Homeಮುಖಪುಟಹರ್ಡ್-ಡೆಪ್ ಪ್ರಕರಣ; ಸಾಮಾಜಿಕ ಮಾಧ್ಯಮಗಳ ವಿಚಾರಣೆಯಲ್ಲಿ ಪುಟಿದೆದ್ದ ಮಹಿಳಾ ವಿರೋಧಿ ಧ್ವನಿ

ಹರ್ಡ್-ಡೆಪ್ ಪ್ರಕರಣ; ಸಾಮಾಜಿಕ ಮಾಧ್ಯಮಗಳ ವಿಚಾರಣೆಯಲ್ಲಿ ಪುಟಿದೆದ್ದ ಮಹಿಳಾ ವಿರೋಧಿ ಧ್ವನಿ

- Advertisement -
- Advertisement -

ನಿಮಗೆ ಆಸಕ್ತಿ ಇರಲಿ, ಇಲ್ಲದಿರಲಿ; ಆಂಬರ್ ಹರ್ಡ್-ಜಾನಿ ಡೆಪ್ ಮಾನನಷ್ಟ ಪ್ರಕರಣವು ನಿಮಗೆ ಪರಿಚಿತವೇ ಆಗಿರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ “Best of TikTok Johnny Depp and Amber Heard Trial”, “7 Biggest Lies Camille Vasquez Forced Amber Heard To Admit”, “8 Times Where Amber Heard Acted Like A Maniac” ಇತ್ಯಾದಿ ಶೀರ್ಷಿಕೆಗಳಲ್ಲಿ ಹಲವಾರು ವಿಡಿಯೋಗಳು ಹರಿದಾಡುತ್ತಿವೆ.

ಇಂಟರ್ನೆಟ್‌ನಲ್ಲಿರುವ “Body Language Analyst REACTS to Johnny Depp Lawyers. Why did Amber Heard LOSE?” ಎಂಬ ವಿಡಿಯೋದಲ್ಲಿ ’ದೇಹಭಾಷೆಯ ತಜ್ಞರು’ ಆಂಬರ್ ಹರ್ಡ್ ಅವರ ಪ್ರತಿಯೊಂದು ನಡೆನುಡಿ, ಸ್ವಭಾವ, ಹಾವಭಾವ ಮತ್ತು ಆಕೆ ನ್ಯಾಯಾಲಯದಲ್ಲಿ ಆಡಿದ ಪ್ರತಿಯೊಂದು ಶಬ್ದವನ್ನು ನಿರ್ಭಾವದಿಂದ (ಕ್ಲಿನಿಕಲಿ) ವಿಶ್ಲೇಷಿಸುತ್ತಾರೆ ಎಂದಿದೆ.

ಮತ್ತೊಂದು ಹತ್ತು ನಿಮಿಷಗಳ ವಿಡಿಯೋದಲ್ಲಿ ದೇಹಭಾಷಾ ತಜ್ಞರು ಕೋರ್ಟಿನ ಕಲಾಪಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದ ಬಳಿಕ ಈ ತೀರ್ಮಾನವನ್ನು ನೀಡುತ್ತಾರೆ: ’ಆಂಬರ್ ಹರ್ಡ್ ಮಾಡಿದ್ದೆಲ್ಲದರಲ್ಲಿ, ನನ್ನ ಪ್ರಕಾರ, ವಿಶ್ವಾಸಾರ್ಹತೆ ಇಲ್ಲ’ ಎಂದು.

#amberturd #amberheardisanabuser #amberheardfake #amberheardtrailmemes #amberheardtrailspoof ಮುಂತಾದ ಹ್ಯಾಶ್‌ಟ್ಯಾಗ್‌ಗಳು ಟ್ವಿಟ್ಟರ್ ಮತ್ತು ಇನ್ಸ್‌ಟಾಗ್ರಾಂಗಳಲ್ಲಿ ಮುಂಚೂಣಿಯಲ್ಲಿದ್ದವು. ’ಆಂಬರ್ ಹರ್ಡ್ ಫಿಲ್ಟರ್’ ಎಂಬ ’ಸ್ಯಾಡ್ ಫೇಸ್’ (ದುಃಖದ ಮೊಗದ) ಫಿಲ್ಟರ್ ಸ್ನ್ಯಾಪ್‌ಶಾಟ್‌ನಲ್ಲಿ ಬಂದು, ಆಕೆ ಸಾಕ್ಷಿ ಹೇಳುವ ಕಟಕಟೆಯಲ್ಲಿ ಅಳುವುದನ್ನು ಅಣಕು ಮಾಡಿತೆಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದವು. ಆಂಬರ್ ಹರ್ಡ್ ’ಕೌಟುಂಬಿಕ ಹಿಂಸೆ ಎದುರಿಸಿದ ವ್ಯಕ್ತಿಗಳಿಗೆ ಹೇಗೆ ’ಇರುಸುಮುರುಸು’ ಉಂಟು ಮಾಡಿದ್ದಾಳೆ’, ಆಕೆ ಹೇಗೆ ’ಒಬ್ಬಳು ಕೌಟುಂಬಿಕ ಹಿಂಸೆಯ ಸಂತ್ರಸ್ತೆಯಂತೆ ವರ್ತಿಸಲಿಲ್ಲ’ ಇತ್ಯಾದಿ ಸುದ್ದಿಗಳನ್ನು ಜನರು ಚಪ್ಪರಿಸಿ ಸವಿದರು. ’ಕೋರ್ಟಿನಲ್ಲಿ ಕ್ಯಾಮೆರಾ ಇಡಲು ಒತ್ತಾಯಿಸಿದ್ದು ಜಾನಿ ಡೆಪ್; ಒಬ್ಬ ತಪ್ಪಿತಸ್ಥ ವ್ಯಕ್ತಿ ಹಾಗೆ ಮಾಡಲು ಸಾಧ್ಯವಿಲ್ಲ…. ಹೇಳಿದ್ದು ಸಾಕು, ಆತ ಮುಗ್ಧ! ಅವನು ಎಷ್ಟು ಶಾಂತವಾಗಿದ್ದ ಎಂಬುದು ಎಲ್ಲವನ್ನೂ ಸಾಬೀತುಪಡಿಸುತ್ತದೆ’ ಹೀಗೆ ಜಾನಿ ಡೆಪ್ ಬಗೆಗಿನ ಕಾಮೆಂಟ್ರಿಯಲ್ಲವೂ ಹಲವು ಪ್ರತಿಪಾದನೆಗಳ ಮೂಲಕ ಅವನನ್ನು ಕೊಂಡಾಡುವುದೇ ಹೆಚ್ಚಿತ್ತು.

ಹರ್ಡ್ ಅವರ ಬಗೆಗಿನ ಮೀಮ್‌ಗಳನ್ನು (memes), ಡೆಪ್ ಪರವಾದ ಕಂಟೆಂಟುಗಳನ್ನೂ ಸಾಮಾಜಿಕ ಮಾಧ್ಯಮಗಳ ಅಲ್ಗೊರಿದಂಗಳು ಆದ್ಯತೆಯ ಮೇರೆಗೆ ತೋರಿಸಿದ್ದವು ಎಂಬ ಬಗ್ಗೆ ಹಿಂದೆಯೇ ತಜ್ಞರು ಎಚ್ಚರಿಸಿದ್ದರು.

ಅಮೆರಿಕದಲ್ಲಿ ಟಿವಿಯಲ್ಲಿ ನೇರಪ್ರಸಾರವಾದ ಕೋರ್ಟು ಪ್ರಕರಣಗಳ ಇತಿಹಾಸ ಇದ್ದರೂ, ಬೇರೆ ಹಲವು ಪ್ರಕರಣಗಳು ಈ ಪ್ರಕರಣದಷ್ಟು ಗಮನ ಸೆಳೆದಿರಲಿಲ್ಲ. ಹರ್ಡ್-ಡೆಪ್ ಕೋರ್ಟ್ ಪ್ರಕರಣವನ್ನು ನೇರಪ್ರಸಾರ ಮಾಡಿದ್ದು, ಸಂವೇದನೆಯಿಲ್ಲದೆ ಮಹಿಳಾ ವಿರೋಧಿ ಧೋರಣೆಯುಳ್ಳವರ ಕೈಗೆ ಸಿಕ್ಕಿ ಆಹಾರವಾಯಿತು ಮತ್ತು ಕೌಟುಂಬಿಕ ಹಿಂಸೆಯನ್ನು ಮೀಮ್‌ಗಳನ್ನಾಗಿ ಕಾಣುವುದಕ್ಕೆ ಕಾರಣವಾಯಿತು. ಇದು ಕೌಟುಂಬಿಕ ಹಿಂಸೆ ಮತ್ತು ಲಿಂಗಾಧಾರಿತ ಹಿಂಸೆ ಕುರಿತ ಪೂರ್ವಾಗ್ರಹಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಲು ಫಲವತ್ತಾದ ನೆಲವನ್ನು ಹದಗೊಳಿಸಿತು.

