Homeಎಕಾನಮಿಸಂಯಮದ ಆರ್ಥಿಕತೆಗಾಗಿ ಪ್ರಸನ್ನರವರ ಸತ್ಯಾಗ್ರಹ ಬೆಂಬಲಿಸೋಣ: ಶಶಿಕಾಂತ ಯಡಹಳ್ಳಿ

ಸಂಯಮದ ಆರ್ಥಿಕತೆಗಾಗಿ ಪ್ರಸನ್ನರವರ ಸತ್ಯಾಗ್ರಹ ಬೆಂಬಲಿಸೋಣ: ಶಶಿಕಾಂತ ಯಡಹಳ್ಳಿ

- Advertisement -
- Advertisement -

ಹಿರಿಯ ರಂಗಕರ್ಮಿಗಳೂ ಹಾಗೂ ಗಾಂಧಿವಾದಿಗಳೂ ಆದ ಹೆಗ್ಗೋಡಿನ ಪ್ರಸನ್ನರವರು ಅಕ್ಟೋಬರ್ 2 ಗಾಂಧಿ ಜಯಂತಿಯ ದಿನದಿಂದ ಬೆಂಗಳೂರಿನ ವಲ್ಲಭ ನಿಕೇತನದಲ್ಲಿ ಪವಿತ್ರ ಆರ್ಥಿಕತೆಗಾಗಿ ಆಗ್ರಹಿಸಿ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ. ಹಾಗೂ ಸತ್ಯಾಗ್ರಹವನ್ನು ತೀವ್ರಗೊಳಿಸಿದ ಪ್ರಸನ್ನರವರು ಅಕ್ಟೊಬರ್ 6 ರಿಂದ ಅಮರಣಾಂತ ಉಪವಾಸವನ್ನೂ ಆರಂಭಿಸಿದ್ದಾರೆ. ಜನಸಾಮಾನ್ಯರಲ್ಲಿ ಮಾರಕ ಆರ್ಥಿಕತೆಯ ಕುರಿತು ಅರಿವು ಮೂಡಿಸುವ ಹಾಗೂ ಆಳುವ ವರ್ಗವನ್ನು ಎಚ್ಚರಿಸುವ ನಿಟ್ಟಿನಲ್ಲಿ ಈ ಸತ್ಯಾಗ್ರಹವನ್ನು ಗ್ರಾಮ ಸೇವಾ ಸಂಘವು ಆರಂಭಿಸಿದೆ.

ಕೇಂದ್ರ ಸರಕಾರದ ದಮನಕಾರಿ ಆರ್ಥಿಕ ಯೋಜನೆಗಳಿಂದಾಗಿ ಬಹುತೇಕ ಉದ್ಯಮಗಳು ನಷ್ಟಕ್ಕೆ ತುತ್ತಾಗಿ ದಿವಾಳಿ ಹಂತಕ್ಕೆ ಬಂದು ನಿಂತಿವೆ. ದೇಶಾದ್ಯಂತ ಕೋಟ್ಯಾಂತರ ಕಾರ್ಮಿಕರು ನೌಕರರು ಕೆಲಸ ಕಳೆದುಕೊಂಡು ಅತಂತ್ರರಾಗಿದ್ದಾರೆ. ದೇಶದ ಆರ್ಥಿಕತೆಯೇ ಅಧೋಗತಿಗಿಳಿದಿದೆ. ಬೇಡಿಕೆಗೂ ಹಾಗೂ ಹೂಡಿಕೆಗೂ ನಡುವಿನ ಅಂತರ ಹೆಚ್ಚುತ್ತಲೇ ಸಾಗಿದೆ. ನೋಟು ಅಮಾನ್ಯೀಕರಣ ಹಾಗೂ ಅತಿರೇಕದ ಜಿಎಸ್ಟಿ ತೆರಿಗೆಗಳು ದೇಶದ ಆರ್ಥಿಕತೆಯ ಬೆನ್ನೆಲುಬನ್ನೇ ಮುರಿದು ಹಾಕಿದೆ. ಇದರಿಂದಾಗಿ ರೈತ ಕಾರ್ಮಿಕರಷ್ಟೇ ಅಲ್ಲಾ ಉದ್ಯಮಪತಿಗಳೂ ಆತ್ಮಹತ್ಯೆ ದಾರಿ ಕಂಡುಕೊಳ್ಳುತ್ತಿದ್ದಾರೆ.

ಒಂದು ಕಡೆ ಆಧುನಿಕ ಯಂತ್ರೋಪಕರಣಗಳ ವ್ಯಾಪಕ ಬಳಕೆಯಿಂದಾಗಿ ನಿರುದ್ಯೋಗ ಹೆಚ್ಚುತ್ತಲೇ ಸಾಗಿದರೆ ಇನ್ನೊಂದು ಕಡೆ ಅಭಿವೃದ್ಧಿಯ ಹೆಸರಲ್ಲಿ ಪರಿಸರವೇ ನಾಶವಾಗುತ್ತಿದೆ. ಅತ್ಯಮೂಲ್ಯವಾದ ಪ್ರಕೃತಿಯ ನಾಶದ ವಿಕೃತಿ ಹಾಗೂ ಅಮೂಲ್ಯ ಮಾನವ ಸಂಪನ್ಮೂಲಗಳ ನಿರ್ಲಕ್ಷತೆಗಳು ಭವಿಷ್ಯದ ಭಾರತವನ್ನು ವಿನಾಶದಂಚಿಗೆ ತಂದು ನಿಲ್ಲಿಸುವುದರಲ್ಲಿ ಸಂದೇಹವಿಲ್ಲ.

ಇಂತಹ ವಿಕ್ಷಿಪ್ತ ಪರಿಸ್ಥಿತಿಯಲ್ಲಿ ಗಾಂಧೀಜಿ ಪ್ರಸ್ತುತವೆನಿಸುತ್ತಾರೆ. ಅವರ ತತ್ವಾದರ್ಶಗಳು ಮಾದರಿ ಎನಿಸುತ್ತವೆ. ವಿನಾಶಕಾರಿ ಆರ್ಥಿಕತೆಯನ್ನು ನಿಯಂತ್ರಿಸಲು ಸಮಯೋಚಿತ ಸಂಯಮದ ಜನಪರ ಆರ್ಥಿಕ ವ್ಯವಸ್ಥೆಯ ಅಗತ್ಯತೆ ಈಗ ಬೇಕಾಗಿದೆ. ಇದಕ್ಕೆ ಪ್ರಸನ್ನರವರು ಪವಿತ್ರ ಆರ್ಥಿಕತೆ ಎಂದು ಕರೆದು ಅದಕ್ಕಾಗಿ ಆಗ್ರಹಿಸಲು ಸತ್ಯಾಗ್ರಹ ನಿರತರಾಗಿದ್ದಾರೆ.

ಗಾಂಧೀಜಿಯವರು ಪ್ರತಿಪಾದಿಸಿದ ಕಡಿಮೆ ಹೂಡಿಕೆ ಮಾಡಿ ಹೆಚ್ಚು ಜನರಿಗೆ ದುಡಿಮೆಗೆ ಅವಕಾಶ ಒದಗಿಸುವಂತಹ ವ್ಯವಸ್ಥೆಗಾಗಿ ಒತ್ತಾಯಿಸಲು ಹಾಗೂ ಕೆಲಸ ಮತ್ತು ಪರಿಸರವನ್ನು ನಾಶಮಾಡುವ ಪ್ರಸ್ತುತ ಜನವಿರೋಧಿ ಆರ್ಥಿಕ ವ್ಯವಸ್ಥೆಯನ್ನು ವಿರೋಧಿಸಲು ಪ್ರಸನ್ನರವರು ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ.

ಇದು ಬೋರ್ಗರಿವ ಪ್ರವಾಹದ ವಿರುದ್ದ ಈಜುವ ಪ್ರಕ್ರಿಯೆ. ಇಂತಹುದನ್ನೇ ಇಂಗ್ಲೀಷರ ಬಲಿಷ್ಟ ಏಕಾಧಿಪತ್ಯದ ವಿರುದ್ದ ಹೋರಾಟ ರೂಪಿಸಿದ ಗಾಂಧೀಜಿ ಕೊನೆಗೂ ಯಶಸ್ವಿಯಾಗಿದ್ದರು. ಗಾಂಧೀಜಿಯವರಿಗೆ ಜನಾಂದೋಲನ ಸಂಘಟಿಸುವ ಅಪಾರ ಸಾಮರ್ಥ್ಯ ಸಿದ್ದಿಸಿತ್ತು. ವಿದೇಶಿ ಆಡಳಿತಗಾರರ ದಮನದ ವಿರುದ್ದ ಜನತೆ ತಿರುಗಿ ಬಿದ್ದಿದ್ದರು. ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ. ಸ್ವದೇಶಿ ಶೋಷಕರ ವಿರುದ್ದ ಜನಾಂದೋಲನ ರೂಪಗೊಳ್ಳಲು ಪ್ರಯತ್ನಗಳು ಆರಂಭವಾಗಬೇಕಿದೆ. ಆ ನಿಟ್ಟಿನಲ್ಲಿ ಪುಟ್ಟ ಪ್ರಯತ್ನಕ್ಕೆ ಪ್ರಸನ್ನರವರು ಚಾಲನೆ ಕೊಟ್ಟಿದ್ದಾರೆ.

ವಿನಾಶದತ್ತ ಸಾಗುತ್ತಿರುವ ಭಾರತದ ಆರ್ಥಿಕತೆಯನ್ನು ಸರಿದಾರಿಗೆ ತರಲು, ನಿರುದ್ಯೋಗವನ್ನು ನಿವಾರಿಸಿ ಪರಿಸರವನ್ನು ಉಳಿಸಲು ಗಾಂಧೀಜಿಯವರು ಪ್ರತಿಪಾದಿಸಿದ ಸಂಯಮದ ಆರ್ಥಿಕತೆಯ ಅನುಷ್ಟಾನ ಇಂದಿನ ತುರ್ತು ಅಗತ್ಯವಾಗಿದೆ. ಪ್ರಸನ್ನರವರು ಪ್ರತಿಪಾದಿಸುವ ಪವಿತ್ರ ಆರ್ಥಿಕತೆಯ ಈ ಚಳುವಳಿಗೆ ಎಲ್ಲಾ ಪ್ರಜ್ಞಾವಂತ ಸಾಹಿತಿಗಳು, ಕಲಾವಿದರು, ಹೋರಾಟಗಾರರು ಬೆಂಬಲಿಸಬೇಕಾದ ಅಗತ್ಯವಿದೆ.

ಈ ಇಳಿವಯಸ್ಸಿನಲ್ಲಿ ತಾವು ನಂಬಿದ ಗಾಂಧೀ ತತ್ವಾದರ್ಶಗಳಿಗಾಗಿ ಅಮರಣಾಂತ ಉಪವಾಸ ಆರಂಭಿಸಿರುವ ಪ್ರಸನ್ನನವರನ್ನು ಎಲ್ಲರೂ ಬೆಂಬಲಿಸೋಣ. ಬನ್ನಿ ನಮ್ಮೆಲ್ಲರ ನಡಿಗೆ ವಲ್ಲಭ ನಿಕೇತನದ ಕಡೆಗೆ ಸಾಗಲಿ. ಭವಿಷ್ಯದ ಸಂಯಮದ ಆರ್ಥಿಕತೆಯ ಬೆಳಕಿನ ಕಿರಣವೊಂದು ಇಲ್ಲಿಂದಲೇ ಉದಯಿಸಿ ವಿನಾಶ ತರುವ ಕತ್ತಲೆಯ ಆರ್ಥಿಕತೆಯನ್ನು ಕೊನೆಗಾಣಿಸಲು ಮುನ್ನುಡಿ ಬರೆಯಲಿ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಯಾವುದೇ ಹೋರಾಟವು ಟೆಕ್ನಾಲಜಿಯ ಮುನ್ನಡೆ,ಬಳಕೆಯಿಂದ ದುಡಿಮೆಯನ್ನು ಕಡಿಮೆ ಮಾಡುವುನ್ನು ವಿರೋದಿಸಬಾರದು.
    ಹೆಚ್ಚಿನ ಆಳಿನ ಬಳಕೆಯಿಂದ ಮಯ್ ದಂಡಿಸಿ ದುಡಿಮೆ ಬದಲು ಟೆಕ್ನಾಲಜಿಯಿಂದ ಕಡಿಮೆ ವೆಚ್ಚದಲ್ಲಿ ಆಗುವ ದುಡಿಮೆಯಿಂದ ಬರುವ ಮಿಗುಉಳಿತಾಯವನ್ನು ದುಡಿಯುವ ಗುಂಪಿಗೆ ತಲುಪಿಸುವ ದಾರಿಯ ಬಗೆಗೆ ಒತ್ರುಕೊಡಬೇಕು.

LEAVE A REPLY

Please enter your comment!
Please enter your name here

- Advertisment -

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...