ಕೊರೋನಾ ಪೀಡಿತರಿಗೆ ಚಿಕಿತ್ಸೆ ನೀಡುವಾಗ ಬಳಸುವ ರೆಮ್‌ಡಿಸಿವಿರ್ ಔಷಧಿ ಕೊರತೆ ಬಗ್ಗೆ ಎಲ್ಲೆಲ್ಲೂ ದೂರುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಮಹರಾಷ್ಟ್ರ ಬಿಜೆಪಿ ಮುಖಂಡರು 4.75 ಕೋಟಿ ರೂ. ಮೌಲ್ಯದ ರೆಮ್‌ಡಿಸಿವಿರ್ ಅಕ್ರಮ ಸಂಗ್ರಹ ಆರೋಪ ಕೇಳಿಬಂದಿದೆ. ರೆಮ್ಡೆಸಿವಿರ್ ಸುತ್ತ ನಡೆಯುತ್ತಿರುವ ಈ ಗದ್ದಲದಲ್ಲಿ, ಕೊರೋನಾ ವಿಷಯದಲ್ಲೂ ಬಿಜೆಪಿ ರಾಜಕೀಯ ಮಾಡುತ್ತಿದೆಯೇ ಎಂಬ ಪ್ರಶ್ನೆಗಳು ಎದ್ದಿವೆ.
ಶನಿವಾರ ಮುಂಜಾನೆ ಮಹಾರಾಷ್ಟ್ರ ಸಚಿವ ನವಾಬ್ ಮಲೀಕ್ ರಾಜ್ಯಕ್ಕೆ ರೆಮ್‌ಡಿಸಿವಿರ್ ಔಷಧಿಯನ್ನು ಪೂರೈಸಬಾರದು ಎಂದು ಕೇಂದ್ರ ಸರ್ಕಾರ ಮತ್ತು ಬಿಜೆಪಿ ಪೂರೈಕೆದಾರರ ಮೇಲೆ ಒತ್ತಡ ಹಾಕುತ್ತಿದೆ. ಪೂರೈಸಿದರೆ ಲೈಸೆನ್ಸ್ ರದ್ದು ಮಾಡುತ್ತೀವಿ ಎಂದು ಅವರನ್ನು ಬೆದರಿಸಲಾಗುತ್ತಿದೆ’ ಎಂಬ ಗಂಭೀರ ಆರೋಪ ಮಾಡಿದ್ದರು.
ನಂತರ ರೆಮ್‌ಡಿಸಿವಿರ್ ಮಾತ್ರೆಗಳ ಹೆಚ್ಚುವರಿ ಸಂಗ್ರಹವಿದೆ ಎಂದು ಮುಂಬೈ ಪೊಲೀಸರು ಫಾರ್ಮಾ ಕಂಪನಿಯ ನಿರ್ದೇಶಕರೊಬ್ಬರನ್ನು ಪ್ರಶ್ನಿಸಿದಾಗ, ಅಲ್ಲಿಗೆ ಧಾವಿಸಿದ ದೇವೇಂದ್ರ ಫಢ್ನವೀಸ್ ಫಾರ್ಮಾ ಕಂಪನಿ ಪರ ಮಾತಾನಾಡಿ, ನಾವು ಅವನ್ನು ಕೊಳ್ಳಲು ಆರ್ಡರ್ ಕೊಟ್ಟಿ ಎಂದು ಹೇಳಿರುವುದು ಹೊಸ ವಿವಾದ ಹುಟ್ಟುಹಾಕಿದೆ.
“ನಾಲ್ಕು ದಿನಗಳ ಹಿಂದೆ ನಾವು ರೆಮ್‌ಡಿಸಿವಿರ್ ಪೂರೈಸುವಂತೆ ಬ್ರಕ್ ಫಾರ್ಮಾಗೆ ವಿನಂತಿಸಿದ್ದೆವು. ಆದರೆ ಅನುಮತಿ ನೀಡುವವರೆಗೂ ಅವರಿಗೆ ಔಷಧಿ ಪೂರೈಸಲು ಸಾಧ್ಯವಾಗಲಿಲ್ಲ. ನಾನು ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಅವರೊಂದಿಗೆ ಮಾತನಾಡಿದ ನಂತರ ಅನುಮತಿ ಸಿಕ್ಕಿತು” ಎಂದು ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ. ಅಲ್ಲದೆ ರೆಮ್‌ಡಿಸಿವಿರ್ ಪೂರೈಕೆದಾರರಿಗೆ ಮಹಾರಾಷ್ಟ್ರ ಸರ್ಕಾರ ಕಿರುಕುಳ ಕೊಡುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತಾಗಿ ಆರ್‌ಟಿಐ ಕಾರ್ಯಕರ್ತ ಮತ್ತು ಸಾಮಾಜಿಕ ಹೋರಾಟಗಾರ ಸಾಕೇತ್ ಗೋಖಲೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. “ಕಳೆದ ರಾತ್ರಿ ಮುಂಬೈನ ವೈಲ್ ಪಾರ್ಲೆ ಪೊಲೀಸರು ಗುಜರಾತ್ ಫಾರ್ಮಾ ಕಂಪನಿ ಅಕ್ರಮವಾಗಿ ಸಂಗ್ರಹಿಸಿದ್ದ 4.75 ಕೋಟಿ ರೂ. ಮೌಲ್ಯದ ರೆಮ್‌ಡಿಸಿವಿರ್ ಮಾತ್ರೆಗಳನ್ನು ವಶಪಡಿಸಿಕೊಂಡರು. ಥಟ್ಟನೆ ನಟ್ಟನಡುರಾತ್ರಿ ವೈಲ್ ಪಾರ್ಲೆ ಪೊಲೀಸ್ ಸ್ಟೇಷನ್‌ನಲ್ಲಿ ಪ್ರತ್ಯಕ್ಷರಾದ ಮಾಜಿ ಸಿಎಂ ದೇವೇಂದ್ರ ಫಢ್ನವೀಸ್, ‘ಬಿಜೆಪಿ ಈ ಔಷಧಿಗಳನ್ನು ಆರ್ಡರ್ ಮಾಡಿ ದಮನ್ ಮತ್ತು ಗುಜರಾತ್‌ನಿಂದ ತರಿಸಿಕೊಂಡಿದೆ’ ಎನ್ನುತ್ತಾರೆ. ನಂತರವರು ಜನರಿಗೆ ವಿತರಿಸಲು ಆ ಸ್ಟಾಕ್ ಅನ್ನು ಬಿಜೆಪಿ ತರಿಸಿಕೊಂಡಿದೆ ಎಂದು ಸಮರ್ಥಿಸಿಕೊಂಡಿದ್ದಾರೆ” ಎಂದು ಗೋಖಲೆ ಟ್ವೀಟ್ ಮಾಡಿದ್ದಾರೆ.
