Homeಮುಖಪುಟಭಾರತದಲ್ಲಿ, ಪ್ರಪಂಚದಲ್ಲಿ ಎಷ್ಟು ಜನರಿಗೆ ಆರೋಗ್ಯ ಸಮಸ್ಯೆಗಳಿವೆ? ನೀವು ತಿಳಿದಿರಬೇಕಾದ ಅಂಶಗಳು

ಭಾರತದಲ್ಲಿ, ಪ್ರಪಂಚದಲ್ಲಿ ಎಷ್ಟು ಜನರಿಗೆ ಆರೋಗ್ಯ ಸಮಸ್ಯೆಗಳಿವೆ? ನೀವು ತಿಳಿದಿರಬೇಕಾದ ಅಂಶಗಳು

- Advertisement -
- Advertisement -

ವಿಶ್ವದ ಪ್ರತಿ 5 ಜನರಲ್ಲಿ ಒಬ್ಬರಿಗೆ ಆರೋಗ್ಯ ಸಮಸ್ಯೆಗಳಿದ್ದು, ಅವರಿಗೆ ಕೊರೊನಾ ಬಂದಲ್ಲಿ ಅಪಾಯ ಹೆಚ್ಚು ಎಂದು ಲ್ಯಾನ್ಸೆಟ್ ವರದಿ ತಿಳಿಸಿದೆ. ಆ ಅಧ್ಯಯನದ ಪ್ರಕಾರ, ಭಾರತದ ಜನಸಂಖ್ಯೆಯ ಕನಿಷ್ಠ 21.5 ಪ್ರತಿಶತದಷ್ಟು ಜನರಿಗೆ ಆರೋಗ್ಯ ಸಮಸ್ಯೆಗಳಿವೆ. ಇಂತಹವರಿಗೆ ಕೊರೊನಾ ಸೋಂಕು ತಗುಲಿದರೆ ಸಮಸ್ಯೆ ಉಲ್ಬಣಗೊಳ್ಳಲಿದೆ ಎಂದು ವರದಿ ತಿಳಿಸಿದೆ.

188 ದೇಶಗಳ ಡೇಟಾವನ್ನು ಬಳಸಿ ನಡೆಸಿರುವ ಮಾಡೆಲಿಂಗ್ ಅಧ್ಯಯನದ ವರದಿಯನನ್ನು ದಿ ಲ್ಯಾನ್ಸೆಟ್ ಗ್ಲೋಬಲ್ ಹೆಲ್ತ್ ಜರ್ನಲ್ ಪ್ರಕಟಿಸಿದೆ. ಅದರಂತೆ ವಿಶ್ವದ ಶೇಕಡಾ 22 ರಷ್ಟು ಜನರು ಅಂದರೆ ಸುಮಾರು 170 ಕೋಟಿ ಜನರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಕೊರೊನಾ ಮುನ್ನೆಚ್ಚರಿಕೆಯ ಕ್ರಮವಾಗಿ ವಿಶ್ವದ ಜನಸಂಖ್ಯೆಯ 4 ಪ್ರತಿಶತದಷ್ಟು (780 ಕೋಟಿಯಲ್ಲಿ 34.9 ಕೋಟಿ ಜನರಿಗೆ) ಆಸ್ಪತ್ರೆಗೆ ದಾಖಲಾಗುವ ಅಗತ್ಯವಿರುತ್ತದೆ ಎಂದು ಲೇಖಕರು ಅಂದಾಜಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುಕೆ ಮತ್ತು ಯುಎಸ್ಎಯ ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ಪ್ರಕಟಿಸಿದ ಮಾರ್ಗಸೂಚಿಗಳು ಹೃದಯರಕ್ತನಾಳದ ಕಾಯಿಲೆ, ದೀರ್ಘಕಾಲದ ಮೂತ್ರಪಿಂಡ ಕಾಯಿಲೆ, ಮಧುಮೇಹ ಮತ್ತು ದೀರ್ಘಕಾಲದ ಉಸಿರಾಟದ ಕಾಯಿಲೆ ಹೊಂದಿರುವವರಿಗೆ ಕೋವಿಡ್ -19 ಸೋಂಕು ತಗುಲಿದರೆ ಅಪಾಯಕಾರಿ ಎನ್ನಲಾಗಿದೆ.

