Homeಕರ್ನಾಟಕ‘ಹಿಂದೂ’ ಪದ ವಿವಾದ: ಬಹಿರಂಗ ಚರ್ಚೆಗೆ ಸತೀಶ್‌ ಜಾರಕಿಹೊಳಿ ಪಂಥಾಹ್ವಾನ- ಏನಂದರು ಜನ?

‘ಹಿಂದೂ’ ಪದ ವಿವಾದ: ಬಹಿರಂಗ ಚರ್ಚೆಗೆ ಸತೀಶ್‌ ಜಾರಕಿಹೊಳಿ ಪಂಥಾಹ್ವಾನ- ಏನಂದರು ಜನ?

- Advertisement -
- Advertisement -

“ನಾನು ಅರೆಬರೆ ಓದಿದವನಲ್ಲ, 30 ವರ್ಷಗಳಿಂದ ಓದುತ್ತಲೇ ಇದ್ದೇನೆ. ಹಿಂದೂ ಪದದ ಬಗ್ಗೆ ನೀಡಿದ್ದ ಹೇಳಿಕೆ ಕುರಿತು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ, ಹೇಳಿಕೆ ತಪ್ಪೆಂದು ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿರುವುದು ಮತ್ತೊಂದು ಸುತ್ತಿನ ಚರ್ಚೆಗೆ ಕಾರಣವಾಗಿದೆ.

ಹಿಂದೂ ಪದದ ಹಿನ್ನೆಲೆಯ ಕುರಿತು ಉಂಟಾಗಿರುವ ವಿವಾದಕ್ಕೆ ಸಂಬಂಧಿಸಿದಂತೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ನನ್ನ ಹೇಳಿಕೆಯು ತಪ್ಪು ಎಂದಾದರೆ ಕ್ಷಮೆ ಯಾಚಿಸುವುದಷ್ಟೇ ಅಲ್ಲ, ರಾಜೀನಾಮೆಯನ್ನೂ ಕೊಡುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಹಿಂದೂ ಎಂಬುದು ಪರ್ಷಿಯನ್ ಭಾಷೆಯಿಂದ ಬಂದ ಶಬ್ದ. ಹಿಂದೂ ಪದದ ಬಗ್ಗೆ ಶಬ್ದಕೋಶದಲ್ಲಿ, ವಿಕಿಪಿಡಿಯಾದಲ್ಲಿ ಇರುವ ವಿವರಣೆಯನ್ನು ನಾನು ಹೇಳಿದ್ದೇನೆ. ಹಿಂದೂ ಪದದ ಬಗ್ಗೆ ಚರ್ಚೆಯಾಗಬೇಕು ಎಂದು ನಾನು ಹೇಳಿದ್ದೇನೆ. ಆದರೆ, ನಾನು ಏನು ಹೇಳಿದ್ದೇನೆಯೋ ಅದರ ಬಗ್ಗೆ ಅಥವಾ ಹಿಂದೂ ಪದದ ನಿಜವಾದ ಅರ್ಥದ ಬಗ್ಗೆ ಚರ್ಚೆ ನಡೆಯುತ್ತಿಲ್ಲ. ಬೇರೆ ಯಾವುದೋ ವಿಷಯಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಪದದ ಕುರಿತು ಬಹಿರಂಗ ಚರ್ಚೆಗೂ ನಾನು ಸಿದ್ಧ” ಎಂದು ಅವರು ತಿಳಿಸಿದ್ದಾರೆ.

ಸತೀಶ್ ಜಾರಕಿಹೊಳಿಯವರ ಹೇಳಿಕೆಗೆ ಅನೇಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಬಹಿರಂಗ ಚರ್ಚೆಗೆ ಆಹ್ವಾನಿಸಿರುವುದನ್ನು ಹೊಗಳಿದ್ದಾರೆ.

ಹಿರಿಯ ಪತ್ರಕರ್ತರಾದ ದಿನೇಶ್ ಅಮೀನ್‌ಮಟ್ಟು ಅವರು ಈ ಕುರಿತು ಪೋಸ್ಟ್ ಮಾಡಿದ್ದು, “ತಮ್ಮ ಹೇಳಿಕೆ ತಪ್ಪೆಂದು ಸಾಬೀತು ಪಡಿಸಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸತೀಶ್ ಜಾರಕಿಹೊಳಿ ಅವರು ತಮ್ಮ ರಾಜಕೀಯ ಜೀವನವನ್ನು ಪಣಕ್ಕಿಟ್ಟು ಸವಾಲು ಹಾಕಿದ್ದಾರೆ. ಹಿಂದೂ ಧರ್ಮ ರಕ್ಷಕರೆಂದು ಎದೆ ಬಡಿದುಕೊಳ್ಳುವವರು ಈಗ ಜಾರಕಿಹೊಳಿ ಅವರ ಸವಾಲನ್ನು ಸ್ವೀಕರಿಸುವ ಎದೆಗಾರಿಕೆ ತೋರಿಸಬೇಕು” ಎಂದು ಒತ್ತಾಯಿಸಿದ್ದಾರೆ.

“ಜಾರಕಿಹೊಳಿ ಅವರು ಹಿಂದೂ ಧರ್ಮವೇ ಅಶ್ಲೀಲ, ಇಲ್ಲವೇ ಹಿಂದೂಗಳೆಲ್ಲರೂ ಕಳ್ಳರು, ಗುಲಾಮರು ಎಂದು ಹೇಳಿಲ್ಲ. ತಾನು ಹಿಂದೂ ಅಲ್ಲ, ಹಿಂದೂ ಆಗಿ ಹುಟ್ಟಿದ್ದೇನೆ ಹಿಂದೂ ಆಗಿ ಸಾಯಲಾರೆ ಎಂದೂ ಹೇಳಿಲ್ಲ. ಜಾರಕಿಹೊಳಿ ಅವರು ಹಿಂದೂ ದೇವರು ಮತ್ತು ಧರ್ಮವನ್ನು ಪ್ರಚಾರದ ಪೋಸ್ಟರ್ ಮಾಡಿ ಚುನಾವಣೆಗಳಲ್ಲಿ ಮತವನ್ನೂ ಕೇಳಿಲ್ಲ. ಅವರು ಗೋಮಾಂಸ ರಫ್ತಿನ ಉದ್ಯಮವನ್ನೂ ನಡೆಸುತ್ತಿಲ್ಲ. ಮಂದಿರ ಕಟ್ಟುತ್ತೇವೆ ಎಂದು ಹೇಳಿ ಇಟ್ಟಿಗೆ ಮಾರಿ ಹಣ ತಿಂದೂ ಹಾಕಿಲ್ಲ. ಹಿಂದೂ ಮಹಿಳೆಯರನ್ನು ರೇಪ್ ಮಾಡಿದ ಹಿಂದೂ ಸ್ವಾಮಿಗಳನ್ನು ಸಮರ್ಥಿಸಿಕೊಂಡಿಲ್ಲ, ಅಸ್ಪಶ್ಯತೆಯನ್ನು ಆಚರಿಸಿಲ್ಲ, ಜಾತಿ ಆಧಾರದಲ್ಲಿ ತಾರತಮ್ಯವನ್ನೂ ಮಾಡಿಲ್ಲ. (ಇದನ್ನೆಲ್ಲ ಅವರು ಮಾಡಿದ್ದಾರೆಂದು ಯಾರಾದರೂ ಸಾಬೀತುಪಡಿಸಿದರೆ ನಾನೂ ಬರವಣಿಗೆಯನ್ನು ನಿಲ್ಲಿಸಿಬಿಡುತ್ತೇನೆ)” ಎಂದು ಬರೆದುಕೊಂಡಿದ್ದಾರೆ.

“ಅವರು ಬಹಳ ಸರಳವಾಗಿ ಹಿಂದೂ ಎಂಬ ಶಬ್ದಕ್ಕೆ ಪರ್ಷಿಯನ್ ಭಾಷೆಯಲ್ಲಿ ಇಂತಹದ್ದೊಂದು ಅರ್ಥ ಇದೆ ಎಂದು ಹೇಳಿದ್ದಾರೆ. ಅದು ಸುಳ್ಳು ಎಂದಾದರೆ ಅದನ್ನು ಸಾಬೀತುಪಡಿಸಿ ಜಾರಕಿಹೊಳಿ ಅವರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಬೇಕು. ಅದನ್ನು ಬಿಟ್ಟು ಕೈಕಾಲು ಬಡಿದುಕೊಂಡು ಕಿರುಚಾಡುವುದಲ್ಲ” ಎಂದು ಟೀಕಿಸಿದ್ದಾರೆ.

“ನಕಲಿ ಹಿಂದೂಗಳೇ ಕೇಳಿ, ಹಿಂದೂ ಧರ್ಮ ಉಳಿದುಕೊಂಡಿದ್ದು ಆಚಾರ್ಯರು, ಸ್ವಾಮಿಗಳಿಂದಲೂ ಅಲ್ಲ, ವೇದ, ಉಪನಿಷತ್, ಪುರಾಣಗಳಿಂದಲೂ ಅಲ್ಲ, ಅದು ಉಳಿದದ್ದು ಬೆಳೆದದ್ದು ಕಾಲಕಾಲಕ್ಕೆ ಬುದ್ದ, ಬಸವ, ನಾರಾಯಣ ಗುರು, ಪುಲೆ, ಅಂಬೇಡ್ಕರ್, ಪೆರಿಯಾರ್, ಗಾಂಧಿ, ಲೋಹಿಯಾರಂತಹವರು ಕೇಳಿದ ಪ್ರಶ್ನೆಗಳಿಂದ ಮತ್ತು ಹುಟ್ಟು ಹಾಕಿದ ಚರ್ಚೆಗಳಿಂದ. ಇವರಲ್ಲಿ ಕೆಲವರು ಹಿಂದೂ ಧರ್ಮವನ್ನೇ ವಿರೋಧಿಸಿದ್ದಾರೆ ನಿಜ, ಆ ವಿರೋಧದಿಂದಾಗಿ ಹಿಂದೂ ಧರ್ಮ ಅನಿವಾರ್ಯವಾಗಿ ಸುಧಾರಣೆಗೊಳಗಾಗಬೇಕಾಯಿತು” ಎಂದು ವಿವರಿಸಿದ್ದಾರೆ.

“ನಾರಾಯಣ ಗುರುಗಳು ಕೇರಳದಲ್ಲಿ ಧಾರ್ಮಿಕ ಸುಧಾರಣೆಗಳಿಗೆ ಕೈಹಾಕದಿದ್ದರೆ ಅಲ್ಲಿನ ಅರ್ಧ ಜನಸಂಖ್ಯೆ ಕ್ರಿಶ್ಚಿಯನರದಾಗುತ್ತಿತ್ತು. ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಸುಳ್ಳು ಎಂದು ಸಾಬೀತು ಪಡಿಸಿ ಈ ಚರ್ಚೆಯನ್ನು ಬೇಗ ಮುಗಿಸಿಬಿಡಿ. ಈ ಚರ್ಚೆಯನ್ನು ಬೇಗ ಮುಗಿಸಿದರೆ ಹಿಂದೂಗಳ ಅಳಿವು ಉಳಿವಿನ ಬಹಳ ಮಹತ್ವದ ಪ್ರಶ್ನೆ ಬಗ್ಗೆ ಚರ್ಚೆ ನಡೆಸಲು ಅನುಕೂಲವಾಗುತ್ತದೆ. ಅದು ರಾಜ್ಯದ ಶೇಕಡಾ 80ರಷ್ಟು ಹಿಂದುಳಿದ ಜಾತಿಯ ಹಿಂದುಗಳಿಗೆ ಶೇಕಡಾ 50ರಷ್ಟು ಮೀಸಲಾತಿ ನೀಡಿ, ಶೇಕಡಾ ನಾಲ್ಕರಷ್ಟು ಮೇಲ್ಜಾತಿ ಹಿಂದೂಗಳಿಗೆ ಶೇಕಡಾ ಹತ್ತರಷ್ಟು ಮೀಸಲಾತಿ ಹೇಗೆ ನೀಡಲು ಸಾಧ್ಯ ಎನ್ನುವ ವಿಷಯದ ಮೇಲಿನ ಚರ್ಚೆ” ಎಂದು ಎಚ್ಚರಿಸಿದ್ದಾರೆ.

ನಟ ಚೇತನ್‌ ಅಹಿಂಸಾ ಪ್ರತಿಕ್ರಿಯಿಸಿ, “ಶಾಸಕ ಸತೀಶ್ ಜಾರಕಿಹೊಳಿ ಅವರ ಹೇಳಿಕೆಯು ಆರ್ಟಿಕಲ್ 19 – ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅನುಗುಣವಾಗಿದೆ. ಪರ್ಷಿಯನ್ ಪದವಾದ ‘ಹಿಂದೂ’ವಿನ ಪರ್ಯಾಯ ವ್ಯಾಖ್ಯಾನಗಳ ಕುರಿತು ಹೆಚ್ಚಿನ ಸಂಶೋಧನೆ ಮತ್ತು ಚರ್ಚೆಗಳ ಅಗತ್ಯವಿದೆ. ಭವಿಷ್ಯದಲ್ಲಿ, ಜಾರಕಿಹೊಳಿಅವರು ರಾಜಕೀಯ ಲಾಭಕ್ಕಾಗಿ ‘ಹಿಂದೂ’ ಕಾಂಗ್ರೆಸ್‌ ಜೊತೆ ನಿಲ್ಲುವುದರ ಬದಲಾಗಿ ಸಮಾನತಾವಾದಿಗಳಾದ ನಮ್ಮೊಂದಿಗೆ ಮತ್ತು ಸತ್ಯದೊಂದಿಗೆ ನಿಲ್ಲುತ್ತಾರೆ ಎಂದು ಭಾವಿಸುತ್ತೇವೆ” ಎಂದು ಪೋಸ್ಟ್ ಮಾಡಿದ್ದಾರೆ.

ಹಿರಿಯ ಪತ್ರಕರ್ತರಾದ ರಾಜರಾಮ್ ತಲ್ಲೂರು ಅವರು ಬರೆಯುತ್ತಾ, “ನಿನ್ನೆಯ ತನಕ ಎಲ್ಲವೂ ಸಮೃದ್ಧ-ಸುಂದರ-ಸುಲಲಿತವಾಗಿತ್ತು. ಆದರೆ, ಸತೀಶ್ ಜಾರಕಿಹೊಳಿ ಅವರ ಒಂದು ಭಾಷಣ, ಏಕಾಏಕಿ ದೇಶದ ಅತ್ಯಂತ ಮಹತ್ವದ ಸಮಸ್ಯೆಯೊಂದನ್ನು ಎತ್ತಿದೆ. ಈವತ್ತಿನ ಪತ್ರಿಕೆಗಳನ್ನು ಗಮನಿಸಿ. ಬಹುತೇಕ ಕನ್ನಡ ಪತ್ರಿಕೆಗಳಲ್ಲಿ ಒಂದರಿಂದ ಒಂದೂವರೆ ಪುಟ ಈ ಸಮಸ್ಯೆಗೆ ಮೀಸಲಾಗಿದೆ. ಇದು ಈ ದೇಶದ ರಾಜಕಾರಣದ ಗುಣಮಟ್ಟ, ನಮ್ಮ #ಡಿಯರ್_ಮೀಡಿಯಾ ದ ಗುಣಮಟ್ಟಗಳ ಬಗ್ಗೆ ಹಲವು ಒಳನೋಟಗಳನ್ನು ಕೊಡುತ್ತದೆ” ಎಂದು ವಿಷಾದಿಸಿದ್ದಾರೆ.

