Homeಅಂಕಣಗಳುಮುತ್ತು-ಸುತ್ತು: ಕುಂತಿ ಬೆಟ್ಟ ಹತ್ತಿ ನೋಡಿ, ತೊಣ್ಣೂರು ಕೆರೆಯಲ್ಲಿ ಈಜಾಡಿ

ಮುತ್ತು-ಸುತ್ತು: ಕುಂತಿ ಬೆಟ್ಟ ಹತ್ತಿ ನೋಡಿ, ತೊಣ್ಣೂರು ಕೆರೆಯಲ್ಲಿ ಈಜಾಡಿ

- Advertisement -
- Advertisement -

ಬೆಂಗಳೂರಿನಿಂದ 120-130 ಕಿ.ಮೀ ದೂರದಲ್ಲಿರುವ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕುಂತಿ ಬೆಟ್ಟ ಮತ್ತು ತೊಣ್ಣೂರು ಕೆರೆ ಎಂಬ ಎರಡು ಅಪರೂಪದ ವಿಭಿನ್ನ ಸ್ಥಳಗಳನ್ನು ಈ ಬರಹದ ಮೂಲಕ ಪರಿಚಯ ಮಾಡಿಕೊಡಲು ಇಚ್ಛಿಸುತ್ತೇನೆ. ಚಾರಣ ಮಾಡಲು, ಈಜಾಡಲು ಮತ್ತು ಈ ಸ್ಥಳಗಳ ಬಗ್ಗೆ ಅಧ್ಯಯನ ಮಾಡಲು ಇವು ಹೇಳಿಮಾಡಿಸಿದ ಸುಂದರ ತಾಣಗಳಾಗಿವೆ.

ಕುಂತಿ ಬೆಟ್ಟ

ಬೆಂಗಳೂರಿನಿಂದ ಮಂಡ್ಯ ಮಾರ್ಗವಾಗಿ ತೆರಳಿದರೆ (120 ಕಿ.ಮೀ) ಪಾಂಡವಪುರ ಟೌನ್‌ಗೂ ಮುನ್ನವೇ ಕುಂತಿ ಬೆಟ್ಟ ನಿಮ್ಮ ಗಮನ ಸೆಳೆಯುತ್ತದೆ. ಮೈಸೂರಿನಿಂದ ಬಂದರೆ (30 ಕಿ.ಮೀ), ಪಾಂಡವಪುರ ದಾಟಿ ಮಂಡ್ಯ ಮಾರ್ಗವಾಗಿ 5 ಕಿ.ಮೀ ದೂರ ಕ್ರಮಿಸಿದರೆ ಕುಂತಿ ಬೆಟ್ಟ ಕಾಣಸಿಗುತ್ತದೆ. ಪಾಂಡವಪುರ ಕೆರೆ ತಪ್ಪಲಿನಲ್ಲಿರುವ ಈ ಎರಡು – ಮೂರು ಬೆಟ್ಟಗಳು ಕಣ್ಮನ ಸೆಳೆಯುತ್ತವೆ.

ಕುಂತಿ ಬೆಟ್ಟಕ್ಕೆ ಹತ್ತಲು ಸುಗಮ ದಾರಿಯಿದೆ. ಒಂದೆರಡು ಕಡೆ ಮಾತ್ರ ಬಂಡೆಗಳಿದ್ದು ಎಚ್ಚರಿಕೆಯಿಂದ ಹತ್ತಬೇಕು. ಉಳಿದೆಡೆ ಆರಾಮಾವಾಗಿ ಸುತ್ತಲಿನ ಹಸಿರು ಮರಗಿಡಗಳನ್ನು ನೋಡುತ್ತ, ಕೆರೆಯ ನೋಟವನ್ನು ಅಸ್ವಾದಿಸುತ್ತಾ, ಸುಸ್ತಾದರೆ ಕುಳಿತು ವಿಹರಿಸುತ್ತಾ ಬೆಟ್ಟ ಹತ್ತಬಹುದು. ಬೆಳ್ಳಂ ಬೆಳಿಗ್ಗೆಯೇ ನೀವು ಹತ್ತಲು ಪ್ರಾರಂಭಿಸಿದರೆ, ಒಂದು-ಒಂದೂವರೆ ಗಂಟೆಯಲ್ಲಿ ಆರಾಮವಾಗಿ ಬೆಟ್ಟದ ತುದಿ ತಲುಪಬಹುದು. ಬೆಳಿಗ್ಗೆ 9 ಗಂಟೆಯ ನಂತರವಾದರೆ ಬಿಸಿಲಿನ ಝಳ ಜೋರಾಗಿರುವುದರಿಂದ ಸುಮಾರು 2 ಗಂಟೆಗಳ ಸಮಯ ಬೇಕು.

ಸಮುದ್ರಮಟ್ಟದಿಂದ 2882 ಮೀಟರ್ ಎತ್ತರವಿರುವ ಈ ಬೆಟ್ಟದ ತುದಿಯಲ್ಲಿ ದೊಡ್ಡ ಕಲ್ಲೊಂದನ್ನು ನಿಲ್ಲಿಸಲಾಗಿದೆ. ಚಾರಣಿಗರು ಅಲ್ಲಿ ಕುಳಿತು ವಿರಮಿಸಬಹುದು. ಅಲ್ಲಿಂದ, ಸುತ್ತ ಮುತ್ತಲಿನ ಹಸಿರು ಕಬ್ಬು ಮತ್ತು ಭತ್ತದ ಗದ್ದೆಗಳನ್ನು ನೋಡಬಹುದು. ಪಾಂಡವಪುರ ನಗರ, ಅದರ ಕೆರೆ, ದೂರದ ಮೇಲುಕೋಟೆ ಬೆಟ್ಟ, ಕರಿಘಟ್ಟ ಇವೆಲ್ಲವೂ ಬೆಟ್ಟದ ಮೇಲಿನಿಂದ ಕಣ್ಣಳತೆಗೆ ಸಿಗುತ್ತವೆ.

ಸುತ್ತಲಿನ ಸುಂದರ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳುತ್ತಲೇ ನೀವು ತಂದಿದ್ದ ಊಟ, ತಿಂಡಿಗಳನ್ನು ಸವಿಯುವುದು ಅಪರೂಪ ಅನುಭವವೇ ಸರಿ. ನೀವು ಅಲ್ಲಿಗೆ ಹೋಗುವಾಗ ಸಾಕಷ್ಟು ಊಟ-ತಿಂಡಿ ಮತ್ತು ನೀರನ್ನು ಒಯ್ಯುವುದು ಪೂರ್ವ ಷರತ್ತಾಗಿದೆ. ನಂತರ ಅಲ್ಲಿಂದ ಕೆಳಗಿಳಿಯಲು ಒಂದು ಗಂಟೆ ಸಮಯ ಬೇಕಾಗುತ್ತದೆ. ಆಸಕ್ತರು ಎಚ್ಚರಿಕೆಯಿಂದ ರಾತ್ರಿ ವೇಳೆಯೂ ಸಹ ಚಾರಣ ಮಾಡಲು ಅವಕಾಶವಿದೆ.

ಬೆಟ್ಟದ ತಪ್ಪಲಿನಲ್ಲಿ ಕುಂತಿ ಕೊಳ ಹೆಸರಿನ ಕೊಳವೊಂದಿದೆ. ಅಲ್ಲಿ ಹೋಟೆಲ್ ಸಹ ಇದ್ದು ಅಲ್ಲಿ ನೀವು ವಿರಮಿಸಬಹುದು. ಬಹಳ ತಂಪಾದ ಸ್ಥಳ ಇದಾಗಿದ್ದು, ಚಳಿಗಾಲ ಇಲ್ಲಿಗೆ ಪ್ರವಾಸ ಮಾಡಲು ಸೂಕ್ತ ಸಮಯವಾಗಿದೆ.

ಇಲ್ಲಿನ ಪಕ್ಕದ ಊರು ಚಿಕ್ಕಾಡೆ. ಅದೇ ರೀತಿ ಪಾಂಡವಪುರ ಮೊದಲಿನ ಹೆಸರು ಈರೋಡೆ ಎಂಬುದಾಗಿತ್ತು. ಈಗಲೂ ಈರೋಡೆ ಬೀದಿ ಅಲ್ಲಿದೆ. ಈ ಬೆಟ್ಟದಲ್ಲಿ ಬಕಾಸುರ ವಾಸವಿದ್ದ, ಆತನಿಗೆ ಚಿಕ್ಕಾಡೆಯಿಂದ ಚಿಕ್ಕ ಎಡೆಯು, ಈರೋಡೆಯಿಂದ ಹಿರಿಎಡೆಯೂ ಸರಬರಾಜು ಆಗುತ್ತಿತ್ತು ಎಂಬ ಪ್ರತೀತಿ ಇದೆ. ವನವಾಸದ ಸಮಯದಲ್ಲಿ ಕುಂತಿ ಮತ್ತು ಐವರು ಮಕ್ಕಳು ಇಲ್ಲಿಗೆ ಬಂದರು. ಭೀಮ ಬಕಾಸುರನನ್ನು ವಧಿಸಿದ ಸ್ಥಳ ಇದು. ಹಾಗಾಗಿ ಇದಕ್ಕೆ ಕುಂತಿ ಬೆಟ್ಟ ಎಂಬ ಹೆಸರು ಬಂತು. ಬೆಟ್ಟದ ತುದಿಯಲ್ಲಿನ ಕಲ್ಲು ಕುಂತಿ ಬಳಸುತ್ತಿದ್ದ ಒನಕೆ ಎಂಬಂತಹ ದಂತಕತೆಗಳನ್ನು, ಪುರಾಣಗಳನ್ನು ಸ್ಥಳೀಯ ಜನ ಹೇಳುತ್ತಾರೆ.

ಈ ಪುರಾಣ ಪ್ರತೀತಿಗಳ ಹೊರತಾಗಿಯೂ ಚಾರಣಿಗರಿಗೆ ಖುಷಿ ಕೊಡುವ ಬೆಟ್ಟ ಇದಾಗಿದೆ. ಇನ್ನು ಇಲ್ಲಿ ಚಾರಣ ಮುಗಿಸಿ ಮಧ್ಯಾಹ್ನದ ವೇಳೆಗೆ ನೀವು ಪಾಂಡವಪುರ ದಾಟಿ 8-9 ಕಿ.ಮೀ ದೂರ ಕ್ರಮಿಸಿದರೆ ಕೆರೆ ತೊಣ್ಣೂರು ಎಂಬ ಗ್ರಾಮ ಸಿಗುತ್ತದೆ. ವಿಷ್ಣುವರ್ಧನನ ಕಾಲದಲ್ಲಿ ಇಲ್ಲಿ ನಂಬಿನಾರಾಯಣ ಮತ್ತು ಶ್ರೀ ವೇಣುಗೋಪಾಲರ ಎರಡು ದೊಡ್ಡ ದೇವಾಲಯಗಳನ್ನು ನಿರ್ಮಿಸಲಾಗಿದೆ.

ತೊಣ್ಣೂರು ಕೆರೆ

ತೊಣ್ಣೂರು ಗ್ರಾಮದ ಬಳಿ ಇರುವ ತೊಣ್ಣೂರು ಕೆರೆಯು 8-10 ಗ್ರಾಮಗಳಿಗೆ ಹೊಂದಿಕೊಂಡಂತೆ ಇರುವ ದೊಡ್ಡ ಕೆರೆಯಾಗಿದೆ. ಈ ವಿಶಾಲ ಕೆರೆಯು ಅತ್ಯುತ್ತಮ ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಂಡಿದೆ. ಬೆಟ್ಟದ ಸಾಲುಗಳ ಪಕ್ಕದಲ್ಲಿಯೇ ಈ ಕೆರೆ ಇದ್ದು ನೋಡುತ್ತ ಕುಳಿತರೆ ನೋಡುತ್ತಲೇ ಇರಬೇಕೆನಿಸುತ್ತದೆ. ಪ್ರವಾಸಿಗರಿಗಾಗಿ ಗೋಪುರವೊಂದನ್ನು ನಿರ್ಮಿಸಲಾಗಿದೆ.

ಅಣೆಕಟ್ಟು ಮಾದರಿಯಲ್ಲಿ ಅದರ ದಡವನ್ನು ನಿರ್ಮಿಸಲಾಗಿದ್ದು, ಬಹಳ ಆಳದ ಕೆರೆಯಾದ್ದರಿಂದ ನೀರಿಗೆ ಇಳಿಯದಿರಲು ಮನವಿ ಮಾಡಲಾಗಿದೆ. ಆ ಕೆರೆಯಿಂದ ಸಣ್ಣ ಕಾಲುವೆಯ ರೀತಿ ನೀರು ಹರಿದು ಮೇಲಿನಿಂದ ಜಲಪಾತದ ಮಾದರಿಯಲ್ಲಿ ಧುಮ್ಮಿಕ್ಕುತ್ತದೆ. ಅದನ್ನು ಸ್ಥಳೀಯರು ಮದಗ ಎಂದು ಕರೆಯುತ್ತಾರೆ. ಆ ನೀರಿಗೆ ಮೈಯೊಡ್ಡಿ ಸ್ನಾನ ಮಾಡಬಹುದು. ಅದರ ಪಕ್ಕದಲ್ಲಿ ಕಾಲುವೆಯ ರೀತಿ ನೀರು ವೇಗವಾಗಿ ಹರಿಯುತ್ತದೆ. ಅಲ್ಲಿ ಮಕ್ಕಳೊಂದಿಗೆ ಕೂಡಿ ಮನೆಮಂದಿಯೆಲ್ಲಾ ನೀರಿನೊಂದಿಗೆ ಆಟವಾಡಲು, ಸ್ನಾನ ಮಾಡಲು ಪ್ರಶಸ್ತ ಜಾಗವಾಗಿದೆ.

ಕೆರೆಯ ಮತ್ತೊಂದು ಬದಿಯು ಮರಳಿನಿಂದ ಆವೃತವಾಗಿದ್ದು, ಅಲ್ಲಿ ಈಜಾಡಬಹುದು ಮತ್ತು ವಿಹರಿಸಬಹುದು. ಅದು ನಿಮಗೆ ಸಮುದ್ರದಡದ ಅನುಭವ ನೀಡುತ್ತದೆ. ಅಲ್ಲಿ ಕೆರೆ ಆಳವಿಲ್ಲವಾದ್ದರಿಂದ ಯಾವುದೇ ಭಯವಿಲ್ಲದೆ ನೀರಿನಲ್ಲಿ ಆಟವಾಡಬಹುದು.

ಹತ್ತಾರು ಗ್ರಾಮಗಳಿಗೆ ಕುಡಿಯುವ ನೀರು ಮತ್ತು ಬೇಸಾಯಕ್ಕೆ ನೀರು ಒದಗಿಸುವ ಈ ಕೆರೆ ಅತ್ಯುತ್ತಮ ಪ್ರವಾಸಿಸ್ಥಳವೆನ್ನಬಹುದು. ಕೆರೆಯ ಪಕ್ಕದಲ್ಲಿಯೇ ಬೆಟ್ಟವಿದ್ದು ಹತ್ತಿ ಸಂತಸಬಹುದು. ಬೆಟ್ಟದ ಮೇಲೆ ಹಲವು ದೇವಾಲಯಗಳಿವೆ.

ಇತ್ತೀಚೆಗೆ ಇದನ್ನು ಪ್ರವಾಸಿತಾಣವನ್ನಾಗಿ ಅಭಿವೃದ್ದಿಪಡಿಸುತ್ತಿದ್ದರೂ, ಇಲ್ಲಿ ಹೋಟೆಲ್‌ಗಳಿಲ್ಲ. ಹಾಗಾಗಿ ನೀವು ಮನೆಯಿಂದ ಹೊರಡುವಾಗಲೇ ಊಟ, ತಿಂಡಿಗಳನ್ನು ಒಯ್ಯುವುದು ಒಳ್ಳೆಯದು. ಅಲ್ಲಿ ಟೀ-ಬಜ್ಜಿ ರೀತಿಯ ಸ್ನ್ಯಾಕ್ಸ್ ಅಷ್ಟೇ ಲಭ್ಯವಿವೆ.

ಸ್ವಂತ ವಾಹನದಲ್ಲಿ ಹೋದರೆ ಉತ್ತಮ. ಇಲ್ಲದಿದ್ದಲ್ಲಿ ಕುಂತಿ ಬೆಟ್ಟ ಮತ್ತು ತೊಣ್ಣೂರು ಕೆರೆಗಳಿಗೆ ಪಾಂಡವಪುರ ಟೌನ್‌ನಿಂದ ಬಸ್ ವ್ಯವಸ್ಥೆ ಸಹ ಇದೆ. ಅಲ್ಲಿಂದ ಬಾಡಿಗೆ ಆಟೋದಲ್ಲಿಯೂ ಹೋಗಬಹುದು. ಬೆಂಗಳೂರು-ಮೈಸೂರಿನಿಂದ ಪಾಂಡವಪುರ ತಲುಪಲು ರೈಲು ವ್ಯವಸ್ಥೆ ಸಹ ಇದೆ.

ಒಂದು ದಿನದಲ್ಲಿ ಇವೆರಡೂ ಸ್ಥಳಗಳನ್ನು ನೋಡಿಬರಬಹುದು. ನೀವು ಪ್ರವಾಸ ಮುಂದುವರೆಸಬಯಸಿದರೆ ಪಕ್ಕದಲ್ಲಿಯೇ ಮೇಲುಕೋಟೆ, ಶ್ರೀರಂಗಪಟ್ಟಣ, ರಂಗನತಿಟ್ಟು, ಎಡಮುರಿ-ಬಲಮುರಿ, ಕೆಆರ್‌ಎಸ್ ಥರದ ಹತ್ತಾರು ಸ್ಥಳಗಳನ್ನು ನೋಡಬಹುದಾಗಿದೆ.


ಇದನ್ನೂ ಓದಿ: ಮುತ್ತು ಸುತ್ತು; ಸಾವನದುರ್ಗ: ಪ್ರಪಂಚದ ಅತಿದೊಡ್ಡ ಏಕಶಿಲಾ ಬೆಟ್ಟವಿದು, ಶಕ್ತಿಯಿದ್ದಷ್ಟು ಹತ್ತಿ ನೋಡ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...