Homeಮುಖಪುಟಗುಜರಾತ್‌ ಮಾಡೆಲ್ ಎಕ್ಸ್‌ಪೋಸ್ ಆಗಿದೆ : ರಾಹುಲ್ ಗಾಂಧಿ ಟೀಕೆ

ಗುಜರಾತ್‌ ಮಾಡೆಲ್ ಎಕ್ಸ್‌ಪೋಸ್ ಆಗಿದೆ : ರಾಹುಲ್ ಗಾಂಧಿ ಟೀಕೆ

- Advertisement -
- Advertisement -

ಕೊರೊನಾ ವೈರಸ್‌ ಪ್ರಕರಣಗಳ ಸಂಖ್ಯೆಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಬಿಜೆಪಿ ಆಳ್ವಿಕೆಯ ಗುಜರಾತ್‌ ರಾಜ್ಯವು ಮರಣದರದಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿರುವುದರಿಂದ ಗುಜರಾತ್‌ ಮಾಡೆಲ್ ಎಕ್ಸ್‌ಪೋಸ್ ಆಗಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಗುಜರಾತ್‌ನಲ್ಲಿ ಮರಣ ಪ್ರಮಾಣ ಶೇ.6.25ರಷ್ಟಿದೆ. ಹಾಗೆಯೇ ಮಹಾರಾಷ್ಟ್ರದಲ್ಲಿ 3.73, ರಾಜಸ್ಥಾನದಲ್ಲಿ ಶೇ.2.32, ಪಂಜಾಬ್ ಶೇ.2.17, ಪುದುಚೆರಿ ಶೇ.1.98, ಜಾರ್ಖಂಡ್ ಶೇ.0.5, ಛತ್ತೀಸ್‌ಗಡ ಶೇ.0.35 ರಷ್ಟಿದೆ. ಗುಜರಾತ್‌ ಮಾಡೆಲ್ ಎಕ್ಸ್‌ಪೋಸ್ ಆಗಿದೆ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಅಂದರೆ ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಕೋವಿಡ್‌ನಿಂದಾದ ಮರಣ ಪ್ರಮಾಣ ಕಡಿಮೆ ಇದ್ದು, ಬಿಜೆಪಿ ಆಡಳಿತರೂಢ ಗುಜರಾತ್‌ನಲ್ಲಿ ಮಾತ್ರ ಹೆಚ್ಚಿದೆ ಎಂದು ರಾಹುಲ್ ಗಾಂಧಿ ಬೊಟ್ಟು ಮಾಡಿದ್ದಾರೆ.

ತಮ್ಮ ಟ್ವೀಟ್‌ನಲ್ಲಿ ಬಿಬಿಸಿಯ ವರದಿಯೊಂದನ್ನು ಲಗತ್ತಿರಿಸಿರುವ ಅವರು, ದೇಶದ ಮರಣ ಪ್ರಮಾಣಕ್ಕಿಂತ ಗುಜರಾತ್‌ನ ಮರಣ ಪ್ರಮಾಣ ಎರಡು ಪಟ್ಟು ಹೆಚ್ಚಾಗಿದೆ. ಗುಜರಾತ್‌ನಲ್ಲಿ ಕೊರೋನಾ ವೈರಸ್ ತಹಬದಿಗೆ ತರುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದ್ದಾರೆ.

ಗುಜರಾತ್ ರಾಜಧಾನಿ ಅಹಮದಾಬಾದ್‌ನ ಆಸ್ಪತ್ರೆಗಳ ಸ್ಥಿತಿಗತಿಗಳ ಬಗ್ಗೆ ಬಿಬಿಸಿ ವರದಿಯು ವಿಶ್ಲೇಷಣೆ ಮಾಡಿ ಕಳಪೆ ಮೂಲಭೂತ ಸೌಕರ್ಯಗಳ ಕಾರಣದಿಂದಾಗಿ ರೋಗಿಗಳಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿದೆ ಎನ್ನಲಾಗಿದೆ.

ಗುಜರಾತ್‌ ರಾಜ್ಯವು 24,055 ಪ್ರಕರಣಗಳನ್ನು ದಾಖಲಿಸಿ ದೇಶದಲ್ಲಿಯೇ ನಾಲ್ಕನೇ ಸ್ಥಾನದಲ್ಲಿದ್ದರೆ, ಮರಣ ಪ್ರಮಾಣದಲ್ಲಿ 1505 ಸಾವುಗಳೊಂದಿಗೆ ಶೆ.6.2 ರ ದರದಲ್ಲಿ ಮೊದಲ ಸ್ಥಾನದಲ್ಲಿದೆ.

ಗುಜರಾತ್ ಇಡೀ ದೇಶಕ್ಕೆ ಮಾದರಿ ಎಂದು ನರೇಂದ್ರ ಮೋದಿಯವರು ಪ್ರಧಾನಿಯಾಗುವ ಮೊದಲು ಭರ್ಜರಿ ಪ್ರಚಾರ ನಡೆಸಿದ್ದರು. ಈಗ ಅದರ ಪರಿಸ್ಥಿತಿ ಏನಾಗಿದೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.


ಇದನ್ನೂ ಓದಿ: ಭಾರತದಲ್ಲಿ, ಪ್ರಪಂಚದಲ್ಲಿ ಎಷ್ಟು ಜನರಿಗೆ ಆರೋಗ್ಯ ಸಮಸ್ಯೆಗಳಿವೆ? ನೀವು ತಿಳಿದಿರಬೇಕಾದ ಅಂಶಗಳು 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...