Homeಮುಖಪುಟಹಿಂದೂ ರಕ್ಷಾ ದಳದಿಂದ ಆಜಾನ್ ವಿರುದ್ಧ ರ್‍ಯಾಲಿ : ಪ್ರಚೋದನಕಾರಿ ಘೋಷಣೆ

ಹಿಂದೂ ರಕ್ಷಾ ದಳದಿಂದ ಆಜಾನ್ ವಿರುದ್ಧ ರ್‍ಯಾಲಿ : ಪ್ರಚೋದನಕಾರಿ ಘೋಷಣೆ

- Advertisement -
- Advertisement -

ಡೆಹ್ರಾಡೂನ್ : ಹಿಂದುತ್ವ ಸಂಘಟನೆ ಹಿಂದೂ ರಕ್ಷಾ ದಳ ಉತ್ತರಾಖಂಡದ ಡೆಹ್ರಾಡೂನ್ ನಗರದ ಸ್ಥಳೀಯ ಜಾಮಾ ಮಸೀದಿಯಿಂದ ಆಜಾನ್ (ಪ್ರಾರ್ಥನೆಗೆ ಕರೆ) ಕರೆಯುವುದರ ವಿರುದ್ಧ ರ್‍ಯಾಲಿ ನಡೆಸಿ, ಪ್ರಚೋದನಕಾರಿ ಘೋಷಣೆ ಕೂಗಿದ ಘಟನೆ ವರದಿಯಾಗಿದೆ.

ಕಳೆದ ಮಂಗಳವಾರ (ಫೆ.25) ಹಿಂದೂ ರಕ್ಷಾ ದಳದ ಸದಸ್ಯರು “ಅಯೋಧ್ಯೆ ಕೇವಲ ಒಂದು ಉದಾಹರಣೆ, ಮುಂದಿನ ಗುರಿ ಕಾಶಿ ಮತ್ತು ಮಥುರಾ” ಮತ್ತು “ಭಾರತದಲ್ಲಿ ವಾಸಿಸುವರೆಲ್ಲರೂ “ಜೈ ಶ್ರೀ ರಾಮ್” ಎಂದು ಜಪಿಸಬೇಕು” ಎಂಬಂತಹ ಪ್ರಚೋದನಕಾರಿ ಮತ್ತು ವಿವಾದಾತ್ಮಕ ಘೋಷಣೆಗಳನ್ನು ಕೂಗಿದ್ದಾರೆ. ಮಸೀದಿಯಲ್ಲಿ “ಹನುಮಾನ್ ಚಾಲೀಸಾ” ಪಠಿಸುವಂತೆ ಒತ್ತಾಯಿಸಿದ್ದಾರೆ. ಅದಾಗ್ಯೂ ಅವರಿಗೆ ಮಸೀದಿಯ ಹತ್ತಿರವೇ ಹೋಗಲು ಅವಕಾಶ ನೀಡಲಾಗಿದೆ.

“ಉತ್ತರಾಖಂಡದಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ಹಿಂದೂ ರಕ್ಷಾ ದಳವು ಆಜಾನ್ ಧ್ವನಿ ಹೊರಬರುವ ಎಲ್ಲಾ ಮಸೀದಿಗಳ ಮುಂದೆ ‘ಹನುಮಾನ್ ಚಾಲೀಸಾ’ ಪಠಿಸುತ್ತದೆ. ಈಗ ನಾವು ಒಂದು ಜ್ಞಾಪಕ ಪತ್ರವನ್ನು ಸಲ್ಲಿಸಿದ್ದೇವೆ. ಧ್ವನಿವರ್ಧಕಗಳನ್ನು ಮುಚ್ಚದಿದ್ದರೆ, ನಾವು ಅವರ ವಿರುದ್ಧ ಇತರ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ” ಎಂದು ಹಿಂದೂತ್ವ ಮುಖಂಡರು ಸ್ಥಳೀಯ ವರದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

ಮಸೀದಿಯೊಳಗೆ ‘ಹನುಮಾನ್ ಚಾಲೀಸಾ’ ಪಠಿಸದಂತೆ ಪೊಲೀಸರು ತಮ್ಮನ್ನು ತಡೆದರು ಎಂದು ಅವರು ಹೇಳಿದ್ದಾರೆ. ಮುಂದಿನ ಬಾರಿ, ನಮ್ಮನ್ನು ತಡೆಯಲಾಗುವುದಿಲ್ಲ ಮತ್ತು ಯಾವುದೇ ಬೆಲೆ ತೆತ್ತಾದರೂ ಅದನ್ನು ಮಾಡುತ್ತೇವೆ ಎಂದಿದ್ದಾರೆ.

