| ಪ್ರವೀಣ್ ಎಸ್ ಶೆಟ್ಟಿ |
ನಾನು ಕಳೆದ ತಿಂಗಳು ಮಂಗಳೂರಿನ ಒಂದು ಪುಸ್ತಕದ ಮಳಿಗೆಯಲ್ಲಿ ನನಗೆ ಬೇಕಾಗಿದ್ದ ಒಂದು ಪುಸ್ತಕ ಹುಡುಕುತ್ತಿದ್ದೆ. ಅಲ್ಲಿ ನನಗೆ ಒಬ್ಬ ಹಳೆಯ ಪರಿಚಿತರು ಸಿಕ್ಕಿದರು. ಅವರು ನನ್ನ ಜತೆ ಮಾತನಾಡುತ್ತಾ, ನಿಮ್ಮ ಹತ್ತಿರ ಯಾವುದಾದರೂ ಉತ್ತಮ ಸರ್ದಾರ್ಜಿ ಜೋಕ್ ಪುಸ್ತಕಗಳು ಇದ್ದರೆ ಕೊಡಿ ಎಂದು ಹೇಳಿದರು. 55 ವರ್ಷ ದಾಟಿದ ಅವರಿಗೆ ಜೋಕ್ ಪುಸ್ತಕಗಳ ಬಗ್ಗೆ ಯಾಕೆ ಒಮ್ಮೆಲೇ ಆಸಕ್ತಿ ಹುಟ್ಟಿತು ಎಂದು ನನಗೆ ಆಶ್ಚರ್ಯವಾಯಿತು. ಹಾಗಾಗಿ ನಾನು ಅವರಲ್ಲಿ ಕೇಳಿದೆ- ನಿಮಗೆ ಈ ಇಳಿ ವಯಸ್ಸಿನಲ್ಲಿ ಜೋಕುಗಳ ಪುಸ್ತಕ ಯಾಕೆ ಬೇಕಾಯಿತು ಎಂದು.
ಆಗ ಅವರು ಮುಜುಗರ ಪಡುತ್ತಾ -ನಾನು ಬಿಜೆಪಿ ಐಟಿ ಸೆಲ್ ನಲ್ಲಿ ಕೆಲಸ ಮಾಡುತ್ತಿದ್ದೇನೆ, ಅವರು ಕಳುಹಿಸುವ ಪೋಸ್ಟ್ ಗಳನ್ನು ಸಾಮಾಜಿಕ ಮೀಡಿಯಾದಲ್ಲಿ ಯಥಾವತ್ ಕಾಪಿ ಪೇಸ್ಟ್ ಫಾರ್ವರ್ಡ್ ಮಾಡುವುದೇ ನನ್ನ ಕೆಲಸ. ಒಂದು ಪೋಸ್ಟ್ ಗೆ ರೂ.3/- ಕೊಡುತ್ತಾರೆ. ಯೂಟೂಬ್ ನಲ್ಲಿ ರಾಜಕೀಯ ವಿಡಿಯೋಗಳ ಕೆಳಗೆ ಹಾಕುವ ಹೊಲಸು ಬೈಗುಳಗಳ ಕಾಮೆಂಟಿಗೂ ನಮಗೆ ಹಣ ಸಿಗುತ್ತದೆ. ಮೋದಿಗೆ ತನ್ನ ಭಕ್ತರು ಎದುರಾಳಿಗಳಿಗೆ ಕೊಡುವ ಹೊಲಸು ಬೈಗುಳ ಓದುವುದೆಂದರೆ ತುಂಬಾ ಇಷ್ಟವಂತೆ, ಅವರು ದಿನದ 12 ಗಂಟೆ ಸಾಮಾಜಿಕ ಮೀಡಿಯಾ ಜಾಲಾಡುವುದರಲ್ಲಿಯೇ ಕಳೆಯುತ್ತಾರೆ ಎಂದು ಅವರು ನನಗೆ ಹೇಳಿದರು. (ಇದನ್ನೇ ಅವರ ಭಕ್ತರು ಮೋದಿ ದಿನಕ್ಕೆ 18 ಗಂಟೆ ಕೆಲಸ ಮಾಡುತ್ತಾರೆ ಎಂದು ಬಡಾಯಿ ಕೊಚ್ಚುವುದು).
