Homeಮುಖಪುಟಹಿಂದೂ ಪದ ಉಲ್ಲೇಖ ವಿವಾದ: ಸ್ಪಷ್ಟನೆ ನೀಡಿದ ಸತೀಶ್ ಜಾರಕಿಹೊಳಿ

ಹಿಂದೂ ಪದ ಉಲ್ಲೇಖ ವಿವಾದ: ಸ್ಪಷ್ಟನೆ ನೀಡಿದ ಸತೀಶ್ ಜಾರಕಿಹೊಳಿ

- Advertisement -
- Advertisement -

ಮಾನವ ಬಂಧುತ್ವ ವೇದಿಕೆ ವತಿಯಿಂದ ಬೆಳಗಾವಿ ಜಿಲ್ಲೆ ನಿಪ್ಪಾಣಿಯಲ್ಲಿ ಭಾನುವಾರ ನಡೆದ ” ಮನೆ ಮನೆಗೂ ಬುದ್ಧ, ಬಸವ, ಅಂಬೇಡ್ಕರ್” ಕಾರ್ಯಕ್ರಮದಲ್ಲಿ ಕೆ.ಪಿ.ಸಿ.ಸಿ ಕಾರ್ಯದರ್ಶಿಗಳಾದ ಸತೀಶ್ ಜಾರಕಿಹೊಳಿಯವರು ಹಿಂದೂ ಎಂಬ ಶಬ್ದದ ಉಗಮ ಮತ್ತು ಪರ್ಶಿಯನ್ ಭಾಷೆಯಲ್ಲಿ ಅದಕ್ಕಿರುವ ಅರ್ಥದ ಬಗ್ಗೆ ಮಾತನಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಹಿಂದುತ್ವ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದರೆ ಸ್ವತಃ ಕಾಂಗ್ರೆಸ್ ಖಂಡನಾ ಹೇಳಿಕೆ ನೀಡಿದೆ.

ಈ ಕುರಿತು ಸ್ಪಷ್ಟನೆ ನೀಡಿರುವ ಸತೀಶ್ ಜಾರಕಿಹೊಳಿಯವರು “ಒಂದು ಶಬ್ದದ ಬಗ್ಗೆ ಎಲ್ಲ ಮಾಧ್ಯಮಗಳಲ್ಲಿ ಚರ್ಚೆ, ಟೀಕೆ, ಟಿಪ್ಪಣಿಗಳಾಗುತ್ತಿವೆ. ಹಿಂದೂ ಶಬ್ದ ಪರ್ಶಿಯನ್ ಭಾಷೆ ಅಥವಾ ಆ ಭಾಗದಿಂದ ಬಂದಿದೆ ಎಂದು ನಾನು ಹೇಳಿದ್ದು ನಿಜ. ಇದರ ಬಗ್ಗೆ ಚರ್ಚೆಯಾಗಬೇಕೆಂದು ಹೇಳಿದ್ದೇನೆ. ಹಿಂದೂ ಶಬ್ದದ ಬಗ್ಗೆ ಕೆಲವು ನಿಂದನೆ ಮಾಡಿರುವ ಹಲವು ದಾಖಲೆಗಳು ಸಿಗುತ್ತವೆ ಎಂದು ಉಲ್ಲೇಖಿಸಿ ಹೇಳಿದ್ದೇನೆ. ಅವು ಸತೀಶ್ ಜಾರಕಿಹೊಳಿಯವರ ಮಾತುಗಳಲ್ಲ” ಎಂದಿದ್ದಾರೆ.

ಈ ರೀತಿಯ ಸಾವಿರಾರು ಭಾಷಣಗಳುಈ ದೇಶದಲ್ಲಿ ನಡೆದಿವೆ. ಆದರೂ ಕೂಡ ಮಾಧ್ಯಮಗಳು ಬಹಳ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿವೆ. ಹಿಂದೂ, ಪಾರ್ಷಿ, ಜೈನ್, ಇಸ್ಲಾಂ, ಕ್ರಿಶ್ಚಿಯನ್, ಬೌದ್ಧ ಯಾವುದೇ ಧರ್ಮವಿರಲಿ ಅದನ್ನು ಮೀರಿ ಬೆಳೆಯುವ ಕೆಲಸ ನಾವು ಮಾಡುತ್ತಿದ್ದೇವೆ. ಜಾತಿ-ಧರ್ಮ ಮೀರಿ ಕೆಲಸ ಮಾಡಬೇಕು ಎಂಬುದು ನಮ್ಮ ಆಶಯ. ಹಾಗಾಗಿ ನಾನು ಹೇಳಿದುದರಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದಾರೆ.

ಈ ಪರ್ಶಿಯನ್ ಶಬ್ದ ಬಂದಿರುವುದರ ನೂರಾರು ದಾಖಲೆಗಳಿವೆ. ವಿಶೇಷವಾಗಿ ನಮ್ಮ ಆರ್ಯ ಸಮಾಜದ ಸಂಸ್ಥಾಪಕರಾದ ದಯಾನಂದ ಸರಸ್ವತಿಯವರು ರಚಿಸಿ ಸತ್ಯಾರ್ಥ ಪ್ರಕಾಶದಲ್ಲಿ, ಡಾ.ಜಿ.ಎಸ್ ಪಾಟೀಲ್ ರವರು ಬರೆದ ಬಸವ ಭಾರತ ಪುಸ್ತಕಗಳಲ್ಲಿ, ಬಾಲಗಂಗಾಧರ ತಿಲಕ್ ರವರು ಪತ್ರಿಕೆಯಲ್ಲಿ, ವಿಕಿಪೀಡಿಯಾದಲ್ಲಿ ಇದರ ಉಲ್ಲೇಖವಿದೆ. ಅದನ್ನು ತಾವು ದಯವಿಟ್ಟು ತೆರೆದು ನೋಡಬೇಕು ಎಂದು ಜಾರಕಿಹೊಳಿ ಹೇಳಿದ್ದಾರೆ.
ಹಿಂದೂ ಧರ್ಮದ ವಿಚಾರ ಮಾಧ್ಯಮಗಳು ಇಷ್ಟು ವೈಭವೀಕರಿಸುವುದು ಸರಿಯಲ್ಲ. ಇದೇ ಸಮಯವನ್ನು ಬೇರೆ ವಿಚಾರಗಳಿಗೆ ಕೊಟ್ಟಿದ್ದರೆ ಒಳ್ಳೆಯದಾಗಿತ್ತು. ನೈಜವಾದ ಸುದ್ದಿಗಳನ್ನು ತೋರಿಸಬೇಕೆಂದು ಮನವಿ ಎಂದಿದ್ದಾರೆ.

ಹಿಂದೂ ಧರ್ಮದ ಬಗ್ಗೆ ಅಟಲ್ ಬಿಹಾರಿ ವಾಜಪೇಯಿಯವರ ಭಾಷಣವನ್ನು ಕೇಳಿ. ಅವರು ಅದೊಂದು ಜೀವನ ಕ್ರಮ ಎಂದಿದ್ದಾರೆ. ಸುಪ್ರೀಂ ಕೋರ್ಟ್ ಕೂಡ ಅದನ್ನೇ ಹೇಳಿದೆ. ನನಗೆ ಯಾವುದೇ ಧರ್ಮವನ್ನು ಅವಮಾನ ಮಾಡುವ ಉದ್ದೇಶವಿಲ್ಲ. ನಾನು ಯಾವುದೇ ಧರ್ಮ-ಜಾತಿಗಳನ್ನು ನಂಬುವುದಿಲ್ಲ. ನಾನು ಮಾತನಾಡಿರುವುದನ್ನು ಮತ್ತೆ ಕೇಳಿ. ಒಂದು ವೇಳೆ ನನ್ನ ತಪ್ಪಿಲ್ಲದಿದ್ದರೂ ನಿಮ್ಮ ಚರ್ಚೆಯನ್ನು ಮುಂದುವರೆಸಿದರೆ ಮಾನಹಾನಿ ಪ್ರಕರಣ ದಾಖಲಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ ಎಂದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

  1. Mukyavagi aryaru yendaru mulla pareshan desha dena bandedavaru ah aryaru mukyavagi bramaru hemba varneyaru agiruthare aryaru aryarvart henda bnthu gudagalenalle vasevara dravedara melle yudda madi havarondege sakranavada thali ageruthare edakagi he pershen bahse yalle hindhu emba shabda ke artha huleka vagi eruvudu edu Sathya nestavagide edana charitra kararu charitre yenu samrgrahvagi poorva kall dalle misphotomia Da angavada eran erka persheya. Mulla desha Da valasega charitre yanu veslesesabekagi venanthi

  2. When Central Congress leader Sarjwala slapped on the face ,this fellow alerted himself and giving damage control statement on the fear of the ticket in next election.Since from beginning it his attitutede, as if he is great social reformer. Bu thousands an lakhs of people like this have come and gone. People know to whom he want’ssatisfy.HinduDharma standing since so many thousands of years by it’s merit and it will continue forever. These perverts cannot do any thing. After all what they can do.Theycan go to burial ground and cook the food there and eat in the unhealthy atmosphere instead of eating it on their healthy dining tables.

  3. ಸತೀಶ ಜಾರಕಿಹೊಳಿ ಅವರ ವಿಚಾರಗಳನ್ನು ನಾನು ಸಮರ್ಥಿಸಿಕೊಳ್ಲುತ್ತೇನೆ. ಹಿಂದೂ ಎಂಬುದು ಒಂದು ಧರ್ಮವಲ್ಲ. ಒಂದು ವೇಳೆ ಅದು ಧರ್ಮ ಎಂದಾದರೆ ಧರ್ಮ ಎಂಬುದರ ವ್ಯಾಖ್ಯಾನಕ್ಕೆ ಒಳಪಡಬೇಕು. ಒಂದು ಸಮೂಹದಲ್ಲಿ ಒಂದೇ ರೀತಿಯ ಆಚರಣೆ, ಪ್ರಾರ್ಥನೆ, ನಂಬಿಕೆ, ಹಬ್ಬಗಳು, ದೇವರು, …ಹೀಗೆ ಎಲ್ಲದರಲ್ಲೂ ಏಕರೂಪತೆ ಇದ್ದು, ಅದು ಜನಸಮೂಹವನ್ನು ನಿರ್ದಿಷ್ಟ ನಂಬಿಕೆಯಡಿ ಮುನ್ನಡೆಸಿತ್ತದೆ. ಹಿಂದೂ ಧರ್ಮ ಎಂದಲ್ಲಿ. ಇಲ್ಲಿ ಬೇರೆ ಬೇರೆ ದೇವರಿದ್ದಾರೆ. ಹಬ್ಬಗಳ ಆಚರಣೆಯಲ್ಲೂ ವೈವಿಧ್ಯತೆ ಇದೆ. ನಂಬಿಕೆಗಳು ಬೇರೆ. ಆದ್ದರಿಂದ, ಹಿಂದೂ ಎಂಬುದು ಧರ್ಮದ ಪರಿಭಾಷೆಯಲ್ಲಿ ಒಪ್ಪಲಾಗದು. ಈ ರೀತಿಯಾಗಿ ವೈಜ್ಞಾನಿಕ ವಾಗಿ ಸಂಘರ್ಷಕ್ಕೆ ಇಳಿದರೆ ಮುಖಭಂಗವಾಗುತ್ತದೆ ಎಂದು ಪುರೋಹಿತಶಾಹಿಗೆ ಹಾಗೂ ಬಾಲಬಡುಕರಿಗೆ ಹೊತ್ತು. ಅದರೆ, ಜನರ ಮನಸ್ಸನ್ನು ಒಡೆದು ಆಳಲು ಅವರಿಗೆ ಹಿಂದೂ ಎಂಬ ಹಿತವಾದ ಪದದ ಅಸ್ತ್ರ ಮತ್ತೊಂದರಲ್ಲಿ ಇಲ್ಲ. ಬಸವಣ್ಣ, ಕುವೆಂಪು, ವಿವೇಕಾನಂದ. ಪೆರಿಯಾರ್. ಫುಲೆ ಹೀಗೆ ವಿಚಾರ ಮಾಡುವರ ಪಟ್ಟಿ ಯೇ ಇದೆ. ರಾಜಕಾರಣಿಯಾಗಿ ಸತೀಶ್ ಜಾಕಿಹೊಳಿ ಅವರು ಹೇಳುತ್ತಿದ್ದಾರೆ. ಆದರೆ, ಘಟಾನುಘಟಿ ಸಾಹಿತಿ ಚಿಂತಕರು ಯಾಕೆ ಮೌನವಾಗಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...