Homeಮುಖಪುಟಪಠ್ಯದಲ್ಲಿ ಸೂಲಿಬೆಲೆ ಪಾಠದ ಕುರಿತು ಮಾತನಾಡಲು ಆರ್ ಅಶೋಕ್ ಹಿಂದೇಟು: ಚಕ್ರವರ್ತಿಯ ಈ ಸುಳ್ಳುಗಳು ಕಾರಣವೇ?

ಪಠ್ಯದಲ್ಲಿ ಸೂಲಿಬೆಲೆ ಪಾಠದ ಕುರಿತು ಮಾತನಾಡಲು ಆರ್ ಅಶೋಕ್ ಹಿಂದೇಟು: ಚಕ್ರವರ್ತಿಯ ಈ ಸುಳ್ಳುಗಳು ಕಾರಣವೇ?

- Advertisement -
- Advertisement -

ಪಠ್ಯ ಪರಿಷ್ಕರಣೆ ವಿವಾದ ದಿನದಿಂದ ದಿನಕ್ಕೆ ಹೆಮ್ಮರವಾಗಿ ಬೆಳೆಯುತ್ತಿದ್ದು, ರಾಜ್ಯ ಬಿಜೆಪಿ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪಠ್ಯ ಪರಿಷ್ಕರಣೆ ವಿರೋಧಿಸಿ ವಿಶ್ವಮಾನವ ಕ್ರಾಂತಿಕಾರಿ ಕುವೆಂಪು ವೇದಿಕೆಯಿಂದ ನಡೆದ ಬೃಹತ್ ಪ್ರತಿಭಟನೆ ಮತ್ತು ದೇವೇಗೌಡರು ಪತ್ರ ಬರೆದ ನಂತರ ಸರ್ಕಾರ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರ ಸ್ಪಷ್ಟೀಕರಣ ನೀಡಲು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಬದಲಿಗೆ ಕಂದಾಯ ಸಚಿವ ಆರ್ ಅಶೋಕ್‌ರನ್ನು ಮುಂದೆ ಬಿಟ್ಟಿದೆ. ಆದರೆ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುವಲ್ಲಿ ಅವರು ತಡಬಡಯಿಸಿದ್ದಾರೆ. ಮಾತ್ರವಲ್ಲದೆ ಚಕ್ರವರ್ತಿ ಸೂಲಿಬೆಲೆಯವರ ಪಠ್ಯ ಸೇರಿಸಲು ಅವರೇನು ಹೋರಾಟಗಾರರ? ಸಾಹಿತಿಗಳ? ಅಥವಾ ಚಿಂತಕರ ಎಂಬ ಪ್ರಶ್ನೆಗೆ ಉತ್ತರಿಸಲು ಆರ್ ಅಶೋಕ್ ನಿರಾಕರಿಸಿದ್ದಾರೆ.

ಸೂಲಿಬೆಲೆ ಬಗ್ಗೆ ನಾನು ಮಾತನಾಡಿಯೇ ಇಲ್ಲ.. ಅವರ ಬಗ್ಗೆ ‌ಯಾಕೆ ಪ್ರಶ್ನೆ ಕೇಳ್ತಿದೀರಿ? ಎಂದು ಅಶೋಕ್ ಹೇಳಿದ್ದಾರೆ. ಪತ್ರಕರ್ತರು ಮುಂದುವರಿದು “ಮತ್ತೆ ಪಾಠ ಇದೆಯಲ್ಲ? ಅದಕ್ಕೆ ಕೇಳ್ತಿದೀವಿ.. ಅವರು ಯಾರು? ಅವರ ಪಾಠ ಯಾಕೆ?” ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಅಶೋಕ್ ನಾನು ನನ್ನ ಮಾತುಗಳಲ್ಲಿ ಅವರ ಹೆಸರನ್ನೇ ಹೇಳಿಲ್ಲವಲ್ಲ ಎಂದು ಮತ್ತೆ ಅದೇ ಉತ್ತರ ನೀಡಿದ್ದಾರೆ. ಮಂತ್ರಿಯೊಬ್ಬರು ಪತ್ರಿಕಾಗೋಷ್ಠಿಯಲ್ಲಿ ಯಾರ ಬಗ್ಗೆ ಮಾತನಾಡಲೂ ಇಷ್ಟಪಡುವುದಿಲ್ಲವೊ ಅಂತಹ ವ್ಯಕ್ತಿ ಬರೆದ ಪಾಠ ಮಕ್ಕಳು ಓದಬೇಕು ಎಂದು ಹಲವು ಪತ್ರಕರ್ತರು ಫೇಸ್‌ಬುಕ್‌ನಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ರೋಹಿತ್ ಚಕ್ರತೀರ್ಥ ಪರಿಷ್ಕರಿಸಿದ ನೂತನ ಪಠ್ಯದ 10ನೇ ತರಗತಿಯ ಕನ್ನಡ ಭಾಷೆಯಲ್ಲಿ ಪಠ್ಯಪೂರಕ ಅಧ್ಯಯನದಲ್ಲಿ ತಾಯಿ ಭಾರತಿಯ ಅಮರಪುತ್ರರು ಎಂಬ ಚಕ್ರವರ್ತಿ ಸೂಲಿಬೆಲೆಯ ಪಠ್ಯ ಸೇರಿಸಲಾಗಿದೆ. ಕೃತಿಕಾರರ ಪರಿಚಯದಲ್ಲಿ ಅವರು ಗಣಕವಿಜ್ಞಾನದಲ್ಲಿ ಪದವಿ ಪಡೆದಿದ್ದಾರೆ ಎಂದು ಬರೆಯಲಾಗಿದೆ. ಆದರೆ ಸೂಲಿಬೆಲೆಯವರು ಆ ಕೋರ್ಸ್ ಅನ್ನು ಅರ್ಧಕ್ಕೆ ಬಿಟ್ಟರು ಎಂದು ಹಲವರು ಆರೋಪಿಸಿದ್ದಾರೆ. ಇದೆಲ್ಲ ಹೊರತುಪಡಿಸಿಯು ಅವರು ಒಂದು ಪಕ್ಷದ ಪ್ರಚಾರಕರಾಗಿ ನುರಾರು ಸುಳ್ಳುಗಳನ್ನು ಹೇಳಿ ಕುಖ್ಯಾತಿಯಾಗಿದ್ದಾರೆ. ಅಂತವರ ಪಾಠವನ್ನು ನಮ್ಮ ಮಕ್ಕಳು ಓದಬೇಕೆ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಆ ಕಾರಣಕ್ಕಾಗಿಯೇ ಆರ್ ಅಶೋಕ್ ಅವರ ಬಗ್ಗೆ ಮಾತನಾಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.

ಚಕ್ರವರ್ತಿ ಸೂಲಿಬೆಲೆಯವರು ಹೇಳಿರುವ ಸುಳ್ಳುಗಳು ಮತ್ತು ವಾಸ್ತವ ಅಂಶಗಳ ಪಟ್ಟಿ ಇಲ್ಲಿದೆ.

ಸೂಲಿಬೆಲೆ ಸುಳ್ಳು: ಸ್ವಿಸ್ ಬ್ಯಾಂಕ್‌ನಲ್ಲಿರುವ ಕಪ್ಪು ಹಣವನ್ನು ಭಾರತದ ಬೊಕ್ಕಸಕ್ಕೆ ತಂದು ಹಾಕಿದರೆ ಇನ್ನ 36 ವರ್ಷಗಳ ಕಾಲ ನಾವು ತೆರಿಗೆ ಕಟ್ಟದೆ ನಮ್ಮ ಬಜೆಟ್ ಅನ್ನು ಮಂಡಿಸಬಹುದು.

ವಾಸ್ತವ: 2021 ರಲ್ಲಿ ಭಾರತೀಯರು ಸ್ವಿಸ್ ಬ್ಯಾಂಕ್‌ಗಳಲ್ಲಿ ಇಟ್ಟಿರುವ ಹಣದ ಮೊತ್ತವೂ 30,849 ಕೋಟಿ ರೂ.ಗಳಿಗಿಂತ ಹೆಚ್ಚಾಗಿದ್ದು, ಇದು ಕಳೆದ 14 ವರ್ಷಗಳಲ್ಲೇ ಗರಿಷ್ಠ ಏರಿಕೆಯಾಗಿದೆ ಎಂದು ಗುರುವಾರ ಸ್ವಿಟ್ಜರ್ಲೆಂಡ್‌ನ ಸೆಂಟ್ರಲ್ ಬ್ಯಾಂಕ್ ಬಿಡುಗಡೆ ಮಾಡಿದ ವಾರ್ಷಿಕ ಮಾಹಿತಿಯಲ್ಲಿ ತಿಳಿದುಬಂದಿದೆ.

ಸೂಲಿಬೆಲೆ ಸುಳ್ಳು: ಸ್ವಿಸ್‌ ಬ್ಯಾಂಕ್‌ನಲ್ಲಿರುವ ಕಪ್ಪು ಹಣವನ್ನು ತಂದರೆ ಭಾರತದ ರಸ್ತೆಗಳಿಗೆ ಟಾರ್ ಹಾಕುವುದು ಬೇಡ, ಚಿನ್ನ ಹಾಕಬಹುದು. ಮೋದಿಯವರು ಪ್ರಧಾನಿಯಾದರೆ ಕಪ್ಪು ಹಣವನ್ನು ವಾಪಸ್ ತರುತ್ತಾರೆ.

ವಾಸ್ತವ: ಮೋದಿಯವರು ಎರಡು ಬಾರಿ ಪ್ರಧಾನಿಯಾಗಿದ್ದಾರೆ. ಆದರೆ ಕಪ್ಪು ಹಣ ವಾಪಸ್ ತಂದಿಲ್ಲ. ಕಪ್ಪು ಹಣ ಹೊರತೆಗೆಯುವ ಉದ್ದೇಶದಿಂದ ನರೇಂದ್ರ ಮೋದಿಯವರು ನೋಟು ಅಮಾನ್ಯೀಕರಣ ಮಾಡಿದರು. ಆದರೆ ಹಣದ ರೂಪದಲ್ಲಿದ್ದ 15.41 ಲಕ್ಷ ರೂಗಳಲ್ಲಿ 15.31 ಲಕ್ಷ ಹಣ ಬ್ಯಾಂಕುಗಳಿಗೆ ವಾಪಸ್ ಬಂದಿತು. ಅಲ್ಲದೆ 2019ರಲ್ಲಿ ಆರ್ಥ ಸಚಿವ ಪಿಯೂಶ್ ಗೋಯಲ್ ನೋಟು ಅಮಾನ್ಯೀಕರಣ ಸೇರಿದಂತೆ ವಿವಿದ ಮೂಲಗಳಿಂದ ಕೇವಲ 1.3 ಲಕ್ಷ ಕೋಟಿ ಕಪ್ಪು ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

ಸೂಲಿಬೆಲೆ ಸುಳ್ಳು: ಸ್ವಿಸ್‌ನಲ್ಲಿ ಕಪ್ಪು ಹಣ ವಾಪಸ್ ತರುವವರೆಗೂ ಬಾಬಾ ರಾಮ್‌ದೇವ್, ಅಣ್ಣಾ ಹಜಾರೆ ಉಪವಾಸ ಮಾಡುತ್ತಾರೆ

ವಾಸ್ತವ: ಸ್ವಿಸ್ ಬ್ಯಾಂಕಿನಿಂದ ಕಪ್ಪಹಣ ವಾಪಸ್ ಬಂದಿಲ್ಲ ಮತ್ತು ಬಾಬಾ ರಾಮ್‌ದೇವ್, ಅಣ್ಣಾ ಹಜಾರೆ ಉಪವಾಸ ಮಾಡುತ್ತಿಲ್ಲ

ಸೂಲಿಬೆಲೆ ಸುಳ್ಳು: ಸ್ವಿಜರ್‌ಲ್ಯಾಂಡ್‌ ಗೆ ಭಾರತದ ಪ್ರಧಾನಿ ಮೊದಿ ಭೇಟಿ ಕೊಟ್ಟಾಗ, 2019ರ ಜೂನ್ ವೇಳೆಗೆ ನೀವು ಎರಡನೇ ಬಾರಿ ಗೆದ್ದರೆ ಯಾರ್ಯಾರ ಹಣ ಇದೆ ಎಂಬ ಲಿಸ್ಟ್ ಕೊಡ್ತೀವಿ ಎಂದಿದ್ದರು. ಇದು ಸ್ವಿಜರ್‌ಲ್ಯಾಂಡ್ ಮತ್ತು ಭಾರತದ ನಡುವೆ ಆಗಿರುವ ಒಪ್ಪಂದ.

ವಾಸ್ತವ: ನರೇಂದ್ರ ಮೋದಿಯವರು ಎರಡನೇ ಬಾರಿ ಪ್ರಧಾನಿಯಾಗಿದ್ದಾರೆ. ಆದರೆ ಸ್ವಿಸ್ ಬ್ಯಾಂಕಿನಲ್ಲಿ ಹಣ ಇಟ್ಟಿರುವವರ ಪಟ್ಟಿ ತರಲು ಸಾಧ್ಯವಾಗಿಲ್ಲ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಸೂಲಿಬೆಲೆ ಸುಳ್ಳು: ಕೊರಿಯಾದ ಅಧ್ಯಕ್ಷರಿಗೆ 8 ಕೋಟ್ ಹೊಲಿಸಿಕೊಟ್ಟಿದ್ದರು ನರೇಂದ್ರ ಮೋದಿ. ಹಾಗಾಗಿ ಕೊರಿಯಾದ ಅಧ್ಯಕ್ಷ ನಮ್ಮ ಪರವಾಗಿ ನಿಂತುಕೊಂಡರು, ಪಾಕ್ ವಿರುದ್ಧ ಹೋರಾಡಿದರು.

ವಾಸ್ತವ: ಅಂತಹ ಯಾವುದೇ ವರದಿಗಳು ಲಭ್ಯವಿಲ್ಲ.

ಸೂಲಿಬೆಲೆ ಸುಳ್ಳು: ಕೆನಡಾ ಅಧ್ಯಕ್ಷ ನರೇಂದ್ರ ಮೋದಿಯವರನ್ನು ಸ್ವಾಗತಿಸಲು ತಾನೇ ಕಾರ್ ಡ್ರೈವ್ ಮಾಡಿದ್ರು

ವಾಸ್ತವ: ಭದ್ರತೆಯ ದೃಷ್ಟಿಯಿಂದ ಕೆನಡಾದ ಅಧ್ಯಕ್ಷರು ಕಾರು ಡ್ರೈವ್ ಮಾಡಬಾರದು ಎಂಬ ನಿಯಮವಿದೆ.

ಇದನ್ನೂ ಓದಿ: ಸುಳ್ಳುಗಳಿಗೆ ಕುಖ್ಯಾತವಾಗಿರುವ ‘ಮೇಘ್ ಅಪ್ಡೇಟ್ಸ್’ ಚಕ್ರವರ್ತಿ ಸೂಲಿಬೆಲೆಯವರ ನೆಚ್ಚಿನ ಟ್ವಿಟ್ಟರ್‌ ಅಕೌಂಟ್‌!

ಸೂಲಿಬೆಲೆ ಸುಳ್ಳು: ಮೋದಿ ಕೆನಡಾ ವಿದೇಶಿ ಪ್ರವಾಸದಿಂದ ಹಿಂದಿರುಗಿ ಮಧ್ಯರಾತ್ರಿ 3 ಗಂಟೆಯಿಂದ 5.30 ಗಂಟೆವರೆಗೆ ಡಿಮಾನಿಟೈಸೇಸನ್ ಕುರಿತು ಸಭೆ ಮಾಡಿದ್ರು.

ವಾಸ್ತವ: ಡಿಮಾನಿಟೈಸೇಸನ್ ಆದ ನಂತರ ಮೋದಿ ಕೆನಡಾಗೆ ಭೇಟಿ ಕೊಟ್ಟಿಲ್ಲ. ಅಲ್ಲದೆ ಅವರು ಮಧ್ಯರಾತ್ರಿ ಸಭೆ ನಡೆಸಿದ ಯಾವುದೇ ವರದಿಗಳಿಲ್ಲ. ಒಂದು ವರದಿಯಂತೆ ರಾತ್ರಿ 12 ಗಂಟೆವರೆಗೆ ಮೋದಿಯವರು ಸಭೆ ನಡೆಸಿದ ವಿವರವಿದೆ.

ಸೂಲಿಬೆಲೆ ಸುಳ್ಳು: ಮೋದಿ ಪ್ರಧಾನಿಯಾದ ನಂತರ ಒಬ್ಬ ಭಯೋತ್ಪಾದಕ ಸಹ ದೇಶದೊಳಗೆ ನುಸುಳದ ಹಾಗೆ ಕಾಪಾಡಿದ್ದಾರೆ.

ವಾಸ್ತವ: ಪಠಾಣ್ ಕೋಟ್ ದಾಳಿ, ಪುಲ್ವಾಮ ದಾಳಿ ಸೇರಿದಂತೆ ಹತ್ತಾರು ಭಯೋತ್ಪಾದನಾ ದಾಳಿಗಳು ಸಂಭವಿಸಿವೆ.

ಸೂಲಿಬೆಲೆ ಸುಳ್ಳು: ಮೋದಿ ಪ್ರಧಾನಿಯಾದರೆ 200 ಲಕ್ಷ ಕೋಟಿ ರೂ ಕಪ್ಪು ಹಣ ಬ್ಯಾಂಕುಗಳಿಗೆ ಬಂದು ಬೀಳುತ್ತದೆ.

ವಾಸ್ತವ: ಮೋದಿಯವರು ಎರಡು ಬಾರಿ ಪ್ರಧಾನಿಯಾಗಿದ್ದಾರೆ. ಆದರೆ ಕಪ್ಪು ಹಣ ಬಂದಿಲ್ಲ.

ಸೂಲಿಬೆಲೆ ಸುಳ್ಳು: ಮೋದಿಯವರು ಕಪ್ಪು ಹಣ ತಡೆ ಹಿಡಿದಿದ್ದಕ್ಕೆ ಚಿನ್ನದ ಬೆಲೆ ಕುಸಿತ

ವಾಸ್ತವ: 2016ರಲ್ಲಿ ಚಿನ್ನದ ಬೆಲೆ ಒಂದು ಗ್ರಾಮ್‌ಗೆ 2600 ರೂ ಇತ್ತು. ಈಗ ಒಂದು ಗ್ರಾಮ್ ಚಿನ್ನದ ಬೆಲೆ 5200 ರೂ ಆಗಿದೆ. ಅಂದರೆ ಶೇ.100 ರಷ್ಟು ಹೆಚ್ಚಾಗಿದೆ.

ಸೂಲಿಬೆಲೆ: ಮೋದಿ ಪ್ರಧಾನಿಯಾದರೆ ಚೀನಾ ಅರುಣಾಚಲ ಪ್ರದೇಶವನ್ನು ತನ್ನ ಮ್ಯಾಪ್‌ನಿಂದ ಕೈಬಿಡುತ್ತದೆ

ವಾಸ್ತವ: ಮೋದಿಯವರು ಪ್ರಧಾನಿಯಾದ ನಂತರ ಚೀನಾ ದೇಶವು ಭಾರತದ ಗಡಿಯೊಳಗೆ ನುಗ್ಗಿ ಎರಡು ಗ್ರಾಮಗಳನ್ನೆ ನಿರ್ಮಿಸಿದೆ!

ಸೂಲಿಬೆಲೆ: ಸಮುದ್ರವನ್ನು ಸಂಚಾರಕ್ಕೆ ಬಳಸಬಹುದು ಎಂದು ಮೋದಿ ಕಂಡುಹಿಡಿದರು

ವಾಸ್ತವ: 4000 ವರ್ಷದ ಹಿಂದೆಯೇ ಸಮುದ್ರವನ್ನು ಬಳಸಿ ವ್ಯಾಪಾರ ಮಾಡಲಾಗಿದೆ. ಭಾರತದ 90% ರಫ್ತು ಸಮುದ್ರಯಾನದ ಮೂಲಕವೇ ನಡೆಯುತ್ತದೆ.

ಸೂಲಿಬೆಲೆ: ನರೇಂದ್ರ ಮೋದಿಯವರು ಸೌದಿಯ ಸಚಿವರಿಗೆ ಫೋನ್ ಮಾಡಿ ಇಂಧನ ಬೆಲೆ ಕಡಿಮೆ ಮಾಡುವಂತೆ 3 ಬಾರಿ ಮನಿವ ಮಾಡಿದ್ದರು. ಪ್ರಜೆಗಳ ಬಗ್ಗೆ ಹೆಚ್ಚು ಕಾಳಜಿಯಿಟ್ಟುಕೊಂಡು ಪೆಟ್ರೋಲ್ ಬೆಲೆ ದಬಾ ದಬಾ ಅಂತ ಇಳಿಸಿದ್ದಾರೆ.

ವಾಸ್ತವ: ಪೆಟ್ರೋಲ್ ಬೆಲೆ 100 ರೂ ದಾಟಿದೆ. ಅತಿ ಹೆಚ್ಚು ಅಬಕಾರಿ ತೆರಿಗೆ ವಿಧಿಸಿದ್ದು ಇದೇ ಮೋದಿಯವರು.

ಬರೆಯುತ್ತಾ ಹೋದರೆ ಮುಗಿದಷ್ಟು ಸುಳ್ಳುಗಳನ್ನು ಸೂಲಿಬೆಲೆಯವರು ಹೇಳಿದ್ದಾರೆ. ಹಾಗಾಗಿ ಅವರನ್ನು ಹೆಂಗ್ ಪುಂಗ್ಲಿ ಎಂದು ಅಡ್ಡ ಹೆಸರಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಇಂತಹ ವ್ಯಕ್ತಿ ಬರೆದ ಪಠ್ಯವನ್ನು ನಮ್ಮ ಮಕ್ಕಳು ಓದಬಾರದೆಂದು ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗಾಗಿಯೇ ಸಚಿವ ಆರ್ ಅಶೋಕ್‌ರವರ ಚಕ್ರವರ್ತಿ ಸೂಲಿಬೆಲೆಯವರ ಬಗ್ಗೆ ಮಾತನಾಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

  1. ಬಾಯಿ ಬಿಟ್ರೆ ಸುಳ್ಳು ಸುಳ್ಳು ಸೂಪರ್ ಸುಳ್ಳು ಮಾತ್ರ ಅದೆಲ್ಲಿ ಟ್ರೇನಿಂಗ ತಗೊಂಡು ಬಂದಿದಾನೆ ಅಂತ ಗೊತ್ತಾಗತಿಲ್ಲ.. ಈ ದರ್ಬೇಸಿ ಸೂಲಿಬೆಲೆದು ಒಂದು ಜನ್ಮನಾ 😂😂😂 ಬೇರೆಯವರಿಗೇನಾದ್ರೂ ಇವನಿಗೆ ಆದ ಅವಮಾನ ಆಗಿದ್ರೆ ಬೀಜ ಹಿಚ್ಕೊಂಡು ಸತ್ತು ಹೋಗಿರೋರು. ಇವನು ಬಿಡ್ರಿ ಮಹಾ ಬಂಢ ಥೂ. ಥೂ ಥೂ ಇಂತಹ ಲಜ್ಜೆಗೆಟ್ಟವನ್ನ ಎಲ್ಲೂ ನೋಡಿಲ್ಲ, ಕೇಳಿಯೂ ಇಲ್ಲ ಬಿಡಿ.. ಆದಷ್ಟು ಬೇಗ ಆ ದೇವರು ಸೂಲಿಬೆಲೆ ಅನ್ನೋ ಹುಚ್ಚನಿಗೆ ಒಳ್ಳೆ ಬುದ್ದಿ ಕೊಡಲಿ ಅಂತ ಹಾರೈಸುವೆ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...