ಜಾಗತಿಕವಾಗಿ 20 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರಲ್ಲಿ ಶೇಕಡಾ 5 ಕ್ಕಿಂತ ಕಡಿಮೆ, 70 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಶೇಕಡಾ 66 ಕ್ಕಿಂತ ಹೆಚ್ಚು ಜನರಿಗೆ ಕನಿಷ್ಠ ಒಂದಾದರೂ ಆರೋಗ್ಯ ಸಮಸ್ಯೆಗಳಿವೆ.  ದುಡಿಯುವ ವಯಸ್ಸಿನ ಜನಸಂಖ್ಯೆಯಲ್ಲಿ (15 ರಿಂದ 64 ವರ್ಷಗಳು), ಶೇಕಡಾ 23 ರಷ್ಟು ಜನರು ಕನಿಷ್ಠ ಒಂದು ಆರೋಗ್ಯ ಸಮಸ್ಯೆಯನ್ನು ಹೊಂದಿದ್ದಾರೆಂದು ಅಂದಾಜಿಸಲಾಗಿದೆ.

“ದೇಶಗಳು ಲಾಕ್‌ಡೌನ್‌ನಿಂದ ಹೊರಬರುತ್ತಿದ್ದಂತೆ, ಇನ್ನೂ ಹರಡುತ್ತಿರುವ ವೈರಸ್‌ನಿಂದ ಹೆಚ್ಚು ದುರ್ಬಲರನ್ನು ರಕ್ಷಿಸುವ ಮಾರ್ಗಗಳನ್ನು ಸರ್ಕಾರಗಳು ಹುಡುಕುತ್ತಿವೆ. ತೀವ್ರ ರೋಗದ ಅಪಾಯದಲ್ಲಿರುವವರನ್ನು ರಕ್ಷಿಸಲು ನಮ್ಮ ಅಧ್ಯಯನ ಸಹಕಾರಿಯಾಗಲಿದೆ ಎಂದು ಭಾವಿಸುತ್ತೇವೆ ಎಂದು ಲಂಡನ್ ಸ್ಕೂಲ್ ಆಫ್ ಹೈಜೀನ್ ಅಂಡ್ ಟ್ರಾಪಿಕಲ್ ಮೆಡಿಸಿನ್, ಇಂಗ್ಲೆಂಡ್ ನ ಸಹಾಯಕ ಪ್ರಾಧ್ಯಾಪಕ ಆಂಡ್ರ್ಯೂ ಕ್ಲಾರ್ಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಇದನ್ನು ಓದಿ: ತುಮಕೂರಿನ ಮಧುಗಿರಿಯಲ್ಲಿ ಕೊಳವೆ ಬಾವಿ ತೋಡಿಸಿದ್ದಕ್ಕೆ ದಲಿತ ವ್ಯಕ್ತಿಯ ಕೈ ಕಾಲು ಮುರಿದ ಗ್ರಾ.ಪಂ ಅಧ್ಯಕ್ಷ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಚುನಾವಣೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ..’; ಇವಿಎಂ-ವಿವಿಪ್ಯಾಟ್ ಪರಿಶೀಲನೆ ಆದೇಶವನ್ನು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

0
'ಇವಿಎಂ-ವಿವಿಪ್ಯಾಟ್ ಪರಿಶೀಲನಾ ಅರ್ಜಿ' ಕುರಿತ ತೀರ್ಪನ್ನು ಸುಪ್ರೀಂ ಕೋರ್ಟ್ ಇಂದು ಕಾಯ್ದಿರಿಸಿದ್ದು, 'ಮತ್ತೊಂದು ಸಾಂವಿಧಾನಿಕ ಪ್ರಾಧಿಕಾರದಿಂದ ನಡೆಸಬೇಕಾದ ಚುನಾವಣೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ' ಎಂದು ನ್ಯಾಯಾಲಯವು ಹೇಳಿತು. 2024ರ ಲೋಕಸಭಾ ಚುನಾವಣೆಯ ಎರಡನೇ ಹಂತವು...