್ತವೇನೋ? ತನ್ನ ಮಗನ ಚಾರಿತ್ರ್ಯ ವಧೆಯಾಗುತ್ತೋ ಏನೋ? ಎಂಬ ಭಯಕ್ಕೆ ಆರ್.ಅಶೋಕ್ ಇಂತಹ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ಅಲ್ಲದೆ, ಪೊಲೀಸ್ ವ್ಯವಸ್ಥೆಯನ್ನು ಬಳಸಿಕೊಂಡು ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಒಟ್ಟಿನಲ್ಲಿ ಈ ಹೈ ಪ್ರೊಫೈಲ್ ಅಪಘಾತ ಪ್ರಕರಣದಲ್ಲಿ ಅನಾಮತ್ತಾಗಿ 18 ವರ್ಷದ ರವಿನಾಯ್ಕ್ ತನ್ನ ಪ್ರಾಣ ಕಳೆದುಕೊಂಡಿದ್ದಾನೆ. ತನ್ನದಲ್ಲದ ತಪ್ಪಿಗೆ ಮೃತಪಟ್ಟಿದ್ದಾನೆ. ಆತ ಮೃತಪಟ್ಟು ಒಂದು ವಾರ ಕಳೆದರೂ ಈವರೆಗೆ ಯಾರೂ ಆತನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ನೀಡುವ ಕೆಲಸಕ್ಕೆ ಮುಂದಾಗಿಲ್ಲ. ಕನಿಷ್ಟ ಪರಿಹಾರವನ್ನೂ ನೀಡಿಲ್ಲ. ಇದ್ದೊಬ್ಬ ಮಗನನ್ನು, ಮನೆಗೆ ಆಧಾರವಾಗಿದ್ದವನನ್ನು ಕಳೆದುಕೊಂಡಿರುವ ಬಡ ಕುಟುಂಬ ಇದೀಗ ಅಕ್ಷರಶಃ ಬೀದಿ ಪಾಲಾಗಿದೆ.

ಇನ್ನು ಒಂದು ವಾರದಲ್ಲಿ ಈ ಪ್ರಕರಣದ ತನಿಖೆಯು ಯಾರ ಗಮನಕ್ಕೂ ಬಾರದಂತೆ ಮುಗಿದು ಹೋಗುತ್ತದೆ. ಆ ಕೆಲಸವನ್ನು ಪೊಲೀಸ್ ಇಲಾಖೆ ಅಚ್ಚುಕಟ್ಟಾಗಿ ಮಾಡುತ್ತದೆ ಎಂಬುದರಲ್ಲಿ ಯಾವುದೇ ಸಂಶಯ ಇಲ್ಲ. ಆದರೆ, ನಲಪಾಡ್ ಪ್ರಕರಣದಲ್ಲಿ ದಕ್ಷತೆ ಮೆರೆದ ಪೊಲೀಸ್ ಇಲಾಖೆ ಶರತ್ ಪ್ರಕರಣದಲ್ಲಿ ಏಕೆ ಕೈಕಟ್ಟಿ ಕುಳಿತಿದೆ?. ಮೃತ ರವಿನಾಯ್ಕ್ ಸಾವಿಗೆ ಇವರು ನೀಡುವ ನ್ಯಾಯ ಏನು? ಒಂದು ಪ್ರಕರಣದಲ್ಲಿ ಅಪರಾಧಿಯನ್ನು ಮೊದಲೇ ತೀರ್ಮಾನಿಸಿಬಿಟ್ಟಿದ್ದ ಪೊಲೀಸ್, ಮಾಧ್ಯಮಗಳು ಇನ್ನೊಂದರಲ್ಲಿ ಮೊದಲೇ ನಿರಪರಾಧಿ ಎಂತಲೂ ತೀರ್ಮಾನಿಸಿಬಿಟ್ಟರೆ? ಎಂಬ ಪ್ರಶ್ನೆಗಳು ಉಳಿದೇ ಉಳಿಯುತ್ತವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...