ವಿಚಾರಣೆ ವೇಳೆ ಡೆಪ್, ತಾನು ಹರ್ಡ್ ಬಗ್ಗೆ ಹಿಂಸಾತ್ಮಕ ಸಂದೇಶಗಳನ್ನು ತನ್ನ ಗೆಳೆಯನಿಗೆ ಕಳುಹಿಸುವುದು ನಿಜ ಎಂದು ಹೇಳಿದ್ದ. ಉದಾಹರಣೆಗೆ: ’ಅಂಬರ್‌ಳನ್ನು ಸುಟ್ಟುಬಿಡೋಣ!!! ಅವಳನ್ನು ಸುಡುವ ಮುಂಚೆಯೇ ನೀರಿನಲ್ಲಿ ಮುಳುಗಿಸಿ ಸಾಯಿಸೋಣ! ಅವಳು ಸತ್ತಿದ್ದಾಳೆ ಎಂದು ಖಚಿತಪಡಿಸಿಕೊಳ್ಳುವುದಕ್ಕೆ ಸುಟ್ಟ ಶವವನ್ನು ನಂತರ ಸಂಭೋಗಿಸುತ್ತೇನೆ’ ಹೀಗೆ. ಹರ್ಡ್ ಜೊತೆಗೆ ಇನ್ನೂ ವೈವಾಹಿಕ ಸಂಬಂಧ ಇರುವಾಗಲೇ ಆಕೆಯನ್ನು ’ಫಿಲ್ಥಿ ವ್ಹೋರ್’, ’ಎ ಚೀಪ್ ಹುಕರ್’ ಎಂಬಿತ್ಯಾದಿಯಾಗಿ ಕರೆದಿರುವುದನ್ನು ಒಪ್ಪಿಕೊಂಡ. ಹರ್ಡ್ ಮಾಜಿ ಗಂಡ ಆಕೆಯ ಮೇಲೆ ಲೈಂಗಿಕ ಹಲ್ಲೆ ನಡೆಸಿರುವುದನ್ನು ಹರ್ಡ್ ಪರವಾದ ವಕೀಲರ ತಂಡ ಸಾರ್ವಜನಿಕವಾಗಿ ಆರೋಪಿಸಿತು. ಅದನ್ನು ಕೂಡ ವಿಚಾರಣೆಯಲ್ಲಿ ಪರಿಗಣಿಸಲಾಯಿತು. ಈ ಗಂಭೀರ ಆರೋಪಗಳು ಮತ್ತು ವಿಚಾರಣೆಯ ವೇಳೆ ಬಹಿರಂಗವಾಗಿ ಡೆಪ್ ಮಾಡಿದ ಹಿಂಸೆಯ ತಪ್ಪೊಪ್ಪಿಗೆಯ ಬಗ್ಗೆ ಯಾವುದೇ ವಿಮರ್ಶೆ ನಡೆಯಲಿಲ್ಲ. ಇದು ಸಾರ್ವಜನಿಕರಿಗೂ ತಟ್ಟಲಿಲ್ಲ. ಸಾಮಾಜಿಕ ಮಾಧ್ಯಮಗಳು ಹರ್ಡ್ ಅವರ ಕೋರ್ಟ್ ನಡವಳಿಕೆಯ ಬಗ್ಗೆ ಸೂಕ್ಷ್ಮವಾಗಿ ವಿಶ್ಲೇಷಿಸುವುದರಲ್ಲೇ ಮುಳುಗಿದ್ದವು.

ಇದು ಹರ್ಡ್ ಮತ್ತು ಡೆಪ್ ನಡುವಿನ ನ್ಯಾಯಾಲಯದ ಸಮರದಲ್ಲಿ ಇರುವ ಕೆಲವು ಅನಾಹತಕಾರಿ ವಿನ್ಯಾಸದ ವಿಷಯಗಳ ಒಂದು ಭಾಗವಷ್ಟೇ.

ಡೆಪ್, 2018ರಲ್ಲಿ ವಾಷಿಂಗ್ಟನ್ ಪೋಸ್ಟ್‌ನಲ್ಲಿ ಪ್ರಕಟವಾದ ಸಂಪಾದಕೀಯದ ಪುಟದ ಒಂದು ಅಭಿಪ್ರಾಯ ಲೇಖನಕ್ಕೆ (op-ed) ಸಂಬಂಧಿಸಿದಂತೆ, 50 ಮಿಲಿಯನ್ ಡಾಲರ್‌ಗಳ ಒಂದು ಮಾನನಷ್ಟ ಮೊಕದ್ದಮೆಯನ್ನು ಹರ್ಡ್ ವಿರುದ್ಧ ದಾಖಲಿಸಿದ್ದರು. ಆ ಲೇಖನದಲ್ಲಿ ಹರ್ಡ್, “ತಾನೊಬ್ಬಳು ಕೌಟುಂಬಿಕ ಹಿಂಸೆಯನ್ನು ಅನುಭವಿಸಿದ ಮಹಿಳೆಯರ ಸಾರ್ವಜನಿಕ ಪ್ರತಿನಿಧಿ ಮತ್ತು ಇದರ ಬಗ್ಗೆ ಮುಕ್ತವಾಗಿ ಮಾತನಾಡುವ ಮಹಿಳೆಯರ ವಿರುದ್ಧ ಹೂಡಲಾಗುವ ಸಾಂಸ್ಕೃತಿಕ ದಾಳಿಯನ್ನು ಅನುಭವಿಸಿರುವೆ” ಎಂದು ಹೇಳಿಕೊಂಡಿದ್ದರು. ಇದರಲ್ಲಿ ತಮ್ಮ ವಿರುದ್ಧ ಶೋಷಣೆ ನಡೆಸಿದ ವ್ಯಕ್ತಿ ಡೆಪ್ ಎಂದು ಹೇಳಿರಲಿಲ್ಲವಾಗಿದ್ದರೂ, ಆತನ ವಕೀಲಿ ತಂಡ, ಇದು ’ನೇರವಾಗಿ’ ಡೆಪ್ ವಿರುದ್ಧ ಮಾಡಿದ ಆರೋಪವಾಗಿದೆ; ಅದರಿಂದ ಅವರ ವೃತ್ತಿ ಜೀವನ ಹಾಳಾಗಿದೆ; ಗೌರವಕ್ಕೆ ಧಕ್ಕೆಯಾಗಿದೆ ಎಂದು ಆರೋಪಿಸಿತ್ತು.

ಅಮೆರಿಕದಲ್ಲಿ ಪಾರದರ್ಶಕತೆಯನ್ನು ಖಾತ್ರಿಪಡಿಸುವ ಒಂದು ವಿಧಾನವಾಗಿ ಸಾರ್ವಜನಿಕವಾಗಿ ನಡೆಯುವ ಕೋರ್ಟ್ ವಿಚಾರಣೆಗಳನ್ನು ಸಮರ್ಥಿಸಿಕೊಳ್ಳಲಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಮಾಧ್ಯಮಗಳ ತೀಕ್ಷ್ಣ ದೃಷ್ಟಿ ಮೂಲ ಉದ್ದೇಶವನ್ನೂ ಮೀರಿಬಿಟ್ಟಿತ್ತು. ಈ ರೀತಿಯ ನಿರ್ದಯ ಮಾಧ್ಯಮ ಕವರೇಜ್‌ಗಳ ಆರಂಭಿಕ ಸಂತ್ರಸ್ತರಲ್ಲಿ ಒಬ್ಬರಾದ ಮೋನಿಕಾ ಲೆವಿನ್ಸ್ಕಿ ಸದ್ಯದ ವಿಚಾರಣೆ ಕುರಿತು ಹೀಗೆ ಹೇಳುತ್ತಾರೆ: “ಫೇಸ್‌ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್‌ಗಳಲ್ಲಿ ಮೀಮ್‌ಗಳು, ವಿಡಿಯೋಗಳು ಮತ್ತು ಟಿಕ್‌ಟಾಕ್ ಸಂಭಾಷಣೆಗಳ ಮೂಲಕ ವಿಚಾರಣೆಯ ಮಧ್ಯಸ್ಥಿಕೆ ವಹಿಸಿದ್ದ ಮಾದರಿಗಳು ನಮ್ಮ ಬಳಿ ಇವೆ. ಅವು ಪೂರ್ವಾಗ್ರಹ ಪೀಡಿತವೂ, ಉತ್ಪಾದಿಸಿಸಲ್ಪಟ್ಟವೂ, ಮೇಲ್ಮಟ್ಟದವು ಆಗಿದ್ದು ಅವುಗಳನ್ನು ಹೆಚ್ಚುಚ್ಚು ಸ್ವೀಕರಿಸುತ್ತಿದ್ದೇವೆ”. ಮುಂದುವರೆದು, “ನಮ್ಮ ಸ್ವಂತ ಉದ್ದೇಶಗಳಿಗಾಗಿ ವಿಚಾರಣೆಯನ್ನು ಪಕ್ಷಪಾತಿ ಧೋರಣೆಯಿಂದ ಕಾಣುವುದರಿಂದ ನಾವು ನಮ್ಮ ಸ್ವಂತ ಘನತೆ ಮತ್ತು ಮಾನವೀಯತೆಯನ್ನು ಅಪಮೌಲ್ಯಗೊಳಿಸಿದ್ದೇವೆ” ಎಂದು ಅವರು ಪ್ರತಿಪಾದಿಸಿದ್ದಾರೆ.

ವಿಚಾರಣೆಯ ಅಸಂಖ್ಯಾತ ಮೀಮ್‌ಗಳು, ಕೆಟ್ಟ ಟ್ರೋಲ್‌ಗಳು ಮತ್ತು ವೀಡಿಯೊ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಮತ್ತು ಕೊನೆಯಿಲ್ಲದ ಸಾಮಾಜಿಕ ಜಾಲತಾಣಗಳ ಇರಿಯುವ ದೃಷ್ಟಿ, ಏಳು ಸದಸ್ಯರ ತೀರ್ಪುಗಾರರು ತಮ್ಮ ನಿರ್ಧಾರವನ್ನು ಪ್ರಕಟಿಸುವ ಮೊದಲೇ ಡೆಪ್ ಈಗಾಗಲೇ ಪ್ರಕರಣವನ್ನು ಗೆದ್ದಿದ್ದಾರೆ ಎಂಬ ಭಾವನೆ ಮೂಡಿಸಿಬಿಟ್ಟಿತ್ತು. ಇದು ನಮ್ಮ ದೇಶದಲ್ಲಿನ ಕೌಟುಂಬಿಕ ದೌರ್ಜನ್ಯದ ಸಂತ್ರಸ್ತರ ವಿರುದ್ಧದ ಮನಸ್ಥಿತಿಗೆ ಹತ್ತಿರ ಹೋಲುತ್ತದೆ. ವಾಸ್ತವ ಸ್ಥಿತಿ ಬೇರೆಯಿದ್ದರೂ, ಮಹಿಳೆಯರು ’ಹುಸಿ ಕೌಟುಂಬಿಕ ದೌರ್ಜನ್ಯ’ ಪ್ರಕರಣಗಳನ್ನು ದಾಖಲಿಸುತ್ತಾರೆಂಬ ಮಿಥ್‌ಅನ್ನು ನಿಜ ಮಾಡಲು ನಿರಂತರ ಪ್ರಚಾರಗಳು ಗೆದ್ದಿವೆ. ಅವು ಪ್ರಭುತ್ವದ ಸಂಸ್ಥೆಗಳನ್ನು ಪ್ರಭಾವಿಸಿವೆ, ಸಂತ್ರಸ್ತರ ಸಂಕಥನಗಳನ್ನು ಸುಳ್ಳು ಎಂದು ನಂಬಿಸಲು ಕೆಲಸ ಮಾಡಿವೆ ಮತ್ತು ಕೌಟುಂಬಿಕ ದೌರ್ಜನ್ಯದ ವಿರುದ್ಧ ಸಮಾಜವನ್ನು ಅಸೂಕ್ಷ್ಮಗೊಳಿಸಿವೆ. ಇಂತಹ ಪರಿಣಾಮಗಳು, ಸದರಿ ಕೋರ್ಟ್ ವಿಚಾರಣೆಗಳಂತಹ ಭಾವತೀವ್ರತೆಯ ಸಂಗತಿಗಳಿಂದ ಮತ್ತಷ್ಟು ಜಟಿಲವಾಗಿವೆ. ಅದರಲ್ಲೂ ಸಾಮಾಜಿಕ ಪರಿಣಾಮ ಬೀರುವ ತಾರೆಗಳನ್ನು ಒಳಗೊಂಡಾಗ ಅದು ಇನ್ನಷ್ಟು ಹದಗೆಡುತ್ತದೆ. ಉದಾಹರಣೆಗೆ ಈಗ ಹಲವು ಮನಶಾಸ್ತ್ರಜ್ಞರು ವರದಿ ಮಾಡಿರುವಂತೆ, ಗಂಡಂದಿರುವ ಮತ್ತು ಬಾಯ್‌ಫ್ರೆಂಡ್‌ಗಳು ತಮ್ಮ ಹೆಂಡತಿಯರು ಅಥವಾ ಗರ್ಲ್‌ಫ್ರೆಂಡ್‌ಗಳು ಕೋಪಗೊಂಡಾಗ ಅಥವಾ ಬೇಸರಿಸಿಕೊಂಡಾಗ ’ಅಂಬರ್’ ಎಂದು ಮೂದಲಿಸಲು ಪ್ರಾರಂಭಿಸಿದ್ದಾರಂತೆ.

