ಹತ್ರಾಸ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬವನ್ನು ಪೊಲೀಸರ ಸುತ್ತುವರಿದ ಬಂಧನದಿಂದ ಬಿಡುಗಡೆ ಮಾಡಬೇಕು ಹಾಗೂ ಅವರಿಗೆ ಸೂಕ್ತ ರಕ್ಷಣೆ ನೀಡುವಂತೆ ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಮರಿಮಗ ರಾಜರತ್ನ ಅಂಬೇಡ್ಕರ್ ಅವರು ಅಲಾಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ದಾಖಲಿಸಿದ್ದಾರೆ.
ವಡಾಲಾದ ಡಾ.ಅಂಬೇಡ್ಕರ್ ಕಾಲೇಜಿನ ಪ್ರಾಧ್ಯಾಪಕರಾದ ರಾಜರತ್ನ ಅಂಬೇಡ್ಕರ್, ಹತ್ರಾಸ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಗೃಹ ಬಂಧನದಿಂದ ಬಿಡುಗಡೆ ಮಾಡುವಂತೆ ಹಾಗೂ ಸಂತ್ರಸ್ತೆಯ ಕುಟುಂಬಕ್ಕೆ ಸೂಕ್ತ ರಕ್ಷಣೆ ಮತ್ತು ಪರಿಹಾರ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಅಲಹಾಬಾದ್ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ ಎಂದು ಬಾರ್ ಆಂಡ್ ಬೆಂಚ್ ವರದಿ ಮಾಡಿದೆ.
ಇದನ್ನೂ ಓದಿ: ಹತ್ರಾಸ್ ಪ್ರಕರಣ: ಎಸ್‌ಪಿ ಸೇರಿ 5 ಪೊಲೀಸರು ವಜಾ; ಜಿಲ್ಲೆಯಲ್ಲಿ ಒಂದು ತಿಂಗಳು ನಿಷೇದಾಜ್ಞೆ
This Petition has been filed by Rajratna Ambedkar, a professor at Dr Ambedkar College, Wadala.
Rajratna is the Great Grandson of Dr. Bhimrao Ambedkar #HathrasTapes #HathrasCase #Hathras #HathrasTruthExposed pic.twitter.com/lnvp2nbFhC
— Bar & Bench (@barandbench) October 3, 2020
ಇದಕ್ಕಿಂತ ಮೊದಲು ಅವರು ಹತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಉತ್ತರ ಪ್ರದೇಶದ ಹೊರಗೆ ವಿಚಾರಣೆ ಮಾಡುವಂತೆ ಸುಪ್ರೀಂ ಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ ಎಂದು ಮುಂಬೈ ಮಿರರ್ ವರದಿ ಮಾಡಿದೆ. ಎರಡು ದಿನಗಳ ಹಿಂದೆ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಲು ಹತ್ರಾಸ್‌ಗೆ ಹೋಗಿದ್ದ ಅವರನ್ನು ಉತ್ತರ ಪ್ರದೇಶ ಪೊಲೀಸರು ತೆಡೆದಿದ್ದರು.
ಅದಾಗ್ಯೂ ಪೊಲೀಸರು ಪ್ರಕರಣದ ಎಫ್‌ಐಆರ್ ಮತ್ತು ವೈದ್ಯಕೀಯ ವರದಿಯನ್ನು ರಾಜರತ್ನ ಅಂಬೇಡ್ಕರ್‌ಗೆ ತೋರಿಸಿದ್ದಾರೆ ಎಂದು ಅವರು ಹೇಳಿದ್ದರು. ಎಫ್‌ಐಆರ್ ಮತ್ತು ವೈದ್ಯಕೀಯ ವರದಿಯಲ್ಲಿ ಅತ್ಯಾಚಾರ ಅಥವಾ ದೈಹಿಕ ಗಾಯದ ಬಗ್ಗೆ ಉಲ್ಲೇಖವಿಲ್ಲ ಎಂದು ರಾಜರತ್ನ ಅಂಬೇಡ್ಕರ್ ಹೇಳಿದ್ದಾರೆ. “ಈ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರೆ, ಆರೋಪಿಗಳು ಆರೋಪದಿಂದ ಮುಕ್ತರಾಗುತ್ತಾರೆ” ಎಂದು ಅವರು ಆತಂಕ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಪೊಲೀಸರು ನಮಗೆ ಬೆದರಿಕೆ ಒಡ್ಡುತ್ತಿದ್ದಾರೆ: ಹತ್ರಾಸ್ ಪ್ರಕರಣ ಸಂತ್ರಸ್ತೆಯ ಸಹೋದರ ಆರೋಪ
ವಿಡಿಯೋ ನೋಡಿ: ಅಂದು ಸೀತೆಗೆ ಬೆಂಕಿ ಇಟ್ಟ ರಾಮರಾಜ್ಯದ ಪರಿಕಲ್ಪನೆಯವರೆ ಉನ್ನಾವೋದಲ್ಲಿನ ಸೀತೆಗೆ ಬೆಂಕಿ ಇಟ್ಟರು.


