Homeಕರ್ನಾಟಕಕರ್ನಾಟಕದ ಒಕ್ಕೂಟ ರಾಜಕೀಯ ವ್ಯವಸ್ಥೆಯ ಚರಿತ್ರೆ: ಟಿ.ಆರ್ ಚಂದ್ರಶೇಖರ

ಕರ್ನಾಟಕದ ಒಕ್ಕೂಟ ರಾಜಕೀಯ ವ್ಯವಸ್ಥೆಯ ಚರಿತ್ರೆ: ಟಿ.ಆರ್ ಚಂದ್ರಶೇಖರ

ಭಾರತದಲ್ಲಿ ಯಾವತ್ತೂ ಪ್ರಾಂತೀಯತೆ ಎನ್ನುವುದು ರಾಷ್ಟ್ರೀಯತೆಗೆ ಎದುರಾಗಿ ನಿಂತಿಲ್ಲ.ಆದರೆ ಒಕ್ಕೂಟ ಮೌಲ್ಯವನ್ನು, ಸಾಂಸ್ಕೃತಿಕ ಬಹುತ್ವವನ್ನು ಕಳೆದುಕೊಂಡರೆ ನಾವು ಅನೇಕ ಗಂಡಾಂತರಗಳನ್ನು ಎದುರಿಸಬೇಕಾಗುತ್ತದೆ.

- Advertisement -
- Advertisement -

ನ್ಯಾಯಪಥ (ವಾರಪತ್ರಿಕೆ. ಸಂ. 3 ಸಂ. 11. ನವೆಂಬರ್ 18, 2020)ದಲ್ಲಿ ಪ್ರೊ. ಶಿವರಾಮಯ್ಯ ಅವರು ‘ಪಂಪನ ವಿಕ್ರಮಾರ್ಜುನ ವಿಜಯವೂ, ಕನ್ನಡ ರಾಷ್ಟ್ರೀಯತೆಯೂ’ ಎಂಬ ಲೇಖನದಲ್ಲಿ ಪಂಪ ಮಹಾಕವಿಯ ಮಹಾಭಾರತವನ್ನು ನಿದರ್ಶನವಾಗಿಟ್ಟುಕೊಂಡು ಕನ್ನಡ ರಾಷ್ಟ್ರೀಯತೆಯ ವಿವಿಧ ಆಯಾಮಗಳನ್ನು (ಜಾತಿವಿರೋಧಿ ಸಂಗತಿಗಳನ್ನು ಸೇರಿಸಿಕೊಂಡು) ಕುರಿತಂತೆ ಚರ್ಚಿಸಿದ್ದಾರೆ. ಕವಿರಾಜಮಾರ್ಗಕಾರನಲ್ಲಿನ ಕನ್ನಡ ರಾಷ್ಟ್ರೀಯತೆಯ ಎಳೆಗಳನ್ನು ಗುರುತಿಸಲು ಅವರು ಪ್ರಯತ್ನಿಸಿದ್ದಾರೆ. ಕನ್ನಡ ರಾಷ್ಟ್ರೀಯತೆಗೆ, ಒಕ್ಕೂಟ ರಾಜಕೀಯ ಪ್ರಣಾಳಿಕೆಗೆ ಮತ್ತು ನಾಡಿನ ಬಹುತ್ವ ಸಂಸ್ಕೃತಿಗೆ ಕರ್ನಾಟಕದಲ್ಲಿ ಸಾವಿರಾರು ವರ್ಷಗಳ ಚರಿತ್ರೆಯಿದೆ. ಕನ್ನಡ ಮನಸ್ಸು ಯಾವತ್ತೂ ವಿಶ್ವಾತ್ಮಕತೆ ಮತ್ತು ಸ್ಥಳೀಯತೆಗಳನ್ನು ಒಟ್ಟಿಗೆ ನಡೆಸಿಕೊಂಡು ಬಂದಿರುವುದಕ್ಕೆ ಇತಿಹಾಸದ ಸಾಕ್ಷಿಯಿದೆ. ಸಾಹಿತ್ಯದ ಮತ್ತು ಕನ್ನಡದ ಎಲ್ಲ ವಿದ್ವಾಂಸರಂತೆ ಪ್ರೊ. ಶಿವರಾಮಯ್ಯ ಅವರೂ ಸಹ ಕವಿರಾಜಮಾರ್ಗಕಾರನ ಪ್ರಸಿದ್ಧ ಕಂದ ಪದ್ಯದಲ್ಲಿನ ಭೌಗೋಳಿಕ ನೆಲೆಗಳನ್ನು ಕುರಿತಂತೆ (ಕಾವೇರಿಯಿಂದ ಆ ಗೋದಾವರಿವರೆಗಿರ್ಪ) ಮಾತನಾಡಿದ್ದಾರೆಯೇ ವಿನಾ ಆ ಪದ್ಯದ ಕೊನೆಯ ಸಾಲು ‘ವಸುಧಾ ವಲಯ ವಿಲೀನ ವಿಷದ ವಿಷಯ ವಿಶೇಷಂ’ ಎಂಬುದರ ಇಂಗಿತಾರ್ಥವನ್ನು ಕುರಿತಂತೆ ಹಚ್ಚು ಚರ್ಚೆಗಳಾಗಿಲ್ಲ. ಈ ಸಾಲಿನಲ್ಲಿ ಕವಿರಾಜಮಾರ್ಗಕಾರನು ಪ್ರಧಾನವಾಗಿ ಒಂದು ನೆಲೆಯಲ್ಲಿ ಬಹುತ್ವವನ್ನು ಮತ್ತೊಂದು ನೆಲೆಯಲ್ಲಿ ಒಕ್ಕೂಟ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಿದ್ದಾನೆ. ವಸುಧೆಯಲ್ಲಿ ವಿಲೀನ ಎಂದರೆ ಅಲ್ಲಿ ಅನೇಕ ಭಾಷೆಗಳು, ಅನೇಕ ಧರ್ಮಗಳು, ಅನೇಕ ಸಂಸ್ಕೃತಿಗಳು, ಅನೇಕ ಪ್ರದೇಶ-ವಿಶಿಷ್ಟತೆಗಳು ಇರುತ್ತವೆ ಎಂದು ಅರ್ಥ (ಬಹುತ್ವ). ವಸುಧೆಯಲ್ಲಿ ವಿಲೀನವಾಗಿದ್ದರೂ ಅದು ವಿಶಿಷ್ಟವಾದುದು ಎಂಬುದು ಒಕ್ಕೂಟ ತತ್ವವನ್ನು ಹೇಳುತ್ತಿದೆ. ಇದನ್ನು ಯಾವ ಸಂಕೋಚವೂ ಇಲ್ಲದೆ ನಾವು ‘ಕನ್ನಡ ರಾಷ್ಟ್ರೀಯತೆ ಪ್ರಣಾಳಿಕೆ’ ಎಂದು ಕರೆಯಬಹುದು. ಈ ಸಾಲಿನಲ್ಲಿ ಮಾರ್ಗಕಾರ ಏನನ್ನು ಹೇಳುತ್ತಿದ್ದಾನೆ?

ಇದನ್ನೂ ಓದಿ: ಪಂಪನ ವಿಕ್ರಮಾರ್ಜುನ ವಿಜಯವೂ, ಕನ್ನಡ ರಾಷ್ಟ್ರೀಯತೆಯೂ: ಪ್ರೊ.ಶಿವರಾಮಯ್ಯ

ಕನ್ನಡ ಜನಪದವು ‘ವಸುಧೆ’ಯಲ್ಲಿ ಲೀನವಾಗಿದೆ. ಅದು ಲೀನವಾಗಿದ್ದರೂ ತನ್ನ ‘ವಿಶಿಷ್ಟತೆ’ಯನ್ನು ಕಾಪಿಟ್ಟುಕೊಂಡು ಬಂದಿರುವುದನ್ನು ಇದು ಹೇಳುತ್ತಿದೆ. ಕನ್ನಡ ಸಂಸ್ಕೃತಿಯು ವಸುಧೆಯಲ್ಲಿನ ಎಲ್ಲ ಅಂಶಗಳನ್ನು ಒಳಗು ಮಾಡಿಕೊಂಡಿದೆ. ಅದೇ ಸಮಯದಲ್ಲಿ ತನ್ನತನವನ್ನು ಅದು ಬಿಟ್ಟುಕೊಟ್ಟಿಲ್ಲ. ಅದು ತನ್ನ ವಿಶಿಷ್ಟತೆಯನ್ನು ಉಳಿಸಿಕೊಂಡು ವಿಶ್ವಾತ್ಮಕವಾಗಿದೆ. ‘ವಸುಧಾ ವಲಯ ವಿಲೀನ’ ಎಂಬುದು ವಿಶ್ವಾತ್ಮಕತೆಯನ್ನು (ಕೇಂದ್ರ-ಏಕಾತ್ಮಕತೆ) ‘ವಿಶದ ವಿಷಯ ವಿಶೇಷಂ’ ಎಂಬುದು ಸ್ಥಳೀಯತೆಯನ್ನು (ಉಪರಾಷ್ಟ್ರೀಯತೆ) ಪ್ರತಿನಿಧಿಸುತ್ತಿದೆ. ಅನೇಕ ಕನ್ನಡ ವಿದ್ವಾಂಸರು ಗುರುತಿಸಿರುವಂತೆ ಕವಿರಾಜಮಾರ್ಗ ಕೃತಿಯು ಒಂದು ರಾಜಕೀಯ ಪಠ್ಯ. ಕನ್ನಡದ ಸ್ವಾಯತ್ತತೆಯನ್ನು ಇಲ್ಲಿ ಮಾರ್ಗಕಾರ ಗುರುತಿಸುತ್ತಿದ್ದಾನೆ.

ನಮ್ಮ ನಾಡು (ಭಾರತ) ಚರಿತ್ರೆಯಲ್ಲಿ ಯಾವತ್ತೂ ಏಕಚಕ್ರಾಧಿಪತ್ಯವಾಗಿರಲಿಲ್ಲ. ಉದಾ: ರಾಷ್ಟ್ರಕೂಟ ಚಕ್ರವರ್ತಿ ಎರಡನೆಯ ಪುಲಿಕೇಶಿ ದಕ್ಷಿಣಾಪಥೇಶ್ವರ ಎಂಬ ಬಿರುದನ್ನು ಪಡೆದಿದ್ದರೆ ಅವನ ಸಮಕಾಲೀನನಾದ ಹರ್ಷವರ್ಧನನು ಉತ್ತರಾಪಥೇಶ್ವರ ಎನಿಸಿಕೊಂಡಿದ್ದನು. ಆದರೆ ಪುಲಿಕೇಶಿಯ ರಾಜ್ಯಾಡಳಿತದಲ್ಲಿ ಹತ್ತಾರು ಸಾಮಂತ ಅರಸರಿದ್ದರು. ಒಂದು ರೀತಿಯಲ್ಲಿ ಅದೊಂದು ಒಕ್ಕೂಟವಾಗಿತ್ತು. ಅದೇ ರೀತಿಯಲ್ಲಿ ಹರ್ಷವರ್ಧನನ ಸಾಮ್ರಾಜ್ಯದಲ್ಲಿಯೂ ಹತ್ತಾರು ಸಾಮಂತ ಅರಸರಿದ್ದರು. ಅದೊಂದು ಒಕ್ಕೂಟವಾಗಿತ್ತು. ಇವೆರಡೂ ಸೇರಿ ಮಹಾ ಒಕ್ಕೂಟವಾಗಿತ್ತು. ಹೀಗೆ ಚರಿತ್ರೆಯುದ್ದಕ್ಕೂ ಭಾರತದ ರಾಜಕೀಯವು ಹೀಗೆ ಒಕ್ಕೂಟ ವ್ಯವಸ್ಥೆಯಾಗಿತ್ತೇ ವಿನಾ ಏಕಚಕ್ರಾಧಿಪತ್ಯವಾಗಿರಲಿಲ್ಲ. ಇಂತಹ ಒಕ್ಕೂಟ ತತ್ವಕ್ಕೆ ನಮ್ಮ ಸಂವಿಧಾನವೂ ಮನ್ನಣೆ ನೀಡಿದೆ. ಭಾಷಾವಾರು ಪ್ರಾಂತ್ಯಗಳ ರಚನೆಯು ಇದಕ್ಕೆ ಒಂದು ನಿದರ್ಶನವಾಗಿದೆ. ಸ್ವಾತಂತ್ರೋತ್ತರ ಭಾರತದಲ್ಲಿ ಅನೇಕ ಇತಿಮಿತಿಗಳ ನಡುವೆ ಒಕ್ಕೂಟ ತತ್ವವನ್ನು ಪಾಲಿಸಿಕೊಂಡು ಬರಲಾಗಿದೆ. ಇದೀಗ ಇದಕ್ಕೆ ‘ಅಖಂಡವಾದಿ’ಗಳಿಂದ ಅಪಾಯ ಬಂದಿದೆ. ಇಂದು ಭಾರತ ರಾಜಕಾರಣವು ಅಖಂಡತೆಯ ವ್ಯಸನದಲ್ಲಿ ಮುಳುಗಿಹೋಗಿದೆ. ಒಂದು ದೇಶ-ಒಂದು ಧರ್ಮ, ಒಂದು ದೇಶ-ಒಂದು ಭಾಷೆ, ಒಂದು ದೇಶ-ಒಂದು ಮಾರುಕಟ್ಟೆ, ಒಂದು ದೇಶ-ಒಂದು ಬ್ಯಾಂಕು, ಒಂದು ದೇಶ-ಒಂದು ತೆರಿಗೆ, ಒಂದು ದೇಶ-ಒಂದು ಶಿಕ್ಷಣ, ಒಂದು ದೇಶ-ಒಂದು ಮಹಾಭಾರತ-ರಾಮಾಯಣ ಇತ್ಯಾದಿ ಘೋಷಣೆಗಳು ಶಾಸನವಾಗುವ ಪ್ರಕ್ರಿಯೆಯಲ್ಲಿವೆ. ಈ ಬೆಳವಣಿಗೆಯು ರಾಜಕೀಯವಾಗಿ ಒಕ್ಕೂಟ ವ್ಯವಸ್ಥೆಗೆ, ಭಾಷೆಯ ನೆಲೆಯಲ್ಲಿ ಭಾಷಾವಾರು ಪ್ರಾಂತ ಪ್ರಣಾಳಿಕೆಗೆ, ಸಾಂಸ್ಕೃತಿಕವಾಗಿ ಬಹುತ್ವಕ್ಕೆ, ಕೃಷಿ ವೈವಿಧ್ಯತೆಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ನಮ್ಮ ದೇಶವು ಚರಿತ್ರೆಯಲ್ಲಿ ಯಾವತ್ತೂ ಒಂದು ಆಗಿರಲಿಲ್ಲ. ಇದರರ್ಥ ಭಾರತ ಎಂಬುದಿರಲಿಲ್ಲ ಎಂಬುದಲ್ಲ. ಕವಿರಾಜಮಾರ್ಗಕಾರ ಹೇಳುವಂತೆ ಕನ್ನಡ ಜನಪದÀವು ಹೇಗೆ ಭಾವಿಸಿದ ಸಂಗತಿಯಾಗಿತ್ತೋ ಅದೇ ರೀತಿಯಲ್ಲಿ ಭಾರತವೂ ಒಂದು ಭಾವಿಸಿದ ರಾಷ್ಟ್ರವಾಗಿತ್ತು. ಸ್ವಾತಂತ್ರೋತ್ತರ ಭಾರತದಲ್ಲಿ ಒಕ್ಕೂಟ ತತ್ವವು, ಭಾಷಾ ಬಹುತ್ವವು, ಸಾಂಸ್ಕೃತಿಕ ಬಹುವಚನವು ಯಾವ ರೀತಿಯಲ್ಲಿಯೂ, ಯಾವತ್ತೂ ಭಾರತದ ಏಕತೆಗೆ ಕುತ್ತು ಉಂಟುಮಾಡಿಲ್ಲ.