ಅವರಿಗೆ ಜೋಕ್ ಪುಸ್ತಕಗಳು ಬೇಕಿರುವುದಕ್ಕೆ ಕಾರಣ ಅವುಗಳಲ್ಲಿಯ ಜೋಕುಗಳನ್ನು ಸ್ವಲ್ಪ ಬದಲಾವಣೆ ಮಾಡಿ ಅವು ರಾಹುಲ್ ಗಾಂಧಿಗೆ ಅನ್ವಯ ಆಗುವಂತೆ ತಿರುಚಿ ಬಿಜೆಪಿ ಐಟಿ ಸೆಲ್ ಗೆ ಕಳುಹಿಸಿದರೆ ಒಂದು ಒಳ್ಳೆಯ ಜೋಕಿಗೆ ಕನಿಷ್ಠ ರೂ. 100/- ಕೊಡುತ್ತಾರೆ, ಹೊಸತರದ ಉತ್ತಮ ಜೋಕ್ ಆಗಿದ್ದರೆ ರೂ 200/- ಸಹಾ ಕೊಡುತ್ತಾರಂತೆ. ಅದಕ್ಕಾಗಿ ಅವರು ಜೋಕ್ ಪುಸ್ತಕಗಳನ್ನು ಹುಡುಕುತ್ತಿದ್ದದ್ದು.
ರಾಹುಲ್ ಗಾಂಧಿ ಕ್ಯಾಂಬ್ರೀಡ್ಜ್ ನಲ್ಲಿ ಎಂ.ಫಿಲ್ ಮಾಡಿದ್ದಾರೆ, ಜತೆಗೆ ಬಿಜ್ನೆಸ್ ಮ್ಯಾನೇಜ್ಮೆಂಟ್ ಕೋರ್ಸ್ ಸಹಾ ಮಾಡಿದ್ದಾರೆ. ಲಂಡನ್ ನಲ್ಲಿ ಒಂದು ಟೆಕ್ ಕಂಪನಿಯಲ್ಲಿ ಡೈರೆಕ್ಟರ್ ಸಹಾ ಆಗಿದ್ದರು. ಅವರನ್ನು ಲೇವಡಿ ಮಾಡುವಷ್ಟು ಯೋಗ್ಯತೆ ಪಿಯೂಸಿಯಲ್ಲಿ ಮೂರು ಸಾರಿ ಫೇಲಾಗಿ ಶಾಲೆ ಅರ್ಧಕ್ಕೆ ಬಿಟ್ಟಿರುವ ಸ್ವತಃ ನಿಮಗೆ ಅಥವಾ ನಿಮ್ಮ ಅರೆಸಾಕ್ಷರ ಮೋದಿಗೆ ಇದೆಯೇ? ಗುಜರಾತಿ ಮಾಧ್ಯಮ ಶಾಲೆಯಲ್ಲಿ ಕೇವಲ ಎಂಟನೇ ಕ್ಲಾಸ್ ವರೆಗೆ ಮಾತ್ರ ಕಲಿತಿರುವ ಮೋದಿಗೆ ಸರಿಯಾಗಿ ಇಂಗ್ಲೀಷ್ ಸಹಾ ಮಾತನಾಡಲು ಬರುವುದಿಲ್ಲ, ಆದರೂ ನೀವು ಅವಿದ್ಯಾವಂತ ಮೋದಿಗಾಗಿ ವಿದ್ಯಾವಂತ ರಾಹುಲ್ ಗಾಂಧಿಯನ್ನು ಲೇವಡಿ ಮಾಡುವುದು ಸರಿಯೇ? ಎಂದು ನಾನು ಕೇಳಿದೆ.