ಇದನ್ನೂ ಓದಿರಿ: ಹಿಂದೂ ಪದ ಉಲ್ಲೇಖ ವಿವಾದ: ಸ್ಪಷ್ಟನೆ ನೀಡಿದ ಸತೀಶ್ ಜಾರಕಿಹೊಳಿ

“ಕಳೆದ ಚುನಾವಣೆಗಳಲ್ಲಿ ಸಿದ್ಧರಾಮಯ್ಯನವರ ಮೀನೂಟ/ಬಾಡೂಟ, ಅವರ ಕಾರಿನ ಮೇಲೆ ಕುಳಿತ ಕಾಗೆ ಇವೆಲ್ಲ ಅದನ್ನು ಕಲಿಸಿಕೊಟ್ಟಿವೆ. ಚುನಾವಣೆಗಳಿಗೆ ಮೊದಲು ಪದೇ ಪದೇ ಕಾಣಿಸಿಕೊಳ್ಳುತ್ತಿರುವ ಇಂತಹದೊಂದು “ಪ್ಯಾಟರ್ನ್”ನಿಂದ ಕಲಿಯಲು ಸಾಧ್ಯವಾಗಿಲ್ಲ, ಅಥವಾ ಕನಿಷ್ಟ ಪ್ಯಾಟರ್ನ್‌ಅನ್ನು ಗುರುತಿಸಿ ಅರ್ಥ ಮಾಡಿಕೊಳ್ಳಲು ಸಾಧ್ಯ ಆಗಿಲ್ಲ ಎಂದರೆ, ಅದಕ್ಕೆ ಅರ್ಥ ಆಗದವರೇ ಹೊಣೆ. ಕಾಂಗ್ರೆಸ್ಸಿನೊಳಗೆ ಬೇರೆ ನಾಯಕರಿಗಿಂತ ಸಿದ್ಧರಾಮಯ್ಯ, ಬಿ.ಕೆ.ಹರಿಪ್ರಸಾದ್, ಸತೀಶ್ ಜಾರಕಿಹೊಳಿಯಂತಹ ನಾಯಕರೇ ಯಾಕೆ ಹೆಚ್ಚಾಗಿ ಈ ರೀತಿಯ ದಾಳಿಗೆ ಗುರಿಯಾಗುತ್ತಿದ್ದಾರೆ ಎಂಬ ಪ್ಯಾಟರ್ನನ್ನಾದರೂ ಅರ್ಥ ಮಾಡಿಕೊಳ್ಳದಿದ್ದರೆ, ಈ ಯುದ್ಧ ರೈಫಲ್ ಹೊಂದಿರುವವರ ವಿರುದ್ಧ ಕಲ್ಲು ದೊಣ್ಣೆಗಳೊಂದಿಗೆ, ಯಾವುದೇ ವ್ಯೂಹವಿಲ್ಲದೆ ಹೋರಾಡುವ ಅಸಮ ಯುದ್ಧವೇ ಸೈ” ಎಂದಿದ್ದಾರೆ.

