Homeಅಂಕಣಗಳುಕೊರೋನೋತ್ತರ ಕಾಲ ಎಷ್ಟು ಭಿನ್ನವಾಗಿರಲಿದೆ?

ಕೊರೋನೋತ್ತರ ಕಾಲ ಎಷ್ಟು ಭಿನ್ನವಾಗಿರಲಿದೆ?

- Advertisement -
- Advertisement -

ಈಗ ಬದುಕಿರುವ ಯಾರ ನೆನಪಿನಲ್ಲೂ ಉಳಿದುಕೊಂಡಿರದ ರೀತಿಯ ವಿದ್ಯಮಾನದಲ್ಲಿ ನಾವೆಲ್ಲರೂ ಭಾಗಿಯಾಗಿದ್ದೇವೆ. ಇಡೀ ದುನಿಯಾ ತನ್ನ ಮಾಮೂಲಿನ ಅಭ್ಯಾಸಗಳನ್ನೆಲ್ಲಾ ಬದಿಗಿಟ್ಟಿದೆ. ಕಣ್ಣಿಗೆ ಕಾಣದ, ಆದರೆ ಇದೆಯೆಂದು ಲಕ್ಷಾಂತರ (ಇಂದಿಗೆ 2 ಲಕ್ಷ 18 ಸಾವಿರ) ಸಾವುಗಳ ಮೂಲಕ ಎಲ್ಲರಿಗೂ ಖಚಿತವಾಗಿಸಿರುವ ವೈರಸ್ ಒಂದು ಇಂತಹ ಬೆಳವಣಿಗೆಗೆ ಕಾರಣವಾಗಿದೆ. ಇದು ಎಲ್ಲೆಡೆ ಆವರಿಸುತ್ತಿದ್ದಂತೆ ಜನರು ಫಿಲಾಸಫಿಕಲ್ ಮಾತುಗಳನ್ನಾಡಲು ಆರಂಭಿಸಿದ್ದರು. ಪ್ರತಿನಿತ್ಯ ಸಾವಿರಾರು ಕಿ.ಮೀ.ಗಳನ್ನು ಪ್ರಯಾಣಿಸುತ್ತಿದ್ದವರು, ಗಿಜಿಗಿಜಿಗುಡುತ್ತಿದ್ದ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದವರು, ವೈಭವೋಪೇತವಾದ ಕಾರ್ಯಕ್ರಮಗಳಲ್ಲಿ ಸಾವಿರಾರು ಜನರನ್ನು ಸೇರಿಸಿ ಔತಣಕೂಟಗಳನ್ನು ಆಯೋಜಿಸುತ್ತಿದ್ದವರು, ಲಕ್ಷ ಲಕ್ಷ ಜನರನ್ನು ಸೇರಿಸಿ ರಾಜಕೀಯ ಕಾರ್ಯಕ್ರಮಗಳನ್ನು ಮಾಡುತ್ತಿದ್ದವರು ಅಥವಾ ಪ್ರತಿಭಟನೆಗಳನ್ನು ಸಂಘಟಿಸುತ್ತಿದ್ದವರು ಎಲ್ಲರೂ ಕೆಲವೇ ಜನರನ್ನು ನೋಡಿಕೊಂಡು ಕಾಲ ಹಾಕಬೇಕು ಮತ್ತು ಕೆಲವು ಕಿ.ಮೀ.ಗಳಾಚೆ ಪ್ರಯಾಣವನ್ನು ಮಾಡಬಾರದು. ಅಂದರೆ ಮನುಷ್ಯರು ಸಾಧಿಸಿದ ವೇಗ, ಬೆಳವಣಿಗೆ, ಗಳಿಸಿದ ಸಂಪತ್ತು ಎಲ್ಲವೂ ನಿರರ್ಥಕವೆನಿಸುವಂತಾಯಿತು.

ಖಂಡಾಂತರಗಳನ್ನು ದಾಟಿ ಹಬ್ಬಿದ ಸೋಂಕು ಮನುಷ್ಯರನ್ನು ಜನಾಂಗ, ಪ್ರದೇಶ, ಜಾತಿ, ಧರ್ಮ, ಲಿಂಗ ಯಾವುದನ್ನೂ ಪ್ರತ್ಯೇಕ ಮಾಡಿ ನೋಡಲಿಲ್ಲ. ಪರಸ್ಪರ ಎದುರಾಳಿಗಳಾಗಿ ನಿಂತಿರುವ ಚೀನಾ ಮತ್ತು ಅಮೆರಿಕಾಗಳೆರಡನ್ನೂ ದೊಡ್ಡ ಮಟ್ಟದಲ್ಲಿ ಬಾಧಿಸಿತು. ಮೊದಮೊದಲು ವಿಮಾನಗಳಲ್ಲಿ ಓಡಾಡಿದವರಿಗೆ ಮತ್ತು ಅವರ ಬಂಧುಬಾಂಧವರಿಗೆ ಹೆಚ್ಚು ಹತ್ತಿಕೊಂಡಿತಾದರೂ, ಅದೀಗ ಧಾರಾವಿಯಂತಹ ಸ್ಲಂಗಳನ್ನು ಆವರಿಸುತ್ತಿದೆ. ಶ್ರೀಮಂತರು ತಂದ ರೋಗವೆಂದು ಹಂಗಿಸಬಹುದಾದರೂ, ಕಿಷ್ಕಿಂಧೆಗಳಲ್ಲಿ ಬದುಕಬೇಕಾದ ಅನಿವಾರ್ಯತೆಯಿರುವವರನ್ನೇ ಹೆಚ್ಚು ಬಲಿ ತೆಗೆದುಕೊಳ್ಳಬಹುದೇ ಎಂಬ ಆತಂಕ ಕಾಡುತ್ತಿದೆ.