ಅದಕ್ಕೆ ಅವರು – ಹೌದು ನೀವು ಹೇಳುವುದು ಸರಿ. ರಾಹುಲ್ ಗಾಂಧಿ ಮೋದಿಗಿಂತ ಹೆಚ್ಚು ವಿದ್ಯಾವಂತ, ಬುದ್ದಿವಂತ ಮತ್ತು ಸಂಭಾವಿತ, ಆದರೆ ಸತತ ಲೇವಡಿ ಅಪಹಾಸ್ಯಗಳ ಮೂಲಕ ಅವರೊಬ್ಬ ಪೆದ್ದ ಮಂದಬುದ್ದಿಯವ ಎಂದು ಮಾಧ್ಯಮಗಳಲ್ಲಿ ಬಿಂಬಿಸುತ್ತಲೇ ಇರಬೇಕು, ಇದರಿಂದ ಹೊಸ ಪೀಳಿಗೆಯ ಯುವ ಮತದಾರರು ಅವರನ್ನು ಹಗುರವಾಗಿ ಪರಿಗಣಿಸುತ್ತಾರೆ ಹಾಗೂ ಅವರಿಗೆ ಹೆಚ್ಚು ಮಹತ್ವ ಮತ್ತು ಗೌರವ ಕೊಡುವುದಿಲ್ಲ, ಕೊನೆಗೆ ಇದು ಕಾಂಗ್ರೆಸ್ಸಿಗೆ ನೆಗೆಟಿವ್ ವೋಟ್ ಆಗಿ ಪರಿಣಮಿಸುತ್ತದೆ ಎಂಬುದು ನಮ್ಮ ಬಿಜೆಪಿ ಪ್ರಚಾರ ವಿಭಾಗದವರ ಮನೋವೈಜ್ನಾನಿಕ ರಣತಂತ್ರ ವಾಗಿದೆ ಎಂದು ಅವರು ಗುಟ್ಟು ಬಿಟ್ಟುಕೊಟ್ಟರು. ಅದಕ್ಕಾಗಿಯೇ ಬಿಜೆಪಿ ಐಟಿ ಸೆಲ್ ನವರೇ ರಾಹುಲ್ ಗಾಂಧಿಗೆ ‘ಪಪ್ಪು’ ಚೋಟಾ ಭೀಮ್ ಎಂದು ಅಡ್ಡ ಹೆಸರಿಟ್ಟು ಲೇವಡಿ ಶುರು ಮಾಡಿದ್ದು, ಅದನ್ನೇ ನಾವೂ ಅನುಸರಿಸಬೇಕು ಎಂದು ನಮಗೆ ಆದೇಶವಿದೆ ಎಂದು ಆ ಮಿತ್ರರು ನನಗೆ ಹೇಳಿದರು.
ಅರೆಸಾಕ್ಷರ ಮೋದಿಗೆ “ರಾಜಕೀಯ ತಂತ್ರಗಾರಿಕೆ” ಗೊತ್ತಿದೆಯೇ ವಿನಹ ನಮ್ಮ ಬೃಹತ್ ದೇಶದ ಆರ್ಥಿಕತೆಯ ಬಗ್ಗೆ ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ ಸ್ವಲ್ಪವೂ ಜ್ಞಾನವಿಲ್ಲ, ಅವರು ಗುಜರಾತ್ ಮುಖ್ಯ ಮಂತ್ರಿ ಆಗುವುದಕ್ಕೇ ಮೊದಲು ಒಂದು ಪಂಚಾಯತ್ ಸದಸ್ಯನಾಗಿಯೂ ಜನ ಸೇವೆ ಮಾಡಿಲ್ಲ. ಕೇವಲ ಆಗಿನ ಗುಜರಾತ್ ಮುಖ್ಯಮಂತ್ರಿಗಳಾದ ಕೇಶುಭಾಯಿ ಪಟೇಲ್, ಸುರೇಶ್ ಮೆಹತಾ, ಮತ್ತು ಮಾಧವ ಸಿಂಹ್ ಸೋಲಂಕಿ ಇವರುಗಳ ಬೆನ್ನಿಗೆ ಮೋದಿ ಇರಿಯುತ್ತಾ ಬಂದು 2001 ರಲ್ಲಿ ನೇರವಾಗಿ ಮುಖ್ಯಮಂತ್ರಿ ಖುರ್ಚಿ ಕಬಳಿಸಿದ್ದು. ಮತ್ತೂ ನಂತರ ಅದನ್ನು ಉಳಿಸಿಕೊಳ್ಳಲು ಉದ್ದೇಶಪೂರ್ವಕವಾಗಿ ಕರಾಳ ಗೋಧ್ರಾಕಾಂಡ ರಚಿಸಿದ್ದು ಅಷ್ಟೇ. ಸ್ವಲ್ಪವೂ ಆರ್ಥಿಕ ತಜ್ನತೆ ಇಲ್ಲದರಿಂದಾಗಿಯೇ ಮೋದಿ ಪೆದ್ದು ಪೆದ್ದಾಗಿ ನೋಟು ರದ್ದತಿ ಮಾಡಿ ಇಡೀ ದೇಶದ ಆರ್ಥಿಕತೆಗೆ ಮಾರಣಾಂತಿಕ ಪೆಟ್ಟು ಕೊಟ್ಟಿದ್ದು ನಿಜ ಎಂದು ಆ ಸರ್ದಾರ್ಜಿ ಜೋಕುಪ್ರಿಯರು ಒಪ್ಪಿದರು.