ವ್ಯಂಗ್ಯಚಿತ್ರಕಾರ ಪಂಜು ಗಂಗೊಳ್ಳಿ ಪ್ರತಿಕ್ರಿಯಿಸಿ, “ಹಿಂದೂ ಧರ್ಮ, ಹಿಂದೂ ಶಬ್ದಕ್ಕೆ ಈವರೆಗೂ ಯಾರಿಂದಲೂ ಸರಿಯಾದ ವ್ಯಾಖ್ಯಾನ ಮಾಡಲಾಗಿಲ್ಲ. ಇಷ್ಟು ವರ್ಷಗಳಿಂದ ಸಾಧ್ಯವಾಗಿಲ್ಲ ಅಂದರೆ ಮುಂದೆಯೂ ಸಾಧ್ಯವಾಗಲಿಕ್ಕಿಲ್ಲ. ಅಂತಹದರಲ್ಲಿ, ಇಡೀ ಸಮಾಜವೇ ಧರ್ಮದ ನಶೆಯಲ್ಲಿ ತೂರಾಡುವ ಈ ಹೊತ್ತಲ್ಲಿ ರಾಜಕಾರಣಿಯೊಬ್ಬ ಇವುಗಳಿಗೆ ಅಶ್ಲೀಲ ಅರ್ಥ ಇದೆ, ಮತ್ತೊಂದು ಮಗದೊಂದು ಅರ್ಥ ಇದೆ ಅಂತ ಸಾರ್ವಜನಿಕವಾಗಿ ಹೇಳುವುದು ರಾಜಕೀಯ ಆತ್ಮಹತ್ಯೆಯೇ ಸರಿ. ಮತ್ತು, ತಾನು ಹೇಳಿದ್ದಕ್ಕೆ ಬದ್ದ, ಧಮ್ಮಿದ್ದರೆ ತಾಕತ್ತಿದ್ದರೆ ಚರ್ಚೆಗೆ ಬನ್ನಿ ಅಂತ ಪಾಂಡಿತ್ಯದ ಸವಾಲು ಹಾಕಿದರೆ ಆ ಸವಾಲು ಸ್ವೀಕರಿಸಲು ಅವರೇನು ಧಾರ್ಮಿಕ ಪಂಡಿತರೇ? ಧರ್ಮವಂತರೇ? ಧರ್ಮಬೀರುಗಳೇ? ಅವರು ಜನರಿಗೆ ಧರ್ಮದ ನಶೆ ಏರಿಸಿ ರಾಜಕೀಯ ಲಾಭ ಮಾಡುವ ಝಾಂಬಿಗಳು” ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಂದುವರಿದು, “ತಮ್ಮ ರಾಜಕೀಯ ವಿರೋಧಿಗಳು ಧರ್ಮದ ಬಗ್ಗೆ ಋಣಾತ್ಮಕವಾಗಿ ಮಾತಾಡಿದಷ್ಟೂ ಅವರಿಗೆ ಸಂತೋಷ. ಕಳೆದ ಕೆಲವು ದಶಕಗಳಿಂದ ಎಂತಹ ಸೋಷಿಯಲ್ ಎಂಜಿನಿಯರಿಂಗ್ ನಡೆದಿದೆಯೆಂದರೆ, ಶತಮಾನಗಳಿಂದ ಧಾರ್ಮಿಕ ಶೋಷಣೆಗೆ ಸಿಕ್ಕಿ ನರಳಿದ ಜನ ಸಮುದಾಯಗಳೂ ಇಂದು ಅದೇ ಧರ್ಮಕ್ಕಾಗಿ ಕೊಲೆ ಮಾಡಲೂ ತಯಾರಾಗಿದ್ದಾರೆ, ಕೊಲೆಯಾಗಲೂ ಸಿದ್ದರಾಗಿದ್ದಾರೆ. ಇಷ್ಟು ವರ್ಷಗಳಿಂದ ರಾಜಕಾರಣದಲ್ಲಿರುವವರಿಗೆ ಇದು ಅರ್ಥ ಆಗಿಲ್ಲವೆಂದರೆ ಅವರದ್ದು ಅದೆಂತಹ ಪಾಂಡಿತ್ಯ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಹಿರಿಯ ಪತ್ರಕರ್ತರಾದ ಸತನ್‌ಕುಮಾರ್ ಬೆಳಗಲಿ ಪ್ರತಿಕ್ರಿಯಿಸಿ, “ಸತೀಶ ಜಾರಕಿಹೊಳಿ ಅವರು ಏನೋ ದೊಡ್ಡ ಅಪರಾಧ ಮಾಡಿದಂತೆ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಕೋಮುವಾದಿ ಶಕ್ತಿಗಳು ಯತ್ನಿಸುತ್ತಿವೆ. ಸತೀಶ ಹೇಳಿಕೆ ಬಗ್ಗೆ ಚರ್ಚೆಯಾಗಲಿ. ಸಂವಾದದ ಮೂಲಕ ಸತೀಶರನ್ನು ಎದುರಿಸಲಿ. ಚುನಾವಣೆ ಮುಂದಿರುವಾಗ ಸತೀಶ ಈ ಮಾತು ಆಡಿರುವದು ಅವರ ಸೈದ್ಧಾಂತಿಕ ಬದ್ಧತೆಗೆ ಸಾಕ್ಷಿ. ವಾಸ್ತವವಾಗಿ ಸತೀಶ ಹೇಳಿದ್ದು ಧರ್ಮದ ಬಗ್ಗೆ ಅಲ್ಲ. ಹಿಂದು ಪದದ ಬಗ್ಗೆ. ರಾಮಾಯಣ, ಮಹಾಭಾರತ, ಭಗವದ್ಗೀತೆ ಗಳಲ್ಲೂ ‘ ಹಿಂದೂ’ ಎಂಬ ಪದವಿಲ್ಲ.ಅದು ಪರ್ಷಿಯನ್ ಸೃಷ್ಟಿ ಎಂಬ ಸತೀಶ ಅಭಿಪ್ರಾಯದಲ್ಲಿ ಹುರುಳಿಲ್ಲದಿಲ್ಲ. ಅದೇನೇ ಇರಲಿ ಶಂ.ಬಾ.ಜೋಶಿಯವರು, ಗೌರೀಶ ಕಾಯ್ಕಿಣಿಯವರು ಸೇರಿದಂತೆ ಬೌದ್ಧಿಕ ವಲಯದಲ್ಲಿ ಆಗಾಗ ಇಂಥ ಚರ್ಚೆಗಳು ನಡೆದಿವೆ. ಈಗಲೂ ನಡೆಯಲಿ. ಅಪಪ್ರಚಾರ ಬೇಡ. ಸಂವಾದ ಈ ನೆಲಕ್ಕೆ ಹೊಸದಲ್ಲ. ಗಾಂಧೀಜಿ, ಅಂಬೇಡ್ಕರ್, ಮತ್ತು ಗಾಂಧೀಜಿ  ಗೋರಾ ನಡುವಿನ ವೈಚಾರಿಕ ಸಂವಾದ ಎಲ್ಲರಿಗೂ ತಿಳಿದಿದೆ. ಬಸವಣ್ಣನವರ ಅನುಭವ ಮಂಟಪವೂ ಕೂಡ ಸಂವಾದದ ಕೇಂದ್ರವಾಗಿತ್ತು. ವಚನಕಾರ್ತಿಯರು ಬಸವಣ್ಣನವರನ್ನೇ ತರಾಟೆಗೆ ತೆಗೆದುಕೊಂಡ ನಾಡಿದು” ಎಂದು ತಿಳಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ರಾಜಕಾರಣಿಗಳಿಗೆ ಓಟು ಹತ್ತಿರ ಬಂತೆಂದರೆ ಹಬ್ಬ ಹಾಗಾಗಿ ತಮ್ಮ ಎದುರಾಳಿಗಳು ಎಲ್ಲಿ ತಪ್ಪಿಗೆ ಸಿಕ್ಕಿ ಬೀಳುತ್ತಾರೆ ಎಂಬುದನ್ನೇ ಕಾಯ್ದಿರುತ್ತಾರೆ ಅದನ್ನೇ ಚಿಕ್ಕ ವಿಷಯವನ್ನು ಅಗಾಧ ಮಾಡಿಕೊಂಡು ಬರುವ ಚುನಾವಣೆಯಲ್ಲಿ ಲಾಭವಾಗುತ್ತೋ ಅಥವಾ ಬಹುಮತ ಬರುತ್ತೋ ಏನೋ ಅಂತ ಕಾಯುತ್ತಿರುತ್ತಾರೆ ತಾವುಗಳು ಸಾಧ್ಯ ಆದರೆ ಸನ್ಮಾನ್ಯರಾದ ಅಟಲ್ ಬಿಹಾರಿ ವಾಜಪೇಯಿ ಡಾಕ್ಟರ್ ಮನಮೋಹನ್ ಸಿಂಗ್ ಶ್ರೀಮತಿ ಇಂದಿರಾಗಾಂಧಿ ಇಂತಹ ಮೇಧಾವಿಗಳು ಮಾಡಿದಂತ ಅಮೋಘ ಕೆಲಸ ಕಾರ್ಯಗಳಂತೆ ಮಾಡಿ ಸೈಲೆಂಟಾಗಿ ಮತಗಳನ್ನ ಕೇಳದೆಯೇ ಜನತೆ ನೇರವಾಗಿ ತಮಗೆ ಮತ ಕೊಡುವಂತೆ ತಾವು ರಾಜಕಾರಣ ಅಥವಾ ಸಮಾಜ ಸೇವೆ ಮಾಡಿದರೆ ಮಾತ್ರ ಒಳ್ಳೆಯ ವ್ಯಕ್ತಿತ್ವ ಮತ್ತು ಘನತೆಗಳು ಬರುವುದು ಕಿರಿಚ್ ಆಟಗಳು ಅಗತ್ಯವೇ ಇರುವುದಿಲ್ಲ ಅಂತ ನನ್ನ ಅನಿಸಿಕೆ

LEAVE A REPLY

Please enter your comment!
Please enter your name here

- Advertisment -

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...