ಇದು ನಮ್ಮ ಇಂದಿನ ಬದುಕುವ ರೀತಿ, ಉಳ್ಳವರು ಅಭ್ಯಾಸ ಮಾಡಿಸಿದ ಬದುಕಿನ ನೀತಿಗಳ ಕಾರಣಕ್ಕೇ ಆವರಿಸುತ್ತಿದೆ ಎಂದು ಹೇಳಲು ಕಾರಣಗಳಿದ್ದವು. ಪಟ್ಟಣಗಳು, ಬೃಹತ್ ನಗರಗಳು, ಶ್ರೀಮಂತ ದೇಶಗಳನ್ನೇ ಇದುವರೆಗೆ ಹೆಚ್ಚು ಬಾಧಿಸಿವೆ. ಹಳ್ಳಿಗಳು, ಗುಡ್ಡಗಾಡುಗಳು ಈಗಲೂ ಅಷ್ಟು ತೊಂದರೆಗೊಳಗಾಗಿಲ್ಲ. ಹೀಗಾಗಿ ಮನುಷ್ಯರ ಲೋಭ, ಮೋಹ, ತೀರದ ದಾಹಗಳ ಕುರಿತಾಗಿ ಇವು ಪ್ರಶ್ನೆಗಳನ್ನೆತ್ತಬಹುದು; ವಿಶ್ವಮಾನವ ಪ್ರಜ್ಞೆಯೊಂದಿಗೆ ಸ್ಥಳೀಯವಾಗಿಯೇ ಬದುಕುವ ಉತ್ತರಗಳನ್ನೂ ಈಯಬಹುದು ಎಂದು ಭಾವಿಸುವ ರೀತಿಯಲ್ಲಿ ವಿಶ್ವವ್ಯಾಪಕವಾದ ಕೊರೊನಾ ಸೋಂಕು ಮೆದುಳಿಗೆ ಕೈ ಹಾಕಿತ್ತು.

ಆದರೆ, ನೋಡನೋಡುತ್ತಿದ್ದಂತೆ ಕೊರೋನಾ ಪೂರ್ವದಲ್ಲಿ ನಮ್ಮೊಳಗಿದ್ದ ಎಲ್ಲಾ ಹುಳುಕು-ಕೆಡುಕುಗಳು ಭುಗಿಲೆದ್ದವು. ಚೀನಾ ವಿರೋಧಕ್ಕೆ ಬಳಸಿಕೊಂಡಿದ್ದು, ಮುಸ್ಲಿಂ ದೂಷಣೆ ಮಾಡಿದ್ದು, ಬಡವರ ಬದುಕನ್ನು ನಿಕೃಷ್ಟವಾಗಿಸಿದ್ದು, ಮನೆಯಲ್ಲಿ ದುಡಿವ ಹೆಣ್ಣುಮಕ್ಕಳ ಬದುಕನ್ನು ಮತ್ತಷ್ಟು ಕಟುವಾಗಿಸಿದ್ದು, ಹಿಂದುಳಿದ ಪ್ರದೇಶಗಳು, ರಾಜ್ಯಗಳು ನಿರ್ಲಕ್ಷ್ಯಕ್ಕೊಳಗಾಗಿದ್ದು, ಹಳ್ಳಿಯಿಂದ ರೈಲು ಹತ್ತಿ ನಗರಮುಖಿಗಳಾಗಿದ್ದ ಶೋಷಿತ ಸಮುದಾಯಗಳು ಕಾಲ್ನಡಿಗೆಯಲ್ಲಿ ದಾರಿ ಸವೆಸಬೇಕಾಗಿದ್ದು ಎಲ್ಲವೂ ಕೊರೋನಾ ಪೂರ್ವದ ಸಮಾಜದ ನೀತಿಗನುಗುಣವಾಗಿಯೇ ಇದೆ. ಸೂಪರ್ ಪವರ್‍ಗಳು ಮತ್ತು ಸೂಪರ್ ಪವರ್‍ಗಳಾಗಬಯಸುವವರು ತಮ್ಮ ತಮ್ಮ ದಾಳಗಳನ್ನು ಉರುಳಿಸಿಯೇ ಬಿಟ್ಟರು; ತನ್ನ ಜನರನ್ನು ಸರ್ವಾಧಿಕಾರದ ಬಿಗಿಮುಷ್ಟಿಯಲ್ಲಿಟ್ಟಿರುವ ಚೀನಾ ಈಗಲೂ ಪ್ರಪಂಚದೆಲ್ಲೆಡೆ ತನ್ನ ಪಾರಮ್ಯ ಮೆರೆಯಲು ಪ್ರಯತ್ನಿಸುತ್ತಿದ್ದಂತಿದೆ; ಕಾಲ್ನಡಿಗೆಯಲ್ಲಿ ನೂರಾರು ಕಿ.ಮೀ. ನಡೆಯುತ್ತಿರುವವರ ಅಣ್ಣ ತಮ್ಮಂದಿರೇ ಮೋದಿಯೇ ವಿಶ್ವಗುರು ಎಂದು ಅಬ್ಬರಿಸುತ್ತಿದ್ದಾರೆ.

ಸುಳ್ಳು-ಅಪಪ್ರಚಾರಗಳು, ಸರ್ಕಾರದ ಸಾಂಕೇತಿಕ ಹೊಂದಾಣಿಕೆಗಳು, ದುಷ್ಟವಾಹಿನಿ ಮಾಧ್ಯಮಗಳ ಹಸೀ ಅವಾಂತರಗಳೆಲ್ಲವೂ ಇನ್ನಷ್ಟು ಬಲಪಡೆದುಕೊಂಡಿವೆ.

ಇದರ ಮಧ್ಯೆಯೇ ಅದೆಷ್ಟೋ ಜನರು ನೊಂದವರಿಗೆ ಸಹಾಯ ಮಾಡಲೂ ಮುಂದಾಗುತ್ತಿದ್ದಾರೆ. ಈ ಹೊತ್ತು ಯಾವ ರೀತಿ ಆಂದೋಲನ ಕಟ್ಟಬಹುದು ಗೊತ್ತಾಗದೇ ಎಲ್ಲಾ ಹೋರಾಟಗಾರರು ಸಾಂಕೇತಿಕ ಕಾರ್ಯಕ್ರಮಗಳನ್ನು ಆನ್‍ಲೈನ್‍ನಲ್ಲಿ ಮಾಡಿಕೊಂಡು ಬಹಳ ಬ್ಯುಸಿಯಾಗಿದ್ದಂತಿದೆ.

ಇವೆಲ್ಲದರ ಮಧ್ಯೆ ಹೊಸತನ, ಹೊಸ ನೀತಿ, ಹೊಸ ಮೌಲ್ಯಗಳು ಚಿಗುರಬಹುದೇ? ಕೊರೋನೋತ್ತರ ಜಗತ್ತಿನಲ್ಲಿ ಏನೇ ಪರಿಮಾಣಾತ್ಮಕ ಬದಲಾವಣೆ ಬಂದರೂ ಹಳೆಯ ಜೀವ ವಿರೋಧಿ ಮೌಲ್ಯಗಳು ಕೊಳೆತು ನಾಶವಾಗಬಲ್ಲುದೇ? ಇಲ್ಲಿಯವರೆಗಿನ ಬೆಳವಣಿಗೆಗಳು ಅಂತಹ ಭರವಸೆಯನ್ನೇನೂ ಮೂಡಿಸುತ್ತಿಲ್ಲ. ಹೊಸದೇ ಆದ ಶಕ್ತಿಯೊಂದು ಇದರ ಮಧ್ಯೆಯೇ ಉದ್ಭವಿಸಿ, ತಲ್ಲಣ ತರದ ಹೊರತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Demonetisation ಆದಾಗ, ಕೆಲಸ ಕಳೆದುಕೊಂಡ ಹೆಚ್ಚಿನ ಮಂದಿ ಇಂದು ನಡೆದು ತಮ್ಮೂರತ್ತ ತೆರಳುತ್ತಿದ್ದಾರೆ.ಇದಕ್ಕೆ ಎಡೆಮಾಡಿದ ಮೋದಿ ವಿ.ಗುರು!
    ಹಿಂದೆ ಆಳ್ವಿಕೆ ಮಾಡಿದವರು ಹೇಗೆ ಮಂದಿಯನ್ನು ಕಂಗೆಡಿಸಿರಬಹುದು‌.
    ಇದಕ್ಕೆಲ್ಲಾ ಮೀಡಿಯಾಗಳನ್ನು ಗುರಿಮಾಡಬೇಕಾ!!!

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...