ಮಸೀದಿಯ ಬಳಿ ಹಿಂದುತ್ವ ರ್‍ಯಾಲಿಗೆ ಅವಕಾಶ ನೀಡದಿದ್ದಕ್ಕಾಗಿ ಮಸೀದಿಯ ಮುಖಂಡರೊಬ್ಬರು ಪೊಲೀಸರನ್ನು ಶ್ಲಾಘಿಸಿದರು, ಇದು ಪ್ರದೇಶದಲ್ಲಿ ಗಲಭೆಗೆ ಕಾರಣವಾಗಬಹುದಿತ್ತು ಎಂದು ಹೇಳಿದ್ದಾರೆ.

“ಜನಸಂದಣಿಯನ್ನು ತಡೆಯುವುದು ಪೊಲೀಸರ ಕರ್ತವ್ಯ. ಈ ವಿಷಯವನ್ನು ಕೋಮು ಗಲಭೆಯಾಗಿ ಪರಿವರ್ತಿಸಲು ಅವರು ಅವರಿಗೆ ಅವಕಾಶ ನೀಡಬಾರದು. ನಾವು ನಮ್ಮ ಪ್ರಾರ್ಥನೆಯಲ್ಲಿ ನಿರತರಾಗಿದ್ದೆವು” ಎಂದು ಅವರು ಹೇಳಿದರು.

ಮುಸ್ಲಿಂ ಮುಖಂಡರು ಶಾಂತಿಯುತರು ಮತ್ತು ಅಗತ್ಯವಿರುವಷ್ಟು ಆಜಾನ್ ಧ್ವನಿಯನ್ನು ಕಡಿಮೆ ಮಾಡಬಹುದು ಎಂದು ಹೇಳಿದರು.

“ಅವರಿಗೆ ಆಜಾನ್ ಧ್ವನಿಯಲ್ಲಿ ಯಾವುದೇ ಸಮಸ್ಯೆ ಇದ್ದರೆ, ನಾವು ಧ್ವನಿವರ್ಧಕಗಳನ್ನು ಕಡಿಮೆ ಮಾಡಬಹುದು. ಪವಿತ್ರ ರಂಜಾನ್ ತಿಂಗಳು ಹತ್ತಿರವಾಗಿರುವುದರಿಂದ ಈ ಸಮಸ್ಯೆಗಳನ್ನು ಸೃಷ್ಟಿಸಲಾಗುತ್ತಿದೆ. ನಾವು ಶಾಂತಿಯುತವಾಗಿ ಬದುಕಲು ಬಯಸುತ್ತೇವೆ. ಆದ್ದರಿಂದ ದೇಶಾದ್ಯಂತ ಶಾಂತಿ ಕದಡುವ ವಾತಾವರಣ ಸೃಷ್ಟಿಯಾಗಬಾರದು” ಎಂದು ಅವರು ತಿಳಿಸಿದರು.

ಹಿಂದುತ್ವ ರ್‍ಯಾಲಿಯನ್ನು ನಿಯಂತ್ರಿಸಿದ್ದಕ್ಕಾಗಿ ಮತ್ತು ಅದು ಮಸೀದಿಯ ಬಳಿ ಹೋಗಲು ಅವಕಾಶ ನೀಡದಿದ್ದಕ್ಕಾಗಿ ಅವರು ಪೊಲೀಸರಿಗೆ ಧನ್ಯವಾದ ಅರ್ಪಿಸಿದರು. ಉತ್ತರಾಖಂಡದಲ್ಲಿ ಹಿಂದುತ್ವ ಸಂಘಟನೆಯು ವಿವಿಧ ನೆಪಗಳ ಮೇಲೆ ಮಸೀದಿಗಳನ್ನು ಗುರಿಯಾಗಿಸಿಕೊಳ್ಳುತ್ತಿದೆ. ಇದು ಖಂಡನೀಯ ಎಂದಿದ್ದಾರೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹಿಂದುತ್ವ ಗುಂಪುಗಳ ಸದಸ್ಯರು ಮತ್ತು ಸ್ಥಳೀಯರು 55 ವರ್ಷ ಹಳೆಯ ಮಸೀದಿಯ ಹತ್ತಿರ ತಲುಪುವುದನ್ನು ತಡೆಯಲು ಪೊಲೀಸರು ಪ್ರಯತ್ನಿಸಿದಾಗ ಭುಗಿಲೆದ್ದ ಹಿಂಸಾಚಾರದ ಸಂದರ್ಭದಲ್ಲಿ ನಾಲ್ವರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದರು ಮತ್ತು ಮುಸ್ಲಿಮರ ಒಡೆತನದ ಹಲವಾರು ಅಂಗಡಿಗಳನ್ನು ದೋಚಲಾಗಿತ್ತು. ಜಿಲ್ಲಾಡಳಿತವು ಮಸೀದಿಯನ್ನು 1969ರಲ್ಲಿ ಕಾನೂನುಬದ್ಧವಾಗಿ ನೋಂದಾಯಿಸಲಾಗಿದೆ ಎಂದು ಘೋಷಿಸಿದ್ದರೂ ಮಸೀದಿಯನ್ನು “ಅಕ್ರಮವಾಗಿ ನಿರ್ಮಿಸಲಾಗಿದೆ” ಎಂದು ಪ್ರತಿಭಟನಾಕಾರರು ಆರೋಪಿಸುತ್ತಿದ್ದಾರೆ.

ಪ್ರತಿಭಟನಕಾರರು ಮಸೀದಿಯನ್ನು ತಲುಪಲು ಸಾಧ್ಯವಾಗದೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಪೊಲೀಸರು ಲಾಠಿಚಾರ್ಜ್ ಮಾಡಿದರು ಮತ್ತು ನಂತರ ಧ್ವಜ ಮೆರವಣಿಗೆ ನಡೆಸಬೇಕಾಯಿತು.

ಶ್ವೇತ ಭವನದಲ್ಲಿ ಟ್ರಂಪ್-ಝೆಲೆನ್‌ಸ್ಕಿ ವಾಗ್ವಾದ : ಮಹತ್ವದ ಸಭೆಯಲ್ಲಿ ಆಗಿದ್ದೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ | ತಿರಂಗಾ ರ‍್ಯಾಲಿ ವೇಳೆ ಬಂಧಿತರಾಗಿದ್ದ ಅಭಿಜಿತ್ ದೀಪ್ಕೆಗೆ ‍‍ಜಾಮೀನು : ಪೊಲೀಸ್ ಕಸ್ಟಡಿಯಿಂದ ಬಿಡುಗಡೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರಿಗೆ ಶನಿವಾರ (ಅಕ್ಟೋಬರ್ 17) ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದ್ದು, ದೆಹಲಿಯ ಮಂದಿರ್ ಮಾರ್ಗ್ ಠಾಣೆ ಪೊಲೀಸರ ಕಸ್ಟಡಿಯಿಂದ ಬಿಡುಗಡೆಯಾಗಿದ್ದಾರೆ ಎಂದು...

ಮಕ್ಕಳು ಸೇರಿದಂತೆ ಪ್ರತಿಯೊಬ್ಬರಿಗೂ ಇಂಟರ್‌ನೆಟ್ ಬಳಕೆ ಮೂಲಭೂತ ಹಕ್ಕು : ಸುಪ್ರೀಂ ಕೋರ್ಟ್

ಮಹತ್ವದ ತೀರ್ಪಿನಲ್ಲಿ, ಸಂವಿಧಾನದ 21 ಮತ್ತು 19(1)(ಎ) ವಿಧಿಗಳ ಅಡಿಯಲ್ಲಿ ಇಂಟರ್‌ನೆಟ್ ಪಡೆಯುವ ಮತ್ತು ಬಳಸುವ ಹಕ್ಕನ್ನು ಸುಪ್ರೀಂ ಕೋರ್ಟ್ 'ಮೂಲಭೂತ ಹಕ್ಕು' ಎಂದು ಘೋಷಿಸಿದೆ. ಮಕ್ಕಳು ಸೇರಿದಂತೆ ಪ್ರತಿಯೊಬ್ಬ ವ್ಯಕ್ತಿಗೂ ಈ...

ಸಿಜೆಐ ಸೂರ್ಯಕಾಂತ್ ವಿರುದ್ಧದ ಪೋಸ್ಟ್: ಕೇರಳ ಕಾಂಗ್ರೆಸ್ ಅಧ್ಯಕ್ಷರಿಗೆ ಎಸ್‌ಸಿಬಿಎ ಜಂಟಿ ಕಾರ್ಯದರ್ಶಿಯಿಂದ ಲೀಗಲ್ ನೋಟಿಸ್!

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಅವರನ್ನು ಗುರಿಯಾಗಿಸಿ ಕೇರಳ ಕಾಂಗ್ರೆಸ್‌ನ ಅಧಿಕೃತ ಎಕ್ಸ್ (X) ಖಾತೆಯಿಂದ ಮಾಡಲಾಗಿತ್ತು ಎನ್ನಲಾದ ಪೋಸ್ಟ್‌ಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್‌ನ (SCBA) ಜಂಟಿ...

ದೆಹಲಿ | ತಿರಂಗಾ ರ‍್ಯಾಲಿ ವೇಳೆ ಬಂಧಿತರಾಗಿದ್ದ ನೇಹಾ ಬೋರಾ ಬಿಡುಗಡೆ : ಅಭಿಜಿತ್ ದೀಪ್ಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಿರುವ ಪೊಲೀಸರು

ಶುಕ್ರವಾರ (ಅಕ್ಟೋಬರ್ 16) ಬಂಧಿತರಾಗಿದ್ದ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (ಎಐಎಸ್‌ಎ) ಅಧ್ಯಕ್ಷೆ ನೇಹಾ ಬೋರಾ ಅವರನ್ನು ಶನಿವಾರ (ಅ.17) ಮುಂಜಾನೆ ಬಿಡುಗಡೆ ಮಾಡಲಾಗಿದ್ದು, ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್...

ಬೆಂಗಳೂರಿನಲ್ಲಿ ತಿರಂಗ ಯಾತ್ರೆಗೆ ಪೊಲೀಸರ ಷರತ್ತುಬದ್ಧ ಅನುಮತಿ: ಪ್ರತಿಭಟನೆ, ಘೋಷಣೆಗಳಿಗೆ ನಿರ್ಬಂಧ

ಬೆಂಗಳೂರು: ದೆಹಲಿಯಲ್ಲಿ ಸಿಜೆಪಿಯ ‘ಲೆಹ್ರಾ ದೋ ತಿರಂಗಾ’ ಮೆರವಣಿಗೆ ವಿಚಾರವಾಗಿ ರಾಜಕೀಯ ಸಂಘರ್ಷ ತೀವ್ರಗೊಂಡಿರುವ ಬೆನ್ನಲ್ಲೇ, ಬೆಂಗಳೂರಿನಲ್ಲಿ ಅಕ್ಟೋಬರ್ 16ರಂದು ಟೌನ್ ಹಾಲ್‌ನಿಂದ ಬನ್ನಪ್ಪ ಪಾರ್ಕ್‌ನಲ್ಲಿರುವ ಕ್ವಿಟ್ ಇಂಡಿಯಾ ಸ್ಮಾರಕದವರೆಗೆ ಹಮ್ಮಿಕೊಂಡಿರುವ ತಿರಂಗ...

ಸುಪ್ರೀಂ ವಿಚಾರಣೆಗೆ ಸಜ್ಜಾಗುತ್ತಿದ್ದಂತೆ ಸಿಜೆಪಿಯ ತಿರಂಗಾ ಮೆರವಣಿಗೆ ಆರಂಭ; ಪೊಲೀಸರ ನೋಟಿಸ್ ಧಿಕ್ಕರಿಸಿ ತೆರಳುತ್ತಿದ್ದ ಅಭಿಜೀತ್ ದೀಪ್ಕೆ ವಶಕ್ಕೆ

ನವದೆಹಲಿ: ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುವ ಹಕ್ಕಿನ ಕುರಿತ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಜ್ಜಾಗುತ್ತಿದ್ದ ಬೆನ್ನಲ್ಲೇ, ದೆಹಲಿ ಪೊಲೀಸರ ಸೂಚನೆಯನ್ನು ಧಿಕ್ಕರಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ‘ಲೆಹ್ರಾ ದೋ ತಿರಂಗಾ’...

‘ದಿಮಾಗಿ ನಕ್ಸಲ್’, ‘ದೇಶದ್ರೋಹಿ’ ಎಂದು ಪಟ್ಟ ಕಟ್ಟುವುದು ಅಧಿಕಾರ ಕಳೆದುಕೊಳ್ಳುವ ಭೀತಿಯ ಸಂಕೇತ”: ಮೋದಿ-ಅಮಿತ್ ಶಾ ವಿರುದ್ಧ ಪವನ್ ಖೇರಾ ವಾಗ್ದಾಳಿ!

ನವದೆಹಲಿ: ಕೇಂದ್ರದ ಬಿಜೆಪಿ ಸರ್ಕಾರವು ತನ್ನ ನೀತಿಗಳು ಮತ್ತು ನಡೆಯನ್ನು ಪ್ರಶ್ನಿಸುವ ನಾಗರಿಕರಿಗೆ ‘ರಾಷ್ಟ್ರವಿರೋಧಿ’, ‘ಎಡಪಂಥೀಯ’ ಹಾಗೂ ‘ದಿಮಾಗಿ ನಕ್ಸಲ್’ ಎಂದು ಪಟ್ಟ ಕಟ್ಟುತ್ತಿರುವುದು ಅದರ ಅಧಿಕಾರ ಕಳೆದುಕೊಳ್ಳುವ ಭೀತಿಯನ್ನು ತೋರಿಸುತ್ತದೆ ಎಂದು...

ಸಿಜೆಪಿಯ ‘ಲೆಹ್ರಾ ದೋ ತಿರಂಗಾ’ ಮೆರವಣಿಗೆಗೆ ಹೆಚ್ಚಿದ ನಿರ್ಬಂಧ: 25 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ನಿಯೋಜನೆ, ಸೆಂಟ್ರಲ್ ಪಾರ್ಕ್ ಬಂದ್

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)...

ಸಿಜೆಪಿಯ ತಿರಂಗಾ ಮೆರವಣಿಗೆ: ಸೆಂಟ್ರಲ್ ಪಾರ್ಕ್ ಮುಚ್ಚುವಿಕೆ ಪ್ರಶ್ನಿಸಿದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ನವದೆಹಲಿ: ದೆಹಲಿಯ ಕನ್ನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್ ಮುಚ್ಚುವ ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್‌ಡಿಎಂಸಿ) ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಕಾಕ್ರೋಚ್ ಜನತಾ ಪಾರ್ಟಿ...

ದೆಹಲಿ ಬಿಟ್ಟು ರಿಲಯನ್ಸ್ ರಿಫೈನರಿ ಇರುವ ಜಾಮ್‌ನಗರಕ್ಕೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಭೇಟಿ: ಮೋದಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ!

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರುಬಿಯೋ ಅವರ ಮುಂಬರುವ ಭಾರತ ಭೇಟಿ ಹಾಗೂ ವಿದೇಶಾಂಗ ಸಚಿವಾಲಯದ ನಿರ್ಧಾರಗಳ ಕುರಿತು ವಿಪಕ್ಷ ನಾಯಕ ರಾಹುಲ್ ಗಾಂಧಿ ವಿಮರ್ಶಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ...