Homeಮುಖಪುಟನ್ಯೂಜಿಲೆಂಡ್ ವಿರುದ್ಧ 7 ವಿಕೆಟ್ ಗಳ ಜಯ: ಫೈನಲ್ ತಲುಪಿದ ಪಾಕ್

ನ್ಯೂಜಿಲೆಂಡ್ ವಿರುದ್ಧ 7 ವಿಕೆಟ್ ಗಳ ಜಯ: ಫೈನಲ್ ತಲುಪಿದ ಪಾಕ್

- Advertisement -
- Advertisement -

ಸಿಡ್ನಿ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ 7 ವಿಕೆಟ್ ಗಳ ಅಧಿಕಾರಯುತ ಗೆಲುವು ಪಡೆದ ಪಾಕಿಸ್ತಾನ ತಂಡ ಫೈನಲ್ ತಲುಪಿದೆ.

ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ಪಾಕ್ ಬೌಲರ್‌ಗಳ ಕರಾರುವಾಕ್ಕಾದ ದಾಳಿ ಎದುರು ರನ್ ಗಳಿಸಲು ತಿಣುಕಾಡಿತು. ನಾಯಕ್ ಕೇನ್ ವಿಲಿಯಂಸನ್ (46) ಮತ್ತು ಡೈರ್ಲ್ ಮಿಚೆಲ್ (53) ಮಾತ್ರ ಗಟ್ಟಿಯಾದ ನಿಂತು ಆಡವಾಡಿದ ಕಾರಣ ತಂಡ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 152 ರನ್ ಗಳಿಸಿತು.

152 ರನ್ ಗಳ ಸಾಧಾರಣ ಗುರಿ ಬೆನ್ನಟ್ಟಿದ್ದ ಪಾಕ್ ತಂಡದ ಆರಂಭಿಕ ಆಟಗಾರರಾದ ಬಾಬರ್ ಅಜಂ (53) ಮತ್ತು ಮೊಹಮ್ಮದ್ ರಿಜ್ವಾನ್ (57) ಶತಕದ ಜೊತೆಯಾಟದ ಮೂಲಕ ಮೆರಗು ನೀಡಿದರು. ಇಬ್ಬರೂ ಅರ್ಧಶತಕ ಗಳಿಸಿ ಔಟಾದರೆ ಆನಂತರ ಮೊಹಮ್ಮದ್ ಹ್ಯಾರಿಸ್ (30) ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಇನ್ನೂ 5 ಎಸೆತಗಳು ಬಾಕಿ ಇರುವಂತೆಯೇ ಪಾಕ್ ಗೆಲುವಿನ ಪತಾಕೆ ಹಾರಿಸಿತು.

ಎರಡನೇ ಸೆಮಿಫೈನಲ್ ಪಂದ್ಯವು ಗುರುವಾರ ಭಾರತ ಮತ್ತು ಇಂಗ್ಲೆಂಡ್ ಎದುರು ನಡೆಯಲಿದೆ. ಅಲ್ಲಿ ಗೆದ್ದ ತಂಡ ಫೈನಲ್ ನಲ್ಲಿ ಪಾಕಿಸ್ತಾನದ ವಿರುದ್ಧ ಸೆಣಸಲಿದೆ. ನವೆಂಬರ್ 13 ರಂದು ಫೈನಲ್ ಪಂದ್ಯ ನಡೆಯಲಿದೆ.

ಸೂಪರ್ 12 ಹಂತದಲ್ಲಿ ಪ್ರಯಾಸಕರ ರೀತಿಯಲ್ಲಿ ಸೆಮಿಫೈನಲ್ ತಲುಪಿದ್ದ ಪಾಕಿಸ್ತಾನ ತಂಡ ಈ ಗೆಲುವಿನ ಮೂಲಕ ಮೂರನೇ ಬಾರಿಗೆ ಫೈನಲ್ ತಲುಪಿದ್ದು ಎರಡನೇ ಬಾರಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ. 2007 ರಲ್ಲಿ ಫೈನಲ್ ನಲ್ಲಿ ಭಾರತದ ಎದುರು ಮುಗ್ಗರಿಸಿದ್ದ ಪಾಕ್ 2009 ರಲ್ಲಿ ಶ್ರೀಲಂಕಾ ವಿರುದ್ಧ ಜಯಿಸಿ ಕಪ್ ಎತ್ತಿ ಹಿಡಿದಿತ್ತು. ಅದು ಫೈನಲ್ ಪ್ರವೇಶಿಸಿದ್ದು ಅದೇ ಕೊನೆಯಾಗಿತ್ತು. ಈಗ ಮತ್ತೆ 13 ವರ್ಷಗಳ ನಂತರ ಪ್ರಶಸ್ತಿ ಸನಿಹ ಬಂದು ನಿಂತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೇರ ನಡೆ-ನುಡಿಯ, ಸದಾ ಸತ್ಯವನ್ನು ಹೇಳುವ ವಿಶೇಷ ಗುಣ ಬಂಗೇರ ಅವರದ್ದಾಗಿತ್ತು: ಸಿಎಂ ಸಿದ್ದರಾಮಯ್ಯ

0
ನಿಷ್ಠುರ, ನೇರ ನಡೆ ನುಡಿಯ ಸದಾ ಸತ್ಯವನ್ನು ಹೇಳುವ ವಿಶೇಷ ಗುಣ ಬಂಗೇರ ಅವರದ್ದಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ...