Homeಬಹುಜನ ಭಾರತಬಹುಜನ ಭಾರತ: ನಾಯಕತ್ವದ ಪರೀಕ್ಷೆಯಲ್ಲಿ ನಪಾಸು-ಇಳಿ ಎಣಿಕೆಯ ಆರಂಭವೇ?

ಬಹುಜನ ಭಾರತ: ನಾಯಕತ್ವದ ಪರೀಕ್ಷೆಯಲ್ಲಿ ನಪಾಸು-ಇಳಿ ಎಣಿಕೆಯ ಆರಂಭವೇ?

- Advertisement -
- Advertisement -

ದೇಶಕ್ಕೆ ದೇಶವೇ ಒಂದು ಸಾಮೂಹಿಕ ಸ್ಮಶಾನದ ರೂಪ ತಳೆದಿದೆಯೇನೋ ಎಂಬ ಭೀಭತ್ಸ, ಭಾರತದ ಉದ್ದಗಲಕ್ಕೆ ಕವಿದಿದೆ. ಸಾವು ಕೇಕೆಯೇ ಕಿವಿಯ ಮೇಲೆ ಅಪ್ಪಳಿಸಿದೆ. ಮಸಣಮೌನದ ಸದ್ದು ಜನಜೀವನವನ್ನು ದಿಕ್ಕೆಡಿಸಿದೆ. ಹೆಗಲ ಮೇಲೆ ಕೈ ಇರಿಸಿ ಸಾಂತ್ವನ ಹೇಳುವ, ಸಂಕಟ ಹಂಚಿಕೊಳ್ಳುವ ನಾಯಕತ್ವ ನಾಪತ್ತೆಯಾಗಿದೆ. ದೈತ್ಯ ಸಂಕಟದ ಈ ಸನ್ನಿವೇಶದಲ್ಲಿ ’ಸೂಪರ್ ಮ್ಯಾನ್’ ವರ್ಚಸ್ಸಿನ ಪ್ರಧಾನಿಯವರ ನಿಷ್ಕ್ರಿಯತೆ, ಸಂವೇದನಾಶೂನ್ಯತೆ ಕಣ್ಣಿಗೆ, ಕರುಳಿಗೆ ರಾಚುವಂತಿದೆ. ಕೋವಿಡ್ ಒಡ್ಡಿರುವ ನಾಯಕತ್ವದ ಅಗ್ನಿಪರೀಕ್ಷೆಯಲ್ಲಿ ಅವರು ಶೋಚನೀಯವಾಗಿ ಸೋತಿದ್ದಾರೆ. ಕೋವಿಡ್ ಸೋಲು ಮತ್ತು ಪಶ್ಚಿಮ ಬಂಗಾಳದ ಚುನಾವಣಾ ಸೋಲು ಒಂದರೊಡನೊಂದು ಬೆರೆತಿವೆ. ಪ್ರಚಂಡ ನಾಯಕನ ಪ್ರಭಾವಳಿಯನ್ನು ಬಲುವೇಗವಾಗಿ ಅಳಿಸಿ ಹಾಕತೊಡಗಿವೆ. ಅಂತಾರಾಷ್ಟ್ರೀಯವಾಗಿಯೂ ಅವರು ತೀವ್ರ ಟೀಕೆ ಎದುರಿಸತೊಡಗಿದ್ದಾರೆ. ದೇಶದೊಳಗೆ ಅವರ ಕುರಿತು ಭುಗಿಲೆದ್ದು ಕವಿದಿದ್ದ ಕುರುಡು ಅಭಿಮಾನದ ಪೊರೆಯೂ ಸರಿಯುವ ಸೂಚನೆಗಳು ದೂರ ದಿಗಂತದಲ್ಲಿ ಗೋಚರಿಸತೊಡಗಿವೆ. ಮೂರನೆಯ ಅವಧಿಗೆ ಮತ್ತೆ ಗೆದ್ದು ಬರುತ್ತಾರೆ ಎಂಬ ಭಾವನೆ ಕರಗತೊಡಗಿದೆ. ಮುಂಬರುವ ಚುನಾವಣೆಗಳು ಅವರ ಪಾಲಿಗೆ ಏರು ಹಾದಿಯ ಪಯಣ ಆಗಲಿವೆ. ಈ ಸವಾಲನ್ನು ಮೋದಿ-ಶಾ ಜೋಡಿ ಹೇಗೆ ಎದುರಿಸೀತು ಎಂದು ಕಾದು ನೋಡಬೇಕಿದೆ.

