Homeಕರ್ನಾಟಕಆರೋಗ್ಯ ಸಚಿವರ ಮನಸ್ಸು ಅನಾರೋಗ್ಯ: ಕಾಂಗ್ರೆಸ್‌‌‌‌ ನಾಯಕ, ಮಾಜಿ ಸಂಸದ ಆರ್. ಧ್ರುವನಾರಾಯಣ ಕಿಡಿ

ಆರೋಗ್ಯ ಸಚಿವರ ಮನಸ್ಸು ಅನಾರೋಗ್ಯ: ಕಾಂಗ್ರೆಸ್‌‌‌‌ ನಾಯಕ, ಮಾಜಿ ಸಂಸದ ಆರ್. ಧ್ರುವನಾರಾಯಣ ಕಿಡಿ

- Advertisement -
- Advertisement -

ಬುದ್ಧಿ ಇಲ್ಲದವರಿಗೆ ಬೌದ್ಧಧರ್ಮ ಅರ್ಥವಾಗುವುದಿಲ್ಲ, ಆದ್ದರಿಂದಲೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರಂತಹ ಅನಾರೋಗ್ಯ ಮನಸ್ಸಿನವರು ಬೌದ್ಧ ಧರ್ಮದ ಕುರಿತು ಅವಹೇಳನಕಾರಿಯಾಗಿ ಮಾತಾಡುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಂಸದ ಆರ್.ಧ್ರುವನಾರಾಯಣ ಬುಧವಾರ ಮೈಸೂರಿನಲ್ಲಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರದಲ್ಲಿ ಬ್ರಾಹ್ಮಣ ಸಮಾಜದ ಕಾರ್ಯಕ್ರಮದಲ್ಲಿ ಬೌದ್ಧ ಧರ್ಮದಿಂದ ಭಾರತಕ್ಕೆ ಅಪಾಯವಿತ್ತು ಎಂದು ಇನ್ನೊಂದು ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ಬಲವಾಗಿ ಖಂಡಿಸುತ್ತೇನೆ. ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರ ಮನಸ್ಸು ಅನಾರೋಗ್ಯದಿಂದ ತುಂಬಿ ತುಳುಕುತ್ತಿದೆ ಎಂದರು.

ಇದನ್ನೂ ಓದಿ: ಬೌದ್ಧಧರ್ಮದಿಂದ ಭಾರತಕ್ಕೆ ಅಪಾಯ: ಸಚಿವ ಸುಧಾಕರ್‌ 

“ಅರ್ಟಿಕಲ್ 15 ಪ್ರಕಾರ ಯಾವುದೇ ಧರ್ಮ, ಜಾತಿ, ವ್ಯಕ್ತಿಯನ್ನು  ನಿಂದಿಸುವುದು ಅಪರಾಧ. ಆದರೆ ಜವಾಬ್ದಾರಿ ಸ್ಥಾನದಲ್ಲಿರುವ ಸಚಿವರು ಇನ್ನೊಬ್ಬರನ್ನು ಮೆಚ್ಚಿಸಲು ಅವಹೇಳನ ಮಾಡಿದ್ದಾರೆ ಎಂದು ತಿಳಿಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿಶ್ವಸಂಸ್ಥೆ ಪ್ರವಾಸದ ವೇಳೆ ‘ನಾನು ಬುದ್ಧನ ನಾಡಿನಿಂದ ಬಂದವರೆಂದು’ ಹೇಳುತ್ತಾರೆ. ಆದರೆ ಕರ್ನಾಟಕದ ಅನಾರೋಗ್ಯ ಮಂತ್ರಿ ಬುದ್ಧಿ ಇಲ್ಲದಂತೆ ಮಾತಾಡುತ್ತಾರೆ.
ಬೌದ್ಧ ಧರ್ಮ ಭಾರತದಲ್ಲಿ ಹುಟ್ಟಿ ಹೊರ ದೇಶದಲ್ಲಿ ವಿಶಾಲವಾಗಿ ಬೆಳೆದಿದೆ. ಬೌದ್ಧ ಧಮ್ಮದ ಸಾರ ಪ್ರೀತಿ, ಕರುಣೆ, ದಯೆ, ಸೌಹಾರ್ದತೆ ಹಾಗೂ ವೈಜ್ಞಾನಿಕ ತಳಹದಿಯಿಂದ ಕೂಡಿದೆ. ನಿಂದಿಸುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಸಚಿವ ಸುಧಾಕರ್ ಕ್ಷಮೆಯಾಚಿಸಲಿ

ಬುದ್ಧರು ಸ್ಥಾಪಿಸಿರುವ ಧಮ್ಮದ ಕುರಿತು ಅವಹೇಳನಕಾರಿಯಾಗಿ ಮಾತಾಡಿರುವ ಸಚಿವ ಡಾ.ಕೆ.ಸುಧಾಕರ್ ಕೂಡಲೇ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಪಕ್ಷದ ವತಿಯಿಂದ ಧರಣಿ ಹಮ್ಮಿಕೊಳ್ಳಲಾಗುತ್ತದೆಂದು ಧ್ರುವ ನಾರಾಯಣ ಅವರು ಎಚ್ಚರಿಕೆ ನೀಡಿದರು.

ವಿದೇಶಾಂಗ ಇಲಾಖೆ ವೈಫಲ್ಯ

ವಿದೇಶಾಂಗ ಇಲಾಖೆ ವೈಫಲ್ಯದಿಂದಲೇ ಕರ್ನಾಟಕದ ನವೀನ್ ಎಂಬ ವಿದ್ಯಾರ್ಥಿ ಉಕ್ರೇನ್ ರಷ್ಯಾ ಯುದ್ಧದಲ್ಲಿ ಮೃತಪಟ್ಟಿದ್ದಾರೆ ಎಂದು ಆರ್.ಧ್ರುವನಾರಾಯಣ ಆರೋಪಿಸಿದರು.

ಅರ್ಹತಾ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ವಿದೇಶದಲ್ಲಿ ವ್ಯಾಸಂಗ ಮಾಡಲು ತೆರಳುತ್ತಾರೆ ಎಂಬ ಒಕ್ಕೂಟ ಸರ್ಕಾರದ ಸಚಿವ ಪ್ರಹ್ಲಾದ ಜೋಷಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಧ್ರುವನಾರಾಯಣ, “ಬಿಜೆಪಿ ನಾಯಕರು ಹೇಳಿಕೆ ಕೊಡುವುದರಲ್ಲಿ ನಿಸ್ಸಿಮ್ಮರು. ಬೆಂಕಿ ಹಚ್ಚುವುದು, ಮನೆ ಒಡೆಯುವುದು, ಹುಳಿ ಹಿಂಡುವುದೇ ಬಿಜೆಪಿಯವರ ವೃತ್ತಿ. ಇದನ್ನು ಬ್ರಿಟಿಷರಿಂದ ಕಲಿತುಕೊಂಡಿದ್ದಾರೆ” ಎಂದು ಕುಟುಕಿದರು.

ಇದನ್ನೂ ಓದಿ: ಬೌದ್ಧಧರ್ಮದಿಂದ ಅಪಾಯ ಎನ್ನುವ ಸಚಿವ ಸುಧಾಕರ್‌ ತಮ್ಮ ಹಳೆಯ ಹೇಳಿಕೆಗಳನ್ನೇ ಮರೆತರೆ? 

ಕಾಂಗ್ರೆಸ್‌ ಪಾದಯಾತ್ರೆಯನ್ನು ಮೇಕೆ ತಿನ್ನುವ ಪಾದಯಾತ್ರೆ ಎಂದಿರುವ ಶಾಸಕ ಸಿ.ಟಿ.ರವಿ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಧ್ರುವನಾರಾಯಣ, “ಸಿ.ಟಿ.ರವಿ ಅವರಿಗೆ ಧಮ್ ಇದ್ದರೆ, ತಾಕತ್ತಿದ್ದರೆ ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಲಿ. 2.5 ವರ್ಷದಿಂದ ಯೋಜನೆಗೆ ಯಾಕೆ ಅನುಮತಿ ಕೊಡಿಸಲಿಲ್ಲ. ಉಡಾಫೆ ಮತ್ತು ಬೇಜಾವಾಬ್ದಾರಿಯಿಂದ ಮಾತಾಡುವುದನ್ನು ನಿಲ್ಲಿಸಬೇಕು” ಎಂದು ಒತ್ತಾಯಿಸಿದರು.

ಬಿಜೆಪಿ ಇಬ್ಬಗೆ ನೀತಿ

ಶಿವಮೊಗ್ಗದ ಹರ್ಷ ಕೊಲೆ ಪ್ರಕರಣದಲ್ಲಿ ಇಡೀ ಸರ್ಕಾರವೇ ಖಂಡಿಸಿತು. ಅದೇ ಬೆಳ್ತಂಗಡಿಯ ಕನ್ಯಾಡಿ ಗ್ರಾಮದ ದಲಿತ ಯುವಕ ದಿನೇಶ್ ನಾಯಕ್ ಹತ್ಯೆಗೆ ಒಂದು ಪ್ರತಿಕ್ರಿಯೆಯನ್ನೂ ನೀಡಲಿಲ್ಲ. ಇದು ಬಿಜೆಪಿಯ ಇಬ್ಬಗೆ ನೀತಿಯನ್ನು ತೋರಿಸುತ್ತದೆ. ಇದು ಮನುವಾದಿ ಸಂಸ್ಕೃತಿ ದೋತ್ಯಕ. ಬಿಜೆಪಿಯ ಇಬ್ಬಗೆ ನೀತಿಯನ್ನು ಖಂಡಿಸುವುದಾಗಿ ತಿಳಿಸಿದರು.

ಎಸ್ಸಿ, ಎಸ್ಟಿ ದೌರ್ಜನ್ಯ ಹೆಚ್ಚಳ

ದೇಶದಲ್ಲಿ ಕಳೆದ ಮೂರು ವರ್ಷಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಳವಾಗಿವೆ. ಕಳೆದ ವರ್ಷ 50291 ಪ್ರಕರಣ ದಾಖಲಾಗಿವೆ. ಉತ್ತರ ಪ್ರದೇಶದಲ್ಲಿ 36467 ಅತಿ ಹೆಚ್ಚು ಪ್ರಕರಣ ದಾಖಲಾಗಿವೆ. ಖಾವಿ ಧರಿಸಿದ ಮುಖ್ಯಮಂತ್ರಿ ಇರುವ ರಾಜ್ಯದಲ್ಲಿ ಯಾಕೆ ದೌರ್ಜನ್ಯ ಹೆಚ್ಚಳವಾಯಿತು? ಖಾವಿ ಶಾಂತಿಯ ಸಂಕೇತವಲ್ಲವೇ? 84% ಪ್ರಕರಣಗಳು ಬಾಕಿ ಉಳಿದಿವೆ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಆಧುನಿಕ ಮಹಿಳೆಯರು ಜನ್ಮ ನೀಡಲು ಬಯಸುತ್ತಿಲ್ಲ, ಇದು ಒಳ್ಳೆಯದಲ್ಲ: ಸಚಿವ ಸುಧಾಕರ್‌ ವಿವಾದಾತ್ಮಕ ಹೇಳಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...