Homeಕರ್ನಾಟಕಮಾಸ್ಕ್ ಧರಿಸಿಲ್ಲವೆಂದು ರೈತನ ಮೇಲೆ ಹಲ್ಲೆ: ಹೆಡ್‌ಕಾನ್‌ಸ್ಟೇಬಲ್ ವಿರುದ್ಧ FIR

ಮಾಸ್ಕ್ ಧರಿಸಿಲ್ಲವೆಂದು ರೈತನ ಮೇಲೆ ಹಲ್ಲೆ: ಹೆಡ್‌ಕಾನ್‌ಸ್ಟೇಬಲ್ ವಿರುದ್ಧ FIR

- Advertisement -
- Advertisement -

ಕೆಂಗೇರಿ ಸ್ಯಾಟಲೈಟ್ ಟೌನ್‌ನ ಅಂಗಡಿಯೊಂದಕ್ಕೆ ಮಾಸ್ಕ್ ಧರಿಸದೆ ಬಂದಿದ್ದಾರೆಂರು ರೈತರೊಬ್ಬರ ಮೇಲೆ ಹಲ್ಲೆ ನಡೆಸಿದ ಕೆಂಗೇರಿ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಈ ಬಗ್ಗೆ ಉದಯ್ ಕುಮಾರ್ (35) ಎಂಬವರು ನೀಡಿದ ದೂರಿನ ಮೇರೆಗೆ ಪೊಲೀಸರು ಕಾನ್‌ಸ್ಟೆಬಲ್ ವೀರಭದ್ರಯ್ಯ ಅವರ ಮೇಲೆ ಹಲ್ಲೆ, ಕ್ರಿಮಿನಲ್ ಬೆದರಿಕೆ ಹಾಗೂ ಕಾನೂನು ಬಾಹಿರ ಆರೋಪದಲ್ಲಿ ಕೇಸು ದಾಖಲಿಸಿದ್ದಾರೆ.

ಕೆಂಗೇರಿ ಸ್ಯಾಟಲೈಟ್ ಟೌನ್ ನಿವಾಸಿಯಾಗಿರುವ ರೈತ ಕುಮಾರ್ ಶನಿವಾರ ದಿನಸಿ ಖರೀದಿಸಲು ಹೋಗಿದ್ದು, ಅಂಡಿಯಿಂದ ವಸ್ತುಗಳನ್ನು ಪಡೆಯುತ್ತಿದ್ದಂತೆ, ಸಮವಸ್ತ್ರ ಧರಿಸಿರದ ವೀರಭದ್ರಯ್ಯ ಲಾಠಿಯನ್ನು ಬೀಸಿ ಕುಮಾರ್ ಅವರ ಮಾಸ್ಕನ್ನು ಸರಿಯಾಗಿ ಧರಿಸಲು ಹೇಳಿದ್ದಾರೆ. ಆದರೆ ಅವಸರದಲ್ಲಿದ್ದ ಕುಮಾರ್ ಅದನ್ನು ಕಡೆಗಣಿಸಿ ನಡೆಯಲು ಪ್ರಾರಂಭಿಸಿದಾಗ, ಕೋಪಗೊಂಡ ಹೆಡ್ ಕಾಸ್ಟೇಬಲ್ ವೀರಭದ್ರಯ್ಯ ಅವರನ್ನು ಕೆಟ್ಟ ಭಾಷೆಯಲ್ಲಿ ನಿಂದಿಸಲು ಪ್ರಾರಂಭಿಸಿದ್ದಾರೆ.

ಇದನ್ನು ಕೇಳಿದ ಕುಮಾರ್ ಸೌಜನ್ಯದಲ್ಲಿ ವರ್ತಿಸುವಂತೆ ಕೇಳಿಕೊಂಡಿದ್ದಾರೆ. ಇದರಿಂದಾಗಿ ಕೋಪಗೊಂಡ ವೀರಭದ್ರಯ್ಯ ಲಾಠಿಯಿಂದ ಮಾಸ್ಕ್ ಸರಿಯಾಗಿ ಧರಿಸಿದ್ದರೂ ರೈತ ಕುಮಾರ್ ಅವರಿಗೆ ಹೊಡೆಯಲು ಪ್ರಾರಂಭಿಸಿದ್ದಾರೆ. ಸಹಾಯಕ್ಕಾಗಿ ತನ್ನ ಸ್ನೇಹಿತರಿಗೆ ಫೋನ್ ಮಾಡಲು ಪ್ರಯತ್ನಿಸುತ್ತಿದ್ದಂತೆ ವೀರಭದ್ರಯ್ಯ ಕುಮಾರ್ ಅವರ ಮೊಬೈಲ್ ಫೋನ್ ಅನ್ನು ಒಡೆದಿದ್ದಾರೆ.

ತನಗೆ ಹೊಡೆದವರು ಸ್ಥಳೀಯ ಠಾಣೆಯಲ್ಲಿ ಕಾನ್‌ಸ್ಟೇಬಲ್ ಎಂದು ರೈತ ಕುಮಾರ್‌ ಅವರಿಗೆ ನಂತರ ತಿಳಿದು ಬಂದಿದ್ದು, ಅವರು ಕೆಂಗೇರಿ ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ.

ಘಟನೆಯ ಬಗ್ಗೆ ಪರಿಶೀಲಿಸುತ್ತಿರುವ ಪೊಲೀಸರು ಸಿಸಿಟಿವಿಯ ದೃಶ್ಯಾವಳಿಗಳನ್ನು ಪಡೆದುಕೊಂಡಿದ್ದಾರೆ. ಕಾನ್‌ಸ್ಟೇಬಲ್ ವಿರುದ್ಧ ಇನ್ನೂ ಕ್ರಮ ಕೈ ಗೊಂಡಿಲ್ಲ ಎನ್ನಲಾಗಿದೆ.


ಓದಿ: ಜಾರ್ಜ್ ಫ್ಲಾಯ್ಡ್ ಹತ್ಯೆ ಮಾದರಿಯಲ್ಲೇ ಜೋಧಪುರದಲ್ಲೊಂದು ಅಮಾನವೀಯ ಘಟನೆ; ವಿಡಿಯೋ ವೈರಲ್


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...