ಪ್ರತಿಪಕ್ಷಗಳನ್ನು ಸಮಾಧಿ ಮಾಡಿ ಏಕಚಕ್ರಾಧಿಪತ್ಯ ಕಟ್ಟುವ ಬಿಜೆಪಿ ಕನಸು ಭಗ್ನಗೊಂಡಿದೆ. ಜನಸಮುದಾಯಗಳನ್ನು ಕೋಮು ಧೃವೀಕರಣದ ದಳ್ಳುರಿಗೆ ನೂಕಿ ಕೈಕಾಯಿಸಿಕೊಳ್ಳುವ ಪ್ರಯತ್ನಗಳು ಪ್ರತಿ ಸಲವೂ ಫಲ ನೀಡುವುದಿಲ್ಲ ಎಂಬ ವಾಸ್ತವ ರುಜುವಾತಾಗಿದೆ. ದುರಹಂಕಾರದಿಂದ ವರ್ತಿಸಿದ ದಾದಾ ಮೋದಿ ಪಕ್ಷದ ದವಡೆಯನ್ನೇ ಜಜ್ಜಿದ್ದಾರೆ ಮಮತಾ ದೀದಿ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಸೋಲನ್ನು ಜನತಂತ್ರದ ಘನ ಗೆಲುವು ಎಂದೇ ಗುರುತಿಸಬೇಕಿದೆ.

ದೇಶ ಮತ್ತೊಂದು ಅಘೋಷಿತ ಸರ್ವಾಧಿಕಾರದ ಅಂಚಿಗೆ ಬಂದು ನಿಂತಿರುವಾಗ, ಜನತಾಂತ್ರಿಕ ಮೌಲ್ಯಗಳು ಮತ್ತು ವ್ಯಕ್ತಿಸ್ವಾತಂತ್ರ್ಯಗಳು ಇಳಿಜಾರಿನ ಹಾದಿ ಹಿಡಿದಿರುವಾಗ, ಮುಂಬರುವ ದಿನಗಳು ಮತ್ತಷ್ಟು ದುರ್ಭರ ಆಗುವ ಸೂಚನೆಗಳು ಗೋಚರಿಸಿರುವಾಗ ಬಂಗಾಳ ಚಿಮ್ಮಿಸಿರುವ ಈ ಫಲಿತಾಂಶ ಜನತಾಂತ್ರಿಕ ಮೌಲ್ಯಗಳ ಪಾಲಿಗೆ ಅತ್ಯಂತ ಆಶಾದಾಯಕ.

ಪಶ್ಚಿಮ ಬಂಗಾಳದ ಗಡಿಗಳನ್ನು ಜಿಗಿದು ಭಾರತದ ಉದ್ದಗಲಕ್ಕೆ ಸದ್ದು ಮಾಡಿರುವ ಗೆಲುವು ಇದು. ಮೋದಿ ಮತ್ತು ಅಮಿತ್ ಶಾ ಅವರನ್ನು ಸೋಲಿಸುವುದು ಸಾಧ್ಯ ಎಂಬುದನ್ನು ತೋರಿರುವ ಗೆಲುವು.
ಬಂಗಾಳವನ್ನು ಗೆಲ್ಲಲು ಮೋದಿ-ಅಮಿತ್ ಶಾ ಅವರು ಹೆಣೆಯದಿರುವ ತಂತ್ರಗಳಿಲ್ಲ, ಹೂಡದಿರುವ ವ್ಯೂಹಗಳಿಲ್ಲ. ಆದರೂ ಈ ದೈತ್ಯಶಕ್ತಿಯ ಘಾತಕ ದಾಳಿಯನ್ನು ಎದುರಿಸಿದ ಮಮತಾ ಗಟ್ಟಿ ಗುಂಡಿಗೆಯ ಹೆಣ್ಣುಮಗಳು. ಎರಡು ಅವಧಿಗಳಿಂದ ಮುಖ್ಯಮಂತ್ರಿ. ಮೂರನೆಯ ಅವಧಿಗೆ ಆಡಳಿತವಿರೋಧಿ ಭಾವನೆಯನ್ನು ಮೆಟ್ಟಿ ಗೆಲ್ಲುವುದು ಸುಲಭವಿರಲಿಲ್ಲ. 34ವರ್ಷಗಳ ಕಾಲ ಸತತವಾಗಿ ಅಧಿಕಾರ ಹಿಡಿದಿಟಿದ್ದ ಎಡರಂಗ ಸರ್ಕಾರವನ್ನು ಅವರು 2011ರಲ್ಲಿ ಸೋಲಿಸಿದ್ದು ಐತಿಹಾಸಿಕ ಹೌದು. ಅದನ್ನೂ ಮೀರಿಸಿದ ಚರಿತ್ರಾರ್ಹ ವಿಜಯ ಈಗಿನದು. ಈ ಗೆಲುವಿನಲ್ಲಿ ಕಾಂಗ್ರೆಸ್ ಮತ್ತು ಎಡರಂಗದ ಘೋರ ಸೋಲೂ ಅಡಗಿದೆ.

