ಡೆಹ್ರಾಡೂನ್ : ಹಿಂದುತ್ವ ಸಂಘಟನೆ ಹಿಂದೂ ರಕ್ಷಾ ದಳ ಉತ್ತರಾಖಂಡದ ಡೆಹ್ರಾಡೂನ್ ನಗರದ ಸ್ಥಳೀಯ ಜಾಮಾ ಮಸೀದಿಯಿಂದ ಆಜಾನ್ (ಪ್ರಾರ್ಥನೆಗೆ ಕರೆ) ಕರೆಯುವುದರ ವಿರುದ್ಧ ರ್‍ಯಾಲಿ ನಡೆಸಿ, ಪ್ರಚೋದನಕಾರಿ ಘೋಷಣೆ ಕೂಗಿದ ಘಟನೆ ವರದಿಯಾಗಿದೆ.
ಕಳೆದ ಮಂಗಳವಾರ (ಫೆ.25) ಹಿಂದೂ ರಕ್ಷಾ ದಳದ ಸದಸ್ಯರು “ಅಯೋಧ್ಯೆ ಕೇವಲ ಒಂದು ಉದಾಹರಣೆ, ಮುಂದಿನ ಗುರಿ ಕಾಶಿ ಮತ್ತು ಮಥುರಾ” ಮತ್ತು “ಭಾರತದಲ್ಲಿ ವಾಸಿಸುವರೆಲ್ಲರೂ “ಜೈ ಶ್ರೀ ರಾಮ್” ಎಂದು ಜಪಿಸಬೇಕು” ಎಂಬಂತಹ ಪ್ರಚೋದನಕಾರಿ ಮತ್ತು ವಿವಾದಾತ್ಮಕ ಘೋಷಣೆಗಳನ್ನು ಕೂಗಿದ್ದಾರೆ. ಮಸೀದಿಯಲ್ಲಿ “ಹನುಮಾನ್ ಚಾಲೀಸಾ” ಪಠಿಸುವಂತೆ ಒತ್ತಾಯಿಸಿದ್ದಾರೆ. ಅದಾಗ್ಯೂ ಅವರಿಗೆ ಮಸೀದಿಯ ಹತ್ತಿರವೇ ಹೋಗಲು ಅವಕಾಶ ನೀಡಲಾಗಿದೆ.
“ಉತ್ತರಾಖಂಡದಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ಹಿಂದೂ ರಕ್ಷಾ ದಳವು ಆಜಾನ್ ಧ್ವನಿ ಹೊರಬರುವ ಎಲ್ಲಾ ಮಸೀದಿಗಳ ಮುಂದೆ ‘ಹನುಮಾನ್ ಚಾಲೀಸಾ’ ಪಠಿಸುತ್ತದೆ. ಈಗ ನಾವು ಒಂದು ಜ್ಞಾಪಕ ಪತ್ರವನ್ನು ಸಲ್ಲಿಸಿದ್ದೇವೆ. ಧ್ವನಿವರ್ಧಕಗಳನ್ನು ಮುಚ್ಚದಿದ್ದರೆ, ನಾವು ಅವರ ವಿರುದ್ಧ ಇತರ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ” ಎಂದು ಹಿಂದೂತ್ವ ಮುಖಂಡರು ಸ್ಥಳೀಯ ವರದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
ಮಸೀದಿಯೊಳಗೆ ‘ಹನುಮಾನ್ ಚಾಲೀಸಾ’ ಪಠಿಸದಂತೆ ಪೊಲೀಸರು ತಮ್ಮನ್ನು ತಡೆದರು ಎಂದು ಅವರು ಹೇಳಿದ್ದಾರೆ. ಮುಂದಿನ ಬಾರಿ, ನಮ್ಮನ್ನು ತಡೆಯಲಾಗುವುದಿಲ್ಲ ಮತ್ತು ಯಾವುದೇ ಬೆಲೆ ತೆತ್ತಾದರೂ ಅದನ್ನು ಮಾಡುತ್ತೇವೆ ಎಂದಿದ್ದಾರೆ.
देहरादून कि बड़ी मस्जिद में अज़ान का विरोध करते हुए हिंदू रक्षा दल के सदस्यों ने एक रैली निकाली। वो मस्जिद के पास हनुमान चालीसा का पाठ करना चाहते थे। इस दौरान उन्होंने आपत्तिजनक नारे भी लगाए। हालांकी पुलिस ने उन्हें मस्जिद तक पहुँचने नहीं दिया। दूर ही वे हनुमान चालीसा का पाठ किए। pic.twitter.com/76DqnSEauD
— Ashraf Hussain (@AshrafFem) February 27, 2025
ಮಸೀದಿಯ ಬಳಿ ಹಿಂದುತ್ವ ರ್‍ಯಾಲಿಗೆ ಅವಕಾಶ ನೀಡದಿದ್ದಕ್ಕಾಗಿ ಮಸೀದಿಯ ಮುಖಂಡರೊಬ್ಬರು ಪೊಲೀಸರನ್ನು ಶ್ಲಾಘಿಸಿದರು, ಇದು ಪ್ರದೇಶದಲ್ಲಿ ಗಲಭೆಗೆ ಕಾರಣವಾಗಬಹುದಿತ್ತು ಎಂದು ಹೇಳಿದ್ದಾರೆ.
“ಜನಸಂದಣಿಯನ್ನು ತಡೆಯುವುದು ಪೊಲೀಸರ ಕರ್ತವ್ಯ. ಈ ವಿಷಯವನ್ನು ಕೋಮು ಗಲಭೆಯಾಗಿ ಪರಿವರ್ತಿಸಲು ಅವರು ಅವರಿಗೆ ಅವಕಾಶ ನೀಡಬಾರದು. ನಾವು ನಮ್ಮ ಪ್ರಾರ್ಥನೆಯಲ್ಲಿ ನಿರತರಾಗಿದ್ದೆವು” ಎಂದು ಅವರು ಹೇಳಿದರು.
ಮುಸ್ಲಿಂ ಮುಖಂಡರು ಶಾಂತಿಯುತರು ಮತ್ತು ಅಗತ್ಯವಿರುವಷ್ಟು ಆಜಾನ್ ಧ್ವನಿಯನ್ನು ಕಡಿಮೆ ಮಾಡಬಹುದು ಎಂದು ಹೇಳಿದರು.
“ಅವರಿಗೆ ಆಜಾನ್ ಧ್ವನಿಯಲ್ಲಿ ಯಾವುದೇ ಸಮಸ್ಯೆ ಇದ್ದರೆ, ನಾವು ಧ್ವನಿವರ್ಧಕಗಳನ್ನು ಕಡಿಮೆ ಮಾಡಬಹುದು. ಪವಿತ್ರ ರಂಜಾನ್ ತಿಂಗಳು ಹತ್ತಿರವಾಗಿರುವುದರಿಂದ ಈ ಸಮಸ್ಯೆಗಳನ್ನು ಸೃಷ್ಟಿಸಲಾಗುತ್ತಿದೆ. ನಾವು ಶಾಂತಿಯುತವಾಗಿ ಬದುಕಲು ಬಯಸುತ್ತೇವೆ. ಆದ್ದರಿಂದ ದೇಶಾದ್ಯಂತ ಶಾಂತಿ ಕದಡುವ ವಾತಾವರಣ ಸೃಷ್ಟಿಯಾಗಬಾರದು” ಎಂದು ಅವರು ತಿಳಿಸಿದರು.
ಹಿಂದುತ್ವ ರ್‍ಯಾಲಿಯನ್ನು ನಿಯಂತ್ರಿಸಿದ್ದಕ್ಕಾಗಿ ಮತ್ತು ಅದು ಮಸೀದಿಯ ಬಳಿ ಹೋಗಲು ಅವಕಾಶ ನೀಡದಿದ್ದಕ್ಕಾಗಿ ಅವರು ಪೊಲೀಸರಿಗೆ ಧನ್ಯವಾದ ಅರ್ಪಿಸಿದರು. ಉತ್ತರಾಖಂಡದಲ್ಲಿ ಹಿಂದುತ್ವ ಸಂಘಟನೆಯು ವಿವಿಧ ನೆಪಗಳ ಮೇಲೆ ಮಸೀದಿಗಳನ್ನು ಗುರಿಯಾಗಿಸಿಕೊಳ್ಳುತ್ತಿದೆ. ಇದು ಖಂಡನೀಯ ಎಂದಿದ್ದಾರೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹಿಂದುತ್ವ ಗುಂಪುಗಳ ಸದಸ್ಯರು ಮತ್ತು ಸ್ಥಳೀಯರು 55 ವರ್ಷ ಹಳೆಯ ಮಸೀದಿಯ ಹತ್ತಿರ ತಲುಪುವುದನ್ನು ತಡೆಯಲು ಪೊಲೀಸರು ಪ್ರಯತ್ನಿಸಿದಾಗ ಭುಗಿಲೆದ್ದ ಹಿಂಸಾಚಾರದ ಸಂದರ್ಭದಲ್ಲಿ ನಾಲ್ವರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದರು ಮತ್ತು ಮುಸ್ಲಿಮರ ಒಡೆತನದ ಹಲವಾರು ಅಂಗಡಿಗಳನ್ನು ದೋಚಲಾಗಿತ್ತು. ಜಿಲ್ಲಾಡಳಿತವು ಮಸೀದಿಯನ್ನು 1969ರಲ್ಲಿ ಕಾನೂನುಬದ್ಧವಾಗಿ ನೋಂದಾಯಿಸಲಾಗಿದೆ ಎಂದು ಘೋಷಿಸಿದ್ದರೂ ಮಸೀದಿಯನ್ನು “ಅಕ್ರಮವಾಗಿ ನಿರ್ಮಿಸಲಾಗಿದೆ” ಎಂದು ಪ್ರತಿಭಟನಾಕಾರರು ಆರೋಪಿಸುತ್ತಿದ್ದಾರೆ.
ಪ್ರತಿಭಟನಕಾರರು ಮಸೀದಿಯನ್ನು ತಲುಪಲು ಸಾಧ್ಯವಾಗದೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಪೊಲೀಸರು ಲಾಠಿಚಾರ್ಜ್ ಮಾಡಿದರು ಮತ್ತು ನಂತರ ಧ್ವಜ ಮೆರವಣಿಗೆ ನಡೆಸಬೇಕಾಯಿತು.
ಶ್ವೇತ ಭವನದಲ್ಲಿ ಟ್ರಂಪ್-ಝೆಲೆನ್‌ಸ್ಕಿ ವಾಗ್ವಾದ : ಮಹತ್ವದ ಸಭೆಯಲ್ಲಿ ಆಗಿದ್ದೇನು?