ಹರ್ಡ್ ಅವರ ಈ ಪರಿಸ್ಥಿತಿ, ತನ್ನ ವಿರುದ್ಧ ದೌರ್ಜನ್ಯ ನಡೆಸಿದ್ದರು ಎಂದು ಆರೋಪ ಮಾಡಲಾಗಿದ್ದ ಎಂ ಜೆ ಅಕ್ಬರ್ ವಿರುದ್ಧ ಸೆಣೆಸಿದ್ದ ಭಾರತೀಯ ಪತ್ರಕರ್ತೆ ಪ್ರಿಯಾ ರಮಣಿಯವರ ರೀತಿಯದ್ದೇ ಆಗಿದೆ. ಜಗತ್ತಿನಾದ್ಯಂತ ದೌರ್ಜನ್ಯದ ವಿರುದ್ಧ ಮಾತನಾಡಿದರೆ ಮಾನನಷ್ಟ ಮೊಕದ್ದಮೆಯನ್ನು ಅಸ್ತ್ರವಾಗಿ ಬಳಸುತ್ತಿರುವ ಹಿನ್ನಲೆಯಲ್ಲಿ, ಡೆಪ್ ದಾಖಲಿಸಿದ ಪ್ರಕರಣ ಕೂಡ ಅವರು ಹರ್ಡ್ ವಿರುದ್ಧ ನಡೆಸಿದ ದೌರ್ಜನ್ಯದ ಮುಂದುವರಿದ ಭಾಗದಂತೆಯೇ ಇದೆ. ಸ್ತ್ರೀವಾದ ಚಳವಳಿಗಳಲ್ಲಿ ಮಹತ್ವದ ಬೆಳವಣಿಗೆಗಳಾಗಿದ್ದರೂ, ಜಾಗತಿಕವಾಗಿ ಮಹಿಳೆಯರು ಸಾರ್ವಜನಿಕ ಮುಜುಗರವನ್ನು ಎದುರಿಸಬೇಕಾಗುತ್ತದೆ ಮತ್ತು ತಮ್ಮ ಅಘಾತಕಾರಿ ಅನುಭವಗಳ ಬಗ್ಗೆ ಮುಕ್ತವಾಗಿ ಮಾತನಾಡಿದರೆ ಕಳಂಕಕ್ಕೆ ಗುರಿಯಾಗಬೇಕಾಗುತ್ತದೆ ಎಂಬುದನ್ನು ಈ ಘಟನೆ ತೋರಿಸಿದೆ.

ಈ ಎಲ್ಲಾ ಸಾಮಾಜಿಕ ಮಾಧ್ಯಮ ’ಸಂಭ್ರಮ’ ಜಾರಿಯಲ್ಲಿದ್ದರೂ ಸಹ, ಅಂಬರ್-ಹರ್ಡ್ ಸಂಬಂಧವನ್ನು ಮಾಧ್ಯಮಗಳು ಹೆಚ್ಚುಹೆಚ್ಚಾಗಿ ಅಸತ್ಯದ ಧಾಟಿಯಲ್ಲಿ “ಪರಸ್ಪರ ನಿಂದನೀಯ, ಪರಸ್ಪರ ವಿಷಕಾರಿ ಸಂಬಂಧ” ಎಂದೇ ನಿರೂಪಿಸಿದವು. ಅದೇನೇ ಇದ್ದರೂ, ಲಿಂಗ ನ್ಯಾಯದಲ್ಲಿ ಪರಿಣತಿ ಹೊಂದಿರುವ ವಕೀಲರು ಮತ್ತು ಮನಶಾಸ್ತ್ರಜ್ಞರು ಈ ರೀತಿಯ ಪದಗಳನ್ನು ಸಾಮಾನ್ಯವಾಗಿ ಕೌಟುಂಬಿಕ ದೌರ್ಜನ್ಯದ ಗಂಭೀರತೆಯನ್ನು ಕಡಿಮೆ ಮಾಡಲು ಮತ್ತು ಎರಡೂ ಕಡೆಯವರೂ ಹಿಂಸಾಚಾರ ಮಾಡಿದ್ದಾರೆ ಎಂದು ವಾದಿಸಲು ಕಾರ್ಯತಂತ್ರವಾಗಿ ಬಳಸಲಾಗುತ್ತದೆ ಎಂದು ಸೂಚಿಸಿದ್ದಾರೆ. ನಿಂದನೆ ಯಾವಾಗಲೂ ಒಬ್ಬರ ಕಡೆಯಿಂದ ಮಾತ್ರ ನಡೆದಿದೆ ಎಂದು ವಾದಿಸದಿದ್ದರೂ, ಸಂತ್ರಸ್ತರ ಹಿಂಸಾತ್ಮಕ ನಡವಳಿಕೆಗಳು, ದೈಹಿಕ/ಮಾನಸಿಕ ದೌರ್ಜನ್ಯ, ಹೆಚ್ಚಿನ ಬಾರಿ ತೀವ್ರ ನಿಯಂತ್ರಣಕ್ಕೊಳಪಡಿಸುವುದರಿಂದ/ದೌರ್ಜನ್ಯ ಮಾಡುವುದರಿಂದ ಹುಟ್ಟುತ್ತದೆ ಎಂದು ಗುರುತಿಸುವುದು ಮುಖ್ಯವಾಗಿದೆ. ಅದೇ ಸಂದರ್ಭದಲ್ಲಿ ’ಪರಸ್ಪರ ನಿಂದನೆ’ಯೆಂಬ ತಪ್ಪು ಕಲ್ಪನೆಯು ನಿಂದನೀಯ ಸಂಬಂಧಗಳ ಹಿಂಸಾಚಾರದಲ್ಲಿ ಅಪರಾಧಿ ಮತ್ತು ಸಂತ್ರಸ್ತರನ್ನು ಹೊಂದಿರುತ್ತದೆ ಎಂಬ ಕಲ್ಪನೆಯನ್ನೇ ಬುಡಮೇಲು ಮಾಡಿಬಿಡುತ್ತದೆ. ಆದ್ದರಿಂದ, ಸಂಬಂಧದ ಮೌಲ್ಯಮಾಪನ ವಸ್ತುನಿಷ್ಠವಾಗಿ ಕಂಡುಬಂದರೂ, ಈ ಚೌಕಟ್ಟು ಸಾಮಾನ್ಯವಾಗಿ ಲಿಂಗ ಅಧಿಕಾರದ ಮಜಲುಗಳನ್ನು ಅರ್ಥಮಾಡಿಕೊಳ್ಳಲು ಸೋತಿರುತ್ತದೆ ಮತ್ತು ಲಿಂಗ ಅಸಮಾನತೆಯಿಂದ ಕೂಡಿರುತ್ತದೆ. ಮಾಧ್ಯಮಗಳು ಈ ತಿಳುವಳಿಕೆಯನ್ನು ಸಾಮಾನ್ಯೀಕರಿಸುವುದರಿಂದ ಎಲ್ಲಾ ದೌರ್ಜನ್ಯ ಸಂತ್ರಸ್ತರಿಗೆ ತೀವ್ರ ಹಾನಿಯುಂಟಾಗುತ್ತಿದ್ದು, ಹಿಂಸಾಚಾರದ ಅಪರಾಧಿಗಳ ವಿರುದ್ಧ ಹೋರಾಡುವ ಅವರ ಸಾಮರ್ಥ್ಯವನ್ನು ಕುಂದಿಸುತ್ತಿದೆ.

ಸಾಮಾಜಿಕ ಮಾಧ್ಯಮಗಳಲ್ಲಿನ ಲಿಂಗ ನ್ಯಾಯದ ಚರ್ಚೆಗಳು ಹಾನಿಕಾರಕ ತಿರುವುಗಳನ್ನು ತೆಗೆದುಕೊಂಡು ಸಂತ್ರಸ್ತರಿಗೆ ಮಾರಕವಾಗಬಲ್ಲವು. ಈ ಮಾಧ್ಯಮವು ಪ್ರಜಾಪ್ರಭುತ್ವೀಕರಣದ ಉತ್ತಮ ಸಾಧನವಾಗಿ ಕಾರ್ಯನಿರ್ವಹಿಸಬಹುದಾದರೂ, ಇದು ಪ್ರಾಮಾಣಿಕ ಮತ್ತು ಸೂಕ್ಷ್ಮವಾದ ತೊಡಗಿಸಿಕೊಳ್ಳುವಿಕೆಗಳಿಗೆ ಬಾಗಿಲು ಮುಚ್ಚುವ ಅಪಾಯವನ್ನು ಸಹ ಹೊಂದಿವೆ. ಸಾಮಾಜಿಕ ಜಾಲತಾಣಗಳ ಪ್ರತಿಕ್ರಿಯೆಯಗಳು MeToo ಆಂದೋಲನದಲ್ಲಾಗಲೀ, ಅಥವಾ ಕರ್ನಾಟಕದಲ್ಲಿ ಇತ್ತೀಚಿನ ಹಿಜಾಬ್ ಸಮಸ್ಯೆಯ ಸುತ್ತಲಿನ ಚರ್ಚೆಯಲ್ಲಾಗಲೀ, ಈಗಾಗಲೇ ದುರ್ಬಲಗೊಂಡಿರುವ ಗುಂಪುಗಳನ್ನು ಮತ್ತಷ್ಟು ಬೆದರಿಸಲು ಮತ್ತು ಅಂಚಿನಲ್ಲಿಡಲು ಹೇಗೆ ಅಸ್ತ್ರವಾಗಿ ಬಳಕೆಯಾದವು ಎಂಬುದನ್ನು ಕಾಣಬಹುದು. ಸಂಬಂಧಗಳ ನಡುವಿನ ಉಲ್ಲಂಘನೆಗಳ ಕುರಿತು ವಿಮರ್ಶಾತ್ಮಕ ಚರ್ಚೆಗಳು ಮೇಲ್ವಿಚಾರಣೆಯಿಲ್ಲದ, ಲಿಂಗ ಸೂಕ್ಷ್ಮತೆಯ ಮಾನದಂಡಗಳು ಕಾರ್ಯನಿರ್ವಹಿಸದಿರುವ ವೇದಿಕೆಗಳಲ್ಲಿ ಸಾಧ್ಯವಾಗುವುದಿಲ್ಲ. ವಿಚಾರಣೆಯಲ್ಲಿ ಒಬ್ಬರ ಅಭಿಪ್ರಾಯವೇನೇ ಇರಲಿ, ನಾವು ಪ್ರಜ್ಞಾಪೂರ್ವಕವಾಗಿ ನಮ್ಮನ್ನು ಕೇಳಿಕೊಳ್ಳಬೇಕು – ಅಭಿಪ್ರಾಯವನ್ನು ಹೊಂದಲು ನಮಗಿರುವ ಸಾಧ್ಯತೆ ನಮಗೆ ಏನೇನನ್ನು ಮಾಡಲು ಅವಕಾಶ ನೀಡುತ್ತದೆ?

ಪೂರ್ಣ ರವಿಶಂಕರ್

ಪೂರ್ಣ ರವಿಶಂಕರ್
ವಕೀಲರು ಮತ್ತು ಸಂಶೋಧಕರು, ಪರ್ಯಾಯ ಕಾನೂನು ವೇದಿಕೆ, ಬೆಂಗಳೂರು


ಇದನ್ನೂ ಓದಿ: ತೇನ್ಮೋಳಿ ಭಾಷಣ ರದ್ದುಪಡಿಸಿದ ಗೂಗಲ್; ’ಸಾಫ್ಟ್’ ಜಾತಿವಾದಕ್ಕೆ ಮದ್ದೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...