Last night, Vile Parle police station in Mumbai seized 4.75 crores worth of Remdesivir vials that were being secretly moved by a Gujarat company.
Suddenly, @Dev_Fadnavis shows up at the police station late night & says BJP ordered those vials from Daman & Gujarat.
(1/5)
— Saket Gokhale (@SaketGokhale) April 18, 2021
1. ಸರ್ಕಾರಗಳಿಗಷ್ಟೇ ಮಾರಬೇಕಾದ ರೆಮ್‌ಡಿಸಿವಿರ್ ಅನ್ನು ಫಡ್ನವೀಸ್ ಅವರಂತಹ ಖಾಸಗಿ ವ್ಯಕ್ತಿ, ಗುಜರಾತ್‌ನಿಂದ ಹೇಗೆ ತರಿಸಿಕೊಳ್ಳುತ್ತಾರೆ?
2. ಪೂರೈಕೆದಾರರ ಕುರಿತು ಫಡ್ನವೀಸ್ ರಾಜ್ಯ ಸರ್ಕಾರಕ್ಕೆ ತಿಳಿಸಿ, ಅಧಿಕೃತ ಮಾರ್ಗದಲ್ಲೇ ರಾಜ್ಯ ಸರ್ಕಾರ ಅವನ್ನು ಖರೀದಿಸಲು ಅವಕಾಶವನ್ನೇಕೆ ಮಾಡಿಕೊಡಲಿಲ್ಲ?
3. ತೀವ್ರ ಕೊರತೆ ಇರುವ ಈ ಸಂದರ್ಭದಲ್ಲಿ ಬಿಜೆಪಿ ರೆಮ್‌ಡಿಸಿವಿರ್ ಅನ್ನು ತನ್ನ ಪಾರ್ಟಿ ಆಫೀಸ್‌ನಲ್ಲಿ (ಗುಜರಾತ್‌ನಲ್ಲೂ ಹೀಗೇ ಆಗಿದೆ) ಸ್ಟಾಕ್ ಮಾಡಿದ್ದು ಏಕೆ?
ರಾಜ್ಯ ಸಚಿವ ನವಾಬ್ ಮಲೀಕ್ ನಿನ್ನೆಯಷ್ಟೇ, ರೆಮ್‌ಡಿಸಿವಿರ್ ಪಡೆಯಲು ಕೇಂದ್ರ ಸರ್ಕಾರ ಅಡ್ಡಿ ಮಾಡುತ್ತಿದೆ ಎಂದಿದ್ದಾರೆ. ಆದರೆ ಫಡ್ನವೀಸರ ಬಿಜೆಪಿ ಪಕ್ಷ ಜನರಿಗೆ ವಿತರಿಸಲು ರೆಮ್‌ಡಿಸಿವಿರ್ ಸ್ಟಾಕ್ ಮಾಡಿಕೊಂಡಿದೆ. ಇದು ಪಕ್ಕಾ ಬಿಜೆಪಿ ಪಾಲಿಟಿಕ್ಸ್ ಎಂದಿರುವ ಸಾಕೇತ್ ಗೋಖಲೆ, ಸಂಕಷ್ಟದ ಸಮತದಲ್ಲೂ ಬೇಳೆ ಬೇಯಿಸಿಕೊಳ್ಳುವ ಬಿಜೆಪಿ ರಾಜಕಾರಣವನ್ನು ಟೀಕಿಸಿದ್ದಾರೆ,
ಈ ಬಗ್ಗೆ ಸರಿಯಾದ ತನಿಖೆ ಮಾಡುವಂತೆ ಅವರು ಮಹಾರಾಷ್ಟ್ರ ಗೃಹ ಸಚಿವ, ಆರೋಗ್ಯ ಸಚಿವರಿಗೆ ಪತ್ರ ಬರೆಯಲಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರಕ್ಕೆ ರೆಮ್‌ಡಿಸಿವಿರ್ ನೀಡಿದರೆ ಲೈಸನ್ಸ್ ರದ್ದು ಮಾಡುತ್ತೇವೆಂದು ಕಂಪನಿಗಳಿಗೆ ಕೇಂದ್ರ ಬೆದರಿಕೆ’: ಮಹಾಸಚಿವ