ಸತತ ಮೂರನೆಯ ಗೆಲುವು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವ ಅವಕಾಶವನ್ನೂ ಮಮತಾ ಅವರಿಗೆ ಒದಗಿಸಿದೆ.

2011ರಲ್ಲಿ ಇದೇ ಮಮತಾ ಅವರ ಕೈಯಲ್ಲಿ ಎಡರಂಗ ಘೋರ ಪರಾಭವ ಎದುರಿಸಿತು. ಹತ್ತು ವರ್ಷಗಳ ನಂತರವೂ ಮೇಲೆದ್ದಿಲ್ಲ. ಬದಲಾಗಿ ಮತ್ತಷ್ಟು ಹೊಸ ಆಳದ ಪಾತಾಳಕ್ಕೆ ಕುಸಿದಿದೆ. ಸಾವರಿಕೆಯ ಸೂಚನೆಗಳು ಈಗಲೂ ಇಲ್ಲ. ಈ ಇತಿಹಾಸದಿಂದ ಮಮತಾ ಕಲಿಯಬೇಕಿರುವ ಪಾಠಗಳು ಬಹಳಷ್ಟಿವೆ. ತಮ್ಮ ಪಕ್ಷವನ್ನು ದುರಹಂಕಾರ, ಭ್ರಷ್ಟಾಚಾರ, ಸ್ವಜನಪಕ್ಷಪಾತ, ಸರ್ವಾಧಿಕಾರಿ ಧೋರಣೆ, ಹಿಂಸಾಚಾರದಿಂದ ಹೊರಗೆಳೆಯಬೇಕಿದೆ. 2011ರ ನಂತರ ಎಡರಂಗವನ್ನು ಪ್ರತೀಕಾರದ ಕಿಚ್ಚಿನಲ್ಲಿ ಬೇಯಿಸಿದ ತಪ್ಪನ್ನು ಅವರು ಇದೀಗ ಬಿಜೆಪಿಯ ವಿರುದ್ಧ ಮಾಡಕೂಡದು. ಅದಕ್ಕೆ ಬದಲಾಗಿ ಬಿಜೆಪಿ ಗಳಿಸಿಕೊಂಡಿರುವ ಬೆಂಬಲ ನೆಲೆಯನ್ನು ತಮ್ಮತ್ತ ತಿರುಗಿಸಿಕೊಳ್ಳುವ ರಚನಾತ್ಮಕ ರಾಜಕಾರಣ ಮಾಡಬೇಕಿದೆ.

2003ರಲ್ಲಿ ನಡೆದಿದ್ದ ಪಂಚಾಯತಿ ಚುನಾವಣೆಗಳಲ್ಲಿ ಶೇ.11ರಷ್ಟು ಸೀಟುಗಳನ್ನು ಎದುರಾಳಿ ಹುರಿಯಾಳುಗಳೇ ಇಲ್ಲದೆ ಗೆದ್ದಿತ್ತು ಅಂದಿನ ಎಡರಂಗ. ಈ ದಾಖಲೆಯನ್ನು ಮಮತಾ ಬ್ಯಾನರ್ಜಿ 2018ರಲ್ಲಿ ಭರ್ಜರಿಯಾಗಿ ಮುರಿದರು. ಎದುರಾಳಿ ಅಭ್ಯರ್ಥಿಗಳೇ ಇಲ್ಲದೆ ಮಮತಾ ಅವರ ತೃಣಮೂಲ ಗೆದ್ದ ಪಂಚಾಯತಿ ಸೀಟುಗಳ ಪ್ರಮಾಣ ಶೇ.30!

ಇದು ಜನತಂತ್ರದ ಅಣಕವೇ ವಿನಾ ಸಾಧನೆಯಲ್ಲ. ಎಡರಂಗ ಶೇ.11ರಷ್ಟು ಸೀಟುಗಳನ್ನು ಎದುರಾಳಿಗಳಿಲ್ಲದೆ ಗೆದ್ದದ್ದಾಗಲಿ, ತೃಣಮೂಲ ಈ ದಾಖಲೆಯನ್ನು ಶೇ.30ಕ್ಕೆ ಮುಟ್ಟಿಸಿದ್ದಾಗಲಿ ತಲೆತಗ್ಗಿಸಬೇಕಾದ ವರ್ತನೆಗಳೇ ವಿನಾ ಎದೆ ತಟ್ಟಿ ಹೇಳಿಕೊಳ್ಳುವ ನಡೆಗಳಲ್ಲ. ಎದುರಾಳಿಗಳು ತಮ್ಮ ನಾಮಕರಣಗಳನ್ನು ಸಲ್ಲಿಸಲೂ ಹೆದರುವ ಭಯೋತ್ಪಾದಕ ಪರಿಸ್ಥಿತಿ ನೆಲೆಸಿದ್ದರ ದ್ಯೋತಕವಿದು. ಈ ಜನತಂತ್ರ ವಿರೋಧೀ ವಿಕೃತಿಯನ್ನು ತಮ್ಮ ಮೂರನೆಯ ಅವಧಿಯಲ್ಲಿ ಮಮತಾ ಅವರು ನಿವಾರಿಸಬೇಕು.

ಏಕವ್ಯಕ್ತಿ ಕೇಂದ್ರಿತ ರಾಜಕೀಯ ಪಕ್ಷಗಳ ನಿರ್ದಿಷ್ಟ ಆಧಾರಸ್ತಂಭ ಕುಸಿದರೆ ತಾವೂ ಕುಸಿದು ಹೋಗುತ್ತವೆ. ಜಯಲಲಿತಾ ಅವರ ಅಣ್ಣಾ ಡಿ.ಎಂ.ಕೆ. ಈ ಮಿತಿಯನ್ನು ದಾಟಿರುವುದು ಒಳ್ಳೆಯ ಸೂಚನೆ. ಆದರೆ ಮಮತಾ ಮತ್ತು ಮಾಯಾವತಿ ಅವರ ಪಕ್ಷಗಳೂ ಈ ನ್ಯೂನತೆಯನ್ನು ತಾವಾಗಿಯೇ ನಿವಾರಿಸಿಕೊಳ್ಳುತ್ತವೆ ಎಂದು ನಿರೀಕ್ಷಿಸಲು ಬರುವುದಿಲ್ಲ. ಮಮತಾ ಅವರು ತಮ್ಮ ಪಕ್ಷದಲ್ಲಿ ಎರಡನೆಯ ಪಂಕ್ತಿಯ ನಾಯಕತ್ವವನ್ನು ಬೆಳೆಸುವ ತುರ್ತು ಅಗತ್ಯವಿದೆ.

ವಿಧಾನಸಭಾ ಚುನಾವಣೆಗಳನ್ನು ಸತತ ಮೂರು ನಾಲ್ಕು ಬಾರಿ ಗೆದ್ದ ಮುಖ್ಯಮಂತ್ರಿಗಳಿಗೆ ಪ್ರಧಾನಿಯಾಗುವ ಹೆಬ್ಬಯಕೆ ಕಾಡುವುದು ಸ್ವಾಭಾವಿಕ. ಆದರೆ ಕಾಲ ಪಕ್ವವಾಗದೆ ಈ ದಿಸೆಯಲ್ಲಿ ಹೆಜ್ಜೆ ಇರಿಸುವುದು ಅನಾಹುತಕಾರಿ. ಬಂಗಾಳಕ್ಕೆ ಮಮತಾ ಅವರ ಅಗತ್ಯ ಇನ್ನೂ ಇದೆ. ಬಂಗಾಳವನ್ನು ಅವರು ಸಹಬಾಳುವೆಯ ಸಮೃದ್ಧಿಯ ಸೀಮೆಯಾಗಿ ಅರಳಿಸಿದ ನಂತರವೇ ಅವರು ದಿಲ್ಲಿ ಗದ್ದುಗೆಯ ಆಲೋಚನೆ ಮಾಡುವುದು ಉತ್ತಮ.

ಹೌದು. 1996ರಲ್ಲಿ ಪ್ರಧಾನಿ ಹುದ್ದೆ ಬಂಗಾಳದ ಕದ ಬಡಿದಿತ್ತು. ಅಂದಿನ ಎಡರಂಗದ ಮುಖ್ಯಮಂತ್ರಿ ಜ್ಯೋತಿಬಸು ಅವರಿಗೆ ಈ ಹುದ್ದೆ ಒಲಿದಿತ್ತು. ಆದರೆ ಸಿಪಿಐ (ಎಂ) ಈ ಆಹ್ವಾನವನ್ನು ದೂರ ತಳ್ಳಿತ್ತು. ಕಾಲಾನುಕ್ರಮದಲ್ಲಿ ಈ ತಪ್ಪಿನ ಅರಿವಾಗಿತ್ತು. ಜ್ಯೋತಿ ಬಸು ಅವರಿಗೆ ತಪ್ಪಿ ಹೋದ ಹುದ್ದೆ ಕನ್ನಡಿಗ ಎಚ್.ಡಿ.ದೇವೇಗೌಡ ಅವರ ಪಾಲಾಗಿತ್ತು. ದೇಶದ ಪ್ರತಿಪಕ್ಷಗಳು ಇದೀಗ ಮಮತಾ ಬ್ಯಾನರ್ಜಿ ಅವರನ್ನು ತಮ್ಮ ನಾಯಕಿಯಾಗಿ ಅಂಗೀಕರಿಸುವ ಸೂಚನೆಗಳಿವೆ. ಆದರೆ ಸಿಟ್ಟು ಸೆಡವು, ಸರ್ವಾಧಿಕಾರಿ ಪ್ರವೃತ್ತಿಯ ದೌರ್ಬಲ್ಯದಿಂದ ಮಮತಾ ಈಗಲೂ ಮುಕ್ತವಾಗಿಲ್ಲ. ರಾಜಕೀಯ ಪಕ್ಷಗಳ ಒಕ್ಕೂಟದ ನೇತೃತ್ವ ವಹಿಸುವ ನಾಯಕ-ನಾಯಕಿಗೆ ಒಂದು ಹಂತದ ಪ್ರಬುದ್ಧತೆ, ಪರಿಪಕ್ವತೆ ಇರಬೇಕಾಗುತ್ತದೆ. ಮಮತಾ ಇವುಗಳನ್ನು ಮೈಗೂಡಿಸಿಕೊಳ್ಳಬೇಕಿದೆ. ಮನಸು ಮಾಡಿದರೆ ಅವರಿಗೆ ಇದು ಅಸಾಧ್ಯ ಆಗಲಾರದು. ಆದರೆ ದುಡುಕಿಗೆ ಮತ್ತು ಅಪಕ್ವ ವಿಫಲ ಪ್ರಯೋಗಗಳಿಗೆ ಇದು ಸಮಯವಲ್ಲ.


ಇದನ್ನೂ ಓದಿ: ಬಹುಜನ ಭಾರತ: ಬಹುತ್ವ ಭಿನ್ನಮತ ಸಹನೆ ಸಹಬಾಳುವೆಯ ಆಮ್ಲಜನಕವೂ ಬಲು ವೇಗದಲ್ಲಿ ಬರಿದಾಗುತ್ತಿದೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...