Homeಕರ್ನಾಟಕಬಿಎಸ್‌ಪಿಗೆ ಬೆಂಬಲಕೊಟ್ಟರೂ ಎಸ್‌ಡಿಪಿಐಗೆ ಅವರು ಬೆಂಬಲ ನೀಡಿಲ್ಲ: ಭಾಸ್ಕರ್‌ ಪ್ರಸಾದ್ ಆರೋಪ

ಬಿಎಸ್‌ಪಿಗೆ ಬೆಂಬಲಕೊಟ್ಟರೂ ಎಸ್‌ಡಿಪಿಐಗೆ ಅವರು ಬೆಂಬಲ ನೀಡಿಲ್ಲ: ಭಾಸ್ಕರ್‌ ಪ್ರಸಾದ್ ಆರೋಪ

- Advertisement -
- Advertisement -

ಸೋಷಿಯಲ್‌ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಬೆಂಬಲ ನೀಡಿದರೂ ಬಹುಜನ ಸಮಾಜ ಪಾರ್ಟಿ (ಬಿಎಸ್‌ಪಿ) ನಮಗೆ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬೆಂಬಲ ನೀಡಿಲ್ಲ ಎಂದು ಎಸ್‌ಡಿಪಿಐ ಮುಖಂಡ ಬಿ.ಆರ್‌.ಭಾಸ್ಕರ್‌ ಪ್ರಸಾದ್ ಆರೋಪಿಸಿದ್ದಾರೆ.

ಪುಲಿಕೇಶಿನಗರದಲ್ಲಿ ಎಸ್‌ಡಿಪಿಐ ಅಭ್ಯರ್ಥಿಯಾಗಿರುವ ಭಾಸ್ಕರ್‌ ಪ್ರಸಾದ್‌ ಈ ಕುರಿತು ಬೇಸರ ವ್ಯಕ್ತಪಡಿಸಿದ್ದು, “ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಎಸ್‌ಪಿಯನ್ನು ಎಸ್‌ಡಿಪಿಐ ಬೆಂಬಲಿಸಿದೆ. ಆದರೆ ಪುಲಿಕೇಶಿನಗರದಲ್ಲಿ ನಮಗೆ ಒಂದು ಮಾತನ್ನೂ ಹೇಳದೆ, ಕಾಂಗ್ರೆಸ್ ಟಿಕೆಟ್ ವಂಚಿತ ಅಖಂಡ ಶ್ರೀನಿವಾಸಮೂರ್ತಿಯವರಿಗೆ ಬಿಎಸ್‌ಪಿ ಟಿಕೆಟ್ ನೀಡಿದೆ” ಎಂದು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.

ಬಿ.ಆರ್‌.ಭಾಸ್ಕರ್‌ ಪ್ರಸಾದ್ ಹೇಳಿರುವುದೇನು?

“ನನಗೆ ಯಾರನ್ನೂ ದೂಷಿಸುವ ಮನಸ್ಸಿಲ್ಲ ಮತ್ತು ಅಗತ್ಯವೂ ಇಲ್ಲ. ಆದರೆ ಪ್ರತಿಯೊಂದು ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ನಾನು ಈ ವಿಚಾರವನ್ನು ನಿಮಗೆ ತಿಳಿಸದೆ ಹೋದರೆ ತಪ್ಪು ನನ್ನದಾಗಿ ಬಿಡುತ್ತದೆ. ಹಾಗಾಗಿ ವಿಷಯ ನಿಮಗೆ ಗೊತ್ತಿರಲಿ ಎಂದು ಮಾತ್ರ ಇಲ್ಲಿ ಈ ನಂಬಿಕೆ ದ್ರೋಹದ ಕಥೆಯನ್ನು ಹೇಳಿಕೊಳ್ಳುತ್ತಿದ್ದೇನೆ. ಬಿಎಸ್‌ಪಿ ವಿರುದ್ಧ ಎಸ್‌ಡಿಪಿಐ ಅಭ್ಯರ್ಥಿಯನ್ನು ಹಾಕುವುದು ಬೇಡ, ದಯಮಾಡಿ ನೀವು ನಮಗೆ ಸಹಾಯ ಮಾಡಿ ಎಂದು ಬಿಎಸ್ಪಿ ರಾಜ್ಯ ಸಮಿತಿ ನಮ್ಮನ್ನು ಕೇಳಿಕೊಂಡಿತ್ತು. ನಾವು ಅದರಂತೆ ನಮ್ಮ ರಾಜ್ಯ ಸಮಿತಿಯಲ್ಲಿ ಮಾತಾಡಿ ಒಂದು ಒಳ್ಳೆಯ ಉದ್ದೇಶದಿಂದ ನಮ್ಮ ಆರು ಜನ ಕೌನ್ಸಿಲರ್‌ಗಳು ಇರುವಂತಹ ಚಾಮರಾಜನಗರದಲ್ಲಿ ನಾವು ನಮ್ಮ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೆ ಬಿಎಸ್‌ಪಿಯ ಹ ರಾ ಮಹೇಶ್ ಅವರಿಗೆ ಸಂಪೂರ್ಣ ಬೆಂಬಲವನ್ನು ಘೋಷಿಸಿದ್ದು ಅಲ್ಲದೆ ನಮ್ಮ ನೂರಾರು ಜನ ಕಾರ್ಯಕರ್ತರು BSP ಅಭ್ಯರ್ಥಿಯೊಂದಿಗೆ ಬಹಿರಂಗವಾಗಿ ಚುನಾವಣಾ ಕಣದಲ್ಲಿದ್ದು ಅವರ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ.”

“ಅದೇ ರೀತಿಯಾಗಿ ಪುಲಿಕೇಶಿ ನಗರದಲ್ಲಿ ನಾವು ಬಿಎಸ್‌ಪಿ ಅಭ್ಯರ್ಥಿಯನ್ನು ಹಾಕದೆ, ನನಗೆ ಬೆಂಬಲ ಬೆಂಬಲ ನೀಡುವುದಾಗಿ ಅವರು ಘೋಷಿಸಿದ್ದರು. ಆದರೆ ನನಗೆ ಒಂದೇ ಒಂದು ಮಾತು ಹೇಳದೆ, ನನ್ನ ಗಮನಕ್ಕೂ ತರದೆ, ಅಥವಾ ನಮ್ಮ ಪಕ್ಷದ ಯಾವುದೇ ನಾಯಕರಿಗೂ ತಿಳಿಸದೆ ರಾತ್ರೋರಾತ್ರಿ ಅಖಂಡ ಶ್ರೀನಿವಾಸ್ ಮೂರ್ತಿ ಅವರಿಗೆ ಬಿಎಸ್‌ಪಿ ಬಿ ಫಾರ್ಮ್ ನೀಡುವುದರ ಮೂಲಕ ಅವರನ್ನು ಕಣಕ್ಕೆ ಇಳಿಸಲಾಗಿದೆ.”

“ಇಷ್ಟಾದರೂ ನಮ್ಮ ರಾಜ್ಯ ಸಮಿತಿಯು ಹ ರಾ ಮಹೇಶ್ ಅವರಿಗೆ ನೀಡಿರುವ ಬೆಂಬಲವನ್ನು ಇದೇ ರೀತಿಯಾಗಿ ಸಂಪೂರ್ಣವಾಗಿ ಚುನಾವಣೆಯ ಅಂತಿಮ ಕ್ಷಣದವರೆಗೂ ನೀಡುತ್ತದೆ. ನಮಗೆ ಗೊತ್ತಿದೆ ಈ ದ್ರೋಹದಲ್ಲಿ ಹ ರಾ ಮಹೇಶ್ ಅವರ ಯಾವ ಪಾತ್ರವೂ ಇಲ್ಲ. ಅವರಿಗೂ ಈ ಸುದ್ದಿ ಆಘಾತವನ್ನು ತಂದಿದೆ. ಆ ಪಕ್ಷದ ಮುಖಂಡರು ಮಾಡಿರುವ ನಂಬಿಕೆ ದ್ರೋಹದ ಪ್ರತಿಫಲವನ್ನು ಅವರೇ ಊಟ ಮಾಡಲಿ. ನಮಗದರ ಗೊಡವೆ ಬೇಡ.
ನಮ್ಮ ಪಕ್ಷದ ನಾಯಕರ ಆಶೀರ್ವಾದ ನಮ್ಮ ಕಾರ್ಯಕರ್ತರ ಶಕ್ತಿ ನನ್ನ ಜೊತೆಗೆ ಇರುವವರೆಗೂ, ನಾವು ಯಾರಿಗೂ ಅವಲಂಬನೆಯಾಗಿ ನಿಲ್ಲುವ ತುರ್ತು ಇಲ್ಲ. ನಮ್ಮ ಪಕ್ಷವೇ ನನ್ನ ಆತ್ಮ, ಉಸಿರು, ಜೀವ,
ನನ್ನ ಗೆಲುವು ನನ್ನ ಹಣೆಯಲ್ಲಿ ಬರೆದಿದ್ದರೆ ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ.
ಎಲ್ಲರಿಗೂ ಧನ್ಯವಾದಗಳು”

-ಹೀಗೆ ಭಾಸ್ಕರ್‌ ಪ್ರಸಾದ್ ಬರೆದುಕೊಂಡಿದ್ದಾರೆ.

11 ಕಡೆ ಪರಸ್ಪರ ಸ್ಪರ್ಧೆ ಮಾಡಿದ್ದೇವೆ: ಬಿಎಸ್‌ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಸ್ಪಷ್ಟನೆ

ಭಾಸ್ಕರ್‌ ಪ್ರಸಾದ್ ಅವರ ಆರೋಪಗಳಿಗೆ ಸಂಬಂಧಿಸಿದಂತೆ ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯೆ ನೀಡಿದ ಬಿಎಸ್‌ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ, “ಚಾಮರಾಜನಗರ ಕ್ಷೇತ್ರದಲ್ಲಿ ಬಿಎಸ್‌ಪಿಗೆ ಎಸ್‌ಡಿಪಿಐ ಬೆಂಬಲ ನೀಡುವುದು ಹಾಗೆಯೇ ಮೈಸೂರಿನ ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಎಸ್‌ಡಿಪಿಐಗೆ ಬಿಎಸ್‌ಪಿ ಬೆಂಬಲ ನೀಡುವುದು ಎಂಬ ಒಪ್ಪಂದ ಮಾಡಿಕೊಂಡೆವು. ಎರಡು ಕಡೆಯಿಂದಲೂ ಪರಸ್ಪರ ಪತ್ರಿಕಾಗೋಷ್ಠಿಗಳನ್ನು ನಡೆಸಲಾಯಿತು. ಬೆಂಗಳೂರಿನಲ್ಲೂ ಈ ರೀತಿಯ ಮಾತುಕತೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಭಾಸ್ಕರ್‌ ಪ್ರಸಾದ್ ಅವರು ಚುನಾವಣಾ ಪ್ರಕ್ರಿಯೆಗಳಲ್ಲಿ ಉಳಿದರು. ಪುಲಿಕೇಶಿನಗರ ಮತ್ತು ಸರ್ವಜ್ಞನಗರದಲ್ಲಿ ಪರಸ್ಪರ ಬೆಂಬಲ ಘೋಷಿಸುವ ಉದ್ದೇಶಗಳಿದ್ದವು. ಆದರೆ ಸರಿಯಾದ ಮಾತುಕತೆಗಳಾಗದೆ ಪ್ರೆಸ್‌ಮೀಟ್‌ ಕೂಡ ಆಗಲಿಲ್ಲ” ಎಂದರು.

“ಕೊನೆ ಕ್ಷಣದಲ್ಲಿ ಪುಲಿಕೇಶಿನಗರದ ಹಾಲಿ ಶಾಸಕರಾದ ಅಖಂಡ ಶ್ರೀನಿವಾಸಮೂರ್ತಿಯವರು ಬಂದು ಬಿಎಸ್‌ಪಿ ಸೇರಿಕೊಂಡರು. ಹೀಗಾಗಿ ಬಿಎಸ್‌ಪಿ ಅವರಿಗೆ ಟಿಕೆಟ್ ನೀಡಿದೆ. ಬೆಂಗಳೂರಿನಲ್ಲಿ ಸರಿಯಾದ ಪ್ರಕ್ರಿಯೆಗಳು ನಡೆಯದೆ ಇದ್ದಿದ್ದರಿಂದ ಗೊಂದಲವಾಗಿದೆ. ನರಸಿಂಹರಾಜ, ಚಾಮರಾಜನಗರದಲ್ಲಿ ಆದಂತೆ ಪಟ್ಟು ಹಿಡಿದು ಪ್ರಕ್ರಿಯೆಗಳನ್ನು ಮುಗಿಸಿಕೊಂಡಿದ್ದರೆ ಬಿಎಸ್‌ಪಿ- ಎಸ್‌ಡಿಪಿಐ ಒಪ್ಪಂದವಿದೆ ಎಂದು ಅಖಂಡ ಅವರು ನಮ್ಮ ಬಳಿ ಬರುತ್ತಿರಲಿಲ್ಲ. ಪ್ರೆಸ್‌ಮೀಟ್ ಮಾಡಲೂ ಆಗಲಿಲ್ಲ. ಎರಡು ಪಕ್ಷಗಳ ನಡುವೆ ಗ್ಯಾಪ್‌ ಆದದ್ದರಿಂದ ಈ ಸಮಸ್ಯೆಯಾಗಿದೆ. ಎರಡೂ ಕಡೆಯಿಂದಲೂ ತಪ್ಪುಗಳಾದವು” ಎಂದು ಸ್ಪಷ್ಟನೆ ನೀಡಿದರು.

“ಎಸ್‌ಡಿಪಿಐನವರು 19 ಕಡೆ ಕ್ಯಾಂಡಿಡೇಟ್ ಹಾಕಿದ್ದಾರೆ. ಉಳಿದ ಕಡೆ ಸೌದಾರ್ಹಯುತವಾಗಿ ಫೈಟ್ ನಡೆಯುತ್ತಿದೆ. ಒಟ್ಟು ಹನ್ನೊಂದು ಕಡೆ ಎಸ್‌ಡಿಪಿಐ- ಬಿಎಸ್‌ಪಿ ಪರಸ್ಪರ ಸ್ಪರ್ಧಿಸಿವೆ. ಅದರಲ್ಲಿ ಪುಲಿಕೇಶಿನಗರವೂ ಒಂದು. ಮೈಸೂರು, ಚಾಮರಾಜನಗರಕ್ಕೆ ಮಾತ್ರ ಒಪ್ಪಂದವನ್ನು ಸೀಮಿತಗೊಳಿಸಿಕೊಂಡು ಸೌಹಾರ್ದಯುತವಾಗಿ ಚುನಾವಣೆ ಎದುರಿಸುವಂತಾಗಿದೆ” ಎಂದು ತಿಳಿಸಿದರು.

ಇದನ್ನೂ ಓದಿರಿ: ಕೊಳ್ಳೇಗಾಲ: ನಾಮಪತ್ರ ಹಿಂಪಡೆದ ಬಿಎಸ್‌ಪಿ ಅಭ್ಯರ್ಥಿ, ಕಾಂಗ್ರೆಸ್‌ಗೆ ಬೆಂಬಲ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಮತಾ ಬ್ಯಾನರ್ಜಿ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಸುವೇಂದು ಅಧಿಕಾರಿ

ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಶುಕ್ರವಾರ (ಜ.16) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ 100 ಕೋಟಿ ರೂ.ಗಳ ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಮಮತಾ...

ಕೋಮುವಾದ ಕಾರಣಕ್ಕೆ ಬಾಲಿವುಡ್‌ನಲ್ಲಿ ಅವಕಾಶ ಕಡಿಮೆ; ರೆಹಮಾನ್ ಹೇಳಿಕೆ ತಳ್ಳಿಹಾಕಿದ ಜಾವೇದ್ ಅಖ್ತರ್

ಯಶಸ್ವೀ ಸಂಗೀತಗಾರನಾಗಿ ಹಲವು ಕೊಡುಗೆ ನೀಡಿದ್ದರೂ ಕೆಲವರಿಗೆ ಹೊರಗಿನವನು ಎಂಬ ಭಾವನೆ ಹೋಗಿಲ್ಲ. ಕಳೆದ ಎಂಟು ವರ್ಷಗಳಲ್ಲಿ ಬಾಲಿವುಡ್‌ನ ಕದ ಮುಚ್ಚಿದೆ ಎಂಬ ಬಗ್ಗೆ ಎ.ಆರ್. ರೆಹಮಾನ್ ಹೇಳಿಕೆಯನ್ನು ಹಿರಿಯ ಗೀತೆ ರಚನೆಕಾರ...

14 ವರ್ಷದ ದಲಿತ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ : 16 ವರ್ಷದ ಬಾಲಕನನ್ನು ವಶಕ್ಕೆ ಪಡೆದ ಪೊಲೀಸರು

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ 14 ವರ್ಷದ ದಲಿತ ಬಾಲಕಿಯ ಭೀಕರ ಅತ್ಯಾಚಾರ, ಕೊಲೆ ನಡೆದಿದ್ದು, ಈ ಸಂಬಂಧ 16 ವರ್ಷದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗುರುವಾರ (ಜ.15) ಬೆಳಿಗ್ಗೆ ಶಾಲೆಗೆ ಹೋದ...

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮುಸ್ಲಿಮರನ್ನು ಎರಡನೇ ದರ್ಜೆಯ ನಾಗರಿಕರಂತೆ ನಡೆಸಿಕೊಳ್ಳುತ್ತದೆ: ಪಿಣರಾಯಿ ವಿಜಯನ್

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬಿಜೆಪಿ ಆಡಳಿತದ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ವಾಗ್ದಾಳಿ ನಡೆಸಿದ್ದಾರೆ. ಪೌರತ್ವ ಕಾಯ್ದೆ ಮತ್ತು ಹೊಸ ವಕ್ಫ್ ಕಾಯ್ದೆಯಂತಹ ಅದರ ವಿವಿಧ ಕಾನೂನುಗಳು ಮತ್ತು ನೀತಿಗಳು...

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ: 114 ಸ್ಥಾನಗಳೊಂದಿಗೆ ಪ್ರಮುಖ ಪಕ್ಷವಾಗಿ ಹೊರಹೊಮ್ಮಿದ ಎಐಎಂಐಎಂ

ಮಹಾರಾಷ್ಟ್ರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಖಿಲ ಭಾರತ ಮಜ್ಲಿಸ್ ಇ ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷವು (ಎಐಎಂಐಎಂ) 114 ಸ್ಥಾನಗಳನ್ನು ಗೆದ್ದು, 2017 ರ ಸ್ಥಳೀಯ ಸಂಸ್ಥೆ ಚುನಾವಣೆಗಳಿಗಿಂತ ತನ್ನ ಸಂಖ್ಯೆಯನ್ನು ತೀವ್ರವಾಗಿ ಹೆಚ್ಚಿಸಿಕೊಂಡಿದೆ....

ವಲಸೆ ಕಾರ್ಮಿಕರ ಶೆಡ್‌ಗಳಿಗೆ ತೆರಳಿ ಅನೈತಿಕ ಪೊಲೀಸ್‌ಗಿರಿ : ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ಬಂಧನ

ವಲಸೆ ಕಾರ್ಮಿಕರ ಶೆಡ್‌ಗಳಿಗೆ ತೆರಳಿ ಅವರ ಗೌಪ್ಯ ದಾಖಲೆಗಳನ್ನು ಪಡೆದು ಪೌರತ್ವ ಪರಿಶೀಲಿಸುವ ಮೂಲಕ ಅನೈತಿಕ ಪೊಲೀಸ್‌ಗಿರಿ ಮಾಡುತ್ತಿದ್ದ ಕೊಲೆ ಆರೋಪಿ ಪುನೀತ್ ಕೆರೆಹಳ್ಳಿಯನ್ನು ಬನ್ನೇರುಘಟ್ಟ ಪೊಲೀಸರು ಶುಕ್ರವಾರ (ಜ.16) ತಡರಾತ್ರಿ ಬಂಧಿಸಿದ್ದಾರೆ...

ಬಳ್ಳಾರಿ| ಬಂಡಿಹಟ್ಟಿ-ದಾನಪ್ಪ ಬೀದಿ ಬಡರೈತರ ಮೇಲೆ ದೌರ್ಜನ್ಯ; ಪ್ರತಾಪರೆಡ್ಡಿ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಬಳ್ಳಾರಿ ಜಿಲ್ಲೆಯ ಬಂಡಿಹಟ್ಟಿ-ದಾನಪ್ಪ ಬೀದಿಯ ಬಡರೈತರ ಮೇಲೆ ದೌರ್ಜನ್ಯ ಎಸಗುತ್ತಿರುವ ಎನ್‌.ಪ್ರತಾಪ ರೆಡ್ಡಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು 'ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ' ಮುಖಂಡರು ಆಗ್ರಹಿಸಿದರು....

ರೋಹಿತ್ ವೇಮುಲಾ 10ನೇ ಶಹಾದತ್ ದಿನ: ಜ.17ರಂದು ಹೈದರಾಬಾದ್ ವಿವಿಯಲ್ಲಿ ರೋಹಿತ್ ಕಾಯ್ದೆಯ ‘ಜನತಾ ಕರಡು’ ಅನಾವರಣ

ಹೈದರಾಬಾದ್ ಕೇಂದ್ರ ವಿಶ್ವವಿದ್ಯಾಲಯದಲ್ಲಿ ದಲಿತ ಸಂಶೋಧನಾ ವಿದ್ವಾಂಸ ಮತ್ತು ಅಂಬೇಡ್ಕರ್ ವಿದ್ಯಾರ್ಥಿ ಸಂಘದ (ASA) ನಾಯಕ ರೋಹಿತ್ ವೇಮುಲ ಅವರ ಮರಣದ ಹತ್ತು ವರ್ಷಗಳ ನಂತರ, ವಿದ್ಯಾರ್ಥಿ ಗುಂಪುಗಳು ಮತ್ತು ಸಾಮಾಜಿಕ ನ್ಯಾಯ...

ಮಹಾರಾಷ್ಟ್ರವು ಪ್ರಧಾನಿ ಮೋದಿಯನ್ನು ಹೆಚ್ಚು ಅವಲಂಬಿಸಿದೆ: ಸಿಎಂ ಫಡ್ನವೀಸ್

ನಗರ ಪಾಲಿಕೆ ಚುನಾವಣೆಯಲ್ಲಿ ಮಹಾಯುತಿ ಭರ್ಜರಿ ಜಯ ಸಾಧಿಸಿದ ನಂತರ ಮಹಾರಾಷ್ಟ್ರದ ಜನರಿಗೆ ಧನ್ಯವಾದ ಅರ್ಪಿಸಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ವಿಜಯವನ್ನು ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಕರ್ತರಿಗೆ ಅರ್ಪಿಸಿದರು. ರಾಜ್ಯವು ಪ್ರಧಾನಿ...

ಮೆಹುಲ್ ಚೋಕ್ಸಿ ಪುತ್ರ ಕೂಡ ಹಣ ವರ್ಗಾವಣೆಯಲ್ಲಿ ಭಾಗಿಯಾಗಿದ್ದಾರೆ: ಜಾರಿ ನಿರ್ದೇಶನಾಲಯ

ಪರಾರಿಯಾಗಿರುವ ಉದ್ಯಮಿ ಮೆಹುಲ್ ಚೋಕ್ಸಿ ವಿರುದ್ಧದ ಹಣ ವರ್ಗಾವಣೆ ಪ್ರಕರಣದಲ್ಲಿ, ಅವರ ಮಗ ರೋಹನ್ ಚೋಕ್ಸಿ ಕೂಡ ಈ ಅಪರಾಧದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಮೊದಲ ಬಾರಿಗೆ ಹೇಳಿಕೊಂಡಿದೆ....