‘ಪ್ರಾಂತೀಯತೆ’ಯನ್ನು ರಾಷ್ಟ್ರೀಯತೆಗೆ ಪ್ರತಿಯಾದುದು ಎಂದು ಭಾವಿಸಬೇಕಾಗಿಲ್ಲ, ಭಾರತದಲ್ಲಿ ಯಾವತ್ತೂ ಪ್ರಾಂತೀಯತೆ ಎನ್ನುವುದು ರಾಷ್ಟ್ರೀಯತೆಗೆ ಎದುರಾಗಿ ನಿಂತಿಲ್ಲ. ರಾಷ್ಟ್ರಕವಿ ಕುವೆಂಪು ಅವರು ಕನ್ನಡ ಮಾತೆಯನ್ನು ‘ಭಾರತ ಜನನಿಯ ತನುಜಾತೆ’ ಎಂದು ಕರೆದಿದ್ದಾರೆ. ಭಾರತದ ಎಲ್ಲ ಪ್ರಾಂತ್ಯಗಳಲ್ಲಿಯೂ ಇದೇ ಭಾವನೆಯು ನೆಲೆಯೂರಿದೆ. ಆದರೆ ಈ ಒಕ್ಕೂಟ ಮೌಲ್ಯವನ್ನು, ಸಾಂಸ್ಕೃತಿಕ ಬಹುತ್ವವನ್ನು ಕಳೆದುಕೊಂಡರೆ ನಾವು ಅನೇಕ ಗಂಡಾಂತರಗಳನ್ನು ಎದುರಿಸಬೇಕಾಗುತ್ತದೆ. ಎಲ್ಲಿಯವರೆಗೆ ನಮ್ಮ ನಾಡನಲ್ಲಿ ಬಹುಭಾಷೆ, ಬಹುಸಾಹಿತ್ಯ, ಬಹುಧರ್ಮ, ಬಹುಳಾಕಾರಿ ಮಾರುಕಟ್ಟೆ, ಪ್ರದೇಶ-ವಿಶಿಷ್ಟ ಕೃಷಿ, ಸ್ಥಳೀಯ ಬ್ಯಾಂಕಿಂಗ್ ವ್ಯವಸ್ಥೆ ಮುಂತಾದ ಬಹುವಚನ ಸಂಸ್ಕೃತಿಯನ್ನು ಪಾಲಿಸುತ್ತಾ ನಡೆಯುತ್ತೇವೆಯೋ ಅಲ್ಲಿಯವರೆಗೆ ನಮ್ಮ ಏಕತೆಗೆ, ಸಮಗ್ರತೆಗೆ ಅಪಾಯವಿರುವುದಿಲ್ಲ. ಅಭಿವೃದ್ಧಿಯ ನೆಲೆಯಲ್ಲಿಯೂ ಒಕ್ಕೂಟವು ಅಗತ್ಯವಾದ ಒಂದು ಪ್ರಣಾಳಿಕೆಯಾಗಿದೆ. ಒಕ್ಕೂಟ ತತ್ವವು ಕೇವಲ ರಾಜಕೀಯ ಸಂಗತಿಯಷ್ಟೇ ಅಲ್ಲ. ಅದಕ್ಕೆ ಭಾಷೆಯ, ಸಂಸ್ಕೃತಿಯ, ಸಾಮಾಜಿಕ ಆಯಾಮವಿದ್ದಂತೆ ಆರ್ಥಿಕ ಮುಖವೂ ಇದೆ.

ಈ ಹಿನ್ನೆಲೆಯಲ್ಲಿ ಇಂದು ಕನ್ನಡ ರಾಷ್ಟ್ರೀಯತೆಗೆ, ಕನ್ನಡ ಭಾಷೆಗೆ, ಕನ್ನಡ ಮನಸ್ಸಿಗೆ ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಕೇಂದ್ರದ ಒಕ್ಕೂಟ ಸರ್ಕಾರವು ಕುತ್ತನ್ನುಂಟುಮಾಡುತ್ತಿದೆ. ‘ಕೇಂದ್ರ ಸರ್ಕಾರ’ (ಯೂನಿಯನ್ ಗೌರ್ವನಮೆಂಟ್) ಎಂಬ ನುಡಿಯೇ ಅಸಂಬದ್ಧವಾದುದು. ನಮ್ಮ ಸಂವಿಧಾನದಲ್ಲಿ ಬಳಕೆಯಾಗಿರುವ ನುಡಿ ಒಕ್ಕೂಟ ಸರ್ಕಾರ (ಇಂಡಿಯಾ ದಟ್ ಈಸ್ ಭಾರತ್, ಶಲ್ ಬಿ ಎ ಯೂನಿಯನ್ ಆಫ್ ಸ್ಟೇಟ್ಸ್). ನಮ್ಮಲ್ಲಿರುವುದು ಸಂವಿಧಾನಾತ್ಮಕ ಒಕ್ಕೂಟ ಸರ್ಕಾರವೇ ವಿನಾ ಕೇಂದ್ರ ಸರ್ಕಾರವಲ್ಲ. ಒಕ್ಕೂಟತನವು ಭಾರತದ ಭದ್ರತೆಯ ತತ್ವ. ಪ್ರೊ. ಶಿವರಾಮಯ್ಯ ಅವರು ಸರಿಯಾಗಿ ಗುರುತಿಸಿರುವಂತೆ ಪಂಪ ಭಾರತವೆನ್ನುವುದು ಕನ್ನಡದ ಭಾರತವೇ ವಿನಾ ಭಾರತದ ‘ಭಾರತವಲ್ಲ. ಅಂದರೆ ನಮ್ಮ ದೇಶದಲ್ಲಿ ಪ್ರತಿಭಾಷೆಗೂ ಒಂದೊಂದು ಅಥವಾ ಅನೇಕ ಮಹಾಭಾರತ-ರಾಮಾಯಣಗಳಿವೆ. ಕನ್ನಡದಲ್ಲಿಯೇ ಇದನ್ನು ಕಾಣಬಹುದು.

ಡಾ. ಟಿ. ಆರ್. ಚಂದ್ರಶೇಖರ

ಕನ್ನಡ ರಾಷ್ಟ್ರೀಯತೆಯ ಚಳವಳಿಯ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚು ಅಗತ್ಯವಾಗಿದೆ. ಇದೇ ಸಂಪುಟದಲ್ಲಿನ ಟಿ. ಎ. ನಾರಾಯಣಗೌಡ ಅವರು ಕನ್ನಡ ರಾಷ್ಟ್ರೀಯತೆಯ ಸಂಘಟನೆಯ-ಹೋರಾಟದ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಕನ್ನಡ ರಾಷ್ಟ್ರೀಯತೆಯು ಕನ್ನಡಿಗರ ಬದುಕಿನ, ಉದ್ಯೋಗದ, ಒಕ್ಕಲುತನದ, ವ್ಯಾಪಾರ-ವ್ಯವಹಾರ-ವಹಿವಾಟಿನ, ಉದ್ದಿಮೆರಂಗದ ಪ್ರಶ್ನೆಯಾಗಿದೆ.


ಇದನ್ನೂ ಓದಿ: ಎ ಪ್ರಾಮಿಸ್ಡ್ ಲ್ಯಾಂಡ್: ಒಬಾಮಾ ಪುಸ್ತಕದಲ್ಲಿ ನಿಜಕ್ಕೂ ಏನಿದೆ